"ವಿ" ಕೋಪ

ಸಣ್ಣ ಪುಟ್ಟ ವಿಷಯಕ್ಕೆ ಏಕೆ ಈ ಕೋಪ ?

ಬಸವಳಿದ ಜೀವವದು ಹೋಗಲಿ ಬಿಡು ಪಾಪ.!

ಕೆಂಗಣ್ಣು ಬಿಡಬೇಡ ಹಾಕ ಬೇಡ ಶಾಪ.,

ಮುನಿಸನ್ನು ಮಾರಿ ಬಿಡು, ಏನೇ ಇರಲಿ ಲೋಪ !

ತಡ ಮಾಡದೇ ಸೇರು ಬಾ.. ಬಿಟ್ಟು ನಿನ್ನ ಹಠ..,

ತೆರೆದಿಟ್ಟಿರುವೆ ನನ್ನ ಮನಸ್ಸಿನ ಕಪಾಟ.!

Comments

ಮೆಚ್ಚಿದೆ, ಒಬ್ಬರು ಸೋತರೇನೇ ಒಲವಿನ ಆಟದಲ್ಲಿ ಸಮ ಸುಖಮಯ. ಒಳ್ಳೆಯ ಪ್ರಾಸಕವಿ ಕಣಪ್ಪೀ ನೀವು.
ನಾನು ಕವನ ಬರೆಯಲು ಹುಡುಕುವುದಿಲ್ಲ ಯಾವುದೇ ಪ್ರಾಸ..
ನನಗರಿಯದೇ ಮನಕೆ ಹೊಳೆಯುತ್ತವೆ ಕೊಡದೇ ಯಾವುದೇ ತ್ರಾಸ..! :) ನೀವು ಕೊಟ್ಟ ಬಿರುದು ನನಗಿಷ್ಟವಾಯಿತು ಸರ್, ತುಂಬಾ ಧನ್ಯವಾದಗಳು.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು