Thursday, February 28, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 9

(ಮುಂದೆ ಓದಿ......) ಮದುವೆಯ ಬಂಧನದಲ್ಲಿ ಕಾಲಿಡುವಾಗ ಯಙ್ಯದ ಮುಂದೆ ಪ್ರಮಾಣ ಮಾಡಿ ಇಬ್ಬರು ಸುಖ ದಃಖಗಳನ್ನು ಸಮಾನವಾಗಿ ಹಂಚುಕೊಂಡು ಬಾಳುತ್ತೇವೆ ಅಂದ ಮಾತುಗಳು ಇಲ್ಲಿ ಸುಳ್ಳಾಗಿದ್ದವು. ಮದುವೆಯಾದ ಮೇಲೆ ಅವನೇ ಸರ್ವಸ್ವ ಅಂತ ಇವಳು ಎಂದೆಂದಿಗೂ ತಿಳಿಯಲೇ ಇಲ್ಲ. ಮನೆ ಮಗಳು ಗಂಡನ ಬಿಟ್ಟು ತವರು ಮನೆಗೆ ಬಂದರೆ ಹೆಣ್ಣಿನ ಮನೆಕಡೆಯವರು ಸಾಮಾನ್ಯವಾಗಿ ಆತಂಕಕ್ಕೆ ಒಳಗಾಗುತ್ತಾರೆ. ತಕ್ಷಣವೆ ಏನು ಆಗಿದೆ..? ಯಾಕೆ ಮಗಳು ಹೇಳದೇ ಕೇಳದೇ ಗಂಡ ಮನೆಯಲ್ಲಿ ಇರದ ಸಮಯದಲ್ಲಿ ಎಲ್ಲ ಕಟ್ಟಿಕೊಂಡು ಬಂದಳು ಎಂದು ಎಲ್ಲರೂ ವಿಚಾರಿಸಬಹುದು., ಆದರೆ ಇವಳ ವಿಷಯದಲ್ಲಿ ಹೀಗೆ ಆಗಲೇ ಇಲ್ಲ. ಹೆಣ್ಣಿನ ಮನೆಕಡೆಯವರಾಗಲಿ,ಇಲ್ಲಾ ಅವಳ ತಾಯಿಯಾಗಲಿ, ಅಕ್ಕಂದಿರಾಗಲಿ ಒಂದು ಚಕಾರ ಮಾತು, ಪೊನು ಕೂಡಾ ಮಾಡುವುದಿಲ್ಲ. ಆದರೆ ಅವಳು ತಮ್ಮವರ ಮನೆಗೆ ಹೋಗಿರುವಳು ಅನ್ನುವುದು ಮಾತ್ರ ವಿಜಯನಿಗೆ ತಿಳಿಯಿತು. ಸರಿ ಮನಸ್ಸಿಗೆ ಬೇಸರವಾಗಿದೆ ಮನೆಗೆ ಹೋಗಿ ಬರಬಹುದು ಅನ್ನುವುದು ನಮ್ಮ ವಿಜಯನ ಕಲ್ಪನೆ...! ಆದರೆ ಅವನ ಆಶ್ಚರ್ಯಕ್ಕೆ ಅವಳು ತನ್ನ ಮನೆಯಿಂದ ಕಚೇರಿಗೆ ಬಂದು ಹೋಗುತ್ತಿರುತ್ತಾಳೆ..ಮನಸ್ಸಿಗೆ ಬೇಸರವಾದವಳು ಕಚೇರಿಗೆ ಹೋಗುವಷ್ಟು ಸರಿ ಇದ್ದಳೆ ? ಇಲ್ಲಾ ಕಚೇರಿಯಲ್ಲಿ ಅವಳಿಗೆ ಇಷ್ಟವಾದದ್ದು ಏನೋ ಇತ್ತೆ ? ಇದಕ್ಕೆ ಮುಂದೆ ಉತ್ತರ ದೊರೆಯುತ್ತೆ...! ಗಂಡನ ಜೊತೆ ಇವಳ ಮಾತು ಕಥೆಯಿಲ್ಲ, ಮನೆಯವರ್ಯಾರು ಅವಳ ಗಂಡನ ಜೊತೆ ಮಾತನಾಡಲಿಲ್ಲ. ಎರಡು ದಿನ ಸಂಪರ್ಕವಿಲ್ಲದೇ ಕಳೆದು ಮರಳಿ ಗಂಡನ ಮನೆಗೆ ಮರಳುತ್ತಾಳೆ. ಇವಳು ಯಾರ ಜೊತೆಗೆ ಹೋಗಿದ್ದಳು ? ಯಾರು ಇವಳಿಗೆ ತಂದು ಬಿಟ್ಟರು ? ಗಂಡನ ಮನೆ ಹೊಸ್ತಿಲ ದಾಟಿದ ಹೆಣ್ಣು ಮಗಳಿಗೆ ಎನಂತ ಕರೆಯುತ್ತಿರೊ ನೀವೆ ಹೇಳಬೇಕು..ಗಂಡ ಕಚೇರಿಯ ಕೆಲಸಕ್ಕಾಗಿ ಅಂದು ರಾತ್ರಿ ತಡವಾಗಿ ಮನೆಗೆ ಬರುತ್ತಾನೆ, ಹೆಂಡತಿಯ ಹತ್ತಿರ ಬೀಗದ ಕಿಲಿ ಇಲ್ಲಾ, ತನ್ನ ಒಬ್ಬ ಗೆಳತಿಯ ಸಹಾಯದಿಂದ ಮನೆ ಬಾಗಿಲು ಒಡೆಯಲು ಪ್ರಯತ್ನಿಸುತ್ತಾಳೆ, ಆಗುವುದಿಲ್ಲ ..! ಸರಿ ಗಂಡ ಬರುವವರೆಗೂ ಬಾಗಿಲಲ್ಲೇ ಕುಳಿತುಕೊಳ್ಳುತ್ತಾಳೆ. ಇವಳ ಮೈ ಪೂರ್ತಿ ಸುಡುತ್ತಿತ್ತು, ಮೈ ನಡುಗುತ್ತಿತ್ತು, ಕೊರೆವ ಚಳಿಯಲ್ಲಿ ಮನೆಮುಂದೆ ಕಾಯುತ್ತ ಕುಳಿತಿರುತ್ತಾಳೆ.ಗಂಡ ಮನೆಗೆ ಬಂದೊಡನೆ ಇವಳನ್ನು ನೋಡಿ.., ಹೇಳದೇ ಕೇಳದೇ ಹೊದವಳು ನೀನು ಒಬ್ಬಳೆ ಹೇಗೆ ಬಂದೆ ನನ್ನ ಮರ್ಯಾದಿಯ ಕಳೆದ ನಿನ್ನ ಮಾವ ಅಕ್ಕನ ಮನೆಗೆ ನೀನು ಹೋಗಬಾರದು ಅಂತಾ ಹೇಳಿದ್ದರು ನನ್ನ ಮರ್ಯಾದೆ ಕಳೆದು ಏಕೆ ಹೋದೆ ? ವಿಜಿ ನನ್ನ ಮೈಯಲ್ಲಿ ಹುಷಾರಿಲ್ಲ ನಿನ್ನ ಬಿಟ್ಟು ಇರಲು ಆಗಲಿಲ್ಲ ಅದಕ್ಕೆ ಬಂದೆ ಅಂದಳು. ಇವಳ ಮಾವ ಮಾಡಿದ ಕ್ರೂರ ಕೃತ್ಯಕ್ಕೆ ವಿಜಯನಿಗೆ ಅವನ ಮೇಲೆ ತುಂಬಾ ಕೋಪ ಬಂದಿತ್ತು..,ಅವನು ಏನೇ ಮಾಡಿದರೂ ಇವನು ಮರಿಯಬೇಕಂತೆ., ಗಂಡನ ಮರ್ಯಾದಿಗಿಂತ ಇವಳಿಗೆ ಅವಳ ಮಾವನ ಮರ್ಯಾದಿಯೇ ಹೆಚ್ಚು..!,ಹೇಗೆ ತಾನೆ ಸಹಿಸಬಲ್ಲ ಒಬ್ಬ ಗಂಡ.ಗಂಡನ ತಲೆಯಲ್ಲಿ ರೋಷ ತುಂಬಿರುತ್ತದೆ, ಹಾಲಿನಂತೆ ನಡೆಯುತ್ತಿದ್ದ ಸಂಸಾರದಲ್ಲಿ ಜಿದ್ದಿಬಾಯಿ ಹಾಗು ಅವಳ ತಮ್ಮ ಬೆಂಕಿ ಹಚ್ಚಿ ಮೊಜು ನೋಡುತ್ತಿರುತ್ತಾರೆ. ಅದಲ್ಲದೆ ಅದರ ಮೇಲೆ ತುಪ್ಪ ಕೂಡ ಸುರಿಯುತ್ತಿರುತ್ತಾರೆ. ವಿಜಯನಿಗೆ ಇದು ಇವಳ ಕೃತ್ಯವೋ ಅಥವಾ ಇವಳ ಮಾವ ಅಮ್ಮನ ಕ್ರೂರ ಕೃತ್ಯವೋ ತಿಳಿಯುವುದಿಲ್ಲ. ಮನೆಯಲ್ಲಿ ಬರಿ ಜಗಳಗಳು, ಮಾತು ಮಾತಿಗೆ ಜಗಳಗಳು ಕಾರಣ, ಇವಳ ತಾಯಿ ಮಾವ. ಇವರಿಬ್ಬರೂ ನವ ದಂಪತಿ ಪಾಲಿಗೆ ವೈರಿಗಳಾಗಿ ಪರಿಣಮಿಸುತ್ತಾರೆ. ಸರಿ ಮತ್ತೆ ಇವಳ ವಿಷಯಕ್ಕೆ ವಾಪಸ್ ಬರೋಣ, ರಾತ್ರಿ ಹೊತ್ತಿನಲ್ಲಿ ಅದು ೧೦೦ರ ಮೇಲೆ ಜ್ವರ ಇರುವ ಸಮಯದಲ್ಲಿ ನಿನ್ನ ಒಬ್ಬಳನ್ನೆ ಹೇಗೆ ಬಿಟ್ಟರು..? ಅಂದರೆ ನೀನು ಇದ್ದರೂ ಬಿಟ್ಟರೂ ಅವರಿಗೆ ಏನೂ ಆಗುವುದಿಲ್ಲ, ಆ ನಿನ್ನ ಮಾವ ಏಕೆ ನಿನ್ನ ಕರೆದುಕೊಂಡು ಬಂದು ಬಿಟ್ಟು ಹೋಗಲಿಲ್ಲ.? ನಿಮ್ಮ ಮನೆಯವರಿಗೆ ಯಾರಿಗೂ ನಿನ್ನ ಬಗ್ಗೆ ಚಿಂತೆ ಇಲ್ಲ ಅದಕ್ಕೆ ಈ ಪರೀಸ್ತಿತಿಯಲ್ಲಿ ಹೀಗೆ ಕಳಿಸಿದ್ದಾರೆ. ಅವಳು ಮನೆ ಒಳಗೆ ಬರಲು ಬಿಡು ನಾನು ಆಮೇಲೆ ಕರಿಸುತ್ತೆನೆ ಅಂತ ಮತ್ತೆ ಮೊಸದ ಮಾತು ಹೇಳಿ ಒಳ ಸೇರುತ್ತಾಳೆ. ಗಂಡನಿಗೆ ಇವಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ಇವರ ಮನೆಯವರಿಂದ ನೆಮ್ಮದಿ ಹಾಳಾಗಿರುತ್ತದೆ, ಅದರ ಸಂಬಂಧವಾಗಿ ಇವಳ ಕೂಡಾನು ಸರಿ ಮಾತನಾಡಿಸುತ್ತಿರುವುದಿಲ್ಲ..ತಾಳಲಾರದೆ ಹೇಳು ವಿಜಿ ನಾ ಏನು ಮಾಡಿದರೆ ನೀನು ಮತ್ತೆ ನನ್ನ ಜೊತೆ ನಗು ನಗುತ್ತಾ ಬಾಳುತಿ ಎಂದಿದ್ದಕ್ಕೆ., ಸರಿ ನಮ್ಮ ಮನೆಯ ಕಲಹಗಳಿಗೆ ನಿನ್ನ ಮಾವ ಹಾಗು ನಿನ್ನ ಅಮ್ಮ ಕಾರಣ ಅವರುಗಳು ಬಂದು ತಮ್ಮಿಂದ ತಪ್ಪಾಗಿದೆ ಎಂದು ಕೇಳಲಿ ಅಂತ ಹೇಳುತ್ತಾನೆ. ಹಂಗೆ ಅಂದ ಕೂಡಲೆ ಹೆಂಡತಿ ಕೂಡಾ ಪೊನು ಎತ್ತಿಕೊಂಡು ಮಾವನಿಗೆ ಕರೆ ಮಾಡಿ ನನ್ನ ಜೀವನ ಸರಿಹೋಗಬೇಕಾದರೆ ನೀವು ಬಂದು ನನ್ನ ಗಂಡನಿಗೆ ಕ್ಷಮೆ ಕೇಳಿ, ಇದರಿಂದ ನನ್ನ ಜೀವನ ಸುಧಾರಿಸುವುದು ಅಂದರೂ ಅವನು ಅದಕ್ಕೆ ಒಪ್ಪುವುದಿಲ್ಲ, ನಾನು ಯಾವುದೇ ಕಾರಣಕ್ಕೆ ನಿನ್ನ ಗಂಡನಿಗೆ ಕ್ಷಮೆ ಕೇಳುವುದಿಲ್ಲ ಅಂದು ಬಿಡುತ್ತಾನೆ. ಅಲ್ಲೆ ಇದ್ದ ಗಂಡನಿಗೆ ಮತ್ತಷ್ಟು ಕೋಪ ಬರುತ್ತದೆ. ಓದುಗರೆ ಯೋಚಿಸಿ, ಮಗಳ ಸಂಸಾರ ಸರಿ ಹೋಗುವುದು ಅಂದರೆ ಯಾವುದೆ ಮನೆಯವರು ಎನ್ ಬೇಕಾದರೂ ಮಾಡಲು ತಯ್ಯಾರಿರುತ್ತಾರೆ,ಆದರೆ ಈ ಹುಡುಗಿಯ ಮನೆಯವರು ಎಂತಹ ಲಜ್ಜಗೆಟ್ಟ ಜನವಿರಬಹುದು..? ತಾವು ಮಾಡಿದ ತಪ್ಪನ್ನು ತಪ್ಪು ಎಂದು ಒಪ್ಪಿಕೊಳ್ಳಲು ಕೂಡ ಇವರಿಗೆ ಇರುಸು ಮುರುಸು.ಇವಳ ಗಂಡನ ಮೇಲೆ ಸುಳ್ಳು ದೂರುಗಳು ನೀಡುವಾಗ ಎಲ್ಲಿಗೆ ಹೋಗಿತ್ತು ಇವರ ಬುದ್ದಿ ? ಮಗಳ ಗಂಡ ಅಳಿಯ ಅಂದರೆ ಅವನನ್ನ ಹೆಣ್ಣಿನ ಮನೆಯವರು ಮಗಳನ್ನ ಕೈ ಹಿಡಿದವ, ಕೊನೆವರೆಗೂ ಕಾಪಾಡುವವ ಅನ್ನುವ ಒಂದು ಮರ್ಯಾದೆ ಗೌರವ ಕೊಡಬೇಕಲ್ಲವೆ ? ಇವರಿಗೆ ಅಳಿಯ ಅಂದರೆ ಕಾಲ ಕಸ, ಅನ್ನುವ ದೃಷ್ಟಿಯಲ್ಲಿ ನೋಡಿದವರು ಇವರನ್ನು ವಿಜಯ ತಾನೆ ಹೇಗೆ ಸಹಿಸ್ಯಾನು.? ನಿನ್ನ ಮನೆಯವರು ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ ಅಂದರೆ.. ನಾನು ಈಗ ಏನು ಹೇಳುತ್ತೇನೆ ಹಾಗೆ ನೀನು ಕೇಳಬೇಕು., ಇನ್ನೂ ಮೇಲೆ ನಿನಗೆ ನನ್ನ ಬಿಟ್ಟು ಯಾರು ಇಲ್ಲ, ಅವರೆಲ್ಲರೂ ನಿನ್ನ ಪಾಲಿಗೆ ಮಡಿದರು.. ಅವರ ಹೆಸರನ್ನಾಗಲಿ ಅವರ ಮಾತುಗಳನ್ನಾಗಲಿ ನನ್ನ ಮನೆಯಲ್ಲಿ ಆಡಕೂಡದು ಎಂದು ತಾಕಿತ್ತು ಮಾಡುತ್ತಾನೆ. ಅದಕ್ಕೆ ಅಯ್ಯೊ ನನ್ನ ಮನೆಯವರಿಂದ ನನ್ನ ದೂರ ಮಾಡ ಬೇಡ ಅಂದು ಗೊಗರೆಯುತ್ತಾಳೆ. ಅಲ್ಲಿಗೆ ಅಂದಿನ ರಾತ್ರಿ ಜಗಳದಲ್ಲೆ ಮುಗಿಯುತ್ತದೆ. ಅದೇ ರಾತ್ರಿ ಇನ್ನೊಂದು ಸಣ್ಣ ಘಟನೆ ನಡೆಯುತ್ತದೆ..ಹೆಂಡತಿಗಷ್ಟೆ ಊಟ ಮಾಡಿಸಿ ಮಲಗಲು ಹಾಸಿಗೆ ಹಾಕಿ ಕೊಟ್ಟು ಮನ ಸರಿ ಇರದ ಕಾರಣ ತಾನು ಪಕ್ಕದ ರೂಮಿನಲ್ಲಿ ಹೋಗಿ ಮಲಗುತ್ತಾನೆ. ಕೆಲ ಸಮಯ ಕಳೆದಂತೆ ಅವಳ ರೂಮಿನಿಂದ ಅಳುವ ಹಾಗು ನಡುಗುವ ಶಬ್ದ ಕೇಳಿ ಬರಲು .., ಓಡಿ ಹೋಗುತ್ತಾನೆ., ಹೆಂಡತಿ ಚಳಿ ಜ್ವರದಿಂದ ನಡುಕ ಬಂದು ಅಳುತ್ತಾ ಒದ್ದಾಡುತ್ತಿರುತ್ತಾಳೆ., ತಕ್ಷಣ ಅವಳನ್ನ ತೋಳಲ್ಲಿ ಬಚ್ಚಿಟ್ಟು ಜೋರಾಗಿ ತಬ್ಬಿಕೊಳ್ಳುತ್ತಾನೆ ಅವಳ ಸ್ಠಿತಿ ಕಂಡು ಕಣ್ಣೀರುಡುತ್ತಾನೆ. ಆಗ ಸಮಯ ಎರಡು ಗಂಟೆ ,ರಾತ್ರಿ ಇವಳಿಗೆ ಎಲ್ಲಿ ಕರೆದು ಕೊಂಡು ಹೋಗಬೇಕು ಅನ್ನುತ್ತಾ ಮನೆಯಲ್ಲಿ ಜ್ವರಕ್ಕಾಗಿ ತಂದಿಟ್ಟ ಗುಳುಗೆಗಳು ನ್ಯಾಪಕಕ್ಕೆ ಬರುತ್ತವೆ, ಅವನ್ನ ತಂದು ಕೊಟ್ಟು ಹಾಲನ್ನು ಬಿಸಿ ಮಾಡಿ ಹೆಂಡತಿಗೆ ಕುಡಿಸುತ್ತಾನೆ, ಬಿಸಿ ಹಾಲನ್ನು ಕುಡಿಸಿದರೆ ಅವಳ ಚಳಿ ಸ್ವಲ್ಪ ಮಟ್ಟಿಗೆ ಕಡಿಮೆ ಆಗುವುದು ಅಂದುಕೊಂಡು.ಇಷ್ಟು ಕಲಹಗಳ ನಡುವೆ ಗಂಡ ತೋರಿಸಿದ ಈ ಸ್ವಭಾವಕ್ಕೆ ನೀವು ಏನೆಂದು ಹೇಳುತ್ತಿರಿ ??? ಇವನು ಅವಳನ್ನ ಯಾವ ತರಹ ಪ್ರೀತಿಸುತ್ತಿದ್ದ ಹಾಗು ಇವನ ಪ್ರೀತಿಯ ಆಳವನ್ನು ನೀವೇ ಉಹಿಸಬಹುದು. ಅವಳು ಅತ್ತರೆ ಇವನ ಕಣ್ಣಲ್ಲೂ ಸಹ ನೀರು ಬರುತ್ತಿತ್ತು..ಇಷ್ಟೊಂದು ಪ್ರೀತಿ ಇಟ್ಟುಕೊಂಡ ಗಂಡನ ತೊಳಲಾಟ ಹೆಂಡತಿಗೆ ತಿಳಿಯಲೇ ಇಲ್ಲವೆ ?

ಮದುವೆಯ ಜೀವನವೋ  …ಮೃತ್ಯುವಿನ ವಾಹನವೋ …..?

ಹೆಂಗ ಬಾಳಲೆವ್ವಾ ಇಕೀಕೂಡ 
ಗಂಡನ ಮ್ಯಾಲ ಅಭಿಮಾನ ಇಲ್ಲದಕಿಕೂಡ 
ತನ್ನ ಒಡೆಯನ ಮರ್ಯಾದೆ ಕಳೆದಕಿಕೂಡ 
ತನ್ನ ಗರ್ವದಲ್ಲಿ ಮರೆಯುವವಳ ಕೂಡ !

ಸುಳ್ಳು ಕಂತೆಗಳ ಸರಮಾಲೆ ಇವಳ ಬಳಗ 
ಹಾವು ನಾಲಿಗೆ ಹೊತ್ತ ಇವರವ್ರ 
ಕ್ಷಣ ಕ್ಷಣಕೆ ಬದಲಾಗುವ ಊಸ್ರವಳ್ಳಿ ಇವರ..
ನಂಬಿ ಕೆಟ್ಟೆನಲ್ಲೋ  ಶಿವ , ಶಂಬೋ ಹರ ಹರ ..!

ಮದುವೆಯ ಕನಸ್ಸು ನುಚ್ಚು ನೂರಾಯ್ತು 
ಅದರ ಸೊಗಸು ಮಣ್ಣಲ್ಲಿ ಮುಚ್ಚಿ ಮರೆಯಾಯಿತು 
ನೆಮ್ಮದಿ ಇಲ್ಲದೇ ಜೀವನ ಕದಡಿ ಹೋಯಿತು 
ಥೂ ...ಏನು ಮದುವೆಯ ಜೀವನವೋ ...
ಇಲ್ಲವೇ ಇದು ಮೃತ್ಯುವಿನ ವಾಹನವೋ..?

  (......ಮುಂದೆ ಏನಾಗುವುದು ಕಾದು ನೋಡಿ....)

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...