ಸೀರೆ ಕಟ್ಟಿರುವೆ

ಗೆಳತಿ ನನ್ನ ನಿನ್ನ ಒಲವು ಶುರುವಾದದ್ದೇ ಗೊತ್ತಾಗಲಿಲ್ಲ

ಇನ್ನೂ ಕನಸುಗಳು ಕಟ್ಟುತ್ತಲೇ ಸರಿದಿದೆ ಸಮಯ

ಇನ್ನೂ ನಮ್ಮ ಆಶು ಭಾಷಣಗಳೇ ಮುಗಿಯಲಿಲ್ಲ

ಅಷ್ಟರಲ್ಲೇ ನಿಶ್ಚಯಿಸಿದ್ದಾರೆ ನಿನ್ನ ಮದುವೇನ

ಮಾಡುವುದಾದರೂ ಏನು ಹೇಳು ??

ನಾ ನಿನಗೆ ಬರೆಯುವ ಕವಿತೆಗಳು ಪುಟದಲ್ಲೇ ಉಳಿಯಬಾರದು ಎಂದು ಕಟ್ಟಿರುವೆ ಸೀರೆನಾ

ಹಾರುತಿದೆ ನೋಡು ನಿನ್ನ ಮನೆಯ ಬಾಲ್ಕನಿಯಲ್ಲಿ

ನನ್ನ ಕವಿತೆಯು ಮುಗಿಯುವ ಮುನ್ನ ಸರ ಸರನೆ ಜಾರಿ ಇಳಿ

ಕಾದಿರುವೆ ಕೆಳಗಡೆ ಮೆಘದೂತದಲಿ ನೀ ಬರುವ ದಾರಿಯಲಿ !

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು