ಹಬ್ಬ

ಹಬ್ಬ ಬಂತು ಹಬ್ಬ
ಕಾಣದ ದೇವರ ಹುಡುಕುವ ಹಬ್ಬ
ಬೀದಿ ಬೀದಿಯಲ್ಲಿ ದೇವರ ಕೂಡಿಸುವ ಹಬ್ಬ

ಹಬ್ಬ ಬಂತು ಹಬ್ಬ
ಜನರ ಪೀಡಿಸಿ, ಹಣ ವಸೂಲಿ ಮಾಡುವ ಹಬ್ಬ
ಪುಂಡ ಪೋಕರಿಗಳಿಗೆ ಪುಂಡಾಟದ ಹಬ್ಬ

ಹಬ್ಬ ಬಂತು ಹಬ್ಬ
ಹಾದಿ ಬೀದಿಗೆ ಜಗಮಗಿಸೋ ದೀಪ
ಭಕ್ತಿಯೇ ಇಲ್ಲಾ.., ಅಬ್ಬರವೇ ಎಲ್ಲಾ

ಹಬ್ಬ ಬಂತು ಹಬ್ಬ
ಕೆರೆ ಭಾವಿಗಳೆಲ್ಲಾ ಪೂಜೆ ತ್ಯಾಜಗಳ ಸಾಗರ
ರಸ್ತೆ ರಸ್ತೆಗಳಲ್ಲಿ ತಿಪ್ಪೆ ಹೆಕ್ಕುವ ಸಮರ

ಹಬ್ಬ ಬೇಕೆ ಹಬ್ಬ..?
ನಗರ ಹೊಲಸುಗೊಳಿಸುವ ಹಬ್ಬ
ಅರ್ಥವ ಮರೆತು ಆಚರಿಸುವ ಹಬ್ಬ..!!!

Comments

’ಭಕ್ತಿಯೇ ಇಲ್ಲಾ.., ಅಬ್ಬರವೇ ಎಲ್ಲಾ’
ತಮ್ಮ ಈ ಸಾಲು ನನಗೆ ಅತೀವ ಚಿಂತೆಯನ್ನು ಈಡು ಮಾಡಿತು. ದೇವರೂ ಇದೀಗ ಮಾರಾಟದ ಸರಕು! :(

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು