Tuesday, July 30, 2013

ಆ ತುಟಿಗಳು ನಗುವುದ ಮರೆತಿಲ್ಲ

ಸದಾ ಕುಣಿದಾಡುತ್ತಿತ್ತು ಅವಳ ತುಟಿಗಳಲಿ ನಗು
ಅವಳ ನಗು ಪುರಸ್ಕರಿಸಲೆಂದು ಹುಟ್ಟಿತ್ತೊಂದು ಮಗು
ತಾಯ್ತನವ ಅನುಭವಿಸುತ್ತಾ ಕನಸ್ಸುಗಳ ಮೊಳಕೆ ಒಡೆದಿತ್ತು
ಕೆಟ್ಟಗಾಲ...., ತುಟಿಗಳು ಬಿಗಿದು,ಕಣ್ಣುಗಳು ತುಂಬಿದವು
ಆ ನಗುವ ತಂದ ಮಗುವು ಇನ್ನಿಲ್ಲದಾಯಿತು
ಕರಳು ಕಿವುಚಿತು ....ಎಷ್ಟು ಕ್ರೂರಿ ಅಲ್ಲವೇ ವಿಧಿ..?
ಮಾಸಗಳು ಕಳೆದವು...
ಇನ್ನೂ ಸಹಾ ಕಾಣಬಲ್ಲೆವು ಅವಳ ತುಟಿಗಳಲಿ ಅದೇ ನಗು...
ಆದರೆ ನಮ್ಮ ಕರುಳೆ ಮತ್ತೆ ಕಿವುಚುತಿದೆ ಅವಳ ನಗುವ ಹಿಂದೆ ಇದ್ದ ನೋವ ಅರೆತು.! 

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...