ಸಜ್ಜಾಗಿದೆ ಅರಮನೆ


ಭದ್ರ ಕೋಟೆಯ ಬುನಾದಿ

ಅಚ್ಚುಕಟ್ಟು ಮೈಕಟ್ಟು, ಬಲ ತೋಳಲಿ

ವಿಶಾಲವಾದ ಅಂತಃಪುರ

ಪ್ರಣಯ ಭರಿತ ಹೃದಯ

ತಂಗಾಳಿಯ ಸೂಸುವ ಬೃಂದಾವನ

ಶುದ್ದ ಗಾಳಿ ಬರಿತ ಕುಪ್ಪಸವನ

ಯೋಚನೆಗಳ ಸಾಗರದಿ ತೇಲಲು

ಮನವೆಂಬ ಆಗಸದಿ ಕವಿತೆ ಸಾಲು

ಜೀವವ ತಣಿಸಲು ಸಂಗೀತ ಗಾನ

ಮನೋರಂಜನೆಯ ನೀಡುವುದು ಅತೀ ಮಧುರ ಮೌನ

ಅಲಂಕಾರಗೊಂಡು ಸಜ್ಜಾಗಿದೆ ಅರಮನೆ,

ನಡೆಸಲು ರಾಜಕುಮಾರಿಯ ಆರಾಧನೆ !

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...