ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 5


(ವಿಜಯನ ವೈವಾಹಿಕ ಜೀವನದ ಮುಂದಿನ ಭಾಗ...)

ಹೆಂಡತಿಯ ಮೇಲಿನ ಪ್ರೀತಿಯಿಂದ, ಅವಳ ಅನುಕೂಲಕ್ಕಾಗಿ ವಿಜಯ ರಾಜಧಾನಿಯಲ್ಲಿ ಮಡದಿ ಕಚೇರಿಗೆ ಹತ್ತಿರವಾಗುವಂತೆ ಬಾಡಿಗೆ ಮನೆ ಮಾಡುತ್ತಾನೆ.ಮನೆ ಎಷ್ಟು ಹತ್ತಿರವಿತ್ತೆಂದರೆ ನಡೆದು ಹೋದರು ಸಹ ೫ ನಿಮಿಷಗಳಲ್ಲಿ ಕಚೇರಿ ತಲುಪಬಹುದಾಗಿತ್ತು. ವಿಜಯನು ಯಾವಾಗಲೂ ಹಸನ್ ಮುಖಿ ವ್ಯಕ್ತಿ.ಹೆಂಡತಿಯೊಡನೆ ಸದಾ ತಮಾಷೆ ಮಾಡುತ್ತ ಅವಳನ್ನ ನಗಿಸುತ್ತಾ ಸಂತೋಷದಿಂದ ಕಾಲ ಕಳೆಯುತ್ತಿದ್ದ.ಹೀಗೆಯೆ ಒಂದು ದಿನ ಯಾವುದೋ ಕ್ಷುಲ್ಲಕ ಕಾರಣಕ್ಕೆ ಗಂಡನು ಹೆಂಡತಿಗೆ ಜೋರು ಮಾಡುತ್ತಾನೆ, ಅದಕ್ಕೆ ಪ್ರತಿಯಾಗಿ  "ನನಗೆ ನಿನ್ನ ಕೂಡ ಬಾಳಲು ಇಷ್ಟವಿಲ್ಲ ನನ್ನನ್ನು ಮನೆಗೆ ಕಳಿಸಿಕೊಡು" ಎಂದು ಬಿಡುತ್ತಾಳೆ..!! ವಿಜಯನಿಗೆ ಈ ವಾಕ್ಯದ ಅರ್ಥವೇ ಆಗಲಿಲ್ಲ.., ಸಿಟ್ಟಿನಲ್ಲಿ ಏನೋ ಅಂದಳು ಎಂದುಕೊಂಡು ಅವಳನ್ನ ರಂಬಿಸಿ ಸುಮ್ಮನಾಗಿಸುತ್ತಾನೆ. ಮತ್ತೆ ಎಥಾವತ್ತಾಗಿ ಜೀವನ ಸಾಗುತ್ತದೆ. ಮದುವೆಯಾದ ಒಂದೇ ತಿಂಗಳಲ್ಲಿ ಇವಳ ಬೇಡಿಕೆಗಳು ಶುರುವಾಗುತ್ತವೆ, ಮೊದಲಿಗೆ ನನಗೆ ಫ್ರಿಡ್ಜು ಬೇಕು, ವಾಷಿಂಗ್ ಮಷಿನು ಬೇಕು ಅನ್ನುವ ರಾಗ ತೆಗೆಯುತ್ತಾಳೆ. ಪಾಪ ವಿಜಯನ ಸಂಬಳ ತಕ್ಕ ಮಟ್ಟಿಗಿದ್ದು ಸಂಸಾರ ಸುಗಮವಾಗಿ ಸಾಗಿಸುವಷ್ಟಾಗಿರುತ್ತದೆ, ಆದ್ದರಿಂದ ಈ ಎಲ್ಲಾ ವಸ್ತುಗಳು ಕಾಲ ಕಳೆದಂತೆ ಒಂದೊಂದಾಗಿ ಖರೀದಿಸೋಣ ಎಂದು ಹೇಳುತ್ತಾನೆ. ಅವಳದು ದೊಡ್ಡ ಉದ್ಯೋಗ ಇಲ್ಲದಿರುವುದರಿಂದ  ಇಲ್ಲಿ ಹುಡುಗಿಯು ಮಾಡಿದ ಸಾಲ ಕೂಡ ವಿಜಯ ಕಟ್ಟುತ್ತಿರುತ್ತಾನೆ, ಮನೆಯ ಜವಾಬ್ದಾರಿ ಹೊತ್ತಿದ ಗಂಡಸ್ಸಿಗೆ ಅದರ ಭಾರದ ಬಗ್ಗೆ ತಿಳಿದಿರುತ್ತದೆ. ಹೀಗೆಯೆ ಪ್ರತಿ ವಾರದ ಅಂತ್ಯಕ್ಕೆ ಇವಳ ಬೇಡಿಕೆಗಳು ಏರುತ್ತಿರುತ್ತವೆ.ಬೇಸರಗೊಂಡ ವಿಜಯ ತಂದೆ ತಾಯಿಯರ ಮೊರೆ ಹೋಗುತ್ತಾನೆ. ಹೊಸತಾಗಿ ಮದುವೆಯಾದ ಮಗನ ಪರಿಸ್ಥಿತಿ ತಿಳಿದು ಅವನ ತಂದೆ ತಾಯಂದಿರು ಸಮಾಧಾನ ಬುದ್ದಿ ಮಾತುಗಳು ಹೇಳಲು ರಾಜ್ಯಧಾನಿಗೆ ಆಗಮಿಸುತ್ತಾರೆ.ಅತ್ತೆ ಮಾವಂದಿರ ಆಗಮನದಿಂದ ವಿಜಯನ ಹೆಂಡತಿಗೆ ಕಸಿವಿಸಿ ಶುರುವಾಗುತ್ತದೆ. ಇವರು ಯಾಕೆ ಇಲ್ಲಿಗೆ ಬಂದರು ಎಂದು ಕೇಳಿಯೇ ಬಿಡುತ್ತಾಳೆ....( ಆಶ್ಚರ್ಯ ಪಡಬೇಕಾದ ವಿಷಯವಲ್ಲವೇ...???) ವಿಜಯನಿಗೆ ಇವಳ ಪ್ರಶ್ನೆಗೆ ದಿಕ್ಕೇತೋಚದಂತಾಗುತ್ತದೆ. ಸರಿ ಇರಲಿ ತಂದೆ ತಾಯಿಯರು ಮೊದಲ ಬಾರಿಗೆ ಮನೆಗೆ ಬಂದಿಹರು ಎಂದು ಪಟ್ಟಣದ ವಿಹಾರಕ್ಕೆ ಕರೆದುಕೊಂಡು ಹೋಗಿ ಬರುತ್ತಾನೆ. ರಾತ್ರಿ ಎಲ್ಲರೂ ಕೊಡಿ ಊಟ ಮಾಡಿ ಹೀಗೆ ಮಾತಿಗೆ ಕೂಡುತ್ತಾರೆ. ತಂದೆ ದಿವಾನದ ಮೇಲೆ ಕೂತರೆ ವಿಜಯ ನೆಲದ ಮೇಲೆ ಅಮ್ಮನ ಪಕ್ಕದಲ್ಲಿ ಕೂಡುತ್ತಾನೆ, ಹೆಂಡತಿ ಹೋಗಿ ಸುಮ್ಮನೆ ಮಲಗುತ್ತಾಳೆ.., ವಿಜಯನು ಎಲ್ಲರೂ ಇಲ್ಲಿ ಕೂತಿರುವಾಗ ನೀನೆಲ್ಲಿಗೆ ಹೋದೆ,..? ಬಾ ಇಲ್ಲಿ ಅಂತ ಕರೆಯುತ್ತಾನೆ. ಧಡಾಡಿಸಿ ಬಂದವಳೆ ಏನು ? ಅಂತಾ ಕೇಳುತ್ತಾಳೆ..ಕೂಡು ಬಾರವ್ವಾ ಇಲ್ಲಿ ಸ್ವಲ್ಪ ಮಾತಾಡೊದು ಇದೆ ನಿನ್ನ ಹತ್ತಿರ ಅನ್ನುತ್ತಾರೆ. ಬೇಗ ಹೇಳಿ ನಾನು ಮಲಗಬೇಕು ಅಂತ ಜಂಭದಿಂದಲೇ ಹೇಳುತ್ತಾಳೆ. ಮಾವನ ಮುಂದೆಯೆ ಕುರ್ಚಿಯನ್ನು ಎಳೆದು ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುತ್ತಾಳೆ ( ದೊಡ್ಡವರ ಮುಂದೆ ಕಾಲು ಮೇಲೆ ಕಾಲು ಹಾಕಿಕೊಂಡು ಕೂಡುವುದು ಇದು ಯಾವ ತಾಯಿ ಹೇಳಿಕೊಟ್ಟ ಮಾತು ಎಂದೆನ್ನಲೇಬೇಕಲ್ಲವೇ...? ) ವಿಜಯನ ಸಂಬಳ ನಿನಗೆ ತಿಳಿದೇ ಇದೆ ತಾನೆ...ಹೌದು ತಿಳಿದಿದೆ, ಹಾಗೆಯೇ ನಿನ್ನ ೨.೫೦ ಲಕ್ಷದ ಸಾಲ ತಿಳಿದಿದೆ ತಾನೆ..? ಹೌದು... ಹೀಗಿದ್ದಲ್ಲಿ ಗಂಡನಾದವನಿಗೆ ಮನೆ ನಡೆಸಿಕೊಂಡು ಹೋಗಲು ಕಷ್ಟವಾಗುತ್ತದೆ, ಏನೇ ತೆಗೆದುಕೊಳ್ಳುವುದಾದರೂ ಸಾಲ ಮುಗಿಸಿ ಮುಂದೆ ಒಂದೊಂದಾಗಿ ತೆಗೆದುಕೊಳ್ಳಿ ಅದಕ್ಕೆ ಏನು ಅವಸರ ಎಂದು ಹೇಳುತ್ತಾರೆ.
ನಿನ್ನ ಸಾಲ ಒಂದು ಮುಗಿದು ಬಿಟ್ಟರೆ ನೀವು ಜಾಮ್ ಜಾಮ್ ಆಗಿ ಇರಬಹುದು ಅಂತ ಬುದ್ದಿವಾದ ಹೇಳುತ್ತಾರೆ. ಇಷ್ಟು ಹೇಳಿದ್ದಕ್ಕೆ ಅವಳು ರಾತ್ರಿ ಪೂರ್ತಿ ಬಿಕ್ಕಿಸಿ ಬಿಕ್ಕಿಸಿ ಅಳುತ್ತಾಳೆ. ವಿಜಯನ ತಾಯಿ ಅವಳಿಗೆ ಸಮಾಧಾನ ಹೇಳಿ ಸಂತಯಿಸುತ್ತಾರೆ. ಮಾರನೆ ದಿನ ಬೆಳಿಗ್ಗೆ ವಿಜಯನ ತಂದೆ ತಾಯಿ ತಮ್ಮ ಊರಿಗೆ ಮರಳುತ್ತಾರೆ. ಇದಾದ ಸ್ವಲ್ಪ ದಿನಗಳವರೆಗೂ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಮತ್ತೆ ಜೀವನ ಸುಗಮವಾಗಿ ಸಾಗುತ್ತದೆ. ಮತ್ತೆ ಕೆಲ ದಿನಗಳ ಬಳಿಕ ಮತ್ತೆ ಅದೇ ರಾಗ ...ಆದರೆೀ ಈ ಸಲಾ ಹೆಂಡತಿಯ ಬೇಡಿಕೆ ವಿಭಿನ್ನವಾಗಿರುತ್ತದೆ, ನನಗೆ ವಜ್ರದ ಓಲೆಗಳು ಬಳೆಗಳು ಕೊಡಿಸು ಅನ್ನುತ್ತಾಳೆ..ಮತ್ತೆ ಮತ್ತೆ ಸಮಜಾಯಿಸಿ ಹೇಳಿದರೂ ಕೂಡ ಅವಳು ತಿಳಿದುಕೊಳ್ಳುವುದೇ ಇಲ್ಲ. ಅದಕ್ಕೊಸ್ಕರ ಮತ್ತೆ ತಗಾದೆ ತೆಗೆಯುತ್ತಾಳೆ. ಮತ್ತೆ ಅದೇ ಉತ್ತರ "ನನಗೆ ನಿನ್ನ ಕೂಡ ಬಾಳಲು ಇಷ್ಟವಿಲ್ಲ ನನ್ನನ್ನು ಮನೆಗೆ ಕಳಿಸಿಕೊಡು" ( ಓದುಗರು ಯೋಚಿಸಬೇಕು....ಇಲ್ಲಿ ಇವಳಿಗೆ ವಸ್ತು ಪ್ರೀತಿ ಹೆಚ್ಚು ಕಾಡುತ್ತಿರುತ್ತದೆ) ಪದೆ ಪದೇ ಈ ಪದಗಳನ್ನು ಕೇಳಲಾರದೇ ಗಟ್ಟಿ ಹೃದಯ ಮಾಡಿ ಕೇಳಿಯೇ ಬಿಡುತ್ತಾನೆ....ಏಕೇ ನೀನು ಈ ವಾಕ್ಯವನ್ನು ಯಾವಾಗಲೂ ಉಚ್ಚರಿಸುತ್ತಿ ನಿನ್ನ ಮನದಲ್ಲಿ ಏನ್ ಊಂಟು ಎಂದು ಕೇಳಿದಾಗ.....ನನ್ನ ಮನೆಯವರು ಈ ಮದುವೆಯನ್ನು ಬಲವಂತವಾಗಿ ಮಾಡಿದ್ದಾರೆ, ನನಗೆ ಈ ಮದುವೆ ಇಷ್ಟವಿರಲಿಲ್ಲ ಎಂದು ಹೇಳುತ್ತಾಳೆ. ವಿಜಯ ಆಘಾತದಲ್ಲಿ ಮುಳುಗುತ್ತಾನೆ....ಹಾಗಾದರೆ ಮದುವೆಗೂ ಮುನ್ನ ಸಿಕ್ಕಾಗ ಏಕೆ ಹೇಳಲಿಲ್ಲ ಅಂತ ಅಂದಾಗ ನನ್ನ ಅಮ್ಮ ಮಾವ ಅಕ್ಕಂದಿರು ಹಾಗೆ ಎಲ್ಲೂ ಹೇಳಬಾರದು ಎಂದು ತಾಕಿತ್ತು ಮಾಡಿದ್ದರು ಅನ್ನುತ್ತಾಳೆ. ಹಾಗೆನಾದರೂ ಹೇಳಿದರೆ ನನ್ನ ತಾಯಿ ನೇಣಿಗೆ ಶರಣಾಗುತ್ತಾಳೆ ಎಂದಿದ್ದಳು ಅದಕ್ಕೆ ಹೇಳಲಿಲ್ಲ ಅಂತ ಹೇಳಿಬಿಡುತ್ತಾಳೆ. ಆಘಾತದ ಮೇಲೆ ಆಘಾತವಾಗುತ್ತದೆ ವಿಜಯನಿಗೆ...ಬಹಳ ಯೋಚಿಸಿದ ನಂತರ ಸರಿ ಎನೋ ಆಗಿದ್ದು ಆಗಿ ಹೋಯಿತು ಇನ್ನು ಚಿಂತಿಸಿ ಫಲವಿಲ್ಲ, ನಾನು ನೀನು ಗಂಡ ಹೆಂಡಿರು, ನಾನು ನಿನ್ನನ್ನ ಚೆನ್ನಾಗಿಯೇ ನೋಡಿಕೊಳ್ಳುತ್ತೆನೆ ಎಂದು ಹೇಳಿ ರಮಿಸುತ್ತಾನೆ. ಇಷ್ಟಕ್ಕೆ ಮುಗಿಯುವುದಿಲ್ಲ.....ಜೇಡರ ಬಲೆ ಇನ್ನೂ ಕ್ಲೀಷ್ಟಕರವಾಗಿರುತ್ತದೆ..........ಮುಂದುವರೆಯುವುದು...)

No comments:

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...