ಮುತ್ತೈದೆ V/s ೫ ಮುತ್ತು ಸಾಕೆ ?

ಕುತ್ತಿಗೆಯಲ್ಲಿ ತಾಳಿ ಇದ್ದರೆನೇ ಭದ್ರತೆ

ಹಣೆ ಮೇಲೆ ಕುಂಕುಮ ರಾರಾಜಿಸಿದರೆ ಶೊಭಿತೆ

ಮೂಗ ಮೇಲೆ ಮೂಗುತಿ ಚಂದ

ಕಾಲುಗಳಿಗೆ ಉಂಗುರಗಳೇ ಅಂದ

ಮುಡಿಗೆ ಮಲ್ಲಿಗೆಯೇ ಹೆಚ್ಚಿಸುವುದು ಹೆಂಗಳೆಗೆ ಬಣ್ಣ

ಹಸಿರು ಗಾಜಿನ ಬಳಿಗಳೇ ಸೌಭಾಗ್ಯವತಿಯ ಲಕ್ಷಣ

ಪಂಚ ಮುತ್ತುಗಳ ಹೊತ್ತವಳೇ "ಮುತ್ತೈದೆ "ಕುತ್ತಿಗೆಗೆ ತಾಳಿ ಬೇಡ, ಅದು ಕತ್ತಿಗೆ ಬಿಗಿಯುವ ಉರುಳ ಹಗ್ಗ

ಹಣೆಗೆ ಕುಂಕುಮವೇಕೆ ? ಅದು ಇವಳ ವೇಶಕ್ಕೆ ಒಪ್ಪುವುದಿಲ್ಲವಂತೆ

ಮೂಗುತಿ ಚುಚ್ಚಿಸಿಕೊಳ್ಳೋಳು ಹಳ್ಳೀ ಗುಗ್ಗು

ಮುಡಿಗೆ ಮಲ್ಲಿಗೆ ಇಡಲು, ಅವಳ ತಲೆ ಅಲ್ಲವಂತೆ ಹೂ ಕುಂಡಲ

ಬಳೆಗಳು ತೊಡಲು ಇವರ ಕೈಗಳೆಗೆ ಭಾರವಂತೆ

ಮುತ್ತುಗಳು ಯಾರೂ ಕೊಟ್ಟರು ಅವರಿಗೋಕೆ

ಮುತ್ತುಗಳ ಕೊಡಿಸುವವರ...ಇವಳು ಮನೆಯಾಕೆ..!  

1 comment:

Badarinath Palavalli said...

ಮುತ್ತೈದೆ ಮತ್ತು ಆಧುನಿಕತೆ ಎರಡೂ ಚರಣಗಳಲ್ಲಿ ಅರ್ಥಪೂರ್ಣವಾಗಿ ಬಂದಿದೆ. ಬದಲಾಗಿದೆ ಕಾಲವೆಂದರೆ ಇಷ್ಟು ಬದಲಾವಣೆಯೇ?

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...