GOD IMPOSES TOUGH JOB ONLY TO THOSE PEOPLE WHOM HE THINKS CAN DO IT.
Thursday, December 18, 2014
Saturday, December 13, 2014
ತುಡಿತ
ಸರೋವರದಿ ಮಿಂದೆದ್ದ ಅವಳ
ಕೇಶದಿಂದ ತೋಟಕುತ್ತಿದ್ದ ಹನಿಗಳು
ಮನ ಕಲುಕೇ ಬಿಟ್ಟವು ...!
ನೆನೆದ ಕೇಶವ ಆರಿಸಳವಳು
ಕಿಚ್ಚಿನೊಡನೆ ನಡೆಸಿದ ಸಂಭಾಷಣೆಗಳು
ಹೃದಯ ಕದ್ದೇ ಬಿಟ್ಟವು ...!
ಮೌನದಿ ಕೂಡಲಾರೆ ಇನ್ನೂ
ಕೂತಲ್ಲೇ ಎರಡು ಪದ ಗೀಚಿಯೇ ಬಿಡುವೆ
ಚಿಗುರೊಡದ ಒಲವು ಅವಳ ಹೃದಯ ಮಿಟಲೇ ಬೇಕು..!!
ಕೇಶದಿಂದ ತೋಟಕುತ್ತಿದ್ದ ಹನಿಗಳು
ಮನ ಕಲುಕೇ ಬಿಟ್ಟವು ...!
ನೆನೆದ ಕೇಶವ ಆರಿಸಳವಳು
ಕಿಚ್ಚಿನೊಡನೆ ನಡೆಸಿದ ಸಂಭಾಷಣೆಗಳು
ಹೃದಯ ಕದ್ದೇ ಬಿಟ್ಟವು ...!
ಮೌನದಿ ಕೂಡಲಾರೆ ಇನ್ನೂ
ಕೂತಲ್ಲೇ ಎರಡು ಪದ ಗೀಚಿಯೇ ಬಿಡುವೆ
ಚಿಗುರೊಡದ ಒಲವು ಅವಳ ಹೃದಯ ಮಿಟಲೇ ಬೇಕು..!!
Thursday, December 11, 2014
THOUGHT FOR THE DAY
Sharing & Caring both function similarly, One enhances the knowledge & other the belief.
Thursday, November 27, 2014
Wednesday, November 26, 2014
ಅದೊಂದು ಆಗಿರಲಿಲ್ಲವೆಂದರೆ...
ನನ್ನ ಜೀವನ ಚೆನ್ನಾಗಿಯೇ ನಡೆದಿತ್ತು
ಅಂದು ನಾನು ಆಯ ತಪ್ಪಿ ಬಿದ್ದಿದ್ದಕ್ಕೆ
ಕಾಲು ಮುರಿದ.., ಕೂತಿರುವೆ ನಾನು !
ಕಾಲು ಮುರಿದ.., ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿದೆ
ಎಷ್ಟು ಹುಡುಕಿದರೂ ಸಿಗದ ಸಂಗಾತಿ..
ಮದುವೆ ಆಗದೆ.., ಕೂತಿರುವೆ ನಾನು !
ಎಷ್ಟು ಹುಡುಕಿದರೂ ಸಿಗದ ಸಂಗಾತಿ..
ಮದುವೆ ಆಗದೆ.., ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿತ್ತು
ಅಂದು ಬೆಂಕಿಯೊಡನೆ ಆಡದಿದ್ದರೆ..
ಕಣ್ಣು ಕಳೆದುಕೊಂಡು..,ಕೂತಿರುವೆ ನಾನು !
ಅಂದು ಬೆಂಕಿಯೊಡನೆ ಆಡದಿದ್ದರೆ..
ಕಣ್ಣು ಕಳೆದುಕೊಂಡು..,ಕೂತಿರುವೆ ನಾನು !
ನನ್ನ ಜೀವನ ಚೆನ್ನಾಗಿಯೇ ನಡೆದಿದೆ
ಆ ಸುನಾಮಿ ಬಂದ್ದಿದ್ದರಿಂದ..
ಮನೆ ಕಳೆದುಕೊಂಡು..,ಇಂದು ಗುಡಿಸಲಲ್ಲಿ ನಾನು !
ಆ ಸುನಾಮಿ ಬಂದ್ದಿದ್ದರಿಂದ..
ಮನೆ ಕಳೆದುಕೊಂಡು..,ಇಂದು ಗುಡಿಸಲಲ್ಲಿ ನಾನು !
ಎಲ್ಲ ಮನುಷ್ಯರಿಗೂ ಒಂದಿಲ್ಲಾ ಒಂದು ಕೊರತೆ ಇದ್ದೇ ಇರುತ್ತದೆ, ಅದು ಏನೇ ಇದ್ದರೂ ಆ ಕೊರತೆಗಳನ್ನು ಎದುರಿಸುತ್ತಾ ಬಾಳುವುದೇ ಜೀವನ.
Tuesday, November 25, 2014
ಅಲೆಯ ಮಾಲೆ
ಅಲೆಯ ಮೇಲೆ ತೇಲಿ ಬರುತಿದೆ
ನೆನೆದ ಮನದ ಆ ಪತ್ರ.
ಯಾರ ಭಾವಗಳ ಹೊತ್ತು ತಂತೋ
ತೋಡಿಕೊಳ್ಳಲು ಅವನ ಹತ್ರ.
ಹೇಳಿ ಕೇಳಿ ಹುಚ್ಚು ಕವಿಯು ಅವನು
ಗೀಚಿ ಬಿಡುವನೋ ಒಲವ ಮಿತ್ರ.
ಹಾರಿ ಬಿಡಲು ಪ್ರೀತಿಯ ಘಮಲು
ಮೂಡಿಸಬಹುದೇ ಆಗಸದಿ ಆ ಚಂದಿರ ?
ಅವನ ತುಡಿತಕೆ, ನಿನ್ನ ಮಿಡಿತವೂ
ಹೃದಯ ಮುಟ್ಟಿತೆ, ತಿಳಿಸಿ ಹೇಳು ..!
ಅಲೆಯ ಮೇಲೆ ಒಲವ ಮಾಲೆ
ಕಳೆಸಿಕೊಡುವೆ ಎಂದನು !!
ನೆನೆದ ಮನದ ಆ ಪತ್ರ.
ಯಾರ ಭಾವಗಳ ಹೊತ್ತು ತಂತೋ
ತೋಡಿಕೊಳ್ಳಲು ಅವನ ಹತ್ರ.
ಹೇಳಿ ಕೇಳಿ ಹುಚ್ಚು ಕವಿಯು ಅವನು
ಗೀಚಿ ಬಿಡುವನೋ ಒಲವ ಮಿತ್ರ.
ಹಾರಿ ಬಿಡಲು ಪ್ರೀತಿಯ ಘಮಲು
ಮೂಡಿಸಬಹುದೇ ಆಗಸದಿ ಆ ಚಂದಿರ ?
ಅವನ ತುಡಿತಕೆ, ನಿನ್ನ ಮಿಡಿತವೂ
ಹೃದಯ ಮುಟ್ಟಿತೆ, ತಿಳಿಸಿ ಹೇಳು ..!
ಅಲೆಯ ಮೇಲೆ ಒಲವ ಮಾಲೆ
ಕಳೆಸಿಕೊಡುವೆ ಎಂದನು !!
Sunday, November 23, 2014
Tuesday, November 18, 2014
ಬೇಡಿಕೆ
ನಾ ಬರೆಯಬೇಕೆಂದರೆ ಬೇಕಿಲ್ಲ ಯಾರ ಪ್ರೇರಣೆ
ಅದಕ್ಕಾಗಿ ಬಯಸುವುದಿಲ್ಲ ಯಾವುದೇ ಮನ್ನಣೆ
ಚೆಲ್ಲುತ್ತಿರುವೆ ಭಾವನೆಗಳ ಹೀಗಷ್ಟೇ
ಕದಿಯದಿರಿ ಎನ್ನ ಭಾವನೆಗಳ, ನಾ ಬೇಡುವುದಷ್ಟೇ !
ಅದಕ್ಕಾಗಿ ಬಯಸುವುದಿಲ್ಲ ಯಾವುದೇ ಮನ್ನಣೆ
ಚೆಲ್ಲುತ್ತಿರುವೆ ಭಾವನೆಗಳ ಹೀಗಷ್ಟೇ
ಕದಿಯದಿರಿ ಎನ್ನ ಭಾವನೆಗಳ, ನಾ ಬೇಡುವುದಷ್ಟೇ !
ಮಾದರಿಯಾಗು
ನಿನ್ನ ಮುದ್ದಾದ ಮೊಗದಲ್ಲಿ ನಗುವಿರಲಿ ಗೆಳತಿ
ಮುನಿಸು ಬಾರದಂತೆ ಕಾಯಲಿ ಮೂಗುತಿ
ಸಂಯಮವ ತೋರಲಿ ಕುಂಕುಮ ಹಣೆಯಲ್ಲಿ, ಮಿಂಚಿ
ದುಃಖವ ತಡೆಯುವ ಶಕ್ತಿ ನೀಡಲಿ, ಆ ಕಣ್ಣ ಕಾಡಿಗೆ
ಮಾದರಿ ಹೆಣ್ಣಾಗು ನೀ , ಈ ನಮ್ಮ ನಾಡಿಗೆ.
ಸಂಯಮವ ತೋರಲಿ ಕುಂಕುಮ ಹಣೆಯಲ್ಲಿ, ಮಿಂಚಿ
ದುಃಖವ ತಡೆಯುವ ಶಕ್ತಿ ನೀಡಲಿ, ಆ ಕಣ್ಣ ಕಾಡಿಗೆ
ಮಾದರಿ ಹೆಣ್ಣಾಗು ನೀ , ಈ ನಮ್ಮ ನಾಡಿಗೆ.
Sunday, November 16, 2014
ಆ ಅಮೃತ ಘಳಿಗೆ
ನೀ..,
ಇನ್ನೂ ಬಂದಿಲ್ಲವೆಂಬ
ಬೇಸರವಿಲ್ಲವೇ ಗೆಳತಿ..!
ನೀ
ಬಂದು ಸೇರುವ ಆ ಅಮೃತ ಘಳಿಗೆಗೆ
ನೆನೆಯುತ್ತಲೇ., ಕಂಡುಕೊಂಡಿರುವೆನು ಸುಖ ಶಾಂತಿ..!
ಇನ್ನೂ ಬಂದಿಲ್ಲವೆಂಬ
ಬೇಸರವಿಲ್ಲವೇ ಗೆಳತಿ..!
ನೀ
ಬಂದು ಸೇರುವ ಆ ಅಮೃತ ಘಳಿಗೆಗೆ
ನೆನೆಯುತ್ತಲೇ., ಕಂಡುಕೊಂಡಿರುವೆನು ಸುಖ ಶಾಂತಿ..!
Saturday, November 15, 2014
ಹೃದಯಗನ್ನಡಿ
ಅವಳೇ ಬರೆದ ಹೆಸರು ಈ ಹೃದಯದ ಮೇಲೆ
ಅಳಿಸಲಾಗುತ್ತಿಲ್ಲ....!
ತಿರುಚಿ ಗೀಚಲೆಂದರೆ....,
ಅದು ಹೃದಯಗನ್ನಡಿಯ ಒಡೆಯುವುದಲ್ಲ !!
ಅಳಿಸಲಾಗುತ್ತಿಲ್ಲ....!
ತಿರುಚಿ ಗೀಚಲೆಂದರೆ....,
ಅದು ಹೃದಯಗನ್ನಡಿಯ ಒಡೆಯುವುದಲ್ಲ !!
ಎಚ್ಚರಿಕೆ
ಅವಳು ಸಿಂಗರಿಸಿಕೊಳ್ಳುವುದೇ ತನಗಾಗಿ..,
ಎಂದು ಇವನಿಗೆ ಅನುಮಾನ...!
ಅರೇ ಓ ಮಂಕೆ.., ಜಾರಿ ಬಿದ್ದಿಯೇ ಮತ್ತೆ ಅದೇ ಹಳ್ಳಕ್ಕೆ ..,
ಮನ ಸೋಲದಿರು...., ಜೋಪಾನ..!!
ಎಂದು ಇವನಿಗೆ ಅನುಮಾನ...!
ಅರೇ ಓ ಮಂಕೆ.., ಜಾರಿ ಬಿದ್ದಿಯೇ ಮತ್ತೆ ಅದೇ ಹಳ್ಳಕ್ಕೆ ..,
ಮನ ಸೋಲದಿರು...., ಜೋಪಾನ..!!
Tuesday, November 11, 2014
Sunday, November 09, 2014
ತುಣುಕುಗಳು
ಅವಳ ಪಾದಾರ್ಪಣೆ ತಂದಿತ್ತು ,
ಬಾಳಲ್ಲಿ ಹೊಸ ಬೆಳಕು !
ಅವಳಿರದ ಹೊತ್ತು....
ಬದುಕಿನುದ್ದಕ್ಕೂ, ಸವಿ ನೆನಪುಗಳ ಮೆಲಕು !!
ಅವಳಿರದ ಹೊತ್ತು....
ಬದುಕಿನುದ್ದಕ್ಕೂ, ಸವಿ ನೆನಪುಗಳ ಮೆಲಕು !!
ಪೌರ್ಣಿಮೆ ಇರದ ಚಂದ್ರ, " ಅರ್ಧ "
ಅರ್ಧಾಂಗಿ ಇರದ ಬದುಕು, " ವ್ಯರ್ಥ "
ಅರ್ಧಾಂಗಿ ಇರದ ಬದುಕು, " ವ್ಯರ್ಥ "
ಹೃದಯ ಮಂದಿರದಲ್ಲಿ ಬಂದಾಗ...
ನಡೆದಿತ್ತು ಅಲ್ಲಿ ಪ್ರೇಮ ಜಾತ್ರೆ !
ಅವಳು ತೊರೆದು ನಡೆದಾಗ...
ಅವನ ಕೈಯಲ್ಲಿ ಭಿಕ್ಷಾ ಪಾತ್ರೆ... !!
ನಡೆದಿತ್ತು ಅಲ್ಲಿ ಪ್ರೇಮ ಜಾತ್ರೆ !
ಅವಳು ತೊರೆದು ನಡೆದಾಗ...
ಅವನ ಕೈಯಲ್ಲಿ ಭಿಕ್ಷಾ ಪಾತ್ರೆ... !!
Thursday, November 06, 2014
ಹಣೆಬರಹ
ಹಣೆಬರಹದ ಹೊಣೆಗಾರ
ನೀನು ಅಲ್ಲ, ನಾನೂ ಅಲ್ಲ !
ಬರೆದಿರಬಹುದೇ ಆ ಬ್ರಹ್ಮ
ಕೇಳಿದರೆ..., ಕೈ ಜಾಡಿಸಿದನು
ನಿಮ್ಮ ಕರ್ಮ.......,
ಆ ಹೊಣೆಗಾರ ನಾನಲ್ಲ ಎಂದನಲ್ಲ !!
ನೀನು ಅಲ್ಲ, ನಾನೂ ಅಲ್ಲ !
ಬರೆದಿರಬಹುದೇ ಆ ಬ್ರಹ್ಮ
ಕೇಳಿದರೆ..., ಕೈ ಜಾಡಿಸಿದನು
ನಿಮ್ಮ ಕರ್ಮ.......,
ಆ ಹೊಣೆಗಾರ ನಾನಲ್ಲ ಎಂದನಲ್ಲ !!
ಹೆಜ್ಜೆ
ಅವಳ ಹೆಜ್ಜೆ
ನನ್ನತ್ತ ಮೂಡಿದಾಗ
ಜಗವೆಲ್ಲಾ ವರ್ಣಮಯ !
ಅವೇ ಹೆಜ್ಜೆಗಳು.,
ದೂರ ಸರಿದಾಗ....
ಜಗವೇ ಮಾಯ.......!!
ನನ್ನತ್ತ ಮೂಡಿದಾಗ
ಜಗವೆಲ್ಲಾ ವರ್ಣಮಯ !
ಅವೇ ಹೆಜ್ಜೆಗಳು.,
ದೂರ ಸರಿದಾಗ....
ಜಗವೇ ಮಾಯ.......!!
Monday, November 03, 2014
ಹೊಣೆ
ನೀವು ಭಾರತದ ಯಾವದೇ ರಾಜ್ಯದವರಿದ್ದರೂ ಸರಿ,
ನೀವೆಲ್ಲಾ ನಮ್ಮವರೇ ಅನ್ನುವ ಮನೋಭಾವ ನಮ್ಮದು.!
ಹಾಗೆಯೇ ನೀವು ನಮ್ಮವರಾಗಿ ಬೆರೆಯಿರಿ
ಕನ್ನಡವ ಅರೆತು, ಕಲಿತು, ಬೆಳೆಸುವ ಹೊಣೆ ನಿಮ್ಮದಾಗಿರಲಿ..!!
ನೀವೆಲ್ಲಾ ನಮ್ಮವರೇ ಅನ್ನುವ ಮನೋಭಾವ ನಮ್ಮದು.!
ಹಾಗೆಯೇ ನೀವು ನಮ್ಮವರಾಗಿ ಬೆರೆಯಿರಿ
ಕನ್ನಡವ ಅರೆತು, ಕಲಿತು, ಬೆಳೆಸುವ ಹೊಣೆ ನಿಮ್ಮದಾಗಿರಲಿ..!!
ಕಿವಿಮಾತು
ಪ್ರದರ್ಶಿಸದಿರಿ ಹೆಂಗಳೆಯರೇ ಅದು ಅಪಾಯವೇ ಸರಿ
ಅಂದವನ್ನು ಮುಚ್ಚಿಡುವುದರಿಂದಲೇ ಅದಕ್ಕುಂಟು ಬೆಲೆ
ನಿಮ್ಮ ಮೆಚ್ಚುವವರು ಅಂತರಂಗವ ಬಯಸುವರು
ತೋರಿಕೆಯ ಬಹಿರಂಗ ಕಿಡಿಗೇಳಿಗಳ ಮನ ಬಂಗ
ಸೂಕ್ಷ್ಮ ಮಾತನ್ನು ತಿಳಿಯಿರಿ , ಅಪಾಯವ ಉಪಾಯದಿಂದ ಗೆಲ್ಲಿರಿ. !!
ಅಂದವನ್ನು ಮುಚ್ಚಿಡುವುದರಿಂದಲೇ ಅದಕ್ಕುಂಟು ಬೆಲೆ
ನಿಮ್ಮ ಮೆಚ್ಚುವವರು ಅಂತರಂಗವ ಬಯಸುವರು
ತೋರಿಕೆಯ ಬಹಿರಂಗ ಕಿಡಿಗೇಳಿಗಳ ಮನ ಬಂಗ
ಸೂಕ್ಷ್ಮ ಮಾತನ್ನು ತಿಳಿಯಿರಿ , ಅಪಾಯವ ಉಪಾಯದಿಂದ ಗೆಲ್ಲಿರಿ. !!
Sunday, November 02, 2014
ಇದು ಅದೇನಾ ???
ಅವಳು ಹೃದಯದಲ್ಲಿಲ್ಲ ಅನ್ನುವುದು ಸುಳ್ಳು..
ಆದಕ್ಕೆ, ಅವಳ ಒಂದು ಸಹಿಯಿಂದಲೆ ಹೃದಯ ಇನ್ನೂ ಬಡಿಯುತ್ತಿದೆ..!!
ಆದಕ್ಕೆ, ಅವಳ ಒಂದು ಸಹಿಯಿಂದಲೆ ಹೃದಯ ಇನ್ನೂ ಬಡಿಯುತ್ತಿದೆ..!!
ಮೋಹಕ ಪ್ರೀಯೆ
ಬಹಳ ಮೋಹಕ ಚೆಲುವೆ ನಿನ್ನ ಮೈಮಾಟ
ಪ್ರತಿ ಸಲ ಕಂಡು ನಿನ್ನ ಮನವಾಯಿತು ಮರ್ಕಟ
ಚಿತ್ರ ಬದಲಾಯಿಸಿ ಪದೆ ಪದೆ, ನೀಡುತ್ತಿರುವೆ ಹೃದಯಕ್ಕೆ ಸಂಕಟ
ಇನ್ನು ಸಿಗದಿರೆ ನೀ ನಾ ಸೇರುವ ಮಠ. !!
ಪ್ರತಿ ಸಲ ಕಂಡು ನಿನ್ನ ಮನವಾಯಿತು ಮರ್ಕಟ
ಚಿತ್ರ ಬದಲಾಯಿಸಿ ಪದೆ ಪದೆ, ನೀಡುತ್ತಿರುವೆ ಹೃದಯಕ್ಕೆ ಸಂಕಟ
ಇನ್ನು ಸಿಗದಿರೆ ನೀ ನಾ ಸೇರುವ ಮಠ. !!
Monday, October 13, 2014
THOUGHT FOR THE DAY
SOME PEOPLE ARE PRIORITY IN SOMEONE'S EYES , BUT THE SPECIAL ONE'S NEEDS TO CREATE THE TOP PRIORITY IF THEY WANT THEMSELVES TO BE TREATED AS ROYAL.
Sunday, October 12, 2014
ನತದೃಷ್ಠೆ
ಹೆಂಡತಿಯ ಅಧಿಕಾರ ಸಿಕ್ಕಿತು ಆದರೆ,
ಅವಳು ಅವನ ಮನ ಗೆಲ್ಲಲಿಲ್ಲ..!
ಅವಳ ಹಣೆಬಾರಕ್ಕೆ ಅವಳೇ ಹೊಣೆ
ಈಗ ಅವಳಿಗೆ ಅಧಿಕಾರವೂ ಇಲ್ಲ.., ಅವನೂ ಇಲ್ಲ..!!
ಅವಳು ಅವನ ಮನ ಗೆಲ್ಲಲಿಲ್ಲ..!
ಅವಳ ಹಣೆಬಾರಕ್ಕೆ ಅವಳೇ ಹೊಣೆ
ಈಗ ಅವಳಿಗೆ ಅಧಿಕಾರವೂ ಇಲ್ಲ.., ಅವನೂ ಇಲ್ಲ..!!
ಹಿತವಚನ
ಆಳುವುದು, ಆಳಾಗುವುದು ನಿಯಮವಲ್ಲಾ ಜಗದಲ್ಲಿ
ಸಹಬಾಳ್ವೆಗೆ ನಿಯಮ ಬೇಕಿಲ್ಲ ,
ಬಾಳಿ ಬದುಕುತ್ತೇವೆ ಅನ್ನುವ ಛಲವೊಂದಿದ್ದರೆ ಸಾಕು..!
ಸಹಬಾಳ್ವೆಗೆ ನಿಯಮ ಬೇಕಿಲ್ಲ ,
ಬಾಳಿ ಬದುಕುತ್ತೇವೆ ಅನ್ನುವ ಛಲವೊಂದಿದ್ದರೆ ಸಾಕು..!
ತಕ್ಕಡಿ
ತಕ್ಕಡಿ ತೂಗುತ್ತಿರುವಳು ಅವಳಲ್ಲ
ಕಣ್ಣಿಗೆ ಕಪ್ಪು ಪಟ್ಟಿ ಧರಿಸಿದವಳು...!
ತೂಗಬೇಕಾದವರು ನಾವೇ... ಕಣ್ಣು ತೆರೆದು.,
ಎಡ ಭಾರವಾಗದಂತೆ..., ಬಲ ಕುಸಿಯದಂತೆ..!!
ಕಣ್ಣಿಗೆ ಕಪ್ಪು ಪಟ್ಟಿ ಧರಿಸಿದವಳು...!
ತೂಗಬೇಕಾದವರು ನಾವೇ... ಕಣ್ಣು ತೆರೆದು.,
ಎಡ ಭಾರವಾಗದಂತೆ..., ಬಲ ಕುಸಿಯದಂತೆ..!!
ಹುಡ್ ಹುಡ್
ಅಬ್ಬರಿಸುತ್ತಿದೆ ಹುಡ್ ಹುಡ್
ಜನರೆಲ್ಲಿ ನಡುಕ ಗಡಗಡ್
ದಯನೀಯ ಸ್ಥಿತಿ ಬ್ಯಾಡ್ ಬ್ಯಾಡ್
ಏಕೆ ನಡೆಯುತ್ತಿದೆ ಇಂತಹ ಗಡ್ ಬಡ್ ?
ಜನರೆಲ್ಲಿ ನಡುಕ ಗಡಗಡ್
ದಯನೀಯ ಸ್ಥಿತಿ ಬ್ಯಾಡ್ ಬ್ಯಾಡ್
ಏಕೆ ನಡೆಯುತ್ತಿದೆ ಇಂತಹ ಗಡ್ ಬಡ್ ?
ಸಂಶಯ
ಪದೆ ಪದೆ ಇಣುಕಿ ನೋಡುತ್ತಾಳೆ..
ಅವನ ಹೃದಯದಲ್ಲಿ.......!
ಯಾರಾದರೂ ಚೋರಿ ಕದ್ದು ಕುಳಿತಿರಬೇಕು ಅಂತಾ..
ಎಲ್ಲೋ ಮೂಲೆಯಲ್ಲಿ....!!
ಅವನ ಹೃದಯದಲ್ಲಿ.......!
ಯಾರಾದರೂ ಚೋರಿ ಕದ್ದು ಕುಳಿತಿರಬೇಕು ಅಂತಾ..
ಎಲ್ಲೋ ಮೂಲೆಯಲ್ಲಿ....!!
ವಿಚಾರ
ಕೆಲವೊಂದು ಜೋಡಿಗಳನ್ನು ನೋಡಿದಾಗ ಈ ಹುಡುಗಾ ಆ ಹುಡುಗಿಯನ್ನ ಅಥವಾ ಈ ಹುಡುಗಿ ಅಂಥಹ ಹುಡುಗನನ್ನು ಹೇಗೆ ಮದುವೆ ಆದನಪ್ಪಾ/ಆದಳಪ್ಪಾ ಅನ್ನಿಸುತ್ತದೆ.
ಮನುಷ್ಯನ ಬಾಹ್ಯ ಸೌಂದರ್ಯ ಪ್ರೀತಿಸೋಕೆ ಕಾರಣವಲ್ಲ, ಅದು ಅವರ ಪರಸ್ಪರ ಸ್ವಭಾವ ಅರೆತು ಬಾಳುವ ನಂಬಿಕೆ ಹಾಗು ಒಬ್ಬರ ಸುಖದಲ್ಲಿ ಇನ್ನೊಬ್ಬರು ಸಂತೋಷ ಕಾಣುವ ಮಹಾಗುಣ. ಹೀಗೆ ಬಾಳುತ್ತಿರುವ ಎಲ್ಲಾ ಜೋಡಿಗಳಿಗೂ ಒಳ್ಳೇಯದಾಗಲಿ.
ಮನುಷ್ಯನ ಬಾಹ್ಯ ಸೌಂದರ್ಯ ಪ್ರೀತಿಸೋಕೆ ಕಾರಣವಲ್ಲ, ಅದು ಅವರ ಪರಸ್ಪರ ಸ್ವಭಾವ ಅರೆತು ಬಾಳುವ ನಂಬಿಕೆ ಹಾಗು ಒಬ್ಬರ ಸುಖದಲ್ಲಿ ಇನ್ನೊಬ್ಬರು ಸಂತೋಷ ಕಾಣುವ ಮಹಾಗುಣ. ಹೀಗೆ ಬಾಳುತ್ತಿರುವ ಎಲ್ಲಾ ಜೋಡಿಗಳಿಗೂ ಒಳ್ಳೇಯದಾಗಲಿ.
ಕಿವಿಮಾತು
ಹುಡುಕಲು ಹೋಗ ಬೇಡ ಗೆಳತಿ ಇಲ್ಲದ ಪ್ರೀತಿಯ...
ಅದು ಇರುವುದಾದರೇ.........,
ತಾನಾಗಿಯೇ ಒಲಿದು ಬರುವುದು ನಿನ್ನ ಬಳಿಗೆ..!!
ಅದು ಇರುವುದಾದರೇ.........,
ತಾನಾಗಿಯೇ ಒಲಿದು ಬರುವುದು ನಿನ್ನ ಬಳಿಗೆ..!!
Thursday, October 09, 2014
ಸುಮ್ನೆ ಒಂದು ವಿಚಾರ
ಎಲ್ಲಾ ಬಾರಿ ಪಡೆದುಕೊಂಡಿದ್ದು ಅಷ್ಟೇ ಖುಶಿ ಕೊಡುವುದಿಲ್ಲ, ಕೆಲ ಕಾಲದಲ್ಲಿ ಕಳೆದುಕೊಂಡದ್ದು ಖುಶಿ ಕೊಡುತ್ತದೆ.
ಅವಳದೇ ಮತ್ತು
ನನ್ನವಳು ನಡೆಸಿರುವಳು ದಿನವೂ ಕಸರತ್ತು
ಬೃಹದ್ದಾಕಾರ ಅಳಿಸಿ ಆಕಾರಳಾಗುವ ಗಮ್ಮತ್ತು
ಅವಳು ಹೇಗಿದ್ದರೂ ಚಂದವೇ ನನಗೆ, ಈ ನಡುವೆ ತಲೆಗೇರಿದೆ ಅವಳದೇ ಮತ್ತು..!!
ಬೃಹದ್ದಾಕಾರ ಅಳಿಸಿ ಆಕಾರಳಾಗುವ ಗಮ್ಮತ್ತು
ಅವಳು ಹೇಗಿದ್ದರೂ ಚಂದವೇ ನನಗೆ, ಈ ನಡುವೆ ತಲೆಗೇರಿದೆ ಅವಳದೇ ಮತ್ತು..!!
ಕುಂಬಳಕಾಯಿಯ ಅಳಲು
ಕುಂಬಳ ಕಾಯಿ ನಾನು
ಯಾರೋ ಬಿತ್ತಿದರು
ಯಾರೋ ಉತ್ತಿದರು
ನನ್ನ ಬೆಳಸಿದವ ನನ್ನ ಬಳಿಸಲಿಲ್ಲ
ಯಾರಿಗೋ ಮಾರಿ ಬಿಟ್ಟನು
ಅವನು ಕೊಂಡು ತಂದು
ಮಹಾನಗರದ ರಸ್ತೆ ಬೀದಿ ಅಡಿಗೆ ಹಾಕಿರುವನು...
ಇನ್ನೂ ಮುಂದೆ ಇದೆಯಂತೆ ಹಬ್ಬ
ನನ್ನ ಬಗೆದು ಬಿಸಾಡುವರಂತೆ
ಆ ಬಗವಂತನ ಹೆಸರಿನಲ್ಲಿ...
ರಸ್ತೆಯ ಇಬ್ಬದಿಯಲ್ಲೂ ನನ್ನ ಕಳೆಬರಹಗಳು...!
ಯಾರೋ ಬಿತ್ತಿದರು
ಯಾರೋ ಉತ್ತಿದರು
ನನ್ನ ಬೆಳಸಿದವ ನನ್ನ ಬಳಿಸಲಿಲ್ಲ
ಯಾರಿಗೋ ಮಾರಿ ಬಿಟ್ಟನು
ಅವನು ಕೊಂಡು ತಂದು
ಮಹಾನಗರದ ರಸ್ತೆ ಬೀದಿ ಅಡಿಗೆ ಹಾಕಿರುವನು...
ಇನ್ನೂ ಮುಂದೆ ಇದೆಯಂತೆ ಹಬ್ಬ
ನನ್ನ ಬಗೆದು ಬಿಸಾಡುವರಂತೆ
ಆ ಬಗವಂತನ ಹೆಸರಿನಲ್ಲಿ...
ರಸ್ತೆಯ ಇಬ್ಬದಿಯಲ್ಲೂ ನನ್ನ ಕಳೆಬರಹಗಳು...!
Tuesday, September 30, 2014
THOUGHT FOR THE DAY
BLIND BELIEF IS THE INNOCENCE OF A CHILD , BELIEVING A PERSON EVEN AFTER EXPERIENCING CRUELTY IS FOOLISHNESS.
Sunday, September 28, 2014
Saturday, September 27, 2014
ಲೂಟಿ
ನನ್ನ ಮನದ ತೆರೆದ ಮುಸ್ತಕ ಆಲಿಸಿದ ಅವಳು,
ಬಹಳ ಚೂಟಿ !
ಈಗ ತರ ತರಹದ ವಯ್ಯಾರ ಬಳಸಿ ಮಾಡುತ್ತಿರುವಳು,
ನನ್ನ ಕನಸ್ಸುಗಳ ಲೂಟಿ !!
ಈಗ ತರ ತರಹದ ವಯ್ಯಾರ ಬಳಸಿ ಮಾಡುತ್ತಿರುವಳು,
ನನ್ನ ಕನಸ್ಸುಗಳ ಲೂಟಿ !!
Thursday, September 25, 2014
ರಸ್ತೆಗೆ ಮೇಕಪ್
ಕೆರ ಕೆಟ್ಟು ಹದಗೆಟ್ಟು ಹೋದ ರಸ್ತೆಗಳಿಗೆ.....,
ಬಳಿದಾರೆ ಟಾರು...!!
ಆ ವರುಣನಿಗೆ ಅದೇನೋ ಕೋಪ.............,
ಮತ್ತೆ ಕಿತ್ತೆಸೆಯಲು ಸುರಿಸ್ಯಾನ ಮಳೆ ನೀರು !
ಆ ವರುಣನಿಗೆ ಅದೇನೋ ಕೋಪ.............,
ಮತ್ತೆ ಕಿತ್ತೆಸೆಯಲು ಸುರಿಸ್ಯಾನ ಮಳೆ ನೀರು !
ನಿರ್ಲಿಪ್ತಳು
ಅವನು,
ಬಣ್ಣ ಬಣ್ಣವಾಗಿ ಬಣ್ಣಿಸಿದ ಕನ್ಯೆ...
ಇವಳೇ....
ಅಂತಾ ಅವಳು ಭಾವಿಸಿ ಬೀಗಿದಳು..!
ಪಾಪ ಅವಳಿಗೇನು ತಿಳಿದೀತು,
ಅವನು ವರ್ಣಿಸಿದ ಕನ್ಯೆ ...ಬರೀ ಕವನಗಳಲ್ಲೇ ಅವಳು ನಿರ್ಲಿಪ್ತಳು..!!
ಬಣ್ಣ ಬಣ್ಣವಾಗಿ ಬಣ್ಣಿಸಿದ ಕನ್ಯೆ...
ಇವಳೇ....
ಅಂತಾ ಅವಳು ಭಾವಿಸಿ ಬೀಗಿದಳು..!
ಪಾಪ ಅವಳಿಗೇನು ತಿಳಿದೀತು,
ಅವನು ವರ್ಣಿಸಿದ ಕನ್ಯೆ ...ಬರೀ ಕವನಗಳಲ್ಲೇ ಅವಳು ನಿರ್ಲಿಪ್ತಳು..!!
Monday, September 01, 2014
THOUGHT FOR THE DAY
Extend the helping hand to the poor & needy, not to people who pretend to be poor and are greedy.
Wednesday, August 27, 2014
ಹಬ್ಬ
ಹಬ್ಬ ಬಂತು ಹಬ್ಬ
ಕಾಣದ ದೇವರ ಹುಡುಕುವ ಹಬ್ಬ
ಬೀದಿ ಬೀದಿಯಲ್ಲಿ ದೇವರ ಕೂಡಿಸುವ ಹಬ್ಬ
ಹಬ್ಬ ಬಂತು ಹಬ್ಬ
ಜನರ ಪೀಡಿಸಿ, ಹಣ ವಸೂಲಿ ಮಾಡುವ ಹಬ್ಬ
ಪುಂಡ ಪೋಕರಿಗಳಿಗೆ ಪುಂಡಾಟದ ಹಬ್ಬ
ಹಬ್ಬ ಬಂತು ಹಬ್ಬ
ಹಾದಿ ಬೀದಿಗೆ ಜಗಮಗಿಸೋ ದೀಪ
ಭಕ್ತಿಯೇ ಇಲ್ಲಾ.., ಅಬ್ಬರವೇ ಎಲ್ಲಾ
ಹಬ್ಬ ಬಂತು ಹಬ್ಬ
ಕೆರೆ ಭಾವಿಗಳೆಲ್ಲಾ ಪೂಜೆ ತ್ಯಾಜಗಳ ಸಾಗರ
ರಸ್ತೆ ರಸ್ತೆಗಳಲ್ಲಿ ತಿಪ್ಪೆ ಹೆಕ್ಕುವ ಸಮರ
ಹಬ್ಬ ಬೇಕೆ ಹಬ್ಬ..?
ನಗರ ಹೊಲಸುಗೊಳಿಸುವ ಹಬ್ಬ
ಅರ್ಥವ ಮರೆತು ಆಚರಿಸುವ ಹಬ್ಬ..!!!
ಕಾಣದ ದೇವರ ಹುಡುಕುವ ಹಬ್ಬ
ಬೀದಿ ಬೀದಿಯಲ್ಲಿ ದೇವರ ಕೂಡಿಸುವ ಹಬ್ಬ
ಹಬ್ಬ ಬಂತು ಹಬ್ಬ
ಜನರ ಪೀಡಿಸಿ, ಹಣ ವಸೂಲಿ ಮಾಡುವ ಹಬ್ಬ
ಪುಂಡ ಪೋಕರಿಗಳಿಗೆ ಪುಂಡಾಟದ ಹಬ್ಬ
ಹಬ್ಬ ಬಂತು ಹಬ್ಬ
ಹಾದಿ ಬೀದಿಗೆ ಜಗಮಗಿಸೋ ದೀಪ
ಭಕ್ತಿಯೇ ಇಲ್ಲಾ.., ಅಬ್ಬರವೇ ಎಲ್ಲಾ
ಹಬ್ಬ ಬಂತು ಹಬ್ಬ
ಕೆರೆ ಭಾವಿಗಳೆಲ್ಲಾ ಪೂಜೆ ತ್ಯಾಜಗಳ ಸಾಗರ
ರಸ್ತೆ ರಸ್ತೆಗಳಲ್ಲಿ ತಿಪ್ಪೆ ಹೆಕ್ಕುವ ಸಮರ
ಹಬ್ಬ ಬೇಕೆ ಹಬ್ಬ..?
ನಗರ ಹೊಲಸುಗೊಳಿಸುವ ಹಬ್ಬ
ಅರ್ಥವ ಮರೆತು ಆಚರಿಸುವ ಹಬ್ಬ..!!!
Monday, August 25, 2014
ಗೊಂದಲ
ಸದಾ ದೂರವಾಣಿಯಲ್ಲಿ ಮಗ್ನಳಾಗಿದ್ದವಳ ನಗುವ ಕಂಡು
ಎಂತಹ ಒಳ್ಳೇಯ ಜೋಡಿ ಇರಬಹುದು ಇವರದು ಅಂದೆ..
ಮತ್ತೊಂದು ಬಂದ ದೂರವಾಣಿಗೆ ಇವಳ ಕಠೋರ ನಿಲುವು
ಆಗಲೇ ತಿಳಿದದ್ದು ಅವಳ ಕಾಲುಂಗರಗಳು ಯಾರದ್ದೊ ಎಂದು..!!
ಎಂತಹ ಒಳ್ಳೇಯ ಜೋಡಿ ಇರಬಹುದು ಇವರದು ಅಂದೆ..
ಮತ್ತೊಂದು ಬಂದ ದೂರವಾಣಿಗೆ ಇವಳ ಕಠೋರ ನಿಲುವು
ಆಗಲೇ ತಿಳಿದದ್ದು ಅವಳ ಕಾಲುಂಗರಗಳು ಯಾರದ್ದೊ ಎಂದು..!!
Thursday, August 21, 2014
ತಟಸ್ಥ
ಬದುಕು ಎಷ್ಟೇ ಕೆಸರೆರೆಚಿದರೂ ನಾನು ತಟಸ್ಥ
ಸಮುದ್ರದ ದಡದಲ್ಲಿರುವ ಬಂಡೆಯ ಹಾಗೆ...!
ಎಂದಾದರೊಂದು ದಿನ ಮಳೆಗರೆದು ತೊಳೆಯುವುದು
ಬಿಸಿಲೊರೆಸಿ ಸೂರ್ಯ ಆರಿಸುವ ಹಾಗೆ. !!
ಸಮುದ್ರದ ದಡದಲ್ಲಿರುವ ಬಂಡೆಯ ಹಾಗೆ...!
ಎಂದಾದರೊಂದು ದಿನ ಮಳೆಗರೆದು ತೊಳೆಯುವುದು
ಬಿಸಿಲೊರೆಸಿ ಸೂರ್ಯ ಆರಿಸುವ ಹಾಗೆ. !!
Sunday, August 10, 2014
THOUGHT FOR THE DAY
Dare to Dream and keep dreaming , Because " THE DREAMS COME TRUE " Believe me ITS TRUE.
Friday, August 01, 2014
ತಂಗಾಳಿ
ಅನುಭವಿಸುತ್ತಿರುವೆನು ನಾನು ನಿನ್ನ ಇರುವಿಕೆ....
ಈ ತಂಪಾದ ಪರ್ವತ ಶ್ರೇಣಿಗಳಲ್ಲಿ ,
ಸೊಕಿ ಹೋದಾಗಲೆಲ್ಲಾ ಆ ಹಿಮಬೆರೆತ ತಂಗಾಳಿ !!
ಈ ತಂಪಾದ ಪರ್ವತ ಶ್ರೇಣಿಗಳಲ್ಲಿ ,
ಸೊಕಿ ಹೋದಾಗಲೆಲ್ಲಾ ಆ ಹಿಮಬೆರೆತ ತಂಗಾಳಿ !!
ಮೌನ
ನನ್ನ ನೂರು ಪ್ರಶ್ನೇಗಳಿಗೆ ಅವಳದು ಒಂದೇ ಉತ್ತರ "ಮೌನಗೀತೆ "
ಅದಕ್ಕೆ ನನ್ನ ಕಡೆಯಿಂದ, ಅವಳಿಗೆ ಬರೆಯುತ್ತಿರುವೆ "ಮೌನಕವಿತೆ"
Tuesday, June 10, 2014
ಸೆರೆಮನೆ
ನಿನ್ನ ಪ್ರೀತಿಸುವ ತಪ್ಪು ಮಾಡಿರುವೆ ಗೆಳೆಯಾ...
ಮಣ್ಣಿಸು ನನ್ನ, ಬಂಧಿಸಿ ಬಿಡು ನಿನ್ನ ಹೃದಯದ ಸೆರೆಮನೆಯಲ್ಲಿ...
ನಿನ್ನ ಸನೀಹ ಬಯಸಿದ ನಾನು, ಖೈಧಿಯೇ ಸರಿ....!!
ಮಣ್ಣಿಸು ನನ್ನ, ಬಂಧಿಸಿ ಬಿಡು ನಿನ್ನ ಹೃದಯದ ಸೆರೆಮನೆಯಲ್ಲಿ...
ನಿನ್ನ ಸನೀಹ ಬಯಸಿದ ನಾನು, ಖೈಧಿಯೇ ಸರಿ....!!
Friday, June 06, 2014
Thursday, June 05, 2014
ಭಾಷ್ಪ
ದುಃಖ ಉಮ್ಮಳಿಸಿದ್ದಾಗ ಸುರಿಸುತ್ತಾರೆ ಕಣ್ಣೀರು
ಸಂತೋಷಕ್ಕೂ ಹರಿಸುತ್ತಾಳೆ ಹನಿಗಳು ಹಲವು
ತಿಳಿಯದಿವಳ ಮನ.., ಏತಕ್ಕಾಗಿ ಈ ಒಲವು ?
ಸಂತೋಷಕ್ಕೂ ಹರಿಸುತ್ತಾಳೆ ಹನಿಗಳು ಹಲವು
ತಿಳಿಯದಿವಳ ಮನ.., ಏತಕ್ಕಾಗಿ ಈ ಒಲವು ?
Tuesday, May 20, 2014
ಬೆಳಕು
ನೆರೆ ಮನೆಗಳ ಅಂಗಳವೆಲ್ಲಾ ಹೊನ್ನ ಬೆಳಕು
ನನ್ನ ಮನೆ ಅಂಗಳು ಮಾತ್ರ ಕರಿ ನೆರಳು
ಕಾರಣ ನನ್ನ ಮನೆ ಇರುವುದು ಜಗ ಬೆಳಗುವ ದೀಪದ ಕೆಳಗೆ !!
ನನ್ನ ಮನೆ ಅಂಗಳು ಮಾತ್ರ ಕರಿ ನೆರಳು
ಕಾರಣ ನನ್ನ ಮನೆ ಇರುವುದು ಜಗ ಬೆಳಗುವ ದೀಪದ ಕೆಳಗೆ !!
Friday, April 11, 2014
ಹಿತವಚನ
ಪರರ ತಟ್ಟೆಯಲ್ಲಿ ಏನಿದೆ ಎಂದು ತಿಳಿಯುವ ಬದಲು ನಮ್ಮ ತಟ್ಟೆಯಲ್ಲಿ ಏನಿದೆ ಎಂದು ಅರಿತು ನಮ್ಮ ಏಳಿಗೆಗೆ ದುಡಿದರೆ ನಮಗೇ ಒಳಿತು ಹಾಗು ಶ್ರೇಯಸ್ಸು.
Friday, March 28, 2014
Thursday, March 27, 2014
ಅರ್ಹತೆ
ಪ್ರತಿ ಚಿತ್ರದಲ್ಲೂ ಬದಲಾಯಿಸುವಂತೆ ಪಾತ್ರ
ದಿನೆ ದಿನೆ ಬದಲಾಯಿಸುತ್ತಿರುವರು ಪಕ್ಷ !
ಸಮಾಜ ಸೇವೆ ಅನ್ನುವುದು ತೆರೆಯ ಮೇಲಿನ ಚಿತ್ರವಲ್ಲ
ಇಂತಹ ನಟಿಮಣಿಯರು ಸಮಾಜದ ಕಾರ್ಯಕ್ಕೆ ಅರ್ಹರೇ ಅಲ್ಲಾ !!
ದಿನೆ ದಿನೆ ಬದಲಾಯಿಸುತ್ತಿರುವರು ಪಕ್ಷ !
ಸಮಾಜ ಸೇವೆ ಅನ್ನುವುದು ತೆರೆಯ ಮೇಲಿನ ಚಿತ್ರವಲ್ಲ
ಇಂತಹ ನಟಿಮಣಿಯರು ಸಮಾಜದ ಕಾರ್ಯಕ್ಕೆ ಅರ್ಹರೇ ಅಲ್ಲಾ !!
ಕಸರತ್ತು
ಇನ್ನು ಶುರುವಾಯ್ತು...
ಚುನಾವಣೆಯ ಪ್ರಚಾರದ ಭರಾಟೆ !
ಜನರನ್ನು ಒಲಿಸಲು ನಡೆಸುವರು...
ಹಲವು ತರಹದ ಕಸರತ್ತು - ಕರಾಟೆ !!
ಚುನಾವಣೆಯ ಪ್ರಚಾರದ ಭರಾಟೆ !
ಜನರನ್ನು ಒಲಿಸಲು ನಡೆಸುವರು...
ಹಲವು ತರಹದ ಕಸರತ್ತು - ಕರಾಟೆ !!
ಹುಸಿ ನಗೆ
ಹುಸಿ ನಗೆಯ ಬೀರಿ ಜಗವ ಮೆಚ್ಚಿಸಬಹುದು
ಹುಸಿ ನಗೆಯು ಅನ್ಯರ ಜೊತೆ ಬೆರೆಸಲೂಬಹುದು
ಹುಸಿ ನಗೆಯ ಬಣ್ಣವ ಬಲ್ಲವರ್ಯಾರು ?
ಹುಸಿ ನಗೆಯ ಮರ್ಮ ತಿಳಿದವರಿಲ್ಲ
ಹುಸಿ ನಗೆಯೊಂದಿಗೆ ಬಾಳಲಾಗುವುದಿಲ್ಲ
ಹುಸಿ ನಗೆಯು ಎಂದೆಂದಿಗೂ ನೋವನ್ನು ಅಳಿಸುವುದಿಲ್ಲ !!
ಹುಸಿ ನಗೆಯು ಅನ್ಯರ ಜೊತೆ ಬೆರೆಸಲೂಬಹುದು
ಹುಸಿ ನಗೆಯ ಬಣ್ಣವ ಬಲ್ಲವರ್ಯಾರು ?
ಹುಸಿ ನಗೆಯ ಮರ್ಮ ತಿಳಿದವರಿಲ್ಲ
ಹುಸಿ ನಗೆಯೊಂದಿಗೆ ಬಾಳಲಾಗುವುದಿಲ್ಲ
ಹುಸಿ ನಗೆಯು ಎಂದೆಂದಿಗೂ ನೋವನ್ನು ಅಳಿಸುವುದಿಲ್ಲ !!
Wednesday, March 26, 2014
ಸಿಹಿ ಮುತ್ತು
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು....
ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲಾದೀತೆ ಎಂದಳಾಕೆ ..?
ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲಾದೀತೆ ಎಂದಳಾಕೆ ..?
ಸಹಜ ಗುಣ
ದಿನ ದಿನ ಮುನಿಸಿಕೊಂಡರೂ ನಾ
ಮರುದಿನ ಅವಳು ಮತ್ತೆ ಸಹಜ
ಮನಮೆಚ್ಚಿಹುದು ಅವಳ ಆ ಸಹಜ ಗುಣ
ಮತ್ತೆ ಮತ್ತೆ ಸೆಳೆಯುತ್ತದೆ ಅವಳೆಡೆಗೆ ನನ್ನ.
ಮರುದಿನ ಅವಳು ಮತ್ತೆ ಸಹಜ
ಮನಮೆಚ್ಚಿಹುದು ಅವಳ ಆ ಸಹಜ ಗುಣ
ಮತ್ತೆ ಮತ್ತೆ ಸೆಳೆಯುತ್ತದೆ ಅವಳೆಡೆಗೆ ನನ್ನ.
ರಾಜ್ಯಕೀಯ
ದಿಲ್ಲಿಯಿಂದ ಕನ್ಯಾಕುಮಾರಿವರೆಗೂ ಕುಟುಂಬ ರಾಜ್ಯಕೀಯ
ಯಾರು ಗೆದ್ದರು ನಮಗೆ ಸುಖವೇನೂ ಇಲ್ಲಾ,
ಜನರ ಕಷ್ಟಗಳ ದೂಡಿ.., ತುಂಬಿಸಿಕೊಳ್ಳುವರು ಅವರವರ ಪಾತ್ರೆಯ !
ಯಾರು ಗೆದ್ದರು ನಮಗೆ ಸುಖವೇನೂ ಇಲ್ಲಾ,
ಜನರ ಕಷ್ಟಗಳ ದೂಡಿ.., ತುಂಬಿಸಿಕೊಳ್ಳುವರು ಅವರವರ ಪಾತ್ರೆಯ !
ಸುದ್ದಿ
ದೇವರನ್ನು ಒಲಿಸಿಕೊಳ್ಳಲು ಏನ್ ಏನು ಮಾಡುತ್ತಾರೋ ಮೂಢ ಜನ
ಇವರುಗಳ ಕೆಟ್ಟ ಚಟ ತೀರಿಸಿಕೊಳ್ಳಲು ದೇವರಿಗೂ ಮದ್ಯದ ನೈವೇದ್ಯ !
Tuesday, March 25, 2014
ಮತ್ತೆ ಮತ್ತೆ ನೆನಪಾಗುತ್ತದೆ.....!
ಅವಳನ್ನು ರಮಿಸಲು ಹೋದ
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ..
ಎಷ್ಟೋ ತಿಂಗಳುಗಳು ಕಳೆದರೂ...,
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ..
ಎಷ್ಟೋ ತಿಂಗಳುಗಳು ಕಳೆದರೂ...,
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!
Monday, March 24, 2014
ಅನಿಸುತಿದೆ....
ಆದರೆ ಆಗಬೇಕು..,
ನೊಂದ, ಬೆಂದ ಕಣ್ಣಗಳಿಗೆ ತಂಪು ನೀಡುವ ಚೇತನ
ಹಸಿದ ಹೊಟ್ಟೆಗೆ ಹಸಿವ ನೀಗಿಸುವ ಮೃಷ್ಟಾನ
ಅನಾಥರಿಗೆ ಆಸರೆಯಾಗಬೇಕು ಸಲಹುವ ಅಣ್ಣ
ಅನಾಥರಿಗೆ ಆಸರೆಯಾಗಬೇಕು ಸಲಹುವ ಅಣ್ಣ
ಕಂಗೆಟ್ಟ ಹೆಣ್ಣಿಗೆ ಕಣ್ಣಾಗಬೇಕು ಅರ್ಥಪೂರ್ಣಾಗಿಸಲು ಅವಳ ಜೀವನ !
ಜೋಡಿ
ನಾನು ನೀನು ಸೂಪರ್ ಜೋಡಿ
ಪ್ರೀತಿನ ನಮ್ಮ ಪಯಣದ ಗಾಡಿ
ಯಾರಾದರೂ ಆದ್ರ ಅಡ್ಡ ಗ್ವಾಡಿ
ಎಲ್ಲಾ ಬಿಟ್ಟಕೊಟ್ಟು ಹೋಗೊಣ ಓಡಿ
ಪ್ರೀತಿನ ನಮ್ಮ ಪಯಣದ ಗಾಡಿ
ಯಾರಾದರೂ ಆದ್ರ ಅಡ್ಡ ಗ್ವಾಡಿ
ಎಲ್ಲಾ ಬಿಟ್ಟಕೊಟ್ಟು ಹೋಗೊಣ ಓಡಿ
Friday, March 21, 2014
ಹುಡುಗೀಯರೇ ಫಾಸ್ಟು ಕಣ್ರಿ...!
ಕಾಮನ ಹುಣ್ಣಿಮೆಯಂದು
ಬಿಲ್ಲು ಹಿಡಿದು ಬಾಣ ಹೂಡಿ ನಿಂತ ಅವನು
ಬಾಣ ಬಿಡುವ ಮುಂಚೆನೆ ಗುಂಡೊಂದು
ಜೋರಾಗಿ ಬಂದು ಹೃದಯ ನಾಟಿತು...!
ಹುಡುಗರು ತುಂಬಾ ಸ್ಲೋ ಕಣ್ರಿ ...ಅದಕ್ಕೆ,
ಅವಳೇ ಮೊದಲು ಅವನ ಹೃದಯಕ್ಕೆ ಹೊಡೆದಳಂತೆ !!
ಬಿಲ್ಲು ಹಿಡಿದು ಬಾಣ ಹೂಡಿ ನಿಂತ ಅವನು
ಬಾಣ ಬಿಡುವ ಮುಂಚೆನೆ ಗುಂಡೊಂದು
ಜೋರಾಗಿ ಬಂದು ಹೃದಯ ನಾಟಿತು...!
ಹುಡುಗರು ತುಂಬಾ ಸ್ಲೋ ಕಣ್ರಿ ...ಅದಕ್ಕೆ,
ಅವಳೇ ಮೊದಲು ಅವನ ಹೃದಯಕ್ಕೆ ಹೊಡೆದಳಂತೆ !!
Thursday, March 20, 2014
ಹೃದಯ ಹಾಡಿದೆ ಇಂದು
ನಗು ಮಲ್ಲಿಗೆ ತುಟಿಗಳಲ್ಲಿ ನಗುತಿವೆ
ಸಣ್ಣನೆಯ ಕಣ್ಣುಗಳು ಭಾಷ್ಪದಲ್ಲಿ ಅರಳಿವೆ
ಹೊಸ ಭಾವಗಳು ಮೂಡುತ ಮನಸಲಿ
ಉಲ್ಲಾಸಗೊಂಡು ಹೃದಯ ಹಾಡಿದೆ ಇಂದು..!
ನವ ಮಾಸದ ನವ ಋತುವಿನಲಿ
ನವ ಕನಸ್ಸುಗಳ ಹೊತ್ತು ಕಣ್ಣಲಿ
ಮತ್ತೆ ಚಿಗುರುತಿವೆ ಆಸೆಗಳು
ತೂಗುಯ್ಯಾಲೆಯಲ್ಲಿ ತೆಲುತ್ತಾ ಹಾಡಿದೆ ಹೃದಯ ಇಂದು..!
ಕತ್ತಲೆ ದಾರಿಯ ಕವಿದು
ಬೆಳೆಕು ಎಲ್ಲೆಡೆ ಮೆರೆದು
ಹೊಸ ಗುರಿಯಡೆಗೆ ದಾಪುಗಾಲು
ಕುಣಿಯುತ್ತಾ ಸಾಗಲು.., ಹಾಡಿದೆ ಹೃದಯ ಇಂದು..!!
ಸಣ್ಣನೆಯ ಕಣ್ಣುಗಳು ಭಾಷ್ಪದಲ್ಲಿ ಅರಳಿವೆ
ಹೊಸ ಭಾವಗಳು ಮೂಡುತ ಮನಸಲಿ
ಉಲ್ಲಾಸಗೊಂಡು ಹೃದಯ ಹಾಡಿದೆ ಇಂದು..!
ನವ ಮಾಸದ ನವ ಋತುವಿನಲಿ
ನವ ಕನಸ್ಸುಗಳ ಹೊತ್ತು ಕಣ್ಣಲಿ
ಮತ್ತೆ ಚಿಗುರುತಿವೆ ಆಸೆಗಳು
ತೂಗುಯ್ಯಾಲೆಯಲ್ಲಿ ತೆಲುತ್ತಾ ಹಾಡಿದೆ ಹೃದಯ ಇಂದು..!
ಕತ್ತಲೆ ದಾರಿಯ ಕವಿದು
ಬೆಳೆಕು ಎಲ್ಲೆಡೆ ಮೆರೆದು
ಹೊಸ ಗುರಿಯಡೆಗೆ ದಾಪುಗಾಲು
ಕುಣಿಯುತ್ತಾ ಸಾಗಲು.., ಹಾಡಿದೆ ಹೃದಯ ಇಂದು..!!
Monday, March 17, 2014
ಮಚ್ಚು V/s ಲೇಖನಿ
ಮಚ್ಚುಗಳಿಂದ ಇರಿದರೆ ಕೊಲೆ
ಲೇಖನಿಯಿಂದ ಇರಿದರೆ ಕಲೆ
ಮಚ್ಚು ಮನೆ ದೀಪವ ಆರಿಸುವುದು
ಲೇಖನಿ ಜ್ಯೋತಿಯ ಬೆಳಗಿಸಬಲ್ಲದು !
ಲೇಖನಿಯಿಂದ ಇರಿದರೆ ಕಲೆ
ಮಚ್ಚು ಮನೆ ದೀಪವ ಆರಿಸುವುದು
ಲೇಖನಿ ಜ್ಯೋತಿಯ ಬೆಳಗಿಸಬಲ್ಲದು !
ನನ್ನ ಭಾವಗಳು
ಕದ್ದೋಡ ಬೇಡವೇ ಭಾವನಾ ನನ್ನ ಭಾವಗಳನ್ನ
ಹೇಗೆ ಇರಲಿ ಬರೆಯದೇ ಸಾಲುಗಳನ್ನ ?
ನಿದ್ದೆಯನ್ನಾದರೂ ಕದ್ದುಬಿಡು
ಆ ಕ್ಷಣಗಳೇ ಸಾಕು ನೆನೆಯಲು ನಿನ್ನ !!
ಹೇಗೆ ಇರಲಿ ಬರೆಯದೇ ಸಾಲುಗಳನ್ನ ?
ನಿದ್ದೆಯನ್ನಾದರೂ ಕದ್ದುಬಿಡು
ಆ ಕ್ಷಣಗಳೇ ಸಾಕು ನೆನೆಯಲು ನಿನ್ನ !!
ಲೋಕ ತ್ಯಜಿಸಿದವಳು
ಅಂದು,
ನನ್ನ ಕಪ್ಪು ಬಿಳುಪಿನ ಜೀವನಕ್ಕೆ ಬಣ್ಣ ಹಚ್ಚಿದ್ದಳು
ಇಂದು,
ಬಣ್ಣಗಳಿದ್ದೂ.., ಅವಳ ನೆನಪುಗಳೆಲ್ಲಾ ಕಪ್ಪು ಬಿಳುಪು !!
ನನ್ನ ಕಪ್ಪು ಬಿಳುಪಿನ ಜೀವನಕ್ಕೆ ಬಣ್ಣ ಹಚ್ಚಿದ್ದಳು
ಇಂದು,
ಬಣ್ಣಗಳಿದ್ದೂ.., ಅವಳ ನೆನಪುಗಳೆಲ್ಲಾ ಕಪ್ಪು ಬಿಳುಪು !!
ಆಹ್ವಾನ
ಅವಳು,
ಎರೆದುಕೊಂಡು ಹೊರ ಬಂದಾಗ..
ಬಚ್ಚಲಮನೆ,
ಬಿಸಿಯಾಗಿ ಬುಸುಗೂಡುತ್ತಿತ್ತು !
ಅವಳ,
ಆ ಅದರುವ ತುಟಿಗಳ
ಮೇಲೆ ಜಿನುಗುವ ಹನಿಗಳು
ಅವಳ ಸನೀಹಕೆ ಆಹ್ವಾನಿಸುತ್ತಿದ್ದವು.!!
ಎರೆದುಕೊಂಡು ಹೊರ ಬಂದಾಗ..
ಬಚ್ಚಲಮನೆ,
ಬಿಸಿಯಾಗಿ ಬುಸುಗೂಡುತ್ತಿತ್ತು !
ಅವಳ,
ಆ ಅದರುವ ತುಟಿಗಳ
ಮೇಲೆ ಜಿನುಗುವ ಹನಿಗಳು
ಅವಳ ಸನೀಹಕೆ ಆಹ್ವಾನಿಸುತ್ತಿದ್ದವು.!!
Thursday, March 13, 2014
ಚಿಕ್ಕದಾದ ದೊಡ್ಡ ಕಥೆ
ಅವರಿಬ್ಬರು ಒಳ್ಳೆಯ ಸ್ನೇಹಿತರು. ಒಬ್ಬರಿಗಿಂತ ಒಬ್ಬರೂ ಗುಣವಂತರು, ಯೋಚನಾಶೀಲರು. ವಯಸ್ಸು ಬೆಳೆದಂತೆ ತಮ್ಮ ತಮಗೆ ತಕ್ಕಂತ ಹುಡುಗ ಹುಡುಗಿಯ ನೋಡಿ ಮದುವೆಯಾದರು. ಮದುವೆಯ ಹೊಸದರಲ್ಲಿ ಇಬ್ಬರೂ ತಮ್ಮ ತಮ್ಮ ಸಂಸಾರದಲ್ಲಿ ಸಂತೋಷ ಸಂಭ್ರಮಗಳಲ್ಲಿ ಮಗ್ನರು. ದಿನಗಳು ಕಳೆದಂತೆ ಗೆಳತಿಗೆ ಮನೆಯಲ್ಲಿ ಸಣ್ಣ ಪುಟ್ಟ ಜಗಳ, ಮನಸ್ತಾಪ ಶುರುವಿಡುತ್ತವೆ. ಅವಳು ಎಷ್ಟೇ ಕಷ್ಟಗಳ ಪಡುತ್ತಿದ್ದರೂ ಸ್ನೇಹಿತನ ಜೊತೆ ಹೇಳಿಕೊಳ್ಳುವುದಿಲ್ಲ. ಆ ಗೆಳೆಯ ಇವಳನ್ನು ಮೊದಲಿನಿಂದಲೂ ನೋಡಿದವ, ಅವಳು ಹೇಳದೇ ಇರುವ ವಿಷಯ ಅವಳ ಮುಖದಲ್ಲಿ ಅವನಿಗೆ ಕಾಣುತ್ತಿತ್ತು.., ಆದರೂ ಸಹ ಅವಳಾಗಿಯೇ ಹೇಳಲಿ ಎಂದು ಸುಮ್ಮನಾಗಿದ್ದನು. ಅವಳ ಗಂಡನೆನೋ ಒಳ್ಳೇಯವನೆ ಆದರೆ ಅವಳ ಅತ್ತೆ ಮಾವಂದಿರ ಕಾಟ ಅವಳಿಗೆ. ಹೀಗೆ ಮಾಡಬಾರದು.., ಹಾಗೆ ಮಾಡಬಾರದು.., ಅವಳಿಗೆ ಈ ಸಣ್ಣ ಪುಟ್ಟ ಮನಸ್ತಾಪಗಳು ದೊಡ್ಡದು ಅನ್ನುವ ಭಾವನೆ. ಏಕಾ ಏಕಿ ಒಂದು ದಿನ ಸ್ನೇಹಿತನ ಬಳಿ ಬಂದು ತನ್ನ ಸಮಸ್ಯೆಯ ಬಗ್ಗೆ ವಿವರಿಸುತ್ತಾಳೆ. ಅವಳ ಮನಸ್ಥಿತಿಯ ಅರ್ಥ ಮಾಡಿಕೊಂಡ ಸ್ನೇಹಿತ ಅವಳಿಗೆ ಮೊದಲು ಶಾಂತವಾಗಿಸುತ್ತಾನೆ. ಅವಳನ್ನು ಕುರಿತು, ನೋಡು ಮದುವಯ ಹೊಸದರಲ್ಲಿ ಇವಲ್ಲಾ ಸಾಮಾನ್ಯ, ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಮಯ ಬೇಕು, ಒಮ್ಮಿಂದೊಮ್ಮೆಲೆ ಎಲ್ಲವೂ ಅಂದುಕೊಂಡಹಾಗೆ ನಡೆಯುತ್ತಿಲ್ಲ ಅಂದು ಆತುರತೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದು ಸಮಂಜಸವಲ್ಲ. ಎಲ್ಲರ ದೃಷ್ಟಿಯಲ್ಲಿ ಒಂದು ಸನ್ನಿವೇಶವನ್ನು ಗಮನಿಸು, ಒಬ್ಬೊಬ್ಬರ ದೃಷ್ಟಿಯಲ್ಲಿ ಆ ಸನ್ನಿವೇಶ ಬೆರೆ ಬೆರೆ ಅರ್ಥದಲ್ಲಿ ಗೋಚರಿಸುತ್ತದೆ. ಹಾಗೆಯೇ ನೀನು ನಿನ್ನ ಮಾವನ ಸ್ಥಾನದಲ್ಲಿ ನಿಂತು ಯೋಚಿಸು, ಹಾಗೆಯೇ ಅತ್ತೆಯ ಸ್ಥಾನದಲ್ಲಿ, ಗಂಡನ ಸ್ಥಾನದಲ್ಲಿ ಯೋಚಿಸು, ಅವರುಗಳಿಗೆಲ್ಲಾ ಒಂದೊಂದು ಅವರದೇ ಆದ ಯೋಚನೆ ಇರುತ್ತದೆ. ಎಲ್ಲಾ ವಿಷಯಗಳನ್ನು ನಿನ್ನ ಒಬ್ಬಳ ದೃಷ್ಟಿಯಲ್ಲಿ ಯೋಚಿಸದಿರು. ನೀನು ಅವರ ಮನೆಯ ಮಗಳು, ಆ ಮನೆ ನಿನ್ನದೇ ಎಂದು ಭಾವಿಸು. ನಿನ್ನ ಅಪ್ಪಾ ಅಮ್ಮಂದಿರ, ಅಣ್ಣ ತಮ್ಮಂದಿರ ಪ್ರೀತಿ ನಿನ್ನಲ್ಲಿಯೇ ಇರಲಿ, ಆದರೆ ಅವರುಗಳನ್ನ ಕಟ್ಟಿಕೊಂಡು ಜಗಳಕ್ಕೆ ಇಳಿಯುವುದು, ನಿನ್ನ ನೆಮ್ಮದಿ ಹಾಗು ಗಂಡನ ನೆಮ್ಮದಿ ಹಾಳು ಮಾಡುವುದರಿಂದ ನಿನ್ನ ಜೀವನಕ್ಕೆ ಸಂಕಷ್ಟ ಬರುತ್ತದೆ, ಅದು ಸಲ್ಲದು. ನಾನು ನನ್ನ ಗಂಡನ ಜೊತೆ ಸುಖವಾಗಿ ಜೀವನ ಮಾಡಲು ಏನು ಮಾಡಬೇಕು, ಗಂಡ ನನ್ನಿಂದ ಯಾವ ವರ್ತನೆ ಬಯಸುತ್ತಾನೆ, ಅವನು ಅಂದುಕೊಂಡ ಹಾಗೆ ನಾನು ವರ್ತಿಸಿದರೆ ಖಂಡಿತ ಗಂಡನು ತನಗೆ ಒಳ್ಳೆಯವನಾಗಿಯೇ ಇರುತ್ತಾನೆ ಅನ್ನುವುದ ತಿಳಿ. ಹಾಗೆಯೇ ಅತ್ತೆಗೆ ತಕ್ಕ ಸೊಸೆ ಆಗಲು ಏನು ಮಾಡಬೇಕು, ನಿನ್ನ ಅತ್ತೆಯ ಅಭಿಲಾಷೆಗಳೇನು ಅವಳು ನಿನ್ನಲ್ಲಿ ಏನೇನು ಗುಣಗಳನ್ನು ಅಪೇಕ್ಷಿಸುತ್ತಾಳೆ, ಅದೇ ತರಹ ಅವಳೊಂದಿಗೆ ನಡೆದುಕೊಂಡರೆ ಅವಳ ಕಣ್ಣಿನಲ್ಲಿ ಒಳ್ಳೆಯ ಸೊಸೆ ಅನ್ನಿಸಿಕೊಳ್ಳಬಹುದು. ಹಾಗೆಯೇ ಮಾವನ ಕೂಡಾ ಸಹ. ಒಂದು ಸೊಸೆಯ ಸ್ಥಾನ ಮನೆಯಲ್ಲಿ ತುಂಬಾ ಅನರ್ಘ್ಯವಾದದ್ದು ಅದನ್ನು ನಂಬಿಕೆಯಿಂದ ಗಳಿಸಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಹಾಗೆ ಇವುಗಳನ್ನು ಸಾಧಿಸಲು ಬರೀ ಒಂದು ಎರಡು ವರ್ಷಗಳು ಸಾಲುವುದಿಲ್ಲ. ನಿನಗೆ, ಈ ನಿನ್ನ ಸ್ನೇಹಿತನ ಮೇಲೆ ಗೌರವ ಇದ್ದರೆ ನಾನು ಹೇಳಿದ ಹಾಗೆ ಕೆಲ ದಿನ ಬಾಳಿ ನೋಡು, ಅದರ ಸಂತೋಷ ಸಂತೃಪ್ತಿಯನ್ನು ಅನುಭವಿಸಿ ನೋಡು ಆಗ ನಿನಗೇ ಅರ್ಥವಾಗುತ್ತದೆ. ಒಂದು ತಪ್ಪು ಹೆಜ್ಜೆ ಎಲ್ಲರ ಜೀವನವನ್ನು ಹಾಳು ಮಾಡಬಹುದು ಅದಕ್ಕೆ ಆತುರತೆಯಿಂದ ಜೀವನ ಹಾಳು ಮಾಡಿಕೊಳ್ಳುವುದು ಸಮಂಜಸವಲ್ಲ. ಇನ್ನೊಂದು ವಿಷಯ ನಿನ್ನ ಅಪ್ಪ ಅಮ್ಮಂದಿರು ನಿನ್ನ ಮದುವೆ ಮಾಡುವಾಗ ಬೆಟ್ಟದಷ್ಟು ಆಸೆಗಳ ಇಟ್ಟುಕೊಂಡು ಮದುವೆ ಮಾಡಿದ್ದಾರೆ, ನಿನ್ನ ಒಂದು ತಪ್ಪು ಹೆಜ್ಜೆ ಅವರ ಎಲ್ಲಾ ಕನಸ್ಸುಗಳನ್ನು ನುಚ್ಚುನೂರು ಮಾಡಬಹುದು. ನೀನು ತುಂಬಾ ಯೋಚನಾಶಿಲಳು ಹೌದು, ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡು ದಿಟ್ಟತನದಿಂದ ಮುಂದುವೆರೆ. ನನಗೆ ನಂಬಿಕೆ ಇದೆ, ನೀನು ನಿನ್ನ ಎಲ್ಲಾ ಸಮಸ್ಯೆಗಳಿಂದ ಹೊರ ಬಂದು ಒಂದು ಒಳ್ಳೆಯ ಜೀವನ ಪಡೆಯುತ್ತಿ ಅಂತಾ. ನನ್ನ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು, ಎಲ್ಲವನ್ನು ಅನುಷ್ಟಾನಕ್ಕೆ ತಂದು ನೋಡು ನಿನ್ನ ಜೀವನ ಸುಖಮಯವಾಗುತ್ತದೆ.
ಮಧ್ಯಾಂತರ ವಿರಾಮ...................೬ ತಿಂಗಳುಗಳ ಬಳಿಕ ಇವರ ಭೇಟಿ.........!!
ಅವಳ ಮುಖದಲ್ಲಿ ಮಂದಹಾಸ......! ಅವಳ ಮುಖ ಭಾವಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿವೆ. ಬಹು ದಿನಗಳ ಬಳಿಕ ಸ್ನೇಹಿತರು ಮತ್ತೆ ಮಾತುಗಳಿಗೆ ಇಳಿಯುತ್ತಾರೆ. ಏನಮ್ಮಾ ನಿನ್ನ ಮುಖದಲ್ಲಿ ಕಳೆ ರಾರಾಜಿಸುತ್ತಿದೆ, ನಿನ್ನ ಗಂಡ, ಅತ್ತೆ ಮಾವಂದಿರು ಹೇಗಿದ್ದಾರೆ, ನಿಮ್ಮ ಅಪ್ಪ ಅಮ್ಮಂದಿರು, ಅಣ್ಣ ತಮ್ಮಂದಿರು ಎಲ್ಲರೂ ಹೇಗಿದ್ದಾರೆ ? ಹಾ...ಹಾ.....ಹೇಳಿತ್ತೆನೆ...ಎಲ್ಲಾರೂ ಚೊಲೊ ಇದ್ದಾರ. ನನ್ನ ಮನೆ ಇಂದು ನಂದಾನವನ, ನನ್ನ ಗಂಡ ನನ್ಗೆ ತುಂಬಾ ಪ್ರೀತಿ ಮಾಡುತ್ತಾನೆ, ನನ್ನ ಅತ್ತೆ ಅಲ್ಲ ಅವರು ನನ್ನ ಅಮ್ಮ, ಅವರ ಮಾತೃ ಛಾಯೆಯಲ್ಲಿ ನಾನು ಬೆಳಗುತ್ತಿದ್ದೇನೆ, ಮಾವ ಕೂಡಾ ನನ್ನ ತಂದೆಯ ಸ್ಥಾನದಲ್ಲಿ ಇದ್ದು ನನ್ನ ಸ್ವಂತ ಮಗಳ ಹಾಗೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಅಪ್ಪಾ, ಅಮ್ಮಾ, ಅಣ್ಣಾ, ತಮ್ಮ ಎಲ್ಲರೂ ಮನೆಗೆ ಬಂದು ಹೋಗುತ್ತಾರೆ. ನನ್ನ ಮನೆಯೇ ಸ್ವರ್ಗ. ನನಗಿಂತಾ ಪುಣ್ಯವತಿ ಈ ಭೂಮಿ ಮೇಲೆ ಯಾರು ಇಲ್ಲಾ ಅಂತಾ ತನ್ನ ಸಂತೋಷವನ್ನು ಹಂಚಿಕೊಂಡಳು. ಈ ದೊಡ್ಡ ಪರಿವರ್ತನೆಗೆ ನಿನ್ನ ಸ್ನೇಹಮಯ ಮಾತುಗಳು, ನಿನ್ನ ಮಾರ್ಗ ದರ್ಶನ ಕಾರಣವಾಯಿತು. ಹೆಣ್ಣಿಗೆ ತಾಳ್ಮೆ, ಯೋಚನೆ ಮಾಡುವ ಒಂದು ಮನಸ್ಸು ಇದ್ದರೆ,ಜಗದಲ್ಲಿ ಯಾವುದನ್ನು ಸಾಧಿಸಬಹುದು ಎನ್ನುವ ಧೈರ್ಯ ತುಂಬಿ ನನ್ನನ್ನು ಉಜ್ವಲ ಜೀವನದೆಡೆಗೆ ಸಾಗಲು ಬುದ್ದಿ ಮಾತುಗಳ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯಾವಾದಗಳು. ನಿಮಗೆ ಒಂದು ಒಳ್ಳೆಯ ಸುದ್ದಿ ಹೇಳಬೇಕು......, ಹಾ....ಏನದು ಹೇಳು ಬೇಗ.....! ನಾನು ಈಗ ೪ ತಿಂಗಳು ಗರ್ಭಿಣಿ...! ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳ ಸಂತೋಷವ ಕಂಡು ಗೆಳೆಯನಿಗೂ ಸಂತೋಷವಾಯಿತು. ಕಥೆ ಸುಖವಾಗಿ ಅಂತ್ಯವಾದರೆ....ನಡೆಯುತ್ತದೆಯೇ......???? ಇದು ಒಂದು ಸಿನಿಮಾ ಕಥೆಯಾಗುತ್ತದೆ ಅಷ್ಟೇ.... ಅದಕ್ಕೆ ಕೊನೆಯಲ್ಲಿ ಒಂದು ಟ್ವಿಷ್ಟ್.......!!! ಆ ಸ್ನೇಹಿತನ ಜೀವನದಲ್ಲಿ ಬಿರುಗಾಳಿ...! ಸಂಸಾರವೆಂಬ ಜೋಡು ಎತ್ತಿನ ಬಂಡಿಯಲ್ಲಿ ಅವನ ಮಡದಿಯಾಗಿ ಬಂದ ಹೆಣ್ಣು, ಮತ್ತೊಬ್ಬನ ಮೋಹ ಪಾಷಕ್ಕೆ ಸಿಲುಕಿ ಗಂಡನ ತೊರೆದು ಓಡಿ ಹೋಗಿರುತ್ತಾಳೆ....! :’( ದುಃಖ ಬರಿತ ಟ್ವಿಶ್ಟಿಗೆ...ಕ್ಷಮೆ ಕೋರುತ್ತಾ.... " ಭಾವಪ್ರೀಯ " :)
ವೇದಾಂತ
ಕಳ್ಳ ಖಧಿಮರ, ಕೊಲೆಗಡುಕರ ಮಾತಿನಲ್ಲಿ " ವೇದಾಂತ " ಕೇಳಿ ಯಾರು ಕೂಡಾ ಬದಲಾಗುವುದಿಲ್ಲ.
ಅವರುಗಳಿಗೆ ಕೊಲೆ , ಸುಲುಗೆ , ವಂಚನೆ , ಎಂಬುದು " ಸಾಮಾನ್ಯ " ವಿಷಯ. ಏಕೆಂದರೆ, ಅವರಿಗೆ ಇವೆಲ್ಲವ ಮಾಡಿ
ಗೊತ್ತಿರುತ್ತದೆ ಹೊರೆತು, ಅನುಭವಿಸಿ ಗೊತ್ತಿರುವುದಿಲ್ಲ.
ಅವರುಗಳಿಗೆ ಕೊಲೆ , ಸುಲುಗೆ , ವಂಚನೆ , ಎಂಬುದು " ಸಾಮಾನ್ಯ " ವಿಷಯ. ಏಕೆಂದರೆ, ಅವರಿಗೆ ಇವೆಲ್ಲವ ಮಾಡಿ
ಗೊತ್ತಿರುತ್ತದೆ ಹೊರೆತು, ಅನುಭವಿಸಿ ಗೊತ್ತಿರುವುದಿಲ್ಲ.
THOUGHT FOR THE DAY
If wishes are being fulfilled, it just means that god believes that wishes are true.
On contrary,
If the intensions are bad then, surely even god is helpless to change the way of thinking. :D
On contrary,
If the intensions are bad then, surely even god is helpless to change the way of thinking. :D
ಎಲ್ಲಿ ಮಾಯವಾಯಿತೋ ಆ ವಿಮಾನ ???
ಎಲ್ಲಿ ಮಾಯವಾಯಿತೋ ಆ ವಿಮಾನ
ನಲ್ಲ ನಲ್ಲೇಯರ, ಅಣ್ಣ ತಮ್ಮಂದಿರ
ಅಪ್ಪ ಅಮ್ಮಂದಿರ, ಅಜ್ಜ ಅಜ್ಜಿಯರ
ಹೊತ್ತುಕೊಂಡು....!
ಮಿಡಿಯುವ ಹೃದಯಗಳು ಕಾಯುತಿವೆ
ಆಪ್ತರ ಸುಳಿವಿಲ್ಲದೇ....
ಕಂಬನಿಗಳು ಹೆಪ್ಪುಗಟ್ಟಿವೆ...
ಒಂದು ಸುಳಿವಿಲ್ಲ...ಒಂದು ಸುದ್ದಿಯಿಲ್ಲ
ಆಕ್ರಂದನ ಮುಗುಲು ಮುಟ್ಟಿದರೂ..
ಆ ವಿಧಿಗೂ ಇನ್ನೂ ಕರುಣೆಯಿಲ್ಲಾ..
ಎಲ್ಲಿ ಮಾಯವಾಯಿತೋ ಆ ವಿಮಾನ..???
ನಲ್ಲ ನಲ್ಲೇಯರ, ಅಣ್ಣ ತಮ್ಮಂದಿರ
ಅಪ್ಪ ಅಮ್ಮಂದಿರ, ಅಜ್ಜ ಅಜ್ಜಿಯರ
ಹೊತ್ತುಕೊಂಡು....!
ಮಿಡಿಯುವ ಹೃದಯಗಳು ಕಾಯುತಿವೆ
ಆಪ್ತರ ಸುಳಿವಿಲ್ಲದೇ....
ಕಂಬನಿಗಳು ಹೆಪ್ಪುಗಟ್ಟಿವೆ...
ಒಂದು ಸುಳಿವಿಲ್ಲ...ಒಂದು ಸುದ್ದಿಯಿಲ್ಲ
ಆಕ್ರಂದನ ಮುಗುಲು ಮುಟ್ಟಿದರೂ..
ಆ ವಿಧಿಗೂ ಇನ್ನೂ ಕರುಣೆಯಿಲ್ಲಾ..
ಎಲ್ಲಿ ಮಾಯವಾಯಿತೋ ಆ ವಿಮಾನ..???
ಸತ್ಯ V/s ಮಿಥ್ಯ
ಸತ್ಯ : ನಾವು ಹೇಳ ಬಯಸುವ ಭಾವಗಳನ್ನು ಜನರ ಮುಂದೆ ಬಹಿರಂಗವಾಗಿ ಹೇಳಿದರೆ ಆ ವಿಷಯದಲ್ಲಿ ಸತ್ಯತೆ ಕಾಣುತ್ತದೆ.
ಮಿಥ್ಯ : ಕದ್ದು ಮುಚ್ಚಿ ಗುಪ್ತ ಸಂಭಾಷಣೆಗಳಲ್ಲಿ ಬಿನ್ನಹಿಸುವವರು, ಮಂಗನ ಮುಸುಡಿಗೆ ತುಪ್ಪ ಸವರಿದಂತೆ.
ವಿಚಾರ
ಕೆಲವೊಂದು ಬಾರಿ ನಾವು ತೆಗೆದುಕೊಂಡಿರುವ ನಿರ್ಣಯಗಳು ತಪ್ಪಿರಬಹುದು ಎಂದೆನಿಸಿದಾಗ..., ಎದಿರಿನವರು ತಮ್ಮ ಕುಹಕು ಚಲನವಲನಗಳಿಂದ ನಮ್ಮ ನಿರ್ಧಾರಗಳು ಸರಿಯಾಗಿವೆ ಎಂದು ನಿರೂಪಿಸುತ್ತಾರೆ.
ಹಿತವಚನ
ನಮ್ಮ ದೌರ್ಬಲ್ಯಗಳು ಎಂದಿಗೂ ನಮ್ಮ ದೌರ್ಬಲ್ಯಗಳಲ್ಲ ಆದರೆ, ಅವುಗಳನ್ನು ನಮ್ಮ ಶಕ್ತಿಯಾಗಿ ಬಳಸುವುದು ನಮ್ಮ ಕೈಯಲ್ಲೇ ಇದೆ.
Tuesday, March 11, 2014
ಊಸ್ರವಳ್ಳಿ
ಗಳಿ - ಗಳಿಗೆ ಬದಲಾಗುವುದು ಉಸ್ರವಳ್ಳಿಯ ಬಣ್ಣ
ಅದಕ್ಕಿಂತ ಹುಚ್ಚರು ಯಾರೂ ಇಲ್ಲಾ ನಂಬಲು ಅದನ್ನ
ಅದರ ನಾಟಕವನ್ನು, ಚಲವಲನವನ್ನು ಇಂಚು ಇಂಚು ತಿಳಿದವ
ಯಾವ ಮಿನುಗುವ ಬಣ್ಣ ಹಚ್ಚಿದರೂ ಬೆಪ್ಪಾಗುವುದಿಲ್ಲಾ ಇನ್ನಾ !!
ಅದಕ್ಕಿಂತ ಹುಚ್ಚರು ಯಾರೂ ಇಲ್ಲಾ ನಂಬಲು ಅದನ್ನ
ಅದರ ನಾಟಕವನ್ನು, ಚಲವಲನವನ್ನು ಇಂಚು ಇಂಚು ತಿಳಿದವ
ಯಾವ ಮಿನುಗುವ ಬಣ್ಣ ಹಚ್ಚಿದರೂ ಬೆಪ್ಪಾಗುವುದಿಲ್ಲಾ ಇನ್ನಾ !!
ಪಾಪಿ ಜನ್ಮ
ಪಾಪಿ ಜನ್ಮವೇ..
ನಿನ್ನ ಪಾಪಕ್ಕೆ ಪ್ರಾಯಶ್ಚಿತವಿಲ್ಲ
ನಿನ್ನ ಕೆಟ್ಟ ವರ್ತನೆಗೆ ಕೊನೆಯಿಲ್ಲ
ನಿನ್ನ ಉಳಿವಿಂದ ಯಾರಿಗೂ ಸುಖವಿಲ್ಲ
ನೀ ಜೀವಿಸಿದರೂ ಯಾರಿಗೂ ಒಳಿತಿಲ್ಲ
ಬಾವಿಯೋ, ಕೆರೆಯೋ,ರೈಲ ಹಳಿಯೋ
ಏನೇ ಕಂಡುಕೊಂಡರು ಯಾರೂ ಸಂತಾಪ ಪಡುವವರಿಲ್ಲ.!!
ನಿನ್ನ ಪಾಪಕ್ಕೆ ಪ್ರಾಯಶ್ಚಿತವಿಲ್ಲ
ನಿನ್ನ ಕೆಟ್ಟ ವರ್ತನೆಗೆ ಕೊನೆಯಿಲ್ಲ
ನಿನ್ನ ಉಳಿವಿಂದ ಯಾರಿಗೂ ಸುಖವಿಲ್ಲ
ನೀ ಜೀವಿಸಿದರೂ ಯಾರಿಗೂ ಒಳಿತಿಲ್ಲ
ಬಾವಿಯೋ, ಕೆರೆಯೋ,ರೈಲ ಹಳಿಯೋ
ಏನೇ ಕಂಡುಕೊಂಡರು ಯಾರೂ ಸಂತಾಪ ಪಡುವವರಿಲ್ಲ.!!
Thursday, March 06, 2014
ನೆಮ್ಮದಿ
ಅವಳ ಎಲ್ಲಾ ಕಣ್ಣ ಹನಿಗಳಿಗೆ
ಪರಿಹಾರ ಇಲ್ಲಾ ನನ್ನ ಬಳಿ..!
ಆದರೂ,
ಅವಳ ಮೊಗದ ಸಿಂಗಾರಕೆ
ಸಣ್ಣ ನಗು ನೀಡಿದ ಸಂತೋಷವಿದೆ ನನ್ನಲಿ..!!
ಪರಿಹಾರ ಇಲ್ಲಾ ನನ್ನ ಬಳಿ..!
ಆದರೂ,
ಅವಳ ಮೊಗದ ಸಿಂಗಾರಕೆ
ಸಣ್ಣ ನಗು ನೀಡಿದ ಸಂತೋಷವಿದೆ ನನ್ನಲಿ..!!
Wednesday, March 05, 2014
ವಸಂತದ ಚಿಗುರು
ಗರಿಯ ಚಿಗುರು
ಹೊಸ ಚಿಗುರು
ಹಸಿರ ಚಿಗುರು
ಕೆಂಪ ಚಿಗುರು
ಪಚ್ಚೆ ಹಸಿರು
ತಿಳಿಯ ಹಸಿರು
ಹಸಿರು ಉಸಿರಾಗಿ ಚಿಗಿಯುತಿದೆ !!
ಕಾಡ ಮರದಲಿ
ನಾಡ ಮರದಲಿ
ಚಿಕ್ಕ ಗಿಡದಲಿ
ಹೆಮ್ಮರದಲಿ
ಮುಳ್ಳು ಕಂಟಿಯಲಿ
ಹೂ ಬಳ್ಳಿಯಲಿ
ಹಸಿರು ಉಸಿರಾಗಿ ಚಿಗಿಯುತಿದೆ !!
ವಸಂತ ಬಂದ
ಖುಷಿಯಲಿ
ನವ ಮಾಸದ
ಹುರುಪಲಿ
ಹಸಿರು ಮೊಳೆತು
ಹರುಷದಲಿ
ಹಸಿರು ಉಸಿರಾಗಿ ಚಿಗಿಯುತಿದೆ !!
ಹೊಸ ಚಿಗುರು
ಹಸಿರ ಚಿಗುರು
ಕೆಂಪ ಚಿಗುರು
ಪಚ್ಚೆ ಹಸಿರು
ತಿಳಿಯ ಹಸಿರು
ಹಸಿರು ಉಸಿರಾಗಿ ಚಿಗಿಯುತಿದೆ !!
ಕಾಡ ಮರದಲಿ
ನಾಡ ಮರದಲಿ
ಚಿಕ್ಕ ಗಿಡದಲಿ
ಹೆಮ್ಮರದಲಿ
ಮುಳ್ಳು ಕಂಟಿಯಲಿ
ಹೂ ಬಳ್ಳಿಯಲಿ
ಹಸಿರು ಉಸಿರಾಗಿ ಚಿಗಿಯುತಿದೆ !!
ವಸಂತ ಬಂದ
ಖುಷಿಯಲಿ
ನವ ಮಾಸದ
ಹುರುಪಲಿ
ಹಸಿರು ಮೊಳೆತು
ಹರುಷದಲಿ
ಹಸಿರು ಉಸಿರಾಗಿ ಚಿಗಿಯುತಿದೆ !!
Tuesday, March 04, 2014
अर्मान
अर्मान तो बहुत छुपे है दिलके बादलों में
बस तुम्हारे आने की देरि है...
बरस जाएँगे बादल, बारिश की बूँदों में !
बस तुम्हारे आने की देरि है...
बरस जाएँगे बादल, बारिश की बूँदों में !
ನಂಟು
ಅವಳ ಕೆನ್ನೆಯ ಗುಳಿ ಕಂಡಾಗಲೆಲ್ಲಾ..
ಚಿಗುರುವುದು ನನ್ನ ಆಸೆಯ ಗಂಟು !
ಇನ್ನೂ ಯಾವ ಕ್ಷಣಕ್ಕೆ ಕಾಯಬೇಕು ನಾ....
ಬೆಸೆದುಕೊಳ್ಳಲು ನಮ್ಮಿಬ್ಬರ ನಂಟು !!
ಚಿಗುರುವುದು ನನ್ನ ಆಸೆಯ ಗಂಟು !
ಇನ್ನೂ ಯಾವ ಕ್ಷಣಕ್ಕೆ ಕಾಯಬೇಕು ನಾ....
ಬೆಸೆದುಕೊಳ್ಳಲು ನಮ್ಮಿಬ್ಬರ ನಂಟು !!
ನ್ಯಾನೊ ಕಥೆ
ಒಬ್ಬ ಹೆಣ್ಣು ತನ್ನ ಚಟಕ್ಕಾಗಿ, ಗಂಡನ ಮೆನೆ ತೊರೆದು ಹೇಳದೇ ಕೇಳದೇ ಓಡಿ ಹೋದಾಗ
ಸಮಾಜ ಕೇಳುವ ಪ್ರಶ್ನೇ " ಯಾವನ ಜೊತೆ ಓಡಿಹೋಗಿದ್ದಳು ?? "
ನಾಚಿಗೆ ಇಲ್ಲದೇ ಮರಳಿ ಅವನೆದಿರು ನಿಂತರೆ ಗಂಡ ಕೂಡಾ ಕೇಳುವ ಪ್ರಶ್ನೇ ಅದೇ " ಯಾವನ ಜೊತೆ ಓಡಿಹೋಗಿದ್ದೆ ? "
ತಾನು ಪವಿತ್ರೆ ಅಂತಾ ಹೇಳುವುದರಿಂದ ಅವಳು, ಕಳಂಕದಿಂದ ತಪ್ಪಿಸಿಕೊಳ್ಳಲಾರಳು. ಅವಳ ನಿಜ ಚರಿತ್ರೆ ಎಲ್ಲಾ ತರಹದ ಪರೀಕ್ಷೆಗೆ ಅವಳು ಸಿದ್ದವಿದ್ದಾಗಲೇ ಅವು ಸುಳ್ಳೊ ನಿಜವೋ ಅನ್ನುವುದು ತಿಳಿಯುತ್ತವೆ. ಇದಕ್ಕೆ ಅವಳು ತಯ್ಯಾರಿರದಲ್ಲಿ .., ಅವಳ ನಿಜ ಸ್ವರೂಪ ಬಯಲು !!
====================================================
ಇಂದಿನ ಸಾಮಾಜಿಕ ಚಿಂತನೆಯ ವಿಷಯ
ಸಮಾಜ ಕೇಳುವ ಪ್ರಶ್ನೇ " ಯಾವನ ಜೊತೆ ಓಡಿಹೋಗಿದ್ದಳು ?? "
ನಾಚಿಗೆ ಇಲ್ಲದೇ ಮರಳಿ ಅವನೆದಿರು ನಿಂತರೆ ಗಂಡ ಕೂಡಾ ಕೇಳುವ ಪ್ರಶ್ನೇ ಅದೇ " ಯಾವನ ಜೊತೆ ಓಡಿಹೋಗಿದ್ದೆ ? "
ತಾನು ಪವಿತ್ರೆ ಅಂತಾ ಹೇಳುವುದರಿಂದ ಅವಳು, ಕಳಂಕದಿಂದ ತಪ್ಪಿಸಿಕೊಳ್ಳಲಾರಳು. ಅವಳ ನಿಜ ಚರಿತ್ರೆ ಎಲ್ಲಾ ತರಹದ ಪರೀಕ್ಷೆಗೆ ಅವಳು ಸಿದ್ದವಿದ್ದಾಗಲೇ ಅವು ಸುಳ್ಳೊ ನಿಜವೋ ಅನ್ನುವುದು ತಿಳಿಯುತ್ತವೆ. ಇದಕ್ಕೆ ಅವಳು ತಯ್ಯಾರಿರದಲ್ಲಿ .., ಅವಳ ನಿಜ ಸ್ವರೂಪ ಬಯಲು !!
====================================================
ಇಂದಿನ ಸಾಮಾಜಿಕ ಚಿಂತನೆಯ ವಿಷಯ
ಗರ್ಭಗುಡಿ
ಮನಸೆನೋ ವಿಶಾಲವೆ ನನ್ನದು
ಹೃದಯದ ಗರ್ಭಗುಡಿಯ ಬಾಗಿಲು ಚಿಕ್ಕದು
ಬರುವುದಾದರೆ.., ತಲೆ ಬಾಗಿಯೇ ಬರಬೇಕು
ಅಹಂ ಬಿಟ್ಟು, ಭಕ್ತಿಯನಿಟ್ಟು !
ಹೃದಯದ ಗರ್ಭಗುಡಿಯ ಬಾಗಿಲು ಚಿಕ್ಕದು
ಬರುವುದಾದರೆ.., ತಲೆ ಬಾಗಿಯೇ ಬರಬೇಕು
ಅಹಂ ಬಿಟ್ಟು, ಭಕ್ತಿಯನಿಟ್ಟು !
Monday, March 03, 2014
Sunday, March 02, 2014
ನೆನಪುಗಳು
ಅವಳು ಹಾಸಿಗೆಯಿಂದ ಎದ್ದಳು, ಕಣ್ಣುಗಳ ಉಜ್ಜುತ್ತಾ ಮನೆಯಲ್ಲಾ ನಡೆದಾಡುತ್ತಾ ಏನನ್ನೋ ಹುಡುಕುತ್ತಿದ್ದಳು. ಮನೆಯ ಮುಂದಿನ ಅಂಗಳ, ಹಿತ್ತಲು ಆ ರೂಮು, ಈ ರೂಮು, ಮನೆಯಲ್ಲಾ ಅಡ್ಡಾಡಿ ಹುಡುಕಿದರೂ ಸಿಗಲಿಲ್ಲಾ...ಅಮ್ಮಾ ಅನ್ನುತ್ತಾ ಅಡುಗೆಯ ಮನೆಯ ಒಳಗೆ ಹೋಗುತ್ತಾಳೆ. ಅವಳ ಅಮ್ಮ ಕಾಫ಼ಿ ಮಾಡುತ್ತಾ ಇರುತ್ತಾರೆ. ಅಮ್ಮಾ " ಮಾಮಾ ಎಲ್ಲಿ " ? ಮಾಮಾ ಆಫ಼ಿಸಿಗೆ ಹೋಗಿದ್ದಾರೆ, ಬೇಗ ಬರ್ತಾರೆ....!, ನಿನಗೆ ಬೇಗ ಸ್ನಾನ ಮಾಡಿಸ್ತಿನಿ ಬಜ್ಜಲ ಮನೆಗೆ ಹೊರಡು ಅಂದಳು ಅಮ್ಮ. ಅಮ್ಮ ಬಂದು ಇವಳಿಗೆ ಸ್ನಾನ ಮಾಡಿಸಲಿಕ್ಕೆ ನೀರು ಹಾಕಿ ಸೋಪು ಹಚ್ಚುತ್ತಾರೆ..ಮತ್ತೆ ಅವಳ ಪ್ರಶ್ನೇ ಅಮ್ಮಾ ಮಾಮಾ ಎಲ್ಲಿ ? ಮಾಮಾ "ಬೂ" ಬೇಗ ಬೇಗ ಸ್ನಾನಾ ಮಾಡು ಮಾಮಾ ಬರ್ತಾರೆ.. ಸ್ನಾನಾ ಆಯ್ತು, ಪಿಂಕು ಬಾರಮ್ಮಾ ಇಲ್ಲಿ ಟಿಫ಼ನ್ ತಿನ್ನಸ್ತಿನಿ ಮತ್ತೆ ಅವಳ ಪ್ರಶ್ನೆ " ಮಾಮಾ ಎಲ್ಲಿ " ? ತಿಂಡಿ ಆಯ್ತು , ಇವಳ ಕಾಟ ತಾಳಲಾರದೇ ಅಜ್ಜಿ ಪಿಂಕುಳನ್ನು ಕರೆದುಕೊಂಡು ತರಕಾರಿ ತರಲು ಹೋಗುತ್ತಾರೆ..., ಎರಡು ನಿಮಿಷ ಸುಮ್ಮನಿದ್ದ ಪಿಂಕು ಮತ್ತೆ ಅಜ್ಜಿಗೂ ಕೂಡಾ ಅದೇ ಪ್ರಶ್ನೆ..? ಅಜ್ಜಿ... " ಮಾಮಾ ಎಲ್ಲಿ " ಇವರುಗಳು ಮನೆಗೆ ಮರಳಿದಾಗ ೧ ಗಂಟೆ, ಸೊಸೆ ಇನ್ನೂ ಮಾಮನ ದಾರಿ ನೋಡುತ್ತಲೇ ಕುಳಿತ್ತಿದ್ದಳು. ಅಷ್ಟೊತ್ತಿಗೆ ಗೇಟಿನ ಶಬ್ದ ಆಯ್ತು....., ಪಿಂಕು ಓಡಿ ಹೋಗುತ್ತಾಳೆ..... ಅಜ್ಜೀssss....... " ಮಾಮಾ ಬಂಡ್ರು " ಮಮ್ಮಿ " ಮಾಮಾ ಬಂಡ್ರು " ಅವಳಿಗೆ ಎಲ್ಲಿಲ್ಲದ ಖುಶಿ, ಓಡಿ ಹೋಗಿ ಮಾಮನ ತೋಳು ಸೇರುತ್ತಾಳೆ..., ಬಾರಪ್ಪಾ ಈವಾಗ ಬಂದಿಯಾ, ಪಿಂಕು ಬೆಳಿಗ್ಗೆಯಿಂದ ನಿನ್ನ ಕೇಳಿ ಕೇಳಿ ತಲೆ ಕೆಡಸಿಬಿಟ್ಟಳು. ತೊಗೋ ನಿನ್ನ ಸೊಸೆನ ನೀನೆ ಸಮಾಧಾನ ಮಾಡು...!:) ಇದು ನಡೆದದ್ದು ೧೦-೧೨ ವರ್ಷಗಳ ಕೆಳಗೆ..., ಮಕ್ಕಳು ಒಬ್ಬರನ್ನ ಹಚ್ಚಿಕೊಂಡರೆ ಎಷ್ಟೊಂದು ಆತ್ಮಿಯತೆ ಬೆಳೆಸಿಕೊಳ್ಳುತ್ತಾರೆ ಅಲ್ವಾ..?? ಈಗ ಅವಳು ದೊಡ್ಡವಳಾಗಿದ್ದಾಳೆ, ನನ್ನ ಹತ್ತಿರ ಮಾತನಾಡಲು ನಾಚುತ್ತಾಳೆ. ನಾನು ಅವಳೊಂದಿಗೆ ಮಾತನಾಡಿದ ಮಾತುಗಳು, ಅವಳ ತುಂಟುತನಗಳು ಇನ್ನೂ ಕೂಡಾ ನನ್ನ ಮನದಲ್ಲಿ ಆ ನೆನಪುಗಳು ಹಚ್ಚು ಹಸಿರಾಗಿವೆ. ಅವಳು ನನ್ನ ಕಣ್ಣಿಗೆ ಇನ್ನೂ ೨ ವರ್ಷದ ಪುಟ್ಟ ಪಿಂಕು ಆಗಿಯೇ ಕಾಣುತ್ತಾಳೆ.
ಅವಿವೇಕಿಗಳು
ಒಂದು ಘಟನೆಯಿಂದ ದುರ್ಘಟನೆ,
ಒಂದು ಚುಂಬನ ಕೂಡ ತರಬಲ್ಲದು ಜೀವಕೆ ಅಂತ್ಯ
ಬಹಿರಂಗವಾಗಿ ಮುತ್ತಿಟ್ಟ ಪತ್ನಿ
ಕೋಪಗೊಂಡ ಗಂಡನು ಇಟ್ಟನು ಅಗ್ನಿ
ಪತ್ನಿ ಪರಲೋಕದಲ್ಲಿ...
ಗಂಡ ಆಸ್ಪತ್ರೆಯಲ್ಲಿ.....!!
ಒಂದು ಚುಂಬನ ಕೂಡ ತರಬಲ್ಲದು ಜೀವಕೆ ಅಂತ್ಯ
ಬಹಿರಂಗವಾಗಿ ಮುತ್ತಿಟ್ಟ ಪತ್ನಿ
ಕೋಪಗೊಂಡ ಗಂಡನು ಇಟ್ಟನು ಅಗ್ನಿ
ಪತ್ನಿ ಪರಲೋಕದಲ್ಲಿ...
ಗಂಡ ಆಸ್ಪತ್ರೆಯಲ್ಲಿ.....!!
Friday, February 28, 2014
ಮೂಢರು
ಮೆಹೆಂದಿಯ ರಂಗು ಭಾಗ್ಯ ತರಲಿಲ್ಲ ಅವಳಿಗೆ
ಸಂಬಂಧಗಳ ಮಹತ್ವ ತಿಳಿಯದ ಮೂಢೆಗೆ
ಬಾಳು ಹಸುನಾಗುತ್ತಿತ್ತು ಹೇಗೆ ಮೂಢ ನಂಬಿಕೆಗೆ ?
ಸಂಬಂಧಗಳ ಮಹತ್ವ ತಿಳಿಯದ ಮೂಢೆಗೆ
ಬಾಳು ಹಸುನಾಗುತ್ತಿತ್ತು ಹೇಗೆ ಮೂಢ ನಂಬಿಕೆಗೆ ?
Wednesday, February 26, 2014
ಆರಾಧನೆ
ಅವನ ಕಲ್ಪನೆಯಲ್ಲಿ ಹುಟ್ಟಿದ ಕನ್ಯೆಯ ಕುರಿತು..
ಬರೆದಿಹನು ಸಾವಿರ ಕವನ !
ಅವಳು, ಅವನೇ ವರವಾಗಿ ಬೇಕು ಅಂತಾ ಬಯಸುತ್ತಾ..
ಮಾಡಿಹಳು ಪೂಜಾ,ಹವನ !!
ಬರೆದಿಹನು ಸಾವಿರ ಕವನ !
ಅವಳು, ಅವನೇ ವರವಾಗಿ ಬೇಕು ಅಂತಾ ಬಯಸುತ್ತಾ..
ಮಾಡಿಹಳು ಪೂಜಾ,ಹವನ !!
Tuesday, February 25, 2014
ಪಾಕಪ್ರವೀಣ
ಈ ಕಲಿಯುಗದಲ್ಲಿ ಹೆಣ್ಣುಮಕ್ಕಳಿಗಿಂತಲೂ ಗಂಡು ಮಕ್ಕಳೇ ಪಾಕಶಾಸ್ತ್ರದಲ್ಲಿ ಪ್ರಾವಿಣ್ಯತೆ ಹೊಂದಿದ್ದಾರೆ , ನಂಬುವುದಿಲ್ಲವೇ ? ಉದಾಹರಣೆಗೆ : ನಮ್ಮ ಸುನಿಲ ನನ್ನೇ ತೊಗೊಳಿ, ಅವನು ಗೊಲಾಕಾರದ ಚಪಾತಿಗಳು, ಕ್ಯಾಬೇಜು ಪಲ್ಯಾ, ಅನ್ನ , ನುಗ್ಗೆಕಾಯಿ ಸಾರು , ಕ್ಯಾರೆಟ್ & ಮೂಲಂಗಿ ಸಾಲಡ್ಡು ಎಲ್ಲವೂ ಒಂದೇ ಗಂಟೆಯಲ್ಲಿ ತಯ್ಯಾರ ಮಾಡುತ್ತಾನೆ. ;) :D
THOUGHT FOR THE DAY
People who walkout of relation with their EGO can gain nothing. People who are left out will get a greater experience and turn expertise in every field they walk through.
Friday, February 21, 2014
God Says..
God Says
" The reason why some people have turned against you and walked away from you without reason...has nothing to do with you. It is because I have removed them from your life because they cannot go where I'M taking you next. They would only hinder you at the next level because they have already served their purpose in your life. Let them GO and keep moving. GREATER is coming your way...says the Lord.
Courtesy : Internet
" The reason why some people have turned against you and walked away from you without reason...has nothing to do with you. It is because I have removed them from your life because they cannot go where I'M taking you next. They would only hinder you at the next level because they have already served their purpose in your life. Let them GO and keep moving. GREATER is coming your way...says the Lord.
Courtesy : Internet
ನಡೆದು ಬಿಡು ಮುಂದೆ !!
ಆ ಹೃದಯಕೆ ಒಲವಿನ ಪರಿವಿಲ್ಲ
ಆ ಮನಸ್ಸಿಗೆ ಪ್ರೀತಿಯ ಬೆಲೆ ತಿಳಿದಿಲ್ಲ
ಭಾವನೆಗಳು ಅದಕೆ ಮುಟ್ಟುವುದಿಲ್ಲ
ನಡೆದು ಬಿಡು ಮುಂದೆ !!
ಗರ ಬಡಿದವರಿಗೆ ಬಿಡಿಸಲೂ ಬಹುದು
ಹಣದ ಹಿಂದೆ ಹೆಣಗಾಡುವರಿಗೆ
ಮಾನವನ ಭಾವಗಳು ತಿಳಿಯುವುದಿಲ್ಲ
ನಡೆದು ಬಿಡು ಮುಂದೆ !!
ದಾರಿ ತಪ್ಪಿದವರಿಗೆ ತಿದ್ದಿ ತೀಡಲೂ ಬಹುದು
ಅಟ್ಟಹಾಸದಿ ಸೊಕ್ಕಿನಲಿ ಮೆರೆಯುವರಿಗೆ
ತಿಳುವಳಿಕೆಯ ಮಾತು ಮನ ಹೊಕ್ಕುವುದಿಲ್ಲ
ನಡೆದು ಬಿಡು ಮುಂದೆ !!
ದೊಡ್ಡವರಂತಿರುವರು ಅನುಭವ ಹೊಂದಿರಬಹುದು
ನೀತಿಯ ಬೋಧಿಸಿದರೂ ಅರಿಯದವರಿಗೆ
ಮಚ್ಚಿಯ ಪೆಟ್ಟು ಕೂಡಾ ಕಲಿಸಲಾಗದು
ನಡೆದು ಬಿಡು ಮುಂದೆ !!
ನಿರೀಕ್ಷಣೆಯ ಸಮಯ ಮಿತಿ ಮೀರಿತು
ತಿರುಗಿ ಬರಲಾರದು ಇನ್ನೆಂದೂ
ಕಾದು ಕಾದಿಟ್ಟು ಇನ್ನು ಫಲವಿಲ್ಲ
ನಡೆದು ಬಿಡು ಮುಂದೆ !!
ಆ ಮನಸ್ಸಿಗೆ ಪ್ರೀತಿಯ ಬೆಲೆ ತಿಳಿದಿಲ್ಲ
ಭಾವನೆಗಳು ಅದಕೆ ಮುಟ್ಟುವುದಿಲ್ಲ
ನಡೆದು ಬಿಡು ಮುಂದೆ !!
ಗರ ಬಡಿದವರಿಗೆ ಬಿಡಿಸಲೂ ಬಹುದು
ಹಣದ ಹಿಂದೆ ಹೆಣಗಾಡುವರಿಗೆ
ಮಾನವನ ಭಾವಗಳು ತಿಳಿಯುವುದಿಲ್ಲ
ನಡೆದು ಬಿಡು ಮುಂದೆ !!
ದಾರಿ ತಪ್ಪಿದವರಿಗೆ ತಿದ್ದಿ ತೀಡಲೂ ಬಹುದು
ಅಟ್ಟಹಾಸದಿ ಸೊಕ್ಕಿನಲಿ ಮೆರೆಯುವರಿಗೆ
ತಿಳುವಳಿಕೆಯ ಮಾತು ಮನ ಹೊಕ್ಕುವುದಿಲ್ಲ
ನಡೆದು ಬಿಡು ಮುಂದೆ !!
ದೊಡ್ಡವರಂತಿರುವರು ಅನುಭವ ಹೊಂದಿರಬಹುದು
ನೀತಿಯ ಬೋಧಿಸಿದರೂ ಅರಿಯದವರಿಗೆ
ಮಚ್ಚಿಯ ಪೆಟ್ಟು ಕೂಡಾ ಕಲಿಸಲಾಗದು
ನಡೆದು ಬಿಡು ಮುಂದೆ !!
ನಿರೀಕ್ಷಣೆಯ ಸಮಯ ಮಿತಿ ಮೀರಿತು
ತಿರುಗಿ ಬರಲಾರದು ಇನ್ನೆಂದೂ
ಕಾದು ಕಾದಿಟ್ಟು ಇನ್ನು ಫಲವಿಲ್ಲ
ನಡೆದು ಬಿಡು ಮುಂದೆ !!
Thursday, February 20, 2014
ಚೆಲುವೆ
ನಸುಕಿನ ಮಬ್ಬಿನಲಿ
ಧ್ವನಿಯೊಂದು ಕೇಳುತಿದೆ
ರಾಗ ಬದ್ಧ ಶೃತಿಯಲಿ
ಸಂಗೀತವದು ಕೇಳುತಿದೆ
ನಡೆದೆ ಧ್ವನಿಯ ಅನುಸರಿಸಿ
ದೂರ ನದಿಯ ದಂಡೆಯ ಮೇಲೆ
ಕೇಶ ಹರಡಿ ಮುಖವ ಮರೆಯಾಗಿಸಿ
ಕೂತಿರುವಳೊಬ್ಬ ಬಾಲೆ
ಸದ್ದು ಮಾಡದೆ ಮೆಲ್ಲನೆ ಸಮೀಪಿಸಿ
ಇಣುಕಿ ನೋಡಿದರೆ
ನನ್ನದೇ ಬಿಳಿ ರಂಗವಲ್ಲಿ
ಬಣ್ಣ ತುಂಬುತ್ತಾ ಕೂತಿರುವಳು
ಮೈನವಿರೇಳಿಸುವ ಚೆಲುವೆ !!
ಧ್ವನಿಯೊಂದು ಕೇಳುತಿದೆ
ರಾಗ ಬದ್ಧ ಶೃತಿಯಲಿ
ಸಂಗೀತವದು ಕೇಳುತಿದೆ
ನಡೆದೆ ಧ್ವನಿಯ ಅನುಸರಿಸಿ
ದೂರ ನದಿಯ ದಂಡೆಯ ಮೇಲೆ
ಕೇಶ ಹರಡಿ ಮುಖವ ಮರೆಯಾಗಿಸಿ
ಕೂತಿರುವಳೊಬ್ಬ ಬಾಲೆ
ಸದ್ದು ಮಾಡದೆ ಮೆಲ್ಲನೆ ಸಮೀಪಿಸಿ
ಇಣುಕಿ ನೋಡಿದರೆ
ನನ್ನದೇ ಬಿಳಿ ರಂಗವಲ್ಲಿ
ಬಣ್ಣ ತುಂಬುತ್ತಾ ಕೂತಿರುವಳು
ಮೈನವಿರೇಳಿಸುವ ಚೆಲುವೆ !!
THOUGHT FOR THE DAY
IT IS GOOD SIGN TO ACCEPT THE FAULTS/MISTAKES AND CREATE A ACTION PLAN TO AVOID THEM "
RATHER
" ARGUMENT OVER THE MISTAKES, ONLY MAKES THE THINGS WORST "
RATHER
" ARGUMENT OVER THE MISTAKES, ONLY MAKES THE THINGS WORST "
Wednesday, February 19, 2014
ಜೀವನ
ಜೀವನ ಯಾಕೋ ಕಪ್ಪು ಬಿಳಿ ಚಿತ್ರ
ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಉತ್ತರ
ಬಾಳ ಹಾದಿ ಹೂವು ಮುಳ್ಳು ಅಂತಾರೆ
ನಡೆಯುವುದು ಹೇಗೆ ಬರೀ ಮುಳ್ಳೇ ಇದ್ದರೆ .. ?
ಎಷ್ಟು ಹುಡುಕಿದರೂ ಸಿಗುತ್ತಿಲ್ಲ ಉತ್ತರ
ಬಾಳ ಹಾದಿ ಹೂವು ಮುಳ್ಳು ಅಂತಾರೆ
ನಡೆಯುವುದು ಹೇಗೆ ಬರೀ ಮುಳ್ಳೇ ಇದ್ದರೆ .. ?
Sunday, February 16, 2014
THOUGHT FOR THE DAY
Its easy to fool people who doesn't know about you.
On the contrary,
Its impossible to fool the people who know you better.
On the contrary,
Its impossible to fool the people who know you better.
Saturday, February 15, 2014
ಮನೆ ಮಗಳು
ಅವಳು ಕಾಲಿಟ್ಟ ಕ್ಷಣದಲ್ಲಿ ಮನೆಗೆ ಏನೋ ಕಳೆ ಬಂದಂತೆ, ಸಾಮಾನ್ಯ ಹುಣ್ಣಿಮೆ ಅಮವಾಸ್ಯೆಗಳು ಈಗ ಹಬ್ಬಗಳಂತೆ, ನಸುಕಿನಲ್ಲಿ ಎದ್ದು ಮನೆಯ ಗೂಡಿಸಿ ಸಾರಿಸಿ ಸಿಂಗರಿಸುತ್ತಾಳೆ. ಎಲ್ಲರೂ ಏಳುವ ಮೊದಲು ತಾನು ತೈಯ್ಯಾರಾಗುತ್ತಾಳೆ. ಪೂಜೆ ಪಾಠ ಮಾಡಿ, ಮನೆಯ ದೇವರುಗಳಿಗೆಲ್ಲಾ ಬೆಳಗುತ್ತಾಳೆ. ಮನೆಯ ತುಂಬೆಲ್ಲಾ ಭಕ್ತಿ ಗೀತೆಗಳ ಸಂಗೀತ. ಗಂಡ, ಅತ್ತೆ ಮಾವಂದಿರ ನಮಸ್ಕರಿಸುತ್ತಾಳೆ. ಅವರುಗಳು ಮುಖತೊಳೆದು ಬರುವಷ್ಟರಲ್ಲಿ ಚಹಾ ತಿಂಡಿ ತಯ್ಯಾರಾಗಿರುತ್ತದೆ. ಅವಳಿಗೆ ಇಂತಹ ಒಂದು ಕನಸ್ಸಿತ್ತು, ತುಂಬಿದ ಸಂಸಾರ, ದೊಡ್ಡ ಮನೆ, ಆ ಮನೆಯಲ್ಲಿ ದೇವರಂತಹ ಅತ್ತೆ ಮಾವ, ತನಗೆ ಪ್ರಾಣಕ್ಕಿಂದ ಹೆಚ್ಚಾಗಿ ಪ್ರೀತಿಸುವ ಗಂಡ. ಆ ಮನೆಸಿಕ್ಕಿದ್ದುದಕ್ಕೆ ಅವಳಿಗೆ ತುಂಬಾ ಖುಷಿ. ಮಾವರನ್ನು ಅವಳು " ಅಪ್ಪಾಜಿ " ಹಾಗು ಅತ್ತೆಯನ್ನು " ಅಮ್ಮಾ" ಎಂದೇ ಕರೆಯುತ್ತಾಳೆ. ಈ ಕಲಿಯುಗದಲ್ಲಿ ಇಂತಹ ಅತ್ತೆ, ಮಾವ, ಗಂಡ ಸಿಕ್ಕಿದ್ದು ನನ್ನ ಪುಣ್ಯ ಅನ್ನುತ್ತಾಳೆ, ಆ ಸೊಸೆ. ಅಂದ ಹಾಗೆ ಅವಳು ಸೊಸೆಯಲ್ಲ ನಮ್ಮ " ಮನೆ ಮಗಳು " ಅನ್ನುತ್ತಾರೆ ಅವಳ ಅತ್ತೆ ಮಾಂವದಿರು. ಇದೇ ಅಲ್ಲವೆ ಗೆಳೆಯರೇ ಚೊಕ್ಕ ಸಂಸಾರ, ಮನೆ ನಂದನವನ. ಎಲ್ಲರೂ ಬಯಸುವ " ವಾಡೆ ". ಶುಭ ದಿನ :)
Friday, February 14, 2014
ಕಹಿ ಸತ್ಯ
ಗೂಬೆಗಳು, ದೆವ್ವಗಳು, ಸೂಳೆಗಳು, ರಾತ್ರಿಯಲ್ಲೇ ಕಾರ್ಯಾಚರಣೆ ಮಾಡುತ್ತವೆ ಏಕೆಂದರೆ, ಅವುಗಳಿಗೆ ಬೆಳಕನ್ನು ಎದಿರಿಸುವ ಧೈರ್ಯ ಇರುವುದಿಲ್ಲ.
ಸಣ್ಣ ಕಥೆ
ಅವನು ಎಂದೆಂದೂ ತನಗಾಗಿ ದೊಡ್ಡ ದೊಡ್ಡ ಮಾಲಿನೊಳಗೆ ಶಾಪಿಂಗ್ ಮಾಡಿದವನಲ್ಲ.., ಅಂದು ಏಕೊ ತನ್ನ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡಲೆಂದು ಆ ಭವ್ಯ ವ್ಯಾಪಾರ ಮಳೆಗೆಗೆ ಕಾಲಿಟ್ಟ. ಮಳಿಗೆ ತುಂಬಾ ಜನರ ಹಿಂಡು, ಕಿಕ್ಕಿರಿದು ತುಂಬಿತ್ತು.ಹುಡುಗರು ತಮ್ಮ ಪ್ರೇಯಸಿಗೆ, ಅಪ್ಪಾ ಅಮ್ಮಂದಿರು ತಮ್ಮ ಮಕ್ಕಳಿಗೆ , ಅಜ್ಜಿ ತಾತಂದಿರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಖರಿಧಿಸುವಲ್ಲಿ ತಲ್ಲೀನರಾಗಿದ್ದರು.ಅವನು ಒಂದು ಬಟ್ಟೆಯ ಅಂಗಡಿ ಹೊಕ್ಕು ಅಲ್ಲಿ ಹೊಸ ಹೊಸ ಉಡುಗೆಗಳ ಖರಿಧಿಸುವಲ್ಲಿ ನಿರತನಾದ. ಎಷ್ಟು ಹುಡುಕಿದರೂ ತನಗೆ ಮನಸೊಪ್ಪುವ ಉಡುಗೆ ಸಿಗುತ್ತಿರಲಿಲ್ಲ. ದೂರದಲ್ಲಿ ಒಂದು ಉಡುಗೆಯ ಕಂಡು ಅದರ ಹತ್ತಿರ ಹೊರಡುತ್ತಾನೆ. ಓಹೋ ಹೊಸ ವಿಯಾಸ, ವಿಭಿನ್ನ ಉಡುಗೆ ಅದನ್ನು ನೋಡುತ್ತಾ ಖುಶಿಯಲ್ಲಿದ್ದಾಗ.....ಒಂದು ಪುಟ್ಟ ಮಗು, ಚಂದದ ಉಡುಗೆ ತೊಟ್ಟು ಇವನ ಹತ್ತಿರ ಬಂದು, ಇವನ ಪ್ಯಾಂಟನ್ನು ಹಿಡಿದು ಎಳೆಯುತ್ತಾ..ಆಪ್ಪಾ ಅಂದು ಕರೆಯುತ್ತದೆ...ಇವನಿಗೆ ಆಶ್ಚರ್ಯ..! ಯಾರದಿದು ಮಗು ? ತನ್ನ ಅಪ್ಪಾ ಅಮ್ಮಂದಿರಿಂದ ತಪ್ಪಿಸಿಕೊಂಡಿದೆ ಅನ್ನುತ್ತಾ ಆ ಮಗುವನ್ನು ಎತ್ತಿಕೊಂಡು ಅಂಗಡಿಯ ರಿಸಿಪಶನ್ ಹತ್ತಿರ ಹೋಗುತ್ತಾನೆ, ಅಷ್ಟರಲ್ಲಿ ಹಿಂದಿನಿಂದಾ ಒಂದು ಧ್ವನಿ ಕೇಳಿಬರುತ್ತದೆ, ಅದು ಒಂದು ತಾಯಿ ಕಂದನ ಕಳೆದುಕೊಂಡ ದನಿ, ಆ ಮಗು ತಾಯಿಯ ಧ್ವನಿ ಕೇಳಿದ ಕೂಡಲೇ ಅವನ ತೋಳಿನಿಂದ ಇಳಿದು ತಾಯಿಯ ಹತ್ತಿರ ಓಡಿಹೊಗುತ್ತದೆ. ತಾಯಿಯ ತೋಳೆರಿದ ಮಗು ಅವನ ಹತ್ತಿರ ಕೈ ಮಾಡುತ್ತ.....ಅಪ್ಪಾ ಅನ್ನುತ್ತದೆ...ಅವಳು ಅವನ ಕಡೆ ತಿರುಗಿ ನೋಡುತ್ತಾಳೆ., ಒಂದು ನಿಮಿಷ ಸ್ಥಬ್ಧ..... ಇಬ್ಬರಿಗೂ ಆಶ್ಚರ್ಯ....!! ಅವಳು ಅವನ ಕಾಲೇಜಿನ ಪ್ರೇಯಸಿ....ಎಷ್ಟೋ ವರ್ಷಗಳ ನಂತರ ಭೇಟಿ...! ಅವಳನ್ನು ಗಮನಿಸಿದ ಅವನಿಗೆ ಕಾಣಿಸಿದ್ದು .... ಕುಂಕುಮವಿಲ್ಲದ ಅವಳ ಹಣೆ ..., ತಾಳಿ ಇರದ ಕೊರಳು...! ಅಲ್ಲೊಂದು ಮೌನ, ಅರೆ ಇವಳ ಮದುವೆ ಆಗಲೇ ಆಗಿತ್ತಲ್ಲ....? ಇವಳೇಕೆ ಹೀಗೆ....???? ಅವಳ ಗಂಡ ಈ ಪುಟ್ಟ ಕಂದಮ್ಮ ಹುಟ್ಟುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದ.........!!
Wednesday, February 12, 2014
THOUGHT FOR THE DAY
BEAUTY IS ONLY FOR VISION, WHEREAS.., CHARACTER IS THE MEDIUM TO TOUCH ONE'S HEART.
Tuesday, February 11, 2014
ಒಲುಮೆ
ನನ್ನ ಕವನದಲ್ಲಿ,
ಅವಳದೇ ಉಲ್ಲೇಖ ,
ಅನ್ನುವುದು ಅವಳಿಗೆ " ಹಿರಿಮೆ "
ನನ್ನ ಕವನಕೆ ,
ಅವಳೇ ಪ್ರೇರಣೆ ,
ಅನ್ನುವುದು ನನ್ನ " ಒಲುಮೆ "
ಅವಳದೇ ಉಲ್ಲೇಖ ,
ಅನ್ನುವುದು ಅವಳಿಗೆ " ಹಿರಿಮೆ "
ನನ್ನ ಕವನಕೆ ,
ಅವಳೇ ಪ್ರೇರಣೆ ,
ಅನ್ನುವುದು ನನ್ನ " ಒಲುಮೆ "
ಆಕರ್ಷಣೆ
ಎಲ್ಲೊ ದೂರದ ಮೂಲೆಯಲ್ಲಿ ಕೂತು ಅವಳು ನನ್ನ ಗಮನಿಸುತ್ತಾಳೆ!
ನನ್ನ ದೃಷ್ಟಿ ಅವಳ ಕಡೆ ಬಿದ್ದೊಡನೆ ಮರೆಯಾಗುತ್ತಾಳೆ..
ಇನ್ನೂ ಕದ್ದು ನೋಡುವೆ ಏಕೆ ? ಗೀಚಿಬಿಡು ಒಲವಿನ ಕವನ, ಈ ಹೃದಯದ ಹಾಳೆಯ ಮೇಲೆ.!!
ನನ್ನ ದೃಷ್ಟಿ ಅವಳ ಕಡೆ ಬಿದ್ದೊಡನೆ ಮರೆಯಾಗುತ್ತಾಳೆ..
ಇನ್ನೂ ಕದ್ದು ನೋಡುವೆ ಏಕೆ ? ಗೀಚಿಬಿಡು ಒಲವಿನ ಕವನ, ಈ ಹೃದಯದ ಹಾಳೆಯ ಮೇಲೆ.!!
Monday, February 10, 2014
ಭ್ರೂಣ
ಮನಸ್ಸು ಮನಸ್ಸು ಕೂಡಿ
ಪ್ರೀತಿಯ ಗಾಳಿ ಬೀಸಿ
ಹೃದಯಗಳು ಬೆಸೆದವು ಹಾಡಿ
ಅನುರಾಗದಿ ಉಕ್ಕಿತು ಕವನ
ಮೊಳೆಯಿತು ಅವಳಲಿ..,ಅವರಿಬ್ಬರ ಪ್ರೀತಿಯ ಭ್ರೂಣ !!
ಪ್ರೀತಿಯ ಗಾಳಿ ಬೀಸಿ
ಹೃದಯಗಳು ಬೆಸೆದವು ಹಾಡಿ
ಅನುರಾಗದಿ ಉಕ್ಕಿತು ಕವನ
ಮೊಳೆಯಿತು ಅವಳಲಿ..,ಅವರಿಬ್ಬರ ಪ್ರೀತಿಯ ಭ್ರೂಣ !!
ಹೆಂಡ್ತಿ ಬೇಕು..
ನೀಳ ವರ್ಣದವಳಿದ್ದರೂ ಸರಿಯೆ
ಎಣ್ಣೆಗೆಂಪು ಇದ್ದರೂ ಸರಿಯೆ
ಶುಭ್ರ ಮನಸಿದ್ದರೆ ಸಾಕು
ಹೆಂಡ್ತಿ ಬೇಕು..
ಬಡವರಾದರೂ ಸರಿಯೆ
ಅನಾಥಳಿದ್ದರೂ ಸರಿಯೆ
ಗುಣವಂತೆ ಆಗಿದ್ದರೆ ಸಾಕು
ಹೆಂಡ್ತಿ ಬೇಕು..
ಕಛೇರಿಗೆ ತೆರಳುವಾಗ ನಗುತ್ತಾ ಕೈ ಬೀಸಬೇಕು
ಮರಳುವ ವೇಳೆಯಲಿ ಬಾಗಿಲಲ್ಲಿ ಕಾಯುತ್ತಿರಬೇಕು
ಗಂಡನಾದರಿಸುವಳಾಗಿದ್ದರೆ ಸಾಕು
ಹೆಂಡ್ತಿ ಬೇಕು..
ಮುದ್ದು ಮಾಡುತ್ತಿರಬೇಕು
ಮುದ್ದಿಸಿವಂತಿರಬೇಕು
ಮುದ್ದು ಮುದ್ದು ಮಕ್ಕಳಾದರೆ ಸಾಕು
ಹೆಂಡ್ತಿ ಬೇಕು..
ಎಲ್ಲಾ ನಮ್ಮದು ಅಂತಿರಬೇಕು
ನಮ್ಮದೇ ಮನೆಯಿದು ಅಂದುಕೊಳ್ಳಬೇಕು
ನಮ್ಮತನವ ಮೆರೆಯುತ್ತಿದ್ದರೆ ಸಾಕು
ಹೆಂಡ್ತಿ ಬೇಕು..
ತವರು ಮನೆಯ ಜ್ಯೊತಿ ಅವಳು
ಗಂಡನ ಮನೆ ಬೆಳಗುತಿರಬೇಕು
ಮೆನೆ ಮೆಚ್ಚುವ ಮಗಳಾಗಬೇಕು
ಹೆಂಡ್ತಿ ಬೇಕು..
ಪುಟ್ಟ ಗೂಡಿನವಳಾದರೂ ಸರಿಯೆ
ದಿಟ್ಟ ಹೃದಯವಿರಬೇಕು
ಕೆಟ್ಟ ಸಮಯವ ಎದುರಿಸುವಂತಿರಬೇಕು
ಹೆಂಡ್ತಿ ಬೇಕು..
ಎಣ್ಣೆಗೆಂಪು ಇದ್ದರೂ ಸರಿಯೆ
ಶುಭ್ರ ಮನಸಿದ್ದರೆ ಸಾಕು
ಹೆಂಡ್ತಿ ಬೇಕು..
ಬಡವರಾದರೂ ಸರಿಯೆ
ಅನಾಥಳಿದ್ದರೂ ಸರಿಯೆ
ಗುಣವಂತೆ ಆಗಿದ್ದರೆ ಸಾಕು
ಹೆಂಡ್ತಿ ಬೇಕು..
ಕಛೇರಿಗೆ ತೆರಳುವಾಗ ನಗುತ್ತಾ ಕೈ ಬೀಸಬೇಕು
ಮರಳುವ ವೇಳೆಯಲಿ ಬಾಗಿಲಲ್ಲಿ ಕಾಯುತ್ತಿರಬೇಕು
ಗಂಡನಾದರಿಸುವಳಾಗಿದ್ದರೆ ಸಾಕು
ಹೆಂಡ್ತಿ ಬೇಕು..
ಮುದ್ದು ಮಾಡುತ್ತಿರಬೇಕು
ಮುದ್ದಿಸಿವಂತಿರಬೇಕು
ಮುದ್ದು ಮುದ್ದು ಮಕ್ಕಳಾದರೆ ಸಾಕು
ಹೆಂಡ್ತಿ ಬೇಕು..
ಎಲ್ಲಾ ನಮ್ಮದು ಅಂತಿರಬೇಕು
ನಮ್ಮದೇ ಮನೆಯಿದು ಅಂದುಕೊಳ್ಳಬೇಕು
ನಮ್ಮತನವ ಮೆರೆಯುತ್ತಿದ್ದರೆ ಸಾಕು
ಹೆಂಡ್ತಿ ಬೇಕು..
ತವರು ಮನೆಯ ಜ್ಯೊತಿ ಅವಳು
ಗಂಡನ ಮನೆ ಬೆಳಗುತಿರಬೇಕು
ಮೆನೆ ಮೆಚ್ಚುವ ಮಗಳಾಗಬೇಕು
ಹೆಂಡ್ತಿ ಬೇಕು..
ಪುಟ್ಟ ಗೂಡಿನವಳಾದರೂ ಸರಿಯೆ
ದಿಟ್ಟ ಹೃದಯವಿರಬೇಕು
ಕೆಟ್ಟ ಸಮಯವ ಎದುರಿಸುವಂತಿರಬೇಕು
ಹೆಂಡ್ತಿ ಬೇಕು..
ಮಾಂತ್ರಿಕೆ
ಅವಳು ನನ್ನ ಕವಿತೆಗೆ ಪ್ರತಿಕ್ರಯಿಸದಿದ್ದರೂ,
ಅವಳು ಓದಿಯೇ ಇರುತ್ತಾಳೆ ಅನ್ನುವದು ನನ್ನ ನಂಬಿಕೆ !
ಏಕೆಂದರೆ, ...
ಅವಳು ಬರೆವ ಪ್ರತಿ ಕವನಗಳ ಸಾಲಿನಲ್ಲೂ
ನನಗೆ ಉತ್ತರ ನೀಡುತ್ತಿರುವ ಮಾಂತ್ರಿಕೆ !!
ಅವಳು ಓದಿಯೇ ಇರುತ್ತಾಳೆ ಅನ್ನುವದು ನನ್ನ ನಂಬಿಕೆ !
ಏಕೆಂದರೆ, ...
ಅವಳು ಬರೆವ ಪ್ರತಿ ಕವನಗಳ ಸಾಲಿನಲ್ಲೂ
ನನಗೆ ಉತ್ತರ ನೀಡುತ್ತಿರುವ ಮಾಂತ್ರಿಕೆ !!
Friday, February 07, 2014
ಗೊಂದಲ
ಆ ಕಣ್ಣುಗಳು ಬಿಡದಂತೆ ದಿಟ್ಟಿಸುತ್ತಿದ್ದವು ಆ ತುಟಿಗಳನು
ಏನು ಆಕರ್ಷಣೆಯೋ ತಿಳಿಯಲಾರದೇ, ಕೇಳಿಯೇ ಬಿಟ್ಟಳು ಅವನಿಗೆ.....ನಿನ್ನ ತುಟಿಗಳು ಇಷ್ಟು ಕೆಂಪಗಿರುವ ಕಾರಣ...ಹಚ್ಚಿರುವೆಯಾ .. ತುಟಿಗಳಿಗೆ ಬಣ್ಣ....? ಅಯ್ಯೋ ಇಲ್ಲಾ ಕಣೆ ಮಾರೈತಿ, ಛಳಿಗೆ ತುಟಿ ಒಡೆದು ಬಿರುಕು ಬಿಟ್ಟಿವೆ.. ಅಂದ ಅವನು..! ತುಟಿಗೆ ಹಚ್ಚಿರುವೆ ವ್ಯಾಸಲೀನಿನ ಲೇಪನ. :)
ಏನು ಆಕರ್ಷಣೆಯೋ ತಿಳಿಯಲಾರದೇ, ಕೇಳಿಯೇ ಬಿಟ್ಟಳು ಅವನಿಗೆ.....ನಿನ್ನ ತುಟಿಗಳು ಇಷ್ಟು ಕೆಂಪಗಿರುವ ಕಾರಣ...ಹಚ್ಚಿರುವೆಯಾ .. ತುಟಿಗಳಿಗೆ ಬಣ್ಣ....? ಅಯ್ಯೋ ಇಲ್ಲಾ ಕಣೆ ಮಾರೈತಿ, ಛಳಿಗೆ ತುಟಿ ಒಡೆದು ಬಿರುಕು ಬಿಟ್ಟಿವೆ.. ಅಂದ ಅವನು..! ತುಟಿಗೆ ಹಚ್ಚಿರುವೆ ವ್ಯಾಸಲೀನಿನ ಲೇಪನ. :)
ಕಟು ಸತ್ಯ
ಪ್ರಮಾದವ ಎಸಗಿದ ಜನರು..
ಅದನ್ನು ಮುಚ್ಚಲು ಸಜ್ಜನರ ತರ ನಟಿಸಿದರೆ, ಅವರು ಸಜ್ಜನರಾಗುವುದಿಲ್ಲ..!
ಅವರ ಕೃತ್ಯ ಶ್ವಾನದಂತೆ...,
ಬಹಿರ್ದೆಶೆಗೆ ಹೋಗಿ....,ನೆಲವ ಕೆದರಿ.., ಮಣ್ಣು ಚಿಮ್ಮಿ.., ಮುಚ್ಚುವಂತೆ..!
ಅದನ್ನು ಮುಚ್ಚಲು ಸಜ್ಜನರ ತರ ನಟಿಸಿದರೆ, ಅವರು ಸಜ್ಜನರಾಗುವುದಿಲ್ಲ..!
ಅವರ ಕೃತ್ಯ ಶ್ವಾನದಂತೆ...,
ಬಹಿರ್ದೆಶೆಗೆ ಹೋಗಿ....,ನೆಲವ ಕೆದರಿ.., ಮಣ್ಣು ಚಿಮ್ಮಿ.., ಮುಚ್ಚುವಂತೆ..!
Thursday, February 06, 2014
ಪಶ್ಚಾತಾಪ
ಹೂ ಮನಸ್ಸು ಅಂತಾ ತಿಳಿದು ಪ್ರೀತಿ ಮಾಡಿದ್ದು ತಪ್ಪಾಯಿತು
ಕ್ರೂರ ಹೃದಯವದು ಪ್ರೀತಿಯೇ ಅಲ್ಲಾ ದ್ವೇಶಕ್ಕೂ ಅರ್ಹವಲ್ಲದ್ದು !!
ಕ್ರೂರ ಹೃದಯವದು ಪ್ರೀತಿಯೇ ಅಲ್ಲಾ ದ್ವೇಶಕ್ಕೂ ಅರ್ಹವಲ್ಲದ್ದು !!
Thought for the day
To love is nothing, to be loved is
something but to love and to be loved by the one you love,that is
EVERYTHING. Never take love for granted.
Friday, January 31, 2014
ಆಟ
ಭಾವದ ಜೊತೆ ಭಾವನೆಗಳ ಆಟ
ಮನಸ್ಸಲ್ಲೆ ಮಂಡಿಗೆ ಅರೆವ ಜಂಜಾಟ
ನಮ್ಮ ನಮ್ಮ ಆಟದೊಳಗೂ ಸೋತೆವೆಂದರೆ ನಾವು ,
ಕಣ್ಣೀರ ಹರಿಸಿ, ನಾವೇ.. ಅಳುತ್ತಾ ಕೂಡುವೆವು !!
ಮನಸ್ಸಲ್ಲೆ ಮಂಡಿಗೆ ಅರೆವ ಜಂಜಾಟ
ನಮ್ಮ ನಮ್ಮ ಆಟದೊಳಗೂ ಸೋತೆವೆಂದರೆ ನಾವು ,
ಕಣ್ಣೀರ ಹರಿಸಿ, ನಾವೇ.. ಅಳುತ್ತಾ ಕೂಡುವೆವು !!
ಕಥೆ-ವ್ಯಥೆ
ಮಾಯಾ ನಗರೀಯ ಶೋಕಿಗೆ ಬಿದ್ದರೆ ಯುವ ಜನತೆ
ಹಣಕ್ಕಾಗಿ ಜಗಳ ಅಪ್ಪಾ ಅಮ್ಮಂದಿರ ಜೊತೆ
ವಿದ್ಯಾಭ್ಯಾಸ ಮಠ...ಅಲ್ಲಿಗೆ ಇವರ ಕಥೆ..ಬರೀ ವ್ಯಥೆ.!!
ಹಣಕ್ಕಾಗಿ ಜಗಳ ಅಪ್ಪಾ ಅಮ್ಮಂದಿರ ಜೊತೆ
ವಿದ್ಯಾಭ್ಯಾಸ ಮಠ...ಅಲ್ಲಿಗೆ ಇವರ ಕಥೆ..ಬರೀ ವ್ಯಥೆ.!!
ಹೀಗೂ ಉಂಟೆ..??
ಅವಳೆದುರಿಗೆ ಬಂದರೆ ..
ಬಾರಿಸಿದಂದಾಗುತ್ತದೆ ಹೃದಯ ಮಂದಿರದ ಗಂಟೆ !
ಅವಳೆನಾದರೂ ಲೂಟಿ ಮಾಡಿ ಹೊರಟರೆ..
ತಲೆ ಚಚ್ಚಿಕೊಳ್ಳುತ್ತಾ ಹೇಳಬೇಕು.., ಹೀಗೂ ಉಂಟೆ..??
ಬಾರಿಸಿದಂದಾಗುತ್ತದೆ ಹೃದಯ ಮಂದಿರದ ಗಂಟೆ !
ಅವಳೆನಾದರೂ ಲೂಟಿ ಮಾಡಿ ಹೊರಟರೆ..
ತಲೆ ಚಚ್ಚಿಕೊಳ್ಳುತ್ತಾ ಹೇಳಬೇಕು.., ಹೀಗೂ ಉಂಟೆ..??
Thursday, January 30, 2014
ಸೂಳೆಗೊಂದು ಶಾದಿಭಾಗ್ಯ
ಕುವರಿ ಸೂಳೆಗೆ ಬೇಕಂತೆ,
ಒಂದು ಗಂಡು ಕಟ್ಟಿದ ತಾಳಿ
ಗಂಡನೊಡನಾಟ ಬೇಡ ,
ಸಂಸಾರದ ಸ್ವಾರಸ್ಯ ಬೇಡ
ಕತ್ತಿನೊಳಗೆ ಇದ್ದರೆ ಸಾಕು ತಾಳಿ
ಹಾದರಕ್ಕೆ ಸಿಕ್ಕಂತೆ ಸುರಕ್ಷಿತ ದಾರಿ
ಇವಳು,
ಸ್ತ್ರಿ ಜಾತಿಯೇ ನಾಚುವಂತ ಹೆಮ್ಮಾರಿ !!
ಒಂದು ಗಂಡು ಕಟ್ಟಿದ ತಾಳಿ
ಗಂಡನೊಡನಾಟ ಬೇಡ ,
ಸಂಸಾರದ ಸ್ವಾರಸ್ಯ ಬೇಡ
ಕತ್ತಿನೊಳಗೆ ಇದ್ದರೆ ಸಾಕು ತಾಳಿ
ಹಾದರಕ್ಕೆ ಸಿಕ್ಕಂತೆ ಸುರಕ್ಷಿತ ದಾರಿ
ಇವಳು,
ಸ್ತ್ರಿ ಜಾತಿಯೇ ನಾಚುವಂತ ಹೆಮ್ಮಾರಿ !!
Thursday, January 23, 2014
ಮನೆಯ ಸೊಸೆ
ಎಲ್ಲರೂ ಮೆಚ್ಚಿದ ನೆಚ್ಚಿನ ಸೊಸೆ
ಮನೆಯ ಬೆಳಗುವ ಬೆಳ್ಳಿ ಹಣತೆ
ಬಲಗಾಲ ಹಚ್ಚಿ ಶುಭ ಜೋಳದ ಸೇರು
ಪಾದವಿಟ್ಟೊಡನೆ ಆ ಮನೆಯೇ ಶಾಶ್ವತ ಸೂರು
ಮನೆಯಲ್ಲಿ ನಡೆದಳು ಕೈಯಲ್ಲಿ ಹಿಡಿದು ಕಡಗೋಲು
ಅಡುಗೆ ಮನೆಯ ಒಡತಿ ಇವಳಾದಳು ನೋಡು
ರೊಟ್ಟಿ ಮಾಡಲು ಇವಳು ಬಹಳ ಗಟ್ಟಿ
ಬಡಿ-ಬಡಿದು ಬೇಯಿಸಿದಳು ರುಚಿ ರುಚಿ ರೊಟ್ಟಿ
ಕರ ಕುಶಲ ವಸ್ತುಗಳ ಮಾಡುವುದರಲ್ಲೂ ಇವಳ ಆಸಕ್ತಿ
ಕೈಯಲ್ಲೆ ಹೆಣೆದು ಅರಳಿಸಿದಳು ಚಂದನೆಯ ಬುಟ್ಟಿ
ಮನೆಯವರ ಮನ ಗೆದ್ದು ನೀ ನೆಲಸೆ
ಸಿದ್ದಿಸಿ ನೀ ತೋರಿಸು.., ಮನೆಗೆ ತಕ್ಕ ಸೊಸೆ !
ಮನೆಯ ಬೆಳಗುವ ಬೆಳ್ಳಿ ಹಣತೆ
ಬಲಗಾಲ ಹಚ್ಚಿ ಶುಭ ಜೋಳದ ಸೇರು
ಪಾದವಿಟ್ಟೊಡನೆ ಆ ಮನೆಯೇ ಶಾಶ್ವತ ಸೂರು
ಮನೆಯಲ್ಲಿ ನಡೆದಳು ಕೈಯಲ್ಲಿ ಹಿಡಿದು ಕಡಗೋಲು
ಅಡುಗೆ ಮನೆಯ ಒಡತಿ ಇವಳಾದಳು ನೋಡು
ರೊಟ್ಟಿ ಮಾಡಲು ಇವಳು ಬಹಳ ಗಟ್ಟಿ
ಬಡಿ-ಬಡಿದು ಬೇಯಿಸಿದಳು ರುಚಿ ರುಚಿ ರೊಟ್ಟಿ
ಕರ ಕುಶಲ ವಸ್ತುಗಳ ಮಾಡುವುದರಲ್ಲೂ ಇವಳ ಆಸಕ್ತಿ
ಕೈಯಲ್ಲೆ ಹೆಣೆದು ಅರಳಿಸಿದಳು ಚಂದನೆಯ ಬುಟ್ಟಿ
ಮನೆಯವರ ಮನ ಗೆದ್ದು ನೀ ನೆಲಸೆ
ಸಿದ್ದಿಸಿ ನೀ ತೋರಿಸು.., ಮನೆಗೆ ತಕ್ಕ ಸೊಸೆ !
Wednesday, January 22, 2014
ವಿಸ್ಮಯ ಪ್ರೀತಿ
ಕಣ್ಣುಗಳಲ್ಲೇ ಪ್ರೀತಿಯ ವಿನಿಮಯ
ಭಾವಗಳಲ್ಲೇ ಅವರಿಬ್ಬರ ಪಯಣ
ಹೃದಯ ಬಡಿತಗಳೇ ಸವಿಗಾನ
ಮೌನ ರಾಗವೇ ಅವರ ಪ್ರಣಯ ಗೀತೆ
ಇವರ ಪ್ರೀತಿ ಪ್ರಜ್ವಲಿಸಲು ಬೇಕೆ..?
ಯಾವುದಾದರೂ ಹಣತೆ !!
ಭಾವಗಳಲ್ಲೇ ಅವರಿಬ್ಬರ ಪಯಣ
ಹೃದಯ ಬಡಿತಗಳೇ ಸವಿಗಾನ
ಮೌನ ರಾಗವೇ ಅವರ ಪ್ರಣಯ ಗೀತೆ
ಇವರ ಪ್ರೀತಿ ಪ್ರಜ್ವಲಿಸಲು ಬೇಕೆ..?
ಯಾವುದಾದರೂ ಹಣತೆ !!
ಪ್ರೇಮ ಪ್ರಸಂಗ
ಅಂದು
ಎಂದಿನಂತೆ ಸೂರ್ಯ ಆಗಸದಲ್ಲಿ ಬೆಳಗುತ್ತಿದ್ದ. ಕಾಲೇಜು ಮೈದಾನಲ್ಲಿ ತಮ್ಮ ತಮ್ಮ
ಬಸ್ಸುಗಳನ್ನು ಇಳಿದು ವಿಧ್ಯಾರ್ಥಿಗಳು ತಮ್ಮ ಕ್ಲಾಸ್ ರೂಮಿನಡೆಗೆ ಹೊರಟಿದ್ದರು. ಆ
ಹುಡುಗಿ (ನಾಯಕಿ) ತನ್ನ ಸ್ನೇಹಿತೆಯೊಡನೆ ಕ್ಲಾಸಿನೊಳಗೆ ಹೋಗಿ ಕೂರುತ್ತಾಳೆ.
ಹುಡುಗಿಯರು ತಮ್ಮದೆ ಲೋಕದ ಮಾತುಕತೆಗಳಲ್ಲಿ ತಲ್ಲೀನರಾಗಿರುತ್ತಾರೆ. ನಾಯಕ ತನ್ನ ಸ್ನೇಹಿತರೊಡನೆ ಬಸ್ಸಿನಲ್ಲಿ ಬಂದು ಇಳಿಯುತ್ತಾನೆ. ಎಲ್ಲ ಸ್ನೇಹಿತರು ಇವನ ಪ್ರೇಮ ಕತೆ ತಿಳಿದು ಇವನಿಗೆ ಕಾಲು ಎಳೆಯುತ್ತಿರುತ್ತಾರೆ. ಆ ಹುಡುಗನ ಮುಖದಲ್ಲಿ ಅಂದು ಖುಶಿ ಕುಣಿದಾಡುತ್ತಿತ್ತು. ಹೇ ಗೆಳೆಯಾ, ಅವಳ ಪರಿಚಯ ನಿನಗಿದೆ, ಅವಳು ನಿನ್ನೊಡನೆ ಬೆರೆತು ಮಾತನಾಡುತ್ತಾಳೆ. ಅವಳಿಗೂ ನೀನಂದರೆ ಇಷ್ಟಾ ಅನಿಸುತ್ತೆ.., ನೀನೇಕೆ ನಿನ್ನ ಪ್ರೇಮವನ್ನು ಅವಳ ಮುಂದೆ ಪ್ರಸ್ತಾಪಿಸಬಾರದು ಅನ್ನುತ್ತಾರೆ. ಮೊದಲಿಗೆ ಈ ಪ್ರೇಮ ಪ್ರಸಂಗಳಿಗೆ ಸರಿ ಸಮಯವಲ್ಲ, ಸುಮ್ಮನೆ ಬಿಡ್ರಪ್ಪಾ ನನ್ನನ್ನ....., ತಲೆ ಕೆಡಿಸಬೇಡಿ..ಅಂತಾ ಹೇಳುತ್ತನೆ. ಲೋ ಶಿಶ್ಯಾ "Its now or never " ಏನೇ ಆಗಲಿ ಹೇಳಿಬಿಡೊ..., ಮಂದಿನದು ಮುಂದೆ ನೋಡಿದರಾಯ್ತು. ಅಂದರು ಗೆಳೆಯರು. ಗಟ್ಟಿ ಹೃದಯ ಮಾಡಿಕೊಂಡು ಅವನು ಅವಳ ಕ್ಲಾಸಿನ ಹತ್ತಿರ ನಡೆದ, ಗೆಳೆಯರು ಅವನ ಹಿಂದಿಂದೆ ಬಂದರು..ಲೋ ನೀವೆಲ್ಲರು ಹೀಗೆ ಬಂದರೆ ಅವಳಿಗೆ ಕೋಪ ಬರಬಹುದು, ನೀವೆಲ್ಲರೂ ದೂರದಲ್ಲಿರಿ, ನಾನು ಹೋಗಿ ಬರುತ್ತೇನೆ ಅಂದ. ಗೆಳೆಯರೆಲ್ಲಾ ನಾವು ಕಾಫಿ ಕುಡಿಯುತ್ತಾ ಕುಳಿತ್ತಿರುತ್ತೇವೆ ಅಂತಾ ಹೇಳಿ ಅಲ್ಲಿಂದ ಜಾಗಾ ಖಾಲಿ ಮಾಡಿದರು. ನಾಯಕ ಆ ಸ್ನೇಹಿತೆಯರು ಕುಳಿತ ಕ್ಲಾಸಿನಲ್ಲಿ ಹೊರಡುತ್ತಾನೆ.., ಇಬ್ಬರನ್ನು ಮಾತನಾಡಿಸಿ ನಂತರ ಅವಳ ಗೆಳತಿಗೆ, ನೀನು ಸ್ವಲ್ಪ ನಮ್ಮನ್ನು ಏಕಾಂತವಾಗಿ ಬಿಡುತ್ತೀಯಾ ? ನನಗೆ ಇವಳ ಹತ್ತಿರ ಸ್ವಲ್ಪ ಮಾತನಾಡಬೇಕಿದೆ ಅಂದಾ..! ಅಲ್ಲಿಗೆ ಆ ಹುಡುಗಿಯರಿಗೆ ಇವನು ಬಂದ ವಿಷಯ ತಿಳಿದು ಹೋಗುತ್ತದೆ, ನಾಯಕಿ - ನಮ್ಮಿಬ್ಬರಲ್ಲಿ ಏನೂ ಮುಚ್ಚುಮರೆ ಇಲ್ಲಾ, ಇವಳೂ ಇರಲಿ ಹೇಳು ಅಂದಳು. ಕಸಿವಿಸಿಗೊಂಡ ನಾಯಕ ವಿನಮ್ರವಾಗಿ ಆಕೆಯ ಗೆಳತಿಕೆ ದಯವಿಟ್ಟು ೫ ನಿಮಿಷ ಅಂತಾ.. ಕೇಳಿದುದ್ದಕ್ಕೆ ಅವಳು ಒಪ್ಪಿ ಹೊರ ನಡೆಯುತ್ತಾಳೆ..! ಗೆಳತಿಯನ್ನು ಕಳಿಸಿದ್ದು ಆಯ್ತು, ಆದ್ರೆ ಹೇಗೆ ವಿಷಯ ಶುರು ಮಾಡಬೇಕು ಅಂತಾ ತೊಚದಾಯಿತು.., ಸುಮ್ಮನೆ ಕುಶಲೋಪಚಾರಿ ಮಾತುಗಳಾನಾಡುತ್ತಾನೆ, ಒಮ್ಮೆ ಅವಳ ಮುಖವನ್ನು, ಮತ್ತೊಮ್ಮೆ ತಾನು ಕಟ್ಟಿದ ಗಡಿಯಾರವನ್ನು ನೋಡುತ್ತಿರುತ್ತಾನೆ..ಮಧ್ಯದಲ್ಲಿ ೨ ನಿಮಿಷ ಮೌನ....ಆಗ ಅವಳೇ ಮುಂದಾಗಿ ನೀನು ಏನೋ ಹೇಳಬೇಕು ಅಂತಿದ್ದೆ.....ಏನದು..... ಅಂದಳು....! ಅದು.....ಅದು....ಹೇಗೆ ಹೇಳಬೇಕು ಅಂತಾ ತಿಳಿಯುತ್ತಿಲ್ಲ.....ಮನದಲ್ಲೇ ಗಟ್ಟಿ ಜೀವ ಮಾಡಿಕೊಂಡು....ನಿನ್ನ ನಡೆ ನುಡಿ, ನಿನ್ನ ಮಾತುಗಳು ನಿನ್ನ ನೆನಪುಗಳು ಅನುಕ್ಷಣವು ನನ್ನ ಕಣ್ಣೆದಿರು ನಿಂತು ಕಾಡುತ್ತವೆ....ಬಹಳ ಯೋಚನೆ ಮಾಡಿದಾಗ ನನಗನಿಸಿತು...... " I think I'm in love with you " ಅವಳ ಮುಖದಲ್ಲಿ ಕೋಪವಿರಲಿಲ್ಲ.....ಅವಳು ಗಲಿಬಿಲಿಗೊಳ್ಳಲಿಲ್ಲ....ಶಾಂತವಾಗಿ ಮುಗುಳು ನಗೆ ಬೀರುತ್ತಾ.... ನನಗೆ ಆ ತರ ಭಾವನೆಗಳು ನಿನ್ನ ಬಗ್ಗೆ ಇಲ್ಲ, ನಾವು ಜಸ್ಟ ಫ್ರೆಂಡ್ಸ್.....! ನೀನು ಬೇಜಾರು ಮಾಡಿಕೊಳ್ಳಬೇಡ ಅಂದಳು.....ಮತ್ತೆ ಮೌನ....ಸರಿ ಸರಿ ಎಂದ ನಾಯಕ..., ಜೇಬಿನೊಳಗೆ ಕೈ ಹಾಕಿ ಅವಳಿಷ್ಟ ಪಡುವ ಚಾಕಲೇಟನ್ನು ಕೊಟ್ಟು ಅವಳಿಗೆ ಹಸ್ತಲಾಂಗನ ಮಾಡಿ ಹೊರ ನಡೆಯುತ್ತಾನೆ...ಹೊರಗೆ ಕುಳಿತ ಸ್ನೇಹಿತೆಯ ಹತ್ತಿರ ಹೋಗಿ ಅವಳಿಗೊಂದು ಚಾಕಲೇಟನ್ನು ಕೊಟ್ಟು ತನ್ನ ಗೆಳೆಯರ ಹತ್ತಿರ ನಡೆಯುತ್ತಾನೆ.....!
ಹುಡುಗಿಯರು ತಮ್ಮದೆ ಲೋಕದ ಮಾತುಕತೆಗಳಲ್ಲಿ ತಲ್ಲೀನರಾಗಿರುತ್ತಾರೆ. ನಾಯಕ ತನ್ನ ಸ್ನೇಹಿತರೊಡನೆ ಬಸ್ಸಿನಲ್ಲಿ ಬಂದು ಇಳಿಯುತ್ತಾನೆ. ಎಲ್ಲ ಸ್ನೇಹಿತರು ಇವನ ಪ್ರೇಮ ಕತೆ ತಿಳಿದು ಇವನಿಗೆ ಕಾಲು ಎಳೆಯುತ್ತಿರುತ್ತಾರೆ. ಆ ಹುಡುಗನ ಮುಖದಲ್ಲಿ ಅಂದು ಖುಶಿ ಕುಣಿದಾಡುತ್ತಿತ್ತು. ಹೇ ಗೆಳೆಯಾ, ಅವಳ ಪರಿಚಯ ನಿನಗಿದೆ, ಅವಳು ನಿನ್ನೊಡನೆ ಬೆರೆತು ಮಾತನಾಡುತ್ತಾಳೆ. ಅವಳಿಗೂ ನೀನಂದರೆ ಇಷ್ಟಾ ಅನಿಸುತ್ತೆ.., ನೀನೇಕೆ ನಿನ್ನ ಪ್ರೇಮವನ್ನು ಅವಳ ಮುಂದೆ ಪ್ರಸ್ತಾಪಿಸಬಾರದು ಅನ್ನುತ್ತಾರೆ. ಮೊದಲಿಗೆ ಈ ಪ್ರೇಮ ಪ್ರಸಂಗಳಿಗೆ ಸರಿ ಸಮಯವಲ್ಲ, ಸುಮ್ಮನೆ ಬಿಡ್ರಪ್ಪಾ ನನ್ನನ್ನ....., ತಲೆ ಕೆಡಿಸಬೇಡಿ..ಅಂತಾ ಹೇಳುತ್ತನೆ. ಲೋ ಶಿಶ್ಯಾ "Its now or never " ಏನೇ ಆಗಲಿ ಹೇಳಿಬಿಡೊ..., ಮಂದಿನದು ಮುಂದೆ ನೋಡಿದರಾಯ್ತು. ಅಂದರು ಗೆಳೆಯರು. ಗಟ್ಟಿ ಹೃದಯ ಮಾಡಿಕೊಂಡು ಅವನು ಅವಳ ಕ್ಲಾಸಿನ ಹತ್ತಿರ ನಡೆದ, ಗೆಳೆಯರು ಅವನ ಹಿಂದಿಂದೆ ಬಂದರು..ಲೋ ನೀವೆಲ್ಲರು ಹೀಗೆ ಬಂದರೆ ಅವಳಿಗೆ ಕೋಪ ಬರಬಹುದು, ನೀವೆಲ್ಲರೂ ದೂರದಲ್ಲಿರಿ, ನಾನು ಹೋಗಿ ಬರುತ್ತೇನೆ ಅಂದ. ಗೆಳೆಯರೆಲ್ಲಾ ನಾವು ಕಾಫಿ ಕುಡಿಯುತ್ತಾ ಕುಳಿತ್ತಿರುತ್ತೇವೆ ಅಂತಾ ಹೇಳಿ ಅಲ್ಲಿಂದ ಜಾಗಾ ಖಾಲಿ ಮಾಡಿದರು. ನಾಯಕ ಆ ಸ್ನೇಹಿತೆಯರು ಕುಳಿತ ಕ್ಲಾಸಿನಲ್ಲಿ ಹೊರಡುತ್ತಾನೆ.., ಇಬ್ಬರನ್ನು ಮಾತನಾಡಿಸಿ ನಂತರ ಅವಳ ಗೆಳತಿಗೆ, ನೀನು ಸ್ವಲ್ಪ ನಮ್ಮನ್ನು ಏಕಾಂತವಾಗಿ ಬಿಡುತ್ತೀಯಾ ? ನನಗೆ ಇವಳ ಹತ್ತಿರ ಸ್ವಲ್ಪ ಮಾತನಾಡಬೇಕಿದೆ ಅಂದಾ..! ಅಲ್ಲಿಗೆ ಆ ಹುಡುಗಿಯರಿಗೆ ಇವನು ಬಂದ ವಿಷಯ ತಿಳಿದು ಹೋಗುತ್ತದೆ, ನಾಯಕಿ - ನಮ್ಮಿಬ್ಬರಲ್ಲಿ ಏನೂ ಮುಚ್ಚುಮರೆ ಇಲ್ಲಾ, ಇವಳೂ ಇರಲಿ ಹೇಳು ಅಂದಳು. ಕಸಿವಿಸಿಗೊಂಡ ನಾಯಕ ವಿನಮ್ರವಾಗಿ ಆಕೆಯ ಗೆಳತಿಕೆ ದಯವಿಟ್ಟು ೫ ನಿಮಿಷ ಅಂತಾ.. ಕೇಳಿದುದ್ದಕ್ಕೆ ಅವಳು ಒಪ್ಪಿ ಹೊರ ನಡೆಯುತ್ತಾಳೆ..! ಗೆಳತಿಯನ್ನು ಕಳಿಸಿದ್ದು ಆಯ್ತು, ಆದ್ರೆ ಹೇಗೆ ವಿಷಯ ಶುರು ಮಾಡಬೇಕು ಅಂತಾ ತೊಚದಾಯಿತು.., ಸುಮ್ಮನೆ ಕುಶಲೋಪಚಾರಿ ಮಾತುಗಳಾನಾಡುತ್ತಾನೆ, ಒಮ್ಮೆ ಅವಳ ಮುಖವನ್ನು, ಮತ್ತೊಮ್ಮೆ ತಾನು ಕಟ್ಟಿದ ಗಡಿಯಾರವನ್ನು ನೋಡುತ್ತಿರುತ್ತಾನೆ..ಮಧ್ಯದಲ್ಲಿ ೨ ನಿಮಿಷ ಮೌನ....ಆಗ ಅವಳೇ ಮುಂದಾಗಿ ನೀನು ಏನೋ ಹೇಳಬೇಕು ಅಂತಿದ್ದೆ.....ಏನದು..... ಅಂದಳು....! ಅದು.....ಅದು....ಹೇಗೆ ಹೇಳಬೇಕು ಅಂತಾ ತಿಳಿಯುತ್ತಿಲ್ಲ.....ಮನದಲ್ಲೇ ಗಟ್ಟಿ ಜೀವ ಮಾಡಿಕೊಂಡು....ನಿನ್ನ ನಡೆ ನುಡಿ, ನಿನ್ನ ಮಾತುಗಳು ನಿನ್ನ ನೆನಪುಗಳು ಅನುಕ್ಷಣವು ನನ್ನ ಕಣ್ಣೆದಿರು ನಿಂತು ಕಾಡುತ್ತವೆ....ಬಹಳ ಯೋಚನೆ ಮಾಡಿದಾಗ ನನಗನಿಸಿತು...... " I think I'm in love with you " ಅವಳ ಮುಖದಲ್ಲಿ ಕೋಪವಿರಲಿಲ್ಲ.....ಅವಳು ಗಲಿಬಿಲಿಗೊಳ್ಳಲಿಲ್ಲ....ಶಾಂತವಾಗಿ ಮುಗುಳು ನಗೆ ಬೀರುತ್ತಾ.... ನನಗೆ ಆ ತರ ಭಾವನೆಗಳು ನಿನ್ನ ಬಗ್ಗೆ ಇಲ್ಲ, ನಾವು ಜಸ್ಟ ಫ್ರೆಂಡ್ಸ್.....! ನೀನು ಬೇಜಾರು ಮಾಡಿಕೊಳ್ಳಬೇಡ ಅಂದಳು.....ಮತ್ತೆ ಮೌನ....ಸರಿ ಸರಿ ಎಂದ ನಾಯಕ..., ಜೇಬಿನೊಳಗೆ ಕೈ ಹಾಕಿ ಅವಳಿಷ್ಟ ಪಡುವ ಚಾಕಲೇಟನ್ನು ಕೊಟ್ಟು ಅವಳಿಗೆ ಹಸ್ತಲಾಂಗನ ಮಾಡಿ ಹೊರ ನಡೆಯುತ್ತಾನೆ...ಹೊರಗೆ ಕುಳಿತ ಸ್ನೇಹಿತೆಯ ಹತ್ತಿರ ಹೋಗಿ ಅವಳಿಗೊಂದು ಚಾಕಲೇಟನ್ನು ಕೊಟ್ಟು ತನ್ನ ಗೆಳೆಯರ ಹತ್ತಿರ ನಡೆಯುತ್ತಾನೆ.....!
Tuesday, January 21, 2014
ಅವಳ ಕಣ್ಣೋಟ
ಅವಳ ಒಂದು ಧೀರ್ಘ ಕಣ್ಣೋಟ
ಹೃದಯ ತಟ್ಟಿ ಆದರಿಸಿದಂತಿದೆ..!
ಮನವ ಎದಿರು ಬಿಟ್ಟ ರಂಗೋಲಿಯಂತೆ
ಸ್ವಾಗತಿಸುತಿರುವುದು ಪ್ರಣಯದ ಆಟ !!
ಹೃದಯ ತಟ್ಟಿ ಆದರಿಸಿದಂತಿದೆ..!
ಮನವ ಎದಿರು ಬಿಟ್ಟ ರಂಗೋಲಿಯಂತೆ
ಸ್ವಾಗತಿಸುತಿರುವುದು ಪ್ರಣಯದ ಆಟ !!
Saturday, January 18, 2014
ಪೈಪೋಟಿ
ಆ ಮನೆಯ ಭರ್ಜರಿ ಮದುವೆಯ ಕಂಡು
ವಧುಗಳ ಕೊಡಲು ನಾ ಮುಂದು.., ತಾ ಮುಂದು !
ಜೊತೆಗೆ ಕೊಡುವರಂತೆ ಕೋಟಿ ಕೋಟಿ
ಆ ಮನೆಗೆ ಸೊಸೆಯಾಗಲು ಎಲ್ಲರದೂ ಪೈಪೋಟಿ !!
ವಧುಗಳ ಕೊಡಲು ನಾ ಮುಂದು.., ತಾ ಮುಂದು !
ಜೊತೆಗೆ ಕೊಡುವರಂತೆ ಕೋಟಿ ಕೋಟಿ
ಆ ಮನೆಗೆ ಸೊಸೆಯಾಗಲು ಎಲ್ಲರದೂ ಪೈಪೋಟಿ !!
एहसास
कभी तू हवा के पन्नों पर पैगाम लिख्ती है
कभी ठंडी हवा बनकर मनको छु जाती है
कभी तू ख़ामोशी में अपनी आवाज़ सूना जाती है
युहीं दूर बादलों में कही छुपके बैटी हैं
कभी सूरजके किरणों में , कभी बारीश कि बूंदों में बरसती है
कभी ना देखा है तुम्हें इन आखोंसे … फिर भी हर वक़्त तेरे आस पास होनेकी एहसास होती है !!
कभी ठंडी हवा बनकर मनको छु जाती है
कभी तू ख़ामोशी में अपनी आवाज़ सूना जाती है
युहीं दूर बादलों में कही छुपके बैटी हैं
कभी सूरजके किरणों में , कभी बारीश कि बूंदों में बरसती है
कभी ना देखा है तुम्हें इन आखोंसे … फिर भी हर वक़्त तेरे आस पास होनेकी एहसास होती है !!
Thursday, January 16, 2014
THOUGHT FOR THE DAY
" OPPORTUNITES ARE LOST WHEN PEOPLE DO NOT RESPOND TO THE KNOCKS OF DOOR IN TIME "
Tuesday, January 14, 2014
ಶುಭಾಶಯ
ಮಾಗಿಯ ಚಳಿ ಮರೆಯಲು ಎಳ್ಳು ಉಂಬೋಣ
ಕಷ್ಟಗಳ ಕಹಿ ಮರೆತು ಬೆಲ್ಲವ ಮೇಯೋಣ
ಬನ್ನಿ ಎಲ್ಲರೂ ಕೂಡಿ ಎಳ್ಳು ಬೆಲ್ಲವ ಸವೆಯುತ್ತಾ
ಸಂಕ್ರಮಣದ ಸಂಭ್ರಮ ಆಚರಿಸೋಣ !!
ಎಲ್ಲರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು !
ಕಷ್ಟಗಳ ಕಹಿ ಮರೆತು ಬೆಲ್ಲವ ಮೇಯೋಣ
ಬನ್ನಿ ಎಲ್ಲರೂ ಕೂಡಿ ಎಳ್ಳು ಬೆಲ್ಲವ ಸವೆಯುತ್ತಾ
ಸಂಕ್ರಮಣದ ಸಂಭ್ರಮ ಆಚರಿಸೋಣ !!
ಎಲ್ಲರಿಗೂ ಸಂಕ್ರಮಣದ ಹಾರ್ದಿಕ ಶುಭಾಶಯಗಳು !
ಶಾಶ್ತಿ
ಕವಿಯ ಕುಂಚದಲ್ಲಿ ಅರಳಿದ ಹೂವು
ಕವಿಯನ್ನು ಗೆಲ್ಲಿಸಿ, ಕವಿತೆ ಪುಸ್ತಕ ಸೇರಿತು !
ಶ್ರೇಷ್ಟ ಕವಿಯ ತಿರಸ್ಕರಿಸಿ ನಡೆದ ಸಾಲು
ಅಹಂನಿಂದ ಮೆರೆದು ., ಈಗ ಬೀದಿ ಪಾಲು !!
ಕವಿಯನ್ನು ಗೆಲ್ಲಿಸಿ, ಕವಿತೆ ಪುಸ್ತಕ ಸೇರಿತು !
ಶ್ರೇಷ್ಟ ಕವಿಯ ತಿರಸ್ಕರಿಸಿ ನಡೆದ ಸಾಲು
ಅಹಂನಿಂದ ಮೆರೆದು ., ಈಗ ಬೀದಿ ಪಾಲು !!
Subscribe to:
Posts (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ಹಸಿರು ಮಾನವನ ಜೀವದ ಉಸಿರು ಹಸಿರು ಇದ್ದಾರೆ ಭಾಗ್ಯ , ಹಸಿರು ತರುವುದು ಸೌಭಾಗ್ಯ ಹಸಿರು ಬೆರೆತಿರಲು ಜೀವನ , ಹಸಿರು ಬದುಕಿನ ಪಯಣ ಕಾಡು ಬೆಳೆದರೆ ನಾಡಿಗೆ ಮಳೆ , ಸೋನೆ ಗರ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...