ಚಿಕ್ಕದಾದ ದೊಡ್ಡ ಕಥೆ

ಅವರಿಬ್ಬರು ಒಳ್ಳೆಯ ಸ್ನೇಹಿತರು. ಒಬ್ಬರಿಗಿಂತ ಒಬ್ಬರೂ ಗುಣವಂತರು, ಯೋಚನಾಶೀಲರು. ವಯಸ್ಸು ಬೆಳೆದಂತೆ ತಮ್ಮ ತಮಗೆ ತಕ್ಕಂತ ಹುಡುಗ ಹುಡುಗಿಯ ನೋಡಿ ಮದುವೆಯಾದರು.  ಮದುವೆಯ ಹೊಸದರಲ್ಲಿ ಇಬ್ಬರೂ ತಮ್ಮ ತಮ್ಮ ಸಂಸಾರದಲ್ಲಿ ಸಂತೋಷ  ಸಂಭ್ರಮಗಳಲ್ಲಿ ಮಗ್ನರು. ದಿನಗಳು ಕಳೆದಂತೆ ಗೆಳತಿಗೆ ಮನೆಯಲ್ಲಿ ಸಣ್ಣ ಪುಟ್ಟ ಜಗಳ, ಮನಸ್ತಾಪ ಶುರುವಿಡುತ್ತವೆ. ಅವಳು ಎಷ್ಟೇ ಕಷ್ಟಗಳ ಪಡುತ್ತಿದ್ದರೂ ಸ್ನೇಹಿತನ ಜೊತೆ ಹೇಳಿಕೊಳ್ಳುವುದಿಲ್ಲ. ಆ ಗೆಳೆಯ ಇವಳನ್ನು ಮೊದಲಿನಿಂದಲೂ ನೋಡಿದವ, ಅವಳು ಹೇಳದೇ ಇರುವ ವಿಷಯ ಅವಳ ಮುಖದಲ್ಲಿ ಅವನಿಗೆ ಕಾಣುತ್ತಿತ್ತು.., ಆದರೂ ಸಹ ಅವಳಾಗಿಯೇ ಹೇಳಲಿ ಎಂದು ಸುಮ್ಮನಾಗಿದ್ದನು. ಅವಳ ಗಂಡನೆನೋ ಒಳ್ಳೇಯವನೆ ಆದರೆ ಅವಳ ಅತ್ತೆ ಮಾವಂದಿರ ಕಾಟ ಅವಳಿಗೆ. ಹೀಗೆ ಮಾಡಬಾರದು.., ಹಾಗೆ ಮಾಡಬಾರದು.., ಅವಳಿಗೆ ಈ ಸಣ್ಣ ಪುಟ್ಟ ಮನಸ್ತಾಪಗಳು ದೊಡ್ಡದು ಅನ್ನುವ ಭಾವನೆ. ಏಕಾ ಏಕಿ ಒಂದು ದಿನ ಸ್ನೇಹಿತನ ಬಳಿ ಬಂದು ತನ್ನ ಸಮಸ್ಯೆಯ ಬಗ್ಗೆ ವಿವರಿಸುತ್ತಾಳೆ. ಅವಳ ಮನಸ್ಥಿತಿಯ ಅರ್ಥ ಮಾಡಿಕೊಂಡ ಸ್ನೇಹಿತ ಅವಳಿಗೆ ಮೊದಲು ಶಾಂತವಾಗಿಸುತ್ತಾನೆ. ಅವಳನ್ನು ಕುರಿತು, ನೋಡು ಮದುವಯ ಹೊಸದರಲ್ಲಿ ಇವಲ್ಲಾ ಸಾಮಾನ್ಯ, ಗಂಡನ ಮನೆಯಲ್ಲಿ ಹೊಂದಿಕೊಳ್ಳಲು ಸಮಯ ಬೇಕು, ಒಮ್ಮಿಂದೊಮ್ಮೆಲೆ ಎಲ್ಲವೂ ಅಂದುಕೊಂಡಹಾಗೆ ನಡೆಯುತ್ತಿಲ್ಲ ಅಂದು ಆತುರತೆಯಲ್ಲಿ ನಿರ್ಣಯ ತೆಗೆದುಕೊಳ್ಳುವುದು ಸಮಂಜಸವಲ್ಲ. ಎಲ್ಲರ ದೃಷ್ಟಿಯಲ್ಲಿ ಒಂದು ಸನ್ನಿವೇಶವನ್ನು ಗಮನಿಸು, ಒಬ್ಬೊಬ್ಬರ ದೃಷ್ಟಿಯಲ್ಲಿ ಆ ಸನ್ನಿವೇಶ ಬೆರೆ ಬೆರೆ ಅರ್ಥದಲ್ಲಿ ಗೋಚರಿಸುತ್ತದೆ. ಹಾಗೆಯೇ ನೀನು ನಿನ್ನ ಮಾವನ ಸ್ಥಾನದಲ್ಲಿ ನಿಂತು ಯೋಚಿಸು, ಹಾಗೆಯೇ ಅತ್ತೆಯ ಸ್ಥಾನದಲ್ಲಿ, ಗಂಡನ ಸ್ಥಾನದಲ್ಲಿ ಯೋಚಿಸು, ಅವರುಗಳಿಗೆಲ್ಲಾ ಒಂದೊಂದು ಅವರದೇ ಆದ ಯೋಚನೆ ಇರುತ್ತದೆ. ಎಲ್ಲಾ ವಿಷಯಗಳನ್ನು ನಿನ್ನ ಒಬ್ಬಳ ದೃಷ್ಟಿಯಲ್ಲಿ ಯೋಚಿಸದಿರು. ನೀನು ಅವರ ಮನೆಯ ಮಗಳು, ಆ ಮನೆ ನಿನ್ನದೇ ಎಂದು ಭಾವಿಸು. ನಿನ್ನ ಅಪ್ಪಾ ಅಮ್ಮಂದಿರ, ಅಣ್ಣ ತಮ್ಮಂದಿರ ಪ್ರೀತಿ ನಿನ್ನಲ್ಲಿಯೇ ಇರಲಿ, ಆದರೆ ಅವರುಗಳನ್ನ ಕಟ್ಟಿಕೊಂಡು ಜಗಳಕ್ಕೆ ಇಳಿಯುವುದು, ನಿನ್ನ ನೆಮ್ಮದಿ ಹಾಗು ಗಂಡನ ನೆಮ್ಮದಿ ಹಾಳು ಮಾಡುವುದರಿಂದ ನಿನ್ನ ಜೀವನಕ್ಕೆ ಸಂಕಷ್ಟ ಬರುತ್ತದೆ, ಅದು ಸಲ್ಲದು. ನಾನು ನನ್ನ ಗಂಡನ ಜೊತೆ ಸುಖವಾಗಿ ಜೀವನ ಮಾಡಲು ಏನು ಮಾಡಬೇಕು, ಗಂಡ ನನ್ನಿಂದ ಯಾವ ವರ್ತನೆ ಬಯಸುತ್ತಾನೆ, ಅವನು ಅಂದುಕೊಂಡ ಹಾಗೆ ನಾನು ವರ್ತಿಸಿದರೆ ಖಂಡಿತ ಗಂಡನು ತನಗೆ ಒಳ್ಳೆಯವನಾಗಿಯೇ ಇರುತ್ತಾನೆ ಅನ್ನುವುದ ತಿಳಿ. ಹಾಗೆಯೇ ಅತ್ತೆಗೆ ತಕ್ಕ ಸೊಸೆ ಆಗಲು ಏನು ಮಾಡಬೇಕು, ನಿನ್ನ ಅತ್ತೆಯ ಅಭಿಲಾಷೆಗಳೇನು ಅವಳು ನಿನ್ನಲ್ಲಿ ಏನೇನು ಗುಣಗಳನ್ನು ಅಪೇಕ್ಷಿಸುತ್ತಾಳೆ, ಅದೇ ತರಹ ಅವಳೊಂದಿಗೆ ನಡೆದುಕೊಂಡರೆ ಅವಳ ಕಣ್ಣಿನಲ್ಲಿ ಒಳ್ಳೆಯ ಸೊಸೆ ಅನ್ನಿಸಿಕೊಳ್ಳಬಹುದು. ಹಾಗೆಯೇ ಮಾವನ ಕೂಡಾ ಸಹ. ಒಂದು ಸೊಸೆಯ ಸ್ಥಾನ ಮನೆಯಲ್ಲಿ ತುಂಬಾ ಅನರ್ಘ್ಯವಾದದ್ದು ಅದನ್ನು ನಂಬಿಕೆಯಿಂದ ಗಳಿಸಲು ಬಹಳಷ್ಟು ಶ್ರಮ ಪಡಬೇಕಾಗುತ್ತದೆ. ಹಾಗೆ ಇವುಗಳನ್ನು ಸಾಧಿಸಲು ಬರೀ ಒಂದು ಎರಡು ವರ್ಷಗಳು ಸಾಲುವುದಿಲ್ಲ. ನಿನಗೆ, ಈ ನಿನ್ನ ಸ್ನೇಹಿತನ ಮೇಲೆ ಗೌರವ ಇದ್ದರೆ ನಾನು ಹೇಳಿದ ಹಾಗೆ ಕೆಲ ದಿನ ಬಾಳಿ ನೋಡು, ಅದರ ಸಂತೋಷ ಸಂತೃಪ್ತಿಯನ್ನು ಅನುಭವಿಸಿ ನೋಡು ಆಗ ನಿನಗೇ ಅರ್ಥವಾಗುತ್ತದೆ. ಒಂದು ತಪ್ಪು ಹೆಜ್ಜೆ ಎಲ್ಲರ ಜೀವನವನ್ನು ಹಾಳು ಮಾಡಬಹುದು ಅದಕ್ಕೆ ಆತುರತೆಯಿಂದ ಜೀವನ ಹಾಳು ಮಾಡಿಕೊಳ್ಳುವುದು ಸಮಂಜಸವಲ್ಲ. ಇನ್ನೊಂದು ವಿಷಯ ನಿನ್ನ ಅಪ್ಪ ಅಮ್ಮಂದಿರು ನಿನ್ನ ಮದುವೆ ಮಾಡುವಾಗ ಬೆಟ್ಟದಷ್ಟು ಆಸೆಗಳ ಇಟ್ಟುಕೊಂಡು ಮದುವೆ ಮಾಡಿದ್ದಾರೆ, ನಿನ್ನ ಒಂದು ತಪ್ಪು ಹೆಜ್ಜೆ ಅವರ ಎಲ್ಲಾ ಕನಸ್ಸುಗಳನ್ನು ನುಚ್ಚುನೂರು ಮಾಡಬಹುದು. ನೀನು ತುಂಬಾ ಯೋಚನಾಶಿಲಳು ಹೌದು, ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡು ದಿಟ್ಟತನದಿಂದ ಮುಂದುವೆರೆ. ನನಗೆ ನಂಬಿಕೆ ಇದೆ, ನೀನು ನಿನ್ನ ಎಲ್ಲಾ ಸಮಸ್ಯೆಗಳಿಂದ ಹೊರ ಬಂದು ಒಂದು ಒಳ್ಳೆಯ ಜೀವನ ಪಡೆಯುತ್ತಿ ಅಂತಾ. ನನ್ನ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು, ಎಲ್ಲವನ್ನು ಅನುಷ್ಟಾನಕ್ಕೆ ತಂದು ನೋಡು ನಿನ್ನ ಜೀವನ ಸುಖಮಯವಾಗುತ್ತದೆ. 
ಮಧ್ಯಾಂತರ ವಿರಾಮ...................೬ ತಿಂಗಳುಗಳ ಬಳಿಕ ಇವರ ಭೇಟಿ.........!!
ಅವಳ ಮುಖದಲ್ಲಿ ಮಂದಹಾಸ......! ಅವಳ ಮುಖ ಭಾವಗಳು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿವೆ. ಬಹು ದಿನಗಳ ಬಳಿಕ ಸ್ನೇಹಿತರು ಮತ್ತೆ ಮಾತುಗಳಿಗೆ ಇಳಿಯುತ್ತಾರೆ. ಏನಮ್ಮಾ ನಿನ್ನ ಮುಖದಲ್ಲಿ ಕಳೆ ರಾರಾಜಿಸುತ್ತಿದೆ, ನಿನ್ನ ಗಂಡ, ಅತ್ತೆ ಮಾವಂದಿರು ಹೇಗಿದ್ದಾರೆ, ನಿಮ್ಮ ಅಪ್ಪ ಅಮ್ಮಂದಿರು, ಅಣ್ಣ ತಮ್ಮಂದಿರು ಎಲ್ಲರೂ ಹೇಗಿದ್ದಾರೆ ? ಹಾ...ಹಾ.....ಹೇಳಿತ್ತೆನೆ...ಎಲ್ಲಾರೂ ಚೊಲೊ ಇದ್ದಾರ. ನನ್ನ ಮನೆ ಇಂದು ನಂದಾನವನ, ನನ್ನ ಗಂಡ ನನ್ಗೆ ತುಂಬಾ ಪ್ರೀತಿ ಮಾಡುತ್ತಾನೆ, ನನ್ನ ಅತ್ತೆ ಅಲ್ಲ ಅವರು ನನ್ನ ಅಮ್ಮ, ಅವರ ಮಾತೃ ಛಾಯೆಯಲ್ಲಿ ನಾನು ಬೆಳಗುತ್ತಿದ್ದೇನೆ, ಮಾವ ಕೂಡಾ ನನ್ನ ತಂದೆಯ ಸ್ಥಾನದಲ್ಲಿ ಇದ್ದು ನನ್ನ ಸ್ವಂತ ಮಗಳ ಹಾಗೆ ನೋಡಿಕೊಳ್ಳುತ್ತಿದ್ದಾರೆ. ನನ್ನ ಅಪ್ಪಾ, ಅಮ್ಮಾ, ಅಣ್ಣಾ, ತಮ್ಮ ಎಲ್ಲರೂ ಮನೆಗೆ ಬಂದು ಹೋಗುತ್ತಾರೆ. ನನ್ನ ಮನೆಯೇ ಸ್ವರ್ಗ. ನನಗಿಂತಾ ಪುಣ್ಯವತಿ ಈ ಭೂಮಿ ಮೇಲೆ ಯಾರು ಇಲ್ಲಾ ಅಂತಾ ತನ್ನ ಸಂತೋಷವನ್ನು ಹಂಚಿಕೊಂಡಳು. ಈ ದೊಡ್ಡ ಪರಿವರ್ತನೆಗೆ ನಿನ್ನ ಸ್ನೇಹಮಯ ಮಾತುಗಳು, ನಿನ್ನ ಮಾರ್ಗ ದರ್ಶನ ಕಾರಣವಾಯಿತು. ಹೆಣ್ಣಿಗೆ ತಾಳ್ಮೆ, ಯೋಚನೆ ಮಾಡುವ ಒಂದು ಮನಸ್ಸು ಇದ್ದರೆ,ಜಗದಲ್ಲಿ ಯಾವುದನ್ನು ಸಾಧಿಸಬಹುದು ಎನ್ನುವ  ಧೈರ್ಯ ತುಂಬಿ ನನ್ನನ್ನು ಉಜ್ವಲ ಜೀವನದೆಡೆಗೆ ಸಾಗಲು ಬುದ್ದಿ ಮಾತುಗಳ ಹೇಳಿದ್ದಕ್ಕೆ ತುಂಬು ಹೃದಯದ ಧನ್ಯಾವಾದಗಳು. ನಿಮಗೆ ಒಂದು ಒಳ್ಳೆಯ ಸುದ್ದಿ ಹೇಳಬೇಕು......, ಹಾ....ಏನದು ಹೇಳು ಬೇಗ.....! ನಾನು ಈಗ ೪ ತಿಂಗಳು ಗರ್ಭಿಣಿ...! ಅವಳ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವಳ ಸಂತೋಷವ ಕಂಡು ಗೆಳೆಯನಿಗೂ ಸಂತೋಷವಾಯಿತು. ಕಥೆ ಸುಖವಾಗಿ ಅಂತ್ಯವಾದರೆ....ನಡೆಯುತ್ತದೆಯೇ......???? ಇದು ಒಂದು ಸಿನಿಮಾ ಕಥೆಯಾಗುತ್ತದೆ ಅಷ್ಟೇ.... ಅದಕ್ಕೆ ಕೊನೆಯಲ್ಲಿ ಒಂದು ಟ್ವಿಷ್ಟ್.......!!! ಆ ಸ್ನೇಹಿತನ ಜೀವನದಲ್ಲಿ  ಬಿರುಗಾಳಿ...! ಸಂಸಾರವೆಂಬ ಜೋಡು ಎತ್ತಿನ ಬಂಡಿಯಲ್ಲಿ ಅವನ ಮಡದಿಯಾಗಿ ಬಂದ ಹೆಣ್ಣು, ಮತ್ತೊಬ್ಬನ ಮೋಹ ಪಾಷಕ್ಕೆ ಸಿಲುಕಿ ಗಂಡನ ತೊರೆದು ಓಡಿ ಹೋಗಿರುತ್ತಾಳೆ....! :’(    ದುಃಖ ಬರಿತ ಟ್ವಿಶ್ಟಿಗೆ...ಕ್ಷಮೆ ಕೋರುತ್ತಾ.... " ಭಾವಪ್ರೀಯ " :)

2 comments:

Badarinath Palavalli said...

ಟ್ವಿಷ್ಟ್ ರೋಚಕವಾಗಿತ್ತು.

Sunil R Agadi (Bhavapriya) said...

ಇದು ನನ್ನ ಕಲ್ಪನೆ ಸರ್, ಆದರೆ ಇಂತಹ ಸನ್ನಿವೇಶಗಳು ಕೂಡಾ ಅನುಭವಿಸಿದವರು ಈ ಜಗತ್ತಿನಲ್ಲಿ ಇರಬಹುದು.May be...GOD Bless them. :)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...