ಹೃದಯ ಹಾಡಿದೆ ಇಂದು

ನಗು ಮಲ್ಲಿಗೆ ತುಟಿಗಳಲ್ಲಿ ನಗುತಿವೆ
ಸಣ್ಣನೆಯ ಕಣ್ಣುಗಳು ಭಾಷ್ಪದಲ್ಲಿ ಅರಳಿವೆ
ಹೊಸ ಭಾವಗಳು ಮೂಡುತ ಮನಸಲಿ
ಉಲ್ಲಾಸಗೊಂಡು ಹೃದಯ ಹಾಡಿದೆ ಇಂದು..!

ನವ ಮಾಸದ ನವ ಋತುವಿನಲಿ
ನವ ಕನಸ್ಸುಗಳ ಹೊತ್ತು ಕಣ್ಣಲಿ
ಮತ್ತೆ ಚಿಗುರುತಿವೆ ಆಸೆಗಳು
ತೂಗುಯ್ಯಾಲೆಯಲ್ಲಿ ತೆಲುತ್ತಾ ಹಾಡಿದೆ ಹೃದಯ ಇಂದು..!

ಕತ್ತಲೆ ದಾರಿಯ ಕವಿದು
ಬೆಳೆಕು ಎಲ್ಲೆಡೆ ಮೆರೆದು
ಹೊಸ ಗುರಿಯಡೆಗೆ ದಾಪುಗಾಲು
ಕುಣಿಯುತ್ತಾ ಸಾಗಲು.., ಹಾಡಿದೆ ಹೃದಯ ಇಂದು..!!



2 comments:

Badarinath Palavalli said...

ಏಕ್ದಂ ನನ್ನ ಕಾಲೇಜು ದಿನಗಳನ್ನು ನೆನಪುಮಾಡಿಬಿಟ್ರೀ.

Sunil R Agadi (Bhavapriya) said...

ಸರ್ ನಿಜವಾಗಿಯೂ....!!? ಧನ್ಯನಾದೆ ಸರ್..! :)

ಸುಗ್ಗಿ ಬಂತು ಸುಗ್ಗಿ

ರೈತನ ದುಡಿಮೆಗೆ ಪುರ್ಸ್ಕಾರದ ಸುಗ್ಗಿ ಹೊಲವ ಊಳಿದ ಎತ್ತುಗಳಿಗೆ ಅಲಂಕರಿಸಿ ಮೆರವಣಿಗೆಯ ಸುಗ್ಗಿ ಹಸಿರು ಪಸರಿಸಿದ ಪೈರಿಗೆ ಕಾಳು ನವಿರೆರಿದ ಸ...