Monday, February 25, 2013

ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 6


ಗಂಡ ಹೆಂಡಿರ ಜಗಳ ಉಂಡು ಮಲಗುವತನಕ ಅನ್ನುವಹಾಗೆ ಹೀಗೆ ಸ್ವಲ್ಪ ಸಿಹಿ ಹೀಗೆ ಸ್ವಲ್ಪ ಕಹಿಗಳಿಂದ ಕೂಡಿದ ಜೀವನ ಸಾಗತೊಡಗಿತು. ವಿಜಯನ ಹೆಂಡತಿಗೆ ಮೊಬೈಲಿನಲ್ಲಿ ಮಾತಡುವುದು ಹಾಗು ಯಾವಾಗಲೂ ಎಸೆಮೆಸ್ ಮಾಡುವ ಚಟ. ಎಷ್ಟೋ ಸಾರಿ ಗಂಡನ ಜೊತೆಯಲ್ಲಿ ಇದ್ದಾಗಲೇ ಕದ್ದು ಮುಚ್ಚಿ ಮೆಸೆಜು ಮಾಡುವುದು ಕೇಳಿದರೆ ನನ್ನ ತಂಗಿ ಅಥವಾ ಯಾವುದೋ ದೂರದ ಊರಿನ ಗೆಳತಿ ಅಂತ ಹೇಳಿ ಮಾತು ಹಾರಿಸುತ್ತಿದ್ದಳು.ಗಂಡ ಪಾಪ ಹೋಗ್ಲಿ ಬಿಡು ಏನೋ ಗೆಳತಿಯರ ನಡುವೆ ಸಂಭಾಷಣೆ ಇರಬಹುದು ಅಂತ ತಲೆ ಕೆಡಿಸಿಕೊಳ್ಳಲು ಹೋಗಿರುವುದಿಲ್ಲ.ವೀಪರೀತ ಅನ್ನಿಸಿದಾಗಲ್ಲೆಲ್ಲಾ ನೋಡು ನೀನು ಈಗ ಗೃಹಿಣಿ ರಾತ್ರೊರಾತ್ರಿ ಗೆಳೆಯರೊಡನೆ ಚಾಟ್ ಮಾಡುವುದು ಸರಿಯಲ್ಲಾ ಅಂತ ಹೇಳಿದ. ಆದರೂ ತಿಳಿದುಕೊಳ್ಳದ ಈಕೆ ತನ್ನ ಕಾಯಕವನ್ನು ಹಾಗೆಯೆ ಮುಂದುವರೆಸುತ್ತಾಳೆ. ಹಾಗೆಯೆ ಸಣ್ಣ ಪುಟ್ಟ ಜಗಳ ಬಂದಾಗ ನನಗೆ ನಿನ್ನ ಊರು ಇಷ್ಟವಿಲ್ಲ ಅಲ್ಲಿಯ ಜನರು ಸರಿ ಇಲ್ಲ ಅಂತ ಕುಹಕು ನುಡುಯುತ್ತಿರುತ್ತಾಳೆ. ಯಾರೇ ಆಗಲಿ ತಮ್ಮ ಊರಿಗೆ, ಊರ ಜನರಿಗೆ ಬೈದೊಡನೆ ಸಿಟ್ಟು ಬರುವುದು ಸರ್ವೇ ಸಾಮಾನ್ಯ., ಅದರಲ್ಲೂ ಇಕೆ ಕೂಡಾ ಆ ಊರಿನಲ್ಲೇ ವಿದ್ಯಾಭ್ಯಾಸ ಮಾಡಿ ಪದವಿ ಪಡೆದಿರುತ್ತಾಳೆ. ನಾವು ಯಾವುದೇ ಊರಿನಲ್ಲಿ ಬೆಳೆದಿರಲಿ, ಓದಿರಲಿ, ಅದರ ಬಗ್ಗೆ ಯಾರಾದರೂ ತೆಗಳಿ ಮಾತನಾಡಿದರೆ ರೋಷ ಬರುವುದು ನಿಷ್ಚಿತ.ನೋಡೆ ಪ್ರೀಯೆ ನೀನು ಎಣ್ಣೆ ಪದಾರ್ಥಗಳು ಹೆಚ್ಚು ತಿನ್ನಬೇಡ ನಿನ್ನ ಆರೋಗ್ಯದ ಮೇಲೆ ಕೆಟ್ಟು ಪರಿಣಾಮ ಬೀರುತ್ತದೆ ಆಮೇಲೆ ಕಷ್ಟಪಡುವುದಕಿಂತ ಈಗಲೇ ಎಚ್ಚೆದ್ದುಕೊಳ್ಳುವುದು ಲೇಸು ಅಂತ ಬುದ್ದಿವಾದ ಹೇಳುತ್ತಿದ್ದ.ಸರಿ ಏನೋ ಹೇಳುತ್ತಾ ಎಲ್ಲಿಗೋ ಹೋಗಿ ಬಿಟ್ಟೆ...,ಇವಳ ವಹಿವಾಟುಗಳು ಹಾಗು ಮೊಬೈಲಿನಲ್ಲಿ ನಡೆಯುತ್ತಿರುವ ಕಥೆಗಳಾದರು ಏನು ಅಂತ ತಿಳಿದುಕೊಳ್ಳಲು ವಿಜಯ ಒಂದು ಬಾರಿ ಅವಳ ಮೊಬೈಲನ್ನು ಕೈಗೆ ಎತ್ತಿಕೊಳ್ಳುತ್ತಾನೆ, ಅದಕ್ಕೆ ಅವಳು ತಕ್ಷಣ ಮೈಮೇಲೆ ಎರೆಗಿ "ಹೌ ಡೇರ್ ಯೂ ಟಚ್ ಮೈ ಮೊಬೈಲ್ , ನನ್ನ ಪರ್ಸನಲ್ ಥಿಂಗಸ್ ನೋಡಲಿಕ್ಕೆ ನಿನಗೆ ಏನ್ ಅಧಿಕಾರವಿದೆ ಎಂದು ಗದರಿಸುತ್ತಾಳೆ " ಗಂಡ ಹೆಂಡಿರ ನಡುವೆ ಯಾವುದೇ ತರಹದ ಅನುಮಾನಗಳು ಇರಬಾರದು ಆದರೇ ಇಲ್ಲಿ ನಡೆಯುವ ಸನ್ನಿವೇಶ ಅವಳ ಮೇಲೆ ಸಂಶಯ ಪಡುವ ಹಾಗೆ ಮಾಡುತ್ತದೆ.
ಹೀಗೆ ವಿಜಯನ ಹೆಂಡತಿ ಅನುಮಾನದ ಸುಳಿ ಹುಟ್ಟು ಹಾಕುತ್ತಾಳೆ. ವಿಜಯನಿಗೆ ಏನು ನಡೆಯುತ್ತಿರಬಹುದು ಎಂಬುದು ತಿಳಿಯುವುದೇ ಇಲ್ಲ. ಮತ್ತೆ ಅವಳನ್ನು ಮನ್ನಿಸಿ ಸುಮ್ಮನಾಗುತ್ತಾನೆ. ಕೆಲವು ದಿನಗಳು ಕಳೆದಂತೆ, ದಂಪತಿಗಳು ಶನಿವಾರದಂದು ದೇವಸ್ಥಾನಕ್ಕೆ ಹೋಗಿ ಬರೋಣವೆಂದು ಹೊರಡುತ್ತಾರೆ. ದೇವಸ್ಥಾನದ ಗೇಟು ಹತ್ತಿರ ಚಪ್ಪಲಿ ಕಳಚಿ ಮುನ್ನಡಿಯಬೇಕು ಒಬ್ಬ ಯುವಕ ವಿಜಯನ ಹೆಂಡತಿಯನ್ನು ಕೂಗುತ್ತಾನೆ, ಗಂಡನು ಪಕ್ಕದಲ್ಲೆ ಇದ್ದಾಗಲೇ ಇಂತಹ ಒಂದು ಪ್ರಸಂಗ. ಹೆಂಡತಿ ಕೇಳಿಸಿಕೊಂಡರೂ ಕೇಳಿಸಿಯೇ ಇಲ್ಲ ಅನ್ನುವ ಹಾಗೆ ಬೇಗ ಬೇಗ ಗಂಡನನ್ನು ಬಿಟ್ಟು ಮುಂದೆ ಓಡಲು ಅಣಿಯಾಗುತ್ತಾಳೆ. ಆ ಯುವಕ ಬಿಟ್ಟು ಬಿಡೆದೆನೇ ಇವಳನ್ನು ಕೂಗುತ್ತಲೆ ಹಿಂಬಾಲಿಸುತ್ತಾನೆ. ಗಂಡನಿಗೆ ಎನು ವಿಷಯವೆಂಬುದು ತಿಳಿಯುವುದೇ ಇಲ್ಲ. ಅವಳು ಆ ಯುವಕನ ಕರೆಗೆ ಗಮನಕೊಡದಂತೆ ಮಾಡಿದ್ದಕ್ಕೆ ಆ ಯುವಕ ದೇವಸ್ಥಾನದ ಹೊರಾಂಗಣದಲ್ಲಿ ಬಂದು ಕಾಯುತ್ತಾ ಕುಳಿತುಕೊಳ್ಳುತ್ತಾನೆ.ದಂಪತಿಗಳು ಇಬ್ಬರು ಸೇರಿ ದರುಶನ ಪಡೆದು ಹೊರ ಬರುತ್ತಾರೆ.ಇಲ್ಲಿಯ ತನಕ ಗಂಡ ಮೂಕ ಪ್ರೇಕ್ಷಕನಾಗಿ ನೋಡುತ್ತಿರುತ್ತಾನೆ. ಮತ್ತೆ ಆ ಯುವಕ ಇವಳನ್ನ ಕರೆಯುವ ಮುನ್ನ ಇವಳು ಗಂಡನ ತೊಳಿನಲ್ಲಿ ಅವಿತು ನಡೆದು ಬಿಡುತ್ತಾಳೆ. ಇಲ್ಲಿಯವರೆಗೂ ಸುಮ್ಮನಿದ್ದ ಗಂಡ ಯಾರದು ನಿನ್ನ ಹಿಂಬಾಲಿಸುತ್ತಿದ್ದವ....ಅದಕ್ಕೆ ಅವಳು ಅರೆ ಯಾರು..? ನನಗೆ ಯಾರು ಕಾಣಲಿಲ್ಲವಲ್ಲ ಅಂತ ಮಾತು ಹಾರಿಸುತ್ತಾಳೆ..,ಗಂಡ ಅವನು ನಿನ್ನ ಹೆಸರನ್ನೆ ಕೂಗುತ್ತಾ ನಿನ್ನನ್ನೆ ಹಿಂಬಾಲಿಸುತಿದ್ದ ಅಂದ....ಓಹೋ ಅವನೆ...! ಅವನು ನಮ್ಮ ಕಚೇರಿಯ ಹುಡುಗ ಹೊಸತಾಗಿ ಸೇರಿಕಂಡಿದ್ದಾನೆ, ಹಾಗಿದ್ದರೆ ನೀನು ಅವನನ್ನ ಏಕೆ ಪರಿಚಯ ಮಾಡಿಕೊಡಲಿಲ್ಲ..? ಇದಕ್ಕೆ ಬರಿ ಮೌನ....!! ಮೌನ....(ಏನೋ ಇರಬಹುದು ಇವರ ಮದ್ಯೆ ಅನ್ನುವ ಅನುಮಾನಕ್ಕೆ ಅಡಿಪಾಯ ಅಲ್ಲವೇ..?) ಹೋಗಲಿ ಬಿಡಿ..., ನಮ್ಮ ವಿಜಯನಿಗೆ ಏನೂ ಅನಿಸಲಿಲ್ಲಾ...ಮುಗ್ಧ ವಿಜಯ..!! ಎರಡು ದಿನಗಳು ಕಳೆಯುತ್ತವೆ....ವಿಜಯ ಕಚೇರಿಯ ಕೆಲಸದಲ್ಲಿ ತಲ್ಲೀನನಾಗಿರುತ್ತಾನೆ...ಪೊನು ರಿಂಗಾಯಿಸುತ್ತದೆ....ಹೆಲೋ ......ಹೆಂಡತಿಯ ಕರೆ, ನಮ್ಮ ಕಚೇರಿಯಲ್ಲಿ ಒಬ್ಬರ ಪಾರ್ಟಿ ಇದೆ ನಾನು ಹೋಗಿ ಬರಲೆ...? ಎಂದು ಕೇಳುತ್ತಾಳೆ. ಏನು ಪಾರ್ಟಿ..? ಅಂತ ವಿಚಾರಿಸಿದಾಗ ನಮ್ಮ ಮ್ಯಾನೇಜರ್ ಅವರದು ಹುಟ್ಟು ಹಬ್ಬ ಅದಕ್ಕೆ ಅವರು ನನಗೆ ಹಾಗು ನನ್ನ ಗೆಳತಿಯರಿಗೆ ಪಾರ್ಟಿ ಕೊಡುತ್ತಿದ್ದಾರೆ....ಸರಿ ಹೋಗಿ ಬಾ ಆದರೆ ತಡ ಮಾಡಬೇಡ ಅಂತ ಹೇಳಿ ಪೊನು ಇಡುತ್ತಾನೆ. ಸರಿ ಮನೆಗೆ ಬಂದೊಡನೆ ಪಾರ್ಟಿಯ ವಿಚಾರ..ಅವರು ಅದನ್ನ ಕೊಡಿಸಿದರು ಇದನ್ನ ಆರ್ಡರ್ ಮಾಡಿದ್ದ್ವಿ ಅಂತೆಲ್ಲಾ ಮಾತು ಮಾತಿನಲ್ಲಿ ತಿಳಿದಿದ್ದು ಏನೆಂದರೆ ಒಬ್ಬ ಗೆಳತಿಗೆ ಕೆಲಸ ಬಹಳ ಇತ್ತು ಅಂತ ಬರಲಿಲ್ಲ, ಒಬ್ಬಳಿಗೆ ಮೈ ಹುಷಾರು ಇರಲಿಲ್ಲ ಅವಳು ಅರ್ಧದಲ್ಲೆ ಮನೆಗೆ ತೆರಳಿದಳು..., ಅದಕ್ಕೆ ಸುಮ್ಮನೆ ಟೆಬಲ್ ಬುಕ್ಕ ಮಾಡಿದ್ವಿ ಅಲ್ಲಾ ಅದಕ್ಕೆ ನಾವಿಬ್ಬರೇ ಹೋಗಿ ಬಂದ್ವಿ ಅಂದಳು...! ( ಈ ಮಾತುಗಳನ್ನ ಕೇಳುತ್ತಿದ್ದರೆ ಇದು ಪೂರ್ವ ನಿಯೋಜಿತ ಪ್ಲಾನು ಅನ್ನಿಸುವುದಿಲ್ಲವೆ ಗೆಳೆಯರೆ.. ? ) ಹೋಗ್ಲಿ ಏನೇ ಇರಲಿ ವಿಜಯನಿಗೆ ತನ್ನ ಹೆಂಡತಿಯ ಮೇಲೆ ನಂಬಿಕೆ ಆಷ್ಟೇ ಅದಕ್ಕೆ ಮತ್ತೆ ಮಾತನಾಡದೇ ಸುಮ್ನನಾಗುತ್ತಾನೆ. ಒಂದು ವಿಷಯ ಹೇಳಬೇಕೆಂದರೆ ಮದುವೆ ಆದ ಹೆಂಡಂದಿರು ಗಂಡನ ನಂಬಿಕೆಯನ್ನು ಉಳಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು ಹಾಗೆ ಗಂಡ ಇಟ್ಟ ನಂಬಿಕೆಯನ್ನು ಎಂದಿಗೂ ಹುಸಿಕೊಳಿಸಬಾರದು. ಹೀಗೆ ತಿಂಗಳಿಗೆ ಒಂದು ಪಾರ್ಟಿ, ಸಮೂಹ ಊಟ ನಡೆಯುತ್ತಲೇ ಇರುತ್ತವೆ. ತಿಂಗಳು ಕಳೆದಂತೆ ಏಕೋ ಏನೋ ಹೆಂಡತಿ ಮನೆಯ ಕಡೆ ಹಾಗು ಗಂಡನ ಕಡೆ ಗಮನ ಕೊಡುತ್ತಿಲ್ಲ, ಸದಾ ಕಾಲ ಮೊಬೈಲು ಗೆಳೆಯರು ಅಂತಾನೇ ಬಹಳ ಕಾಲ ಕಳೆಯುತ್ತಿದ್ದಾಳೆ. ಎಲ್ಲೋ ಜೀವನ ಹಾದಿ ತಪ್ಪುತ್ತಿದೆ ಅನ್ನಿಸಲಾರಂಬಿಸಿತು ವಿಜಯನಿಗೆ. ಆಷ್ಟರಲ್ಲಿ ಹೆಂಡತಿಯ ಕಚೇರಿಯ ಅನ್ಯುವಲ್ ಕಾರ್ಯಕ್ರಮ ಬರುತ್ತದೆ.ಅಂದು ಶನಿವಾರ..., ಎಂದಿಗಿಂತಲೂ ಬೇಗನೇ ಎದ್ದು ತಯ್ಯರಾಗುತ್ತಾಳೆ. ಗಂಡನಿಗೆ ಆಶ್ಚರ್ಯ...ಯಾವಾಗಲೂ ಶನಿವಾರದಂದು ಮಲಗಲು ಬಿಡ್ರಿ ಅಂತ ೮ -೯ ಗಂಟೆವರೆಗೂ ಮಲಗಿಕೊಳ್ಳುವ ಈಕೆ ಇಂದು ಇಷ್ಟು ಬೇಗ ಎದ್ದು ಎಲ್ಲಿಗೆ ಹೊರಟಿದ್ದಾಳೆ ಎಂಬ ಪ್ರಶ್ನೆ...ಕೇಳಿಯೇ ಬಿಟ್ಟ. ಅದಕ್ಕೆ ಅವಳು ನನ್ನ ಕಚೇರಿಯ ಕಾರ್ಯಕ್ರಮ ಇದೆ ಅದಕ್ಕೆ ನಾನು ಹೋಗುತ್ತಿದ್ದೆನೆ ಅಂದಳು.... ಹೌದು ಈ ವಿಷಯವನ್ನು ನೀನು ಮಂಚೆನೆ ನನ್ಗೆ ಏಕೆ ಹೇಳಲಿಲ್ಲ...ಎಂಬ ಪ್ರಶ್ನೆಗೆ ಉತ್ತರಿಸುತ್ತ.., ನೀನು  ಬರುವುದಿಲ್ಲ ಅದಕ್ಕೆ ಕೇಳಲಿಲ್ಲ ಅಂದಳು.... , ವಿಜಯನಿಗೆ ಎನೂ ಅರ್ಥವಾಗಲಿಲ್ಲ. ಕಚೇರಿಯ ಫ್ಯಾಮಲಿ ಕಾರ್ಯಕ್ರಮ ತನ್ನ ಕಚೇರಿಯಲ್ಲಿ ನಡೆದರೂ ಎಲ್ಲರೂ ತಮ್ಮ ಕುಟುಂಬದೊಂದಿಗೆ ಬರುತ್ತಾರೆ ಅಂತಹದುದರಲ್ಲಿ ಇವಳಿಗೆ ಗಂಡ ಬರುವುದು ಬೇಡವಾಗಿತ್ತು. ಸರಿ ಹೋಗಲಿ ಬಿಡು ಎಂದ ಗಂಡ ಕಳಿಸಿಕೊಟ್ಟ....! ರಾತ್ರಿ ೮.೩೦ ಗಂಟೆ ಆಗುತ್ತದೆ ಊಟ ಅಲ್ಲಿಯೆ ಮುಗಿಸಿ ಬರುತ್ತೆನೆ ಅಂದವಳು ಹಾಗೆಯೆ ಬಂದಿರುತ್ತಾಳೆ, ಕಾರ್ಯಕ್ರಮದ ಬಗ್ಗೆ ಒಂದು ಚಕಾರ ಶಬ್ದ ಕೂಡ ಮಾತನಾಡುವುದಿಲ್ಲ. ಕಳ್ಳ ಬೆಕ್ಕಿನಂತೆ ರೂಮು ಹೊಕ್ಕು ಬಟ್ಟೆ ಬದಲಾಯಿಸಿ   ಇದ್ದುದ್ದನ್ನು ತಿಂದು ಮಲಗುತ್ತಾಳೆ. ಗಂಡ ಇವಳನ್ನು ಸೌಮ್ಯವಾಗಿ ಗಮನಿಸುತ್ತಾನೆ.., ಹೋದಲ್ಲಿ ಏನೋ ಆಗಿದೆ...ಇವಳ ಮುಖದಲ್ಲಿ ಅಳಕು ಇದೆ.. ಗಂಡನಿಗೆ ಮುಖ ಕೊಟ್ಟು ಮಾತನಾಡುತ್ತಿಲ್ಲ..ಏನು ಕೇಳಿದರು ಏನೂ ಹೇಳುವುದಿಲ್ಲ..ಮಾರನೆ ದಿನ ಗಂಡನಿಗೆ ಹೇಳುತ್ತಾಳೆ ನೆನ್ನೆ ಎಲ್ಲರೂ ಗಂಡನನ್ನು ಏಕೆ ಕರೆ ತರಲಿಲ್ಲ ಎಂದು ಪ್ರಶ್ನಿಸಿರುತ್ತಾರೆ..! ಗಂಡನ ಕರೆಯದೇ ಹೋಗಿ ಮತ್ತೆ ಗಂಡನಿಗೆ ಇಷ್ಟವಿಲ್ಲ ಅಂತ ಹೇಳುವ ಹೆಂಡಂದಿರು ಎಷ್ಟು ಜನ ಕಾಣುತ್ತಾರೆ ನಾ ಅರಿಯೆ..!
ವಿಜಯನ ಆತಂಕ, ದುಗುಡಕ್ಕೆ ಇತಿ ಮಿತಿ ಇರಲಿಲ್ಲ....ಎಲ್ಲೋ ಹೆಂಡತಿ ಹಾದಿ ತಪ್ಪುತ್ತಿದ್ದಾಳೆ ಅಂತ ಅನಿಸಿದರೂ, ಅವಳು ನನ ಪ್ರೀತಿಯ ಹೆಂಡತಿ ಅವಳ ಮೇಲೆ ಸಂಶಯ ಪಡುವುದು ಸರಿಯಲ್ಲ ಅನ್ನುವುದು ಅವನ ಭಾವನೆ. ವಿಜಯನ ತಾಳ್ಮೆ ಪರೀಕ್ಷೆ ನಡೆಯುತ್ತಿದೆ ಎಂಬಂತೆ ಹೆಂಡತಿಯ ಮನೆಯವರಿಂದ ಮತ್ತೋಂದು ಘಟನೆ ನಡಿದೇ ಬಿಡುತ್ತದೆ. ಹುಡುಗಿಯ ತಾಯಿ ಮನೆಯವರು ವಿಜಯನ ಸಂಬಂಧಿಕರ ಮನೆಗೆ ತೆರಳಿ ವಿಜಯ ತುಂಬಾ ಕೆಟ್ಟದಾಗಿ ನಡೆದುಕೊಳ್ಳುತ್ತಾನೆ ಅವಳ ಮಗಳಿಗೆ ಚಿಪ್ಸು, ಹಪ್ಪಳ, ಚೊಚೊಲೇಟು ತಿನ್ನಲು ಬಿಡುವುದಿಲ್ಲ ನನ್ನ ಮಗಳಿಗೆ ತುಂಬ ಹಿಂಸೆ ಆಗುತ್ತದೆ, ಗೆಳೆಯರೊಡನೆ ಪೊನಿನಲ್ಲಿ ಮಾತನಾಡಲು ಬಿಡುವುದಿಲ್ಲ ಅಂತೆಲ್ಲಾ ಕಟ್ಟು ಕಥೆಗಳನ್ನು ಪೋಣಿಸಿ ಹೇಳುತ್ತಾರೆ. ಇತ್ತ ಏನೂ ಅರಿಯದ  ವಿಜಯನಿಗೆ ಹೀಗಂದು ಸಂಗತಿ ನಡೆದಿದೆ ಅನ್ನುವುದೇ ತಿಳಿದಿರುವುದಿಲ್ಲ...! ಎಂತಹ ಕ್ಷುಲ್ಲಕ ಇರಬೇಕು ಜಿದ್ದಾಬಾಯಿ...ಇಲ್ಲಿ ಇವಳ ಕೆಟ್ಟು ಕಾರ್ಯಗಳು ಪ್ರರಂಭಗೊಳ್ಳುತ್ತವೆ. ವಿಜಯನನ್ನು ಸಣ್ಣಂದಿನಿಂದ ನೋಡಿದ ಸಂಬಂಧಿಕರು ನಮ್ಮ ಹುಡುಗ ಹೇಗೆ ಇರುವನು ಅನ್ನುವುದು ನಮಗೆ ತಿಳಿದಿದೆ. ಅವನ ಬಗ್ಗೆ ನಮ್ಗೆ ನಿಮಗಿಂತ ಹೆಚ್ಚು ಗೊತ್ತು. ಅವನು ಹೇಳಿದ್ದುದರಲ್ಲಿಎನೂ ತಪ್ಪು ಇಲ್ಲಾ, ಎಣ್ಣೇ ಪದಾರ್ಥಗಳನ್ನು ನಾವು ತಿನ್ನಬಾರದು ಅಂತ ನಮ್ಮ ಮಕ್ಕಳಿಗೂ ಕೂಡಾ ಹೇಳುತ್ತೆವೆ ಅದಕ್ಕೆ ನೀವು ಹೀಗೆ ಗುಂಪು ಕಟ್ಟಿಕೊಂಡು ಅಳಿಯನ ಬಗ್ಗೆ ದೂರು ನೀಡಲು ಬಂದಿರುವುದು ಸರಿಯಲ್ಲ. ಅಲ್ಲಿ ಏನು ನಡೆದಿದೆ ಅನ್ನುವುದು ತಿಳಿದುಕೊಂಡು ನಾವು ಇಬ್ಬರಿಗೂ ಬುದ್ದಿವಾದ ಹೇಳುತ್ತೇವೆ ಅಂತ ಹೇಳಿ ಕಳಿಸುತ್ತಾರೆ. ವಿಜಯನ ಸಂಬಂಧಿಕರು ವಿಜಯ ಹಾಗು ಅವನ ಹೆಂಡತಿಗೆ ಊಟಕ್ಕೆ ಆವ್ಹಾನಿಸುತ್ತಾರೆ..,ಸಂಬಂಧಿಕರ ಕರೆಹಗೆ ಓಗೊಟ್ಟು ವಿಜಯ ಹೆಂಡತಿಯೊಡನೆ ಅವರ ಮನೆಗೆ ತೆರಳುತ್ತಾನೆ... ( ಮುಂದುವರೆಯುವುದು.........)

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...