ದೀಪ ಉರಿಯುತಿದೆ ನೋಡ..!


ಬೆಳಕು ಚೆಲ್ಲುವುದ ಬಿಟ್ಟು
ಕ್ರೂರ ಬುದ್ಧಿಯ ಮೆಟ್ಟು
ಸೊಕ್ಕು ತುಂಬಿಕೊಂಡು ಮೈಯ್ಯಿಗೆ…, ಉರಿಯುತಿದೆ ನೋಡ

ಕಾಲದ ಜ್ಞಾನವಿಲ್ಲ ಅದಕೆ
ಮನವು ಹೊಲಸು ತುಂಬಿದ ಮಡಿಕೆ
ಕೆಸರಲ್ಲಿ ಬಿದ್ದು ಒದ್ದಾಡುತಿಹುದು…, ಉರಿಯುತಿದೆ ನೋಡ

ಅವಿವೇಕಿ, ಅಹಂಕಾರವ ಮೆರೆಯುತ
ಬೂಟಾಟಿಕೆಯ ನಾಟಕವಾಡುತ
ಇದರ ಅಬ್ಬರ ಎಣ್ಣೆ ಮುಗಿಯುವವರೆಗೆ.., ಉರಿಯುತಿದೆ ನೋಡ

ಪಾಪದ ಕೊಡ ತುಂಬಿ
ಬತ್ತಿಯೇ ಬತ್ತುತ ಬಾಡಿ
ಆ ಉರಿಯೇ ಸುಟ್ಟಿದೆ ಅದರ ಹುಟ್ಟು…ದೀಪ ಉರಿದಿದೆ ನೋಡ

ಧಘ ಧಘ ಉರಿದೊಡನೆ
ಅಳಿದುಳಿದು ನಶಿಸಿತು
ಕೆಟ್ಟು ಕರಕಲಾಯಿತು ನೋಡ… ದೀಪ ಉರಿದಿದೆ ನೋಡ

***ಭಾವಪ್ರಿಯ***

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು