ಯುಗಾದಿ

ಯುಗ ಯುಗಗಳ ಯುಗಾದಿ ಮರಳಿ ಬಂದಿದೆ
ಹೊಸ ಚಿಗುರು, ಹೊಸ ನವಿರು ತೇಲಿ ಬರುತಿದೆ !

ಮಾವ ಬೇವು ಹೂವು ಅರಳಿ, ಸೌಗಂಧ ಬೀರಿದೆ
ಹಚ್ಚ ಹಸಿರ ಎಲೆಯ ಸವೆದು, ಕೋಗಿಲೆ ಹಾಡಿದೆ !

ಹಳೆಯ ಎಲೆಯು ಉದುರಿ, ಬೇವು ಚಿಗುರಿದೆ
ಸೂರ್ಯನ ಬಿಸಿಲ ಬೇಗ ಅಳಿಸಲು, ನೆರಳು ಹಾಸಿದೆ !

ಹರಿದು ಬರುತಿದೆ, ಹಸಿರು ಹರಿದು ಬರುತಿದೆ
ನವ ಮಾಸದಿ ನವ ವಸಂತ ಉಕ್ಕಿ ಪಸರಿದೆ !!

Comments

ಯುಗಾದಿಯ ಹಾರೈಕೆಗೆ ಇಡಕಿಂತಲೂ ಸೊಗಸಾದ ಗೀತೆ ಉಂಟೇ...
ನೀವು ಹೇಳಿದ್ದು ನಿಜಾ ಸರ್, ಈ ಗೀತೆ ಬರೆಯುವಾಗ ಹಾಡಿ ಹಾಡಿ ಅದರ ಅಂದವ ಅನುಭವಿಸುತ್ತಾನೆ ಬರೆದದ್ದು. ಧನ್ಯವಾದಗಳು.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು