ಮನೆ ಮಗಳು

ಅವಳು ಕಾಲಿಟ್ಟ ಕ್ಷಣದಲ್ಲಿ ಮನೆಗೆ ಏನೋ ಕಳೆ ಬಂದಂತೆ, ಸಾಮಾನ್ಯ ಹುಣ್ಣಿಮೆ ಅಮವಾಸ್ಯೆಗಳು ಈಗ ಹಬ್ಬಗಳಂತೆ, ನಸುಕಿನಲ್ಲಿ ಎದ್ದು ಮನೆಯ ಗೂಡಿಸಿ ಸಾರಿಸಿ ಸಿಂಗರಿಸುತ್ತಾಳೆ. ಎಲ್ಲರೂ ಏಳುವ ಮೊದಲು ತಾನು ತೈಯ್ಯಾರಾಗುತ್ತಾಳೆ. ಪೂಜೆ ಪಾಠ ಮಾಡಿ, ಮನೆಯ ದೇವರುಗಳಿಗೆಲ್ಲಾ ಬೆಳಗುತ್ತಾಳೆ. ಮನೆಯ ತುಂಬೆಲ್ಲಾ ಭಕ್ತಿ ಗೀತೆಗಳ ಸಂಗೀತ. ಗಂಡ, ಅತ್ತೆ ಮಾವಂದಿರ ನಮಸ್ಕರಿಸುತ್ತಾಳೆ. ಅವರುಗಳು ಮುಖತೊಳೆದು ಬರುವಷ್ಟರಲ್ಲಿ ಚಹಾ ತಿಂಡಿ ತಯ್ಯಾರಾಗಿರುತ್ತದೆ. ಅವಳಿಗೆ ಇಂತಹ ಒಂದು ಕನಸ್ಸಿತ್ತು, ತುಂಬಿದ ಸಂಸಾರ, ದೊಡ್ಡ ಮನೆ, ಆ ಮನೆಯಲ್ಲಿ ದೇವರಂತಹ ಅತ್ತೆ ಮಾವ, ತನಗೆ ಪ್ರಾಣಕ್ಕಿಂದ ಹೆಚ್ಚಾಗಿ ಪ್ರೀತಿಸುವ ಗಂಡ. ಆ ಮನೆಸಿಕ್ಕಿದ್ದುದಕ್ಕೆ ಅವಳಿಗೆ ತುಂಬಾ ಖುಷಿ. ಮಾವರನ್ನು ಅವಳು " ಅಪ್ಪಾಜಿ " ಹಾಗು ಅತ್ತೆಯನ್ನು " ಅಮ್ಮಾ" ಎಂದೇ ಕರೆಯುತ್ತಾಳೆ. ಈ ಕಲಿಯುಗದಲ್ಲಿ ಇಂತಹ ಅತ್ತೆ,  ಮಾವ, ಗಂಡ ಸಿಕ್ಕಿದ್ದು ನನ್ನ ಪುಣ್ಯ ಅನ್ನುತ್ತಾಳೆ, ಆ ಸೊಸೆ. ಅಂದ ಹಾಗೆ ಅವಳು ಸೊಸೆಯಲ್ಲ ನಮ್ಮ " ಮನೆ ಮಗಳು " ಅನ್ನುತ್ತಾರೆ ಅವಳ ಅತ್ತೆ ಮಾಂವದಿರು.  ಇದೇ ಅಲ್ಲವೆ ಗೆಳೆಯರೇ ಚೊಕ್ಕ ಸಂಸಾರ, ಮನೆ ನಂದನವನ. ಎಲ್ಲರೂ ಬಯಸುವ " ವಾಡೆ ". ಶುಭ ದಿನ :)

2 comments:

Badarinath Palavalli said...

ವಾಡೆಯ ಸರಿಯಾದ ಪರಿಕಲ್ಪನೆ ಈಗ ನಮಗೂ ಸಿಕ್ಕಂತಾಯಿತು.

Sunil R Agadi (Bhavapriya) said...

:)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...