Tuesday, April 02, 2013

ಸಂತಸ

ಬಿಸಿಲಿನ ಬೇಗೆಗೆ ಬೆಂದು ಹೋಗಿದ್ದ ಜನ


ಮಳೆಯ ಹನಿಗಳ ಕಂಡು ಹಿಗ್ಗಿತು ಮನ

ಭುವಿಗೆ ಹನಿ ಬಂದು ಚುಂಬಿಸಿದಕ್ಕೆ ಸಂತಸ

ಮನು ಕುಲಕ್ಕೆ ತಂಪೆರೆದಕ್ಕೆ ಸಂತಸ

ಕೆರೆಗೆ ಒಡಲು ತುಂಬಿದಕ್ಕೆ ಸಂತಸ

ಜಾನುವಾರುಗಳಿಗೆ ಹಸಿರು ಚಿಗಿಯುವುದಕ್ಕೆ ಸಂತಸ

ವನ್ಯ ರಾಷಿಗೆ ಬೆಳೆಯುವೆ ಎಂಬ ಸಂತಸ

ಮಳೆಯೇ ನೀ ಬಂದರೆ ಯಾರಿಗಿಲ್ಲ ಹೇಳು ಸಂತಸ...?

2 comments:

Badarinath Palavalli said...

ಮಳೆಯ ಬರುವನ್ನು ಸ್ವಾಗತಿಸಿದ ಈ ಪರಿ ನನಗೆ ಮೆಚ್ಚುಗೆಯಾಯಿತು. ಮಳೆಯೇ ಜೀವದನಿ. ಒಳ್ಳೆಯ ಕವನ ಮತ್ತು ಒಳ್ಳೆಯ ಭಾಷಾ ಪ್ರಯೋಗ.

Sunil R Agadi (Bhavapriya) said...

ಬದ್ರಿ ಸರ್ ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಮಳೆ ಅನ್ನುವ ಶಬ್ದವೇ ಮನಸ್ಸಿಗೆ ಸಂತೋಷ ಉಂಟು ಮಾಡುತ್ತದೆ, ನೆನ್ನೆ ಸಂಜೆ ಬಿದ್ದ ಮಳೆ ನನ್ನ ಮನೆಯ ಕಿಟಕಿಯಿಂದ ಚಿಮ್ಮುತ್ತಿತ್ತು ಅದನ್ನ ಕಂಡೊಡನೆ ಮೂಡಿದ ಸಾಲುಗಳು ಇವು.ನಿಮ್ಮ ಪ್ರೋತ್ಸಾಹ ಹಾಗು ಆಶಿರ್ವಾದ ಸದಾ ಬಯಸುತ್ತೇನೆ:)

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...