ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 2

ಅಂದ ಹಾಗೆ ಆ ಹುಡುಗನ ಹೆಸರು ಹೇಳಲಿಲ್ಲವಲ್ಲ ನಾನು...ಹೆಸರು ವಿಜಯ್. ಮಾಲೀಕರ ಸಹಾಯ ಪಡೆದು ಅವರಿಗೆ ಧನ್ಯವಾದಗಳ ಅರ್ಪಿಸಿ ಹೊಸ ಊರಿನ ಕಡೆಗೆ ನಡೆದ. ವಿಜಯ್ ಧೈರ್ಯಶಾಲಿ ಬಂದ ಅವಕಾಶವನ್ನು ಸದ್ದುಪಯೋಗ ಪಡಿಸಿಕೊಳ್ಳಲು ಏನ್ ಬೇಕಾದರು ಮಾಡುವಂತಹ ಸ್ವಭಾವ ಅವನದು. ದೇವರನ್ನು ನೆನೆಯುತ್ತಾ ಕಛೇರಿಯೊಳಗೆ ಹೋದ. ಅಲ್ಲಿಯ ಮ್ಯಾನೇಜರು ಇವನನ್ನು ಬರಮಾಡಿಕೊಂಡು ಕೆಲವು ಕಛೇರಿಯ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಅವನ ಕುಶಲೊಪರಿ ವಿಚಾರಿಸಿದರು. ಆಗಲೆ ಮಧ್ಯಾನದ ವೇಳೆ..,ಪಾಪ ವಿಜಯನ ಹೊಟ್ಟೆ ತಾಳ ಹಾಕ ತೊಡಗಿತ್ತು..ಮ್ಯನೇಜರು ಜವಾನನ್ನು ಕರೆದು  ಇವರಿಗೆ ಊಟದ ಮನೆಗೆ ಕರೆದುಕೊಂಡು ಹೋಗು ಎಂದು ಸೂಚಿಸಿದರು. ವಿಜಯ ತನ್ನ ಹಸಿವೆ ಆರಿಸಿಕೊಂಡು ಮತ್ತೆ ಮ್ಯಾನೇಜರ್ ಇದ್ದ ಕಡೆಗೆ ಬಂದ. ಅಷ್ಟರ ಹೊತ್ತಿಗೆ ಅಲ್ಲಿ ಮತ್ತೆ ಕೆಲ ಹುಡುಗರು ಬಂದು ಸೇರಿದ್ದರು. ವಿಜಯ ಮುಂದು ಹೋಗಿ ತನ್ನ ಪರಿಚಯವ ಹೇಳಿ ಎಲ್ಲರೊಂದಿಗೆ ಬೆರೆತುಬಿಟ್ಟನು. ಹೊಸ ಕೆಲಸ ಹೊಸ ಊರು ಹೊಸ ಜನ ತಿಳಿಯದ ಭಾಷೆ ಆದರೂ ಒಂದು ತರಹದ ಸಂಭ್ರಮ. ಹೊರ ರಾಜ್ಯದವನಾಗಿದ್ದರಿಂದ ಮ್ಯನೇಜರು ಅವನಿಗೆ ಕಂಪನಿಯ ಅಥಿತಿ ಗೃಹದಲ್ಲಿ ತಂಗುವ ವ್ಯವಸ್ಥೆ ಮಾಡಿದರು.ಸಂತೋಷದಿಂದ ತಂದೆಗೆ ಪೋನ್ ಮಾಡಿ ಕೆಲಸಕ್ಕೆ ಸೇರಿಕೊಂಡೆ ಎಂಬ ಸಿಹಿ ಸುದ್ದಿ ತಿಳಿಸಿದ. ಮರು ದಿನ ಬೇಗನೆ ಎದ್ದು ತಯ್ಯಾರ್ ಆಗಿ ಕೆಲಸ ಕಾರ್ಯಗಳ ಬಗ್ಗೆ ತಿಳಿದು ಕೊಳ್ಳುವ ಹುಮ್ಮಸ್ಸಿನಿಂದ ಕಛೇರಿಯ ಕಡೆಗೆ ನಡೆದ. ಎಲ್ಲಾ ಲೊಕಲ್ ಹುಡುಗರು ಆಗಲೇ ಜಮಾಯಿಸಿದ್ದರು. ಮ್ಯನೇಜರು ಪೂರ್ತಿ ಕಂಪನಿಯ ಕೆಲಸ ಕಾರ್ಯಗಳು ಹೇಗೆ ನಡೆಯುತ್ತದೆ ಎಂಬುದ ತೋರಿಸಿ, ಎಲ್ಲರಿಗೂ ಒಂದು ಸಣ್ಣ ಸಣ್ಣ ಕೆಲಸ ಕೊಟ್ಟು ಮಾಯವಾದರು. ಗೆಳೆತನ ಪ್ರೀತಿ ವಿಸ್ವಾಸ ಬೆಳೆಯಲಾರಂಬಿಸಿತು ಎಲ್ಲಾ ಸಹ ಪಾಟಿಗಳೊಡನೆ. ದಿನೆ ದಿನೆ ಹೊಸ ಹೊಸ ಅನುಭವ..,ಕಾಲ ಉರುಳಿದಂತೆ ವರುಷ ಕಳೇದದ್ದೆ ಗೊತ್ತಾಗಲಿಲ್ಲ. ನಮ್ಮ ವಿಜಯ ಎಲ್ಲರಿಗಂತ ಒಂದು ಹೆಜ್ಜೆ ಮುಂದೆ ವರೆದು ಅದೇ ಕಚೇರಿಯಲ್ಲಿ ಪರ್ಮನೆಂಟ ಆಗಿ ನೇಮಕಗೊಂಡ. ವಿನಯತೆ ಶ್ರದ್ದೆಯಿಂದ ಕೆಲಸಕ್ಕೆ ಸಿಕ್ಕ ಬಹುಮಾನ ಎಂದುಕೊಂಡು ದೇವರನ್ನು ನೆನೆದು, ಕಲಸ ಪ್ರಾರಂಭಿಸಿದ. ತಾನು ಯಾರ ಜೋತೆಯಲ್ಲಿ ಕೆಲಸ ಮಾಡುತಿದ್ದನೊ ಅವರಿಗೆ ಇವನು ಈಗ ಅಧಿಕಾರಿ. ಕಂಪನಿಯ ಒಳ ನಡೆಯುತ್ತಿದ್ದಂತೆ ಎಲ್ಲರೂ ವಿಜಯ್ ಸಾರ್ ಅಂದಾಗ ಏನೋ ಮುಜುಗರ ಮತ್ತೊಂದೆಡೆ ಖುಷಿ.ಇನ್ನೂ ಹೆಚ್ಚು ಕಲಿಯಬೇಕು ಬೆಳೆದು ದೊಡ್ಡ ಅಧಿಕಾರಿಯಾಗಬೇಕು ಎಂಬ ಕನಸ್ಸು ಅವನಿಗೆ ಯಾವಾಗಲೂ ಕಾಡುತ್ತಿತ್ತು..ತನ್ನ ರಾಜ್ಯದ ರಾಜಧಾನಿಯಲ್ಲಿ ಕೆಲಸ ಮಾಡುತ್ತಿದ್ದ ಗೆಳೆಯನ ಸಂಪರ್ಕಿಸಿದಾಗ ಅವನ ಕಂಪನಿಯಲ್ಲಿ ಕೆಲಸ ಖಾಲಿ ಇರುವುದು ಗಮನಕ್ಕೆ ಬಂತು, ಮೂರು ವರುಷದ ನಂತರ ತನ್ನ ತಾಯಿ ನಾಡಿಗೆ ಮರಳುವ ಅವಕಾಶ ಅವನದಾಯಿತು..(ಮುಂದುವರೆಯಲಿದೆ ವಿಜಯನ ಸೆಕೆಂಡ ಇನ್ನಿಂಗ್ಸ್..)

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು