ವಸಂತದ ಚಿಗುರು

ಗರಿಯ ಚಿಗುರು

ಹೊಸ ಚಿಗುರು

ಹಸಿರ ಚಿಗುರು

ಕೆಂಪ ಚಿಗುರು

ಪಚ್ಚೆ ಹಸಿರು

ತಿಳಿಯ ಹಸಿರು

ಹಸಿರು ಉಸಿರಾಗಿ ಚಿಗಿಯುತಿದೆ !!


ಕಾಡ ಮರದಲಿ

ನಾಡ ಮರದಲಿ

ಚಿಕ್ಕ ಗಿಡದಲಿ

ಹೆಮ್ಮರದಲಿ

ಮುಳ್ಳು ಕಂಟಿಯಲಿ

ಹೂ ಬಳ್ಳಿಯಲಿ

ಹಸಿರು ಉಸಿರಾಗಿ ಚಿಗಿಯುತಿದೆ !!


ವಸಂತ ಬಂದ

ಖುಷಿಯಲಿ

ನವ ಮಾಸದ

ಹುರುಪಲಿ

ಹಸಿರು ಮೊಳೆತು

ಹರುಷದಲಿ

ಹಸಿರು ಉಸಿರಾಗಿ ಚಿಗಿಯುತಿದೆ !!

Comments

ಈವತ್ತೆಲ್ಲ ವನಂತೋತ್ಸವ ಅನ್ನಿ.
ಹ್ಮ್ ಸರ್..ಐ ಟಿ ಪಿ ಎಲ್ ಆವರ್ಣದಲ್ಲಿ ಒಣಗಿದ ಗಿಡ ಮರಗಳು ಚಿಗುರು ನಿಂತಿವೆ, ಮಧ್ಯಾನ ವಾಕ್ ಮಾಡುವಾಗ ಅವುಗಳನ್ನು ನೋಡಿ ಬರೆದ ಕವನ ಸರ್. ಇದು ನನ್ನ ಗೆಳೆಯನ ಆಶಯ ಕೂಡಾ ಹೌದು.

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು