ಹಚ್ಚಿ ಬಿಡು ಬಣ್ಣವ ಹಚ್ಚಿಬಿಡುಹಚ್ಚಿ ಬಿಡು ಬಣ್ಣವ ಹಚ್ಚಿಬಿಡು
-------------------------

ತಾಯಿಯ ಗರ್ಭದಿ ಮೊಳೆತ ಭ್ರುಣವೇ
ಬೇಗ ಬೇಗ ಬೆಳೆದು ಬಾ
ನಿನ್ನ ಆಗಮನವ ಇದಿರು ನೋಡುತ್ತಿರುವ,
ಆಸೆಯಿಂದ ಕಾದಿರುವರಿಗೆ ಖುಶಿ ಹಂಚಿ ಬಿಡು
ಹಚ್ಚಿಬಿಡು ಬಣ್ಣವ ಹಚ್ಚಿಬಿಡು

ಭುತಾಯಿಯ ಒಡಲಲಿ ಅವಿತಿರುವ ಕಿಚ್ಚೇ
ಕಾರ್ಮೋಡಗಳೇ ನೀರೆರೆದು ದುಮ್ಮಿಕ್ಕಿ ಬಿಡಿ
ಜಗದ ಸೆಕೆ ಅಳಿಸಿ, ತಣಿಸು ಬಾ ಇಂದು
ಹಸಿರ ಕೊಸರಿಬಿಡು, ಹರಿಸಿಬಿಡು, ಹಸಿರ ಪಸರಿಸಿಬಿಡು
ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು

ಹಗಲೊತ್ತು ಕೂಲಿ ಮಾಡಿ ಹೊಟ್ಟೆ ಹೊರೆಯುವವರ
ಬೀದಿಯ ದೀಪದಲ್ಲಿಯೇ ಓ,ದಿ ಜಯಿಸಲೇ ಬೇಕು ಎನ್ನುವವರ ಹಠ
ಹೊಸ ಹಾದಿಯ, ಸುದೀಪ ಬೆಳಗಲಿ ಅವರ ಬಾಳಲ್ಲಿ
ಕಷ್ಟಪಟ್ಟು ಉತ್ತೀರ್ಣರಾದವರ, ಉದ್ಧರಿಸೋ ಶಿವನೆ
ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು

ದೇಶದ ಬೆನ್ನೆಲುಬಾದ ರೈತರ
ಸೂರ್ಯನ ಬಿಸಿಲಲ್ಲಿ ಬೆಂದು ದುಡುವವರ
ಅನ್ನವ ಬೆಳೆದು ಜನರ ಹೊಟ್ಟೆಯ ಭರಿಸುವವ
ಕಣ್ಣೀರು ಹಾಕದಿರಲಿ, ಸಾವಿಗೆ ಶರಣಾಗದಿರಲಿ
ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು

ನಲ್ಲೆಗಾಗಿ ಪರಿತಪಿಸುವ ಪ್ರೇಮಿ
ಹಠ ತೊಟ್ಟು ಶ್ರಮಿಸುತಿರುವವ
ಜೀವನದ ಗುರಿ ತಲುಪಿ, ನಲ್ಲೆಯ ಪಡೆದೇ ತೀರಬೇಕೆನ್ನುವ
ದಯಪಾಲಿಸೋ ಸುಖಮಯ ಜೀವನ ಹರನೇ
ಹಚ್ಚಿ ಬಿಡು ಬಣ್ಣವ ಹಚ್ಚಿಬಿಡು

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...