ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 8

(ಮುಂದೆವರ್ವುದು...) ತಾಳ್ಮೆಗೂ ಒಂದು ಇತಿ ಮಿತಿ ಅನ್ನುವುದು ಇರುತ್ತದೆ, ಹಾಗೆ ಕೂಡ ಇಲ್ಲಿ ವಿಜಯನ ಸಹನೆ, ತಾಳ್ಮೆ ಕಳೆದುಕೊಳ್ಳಲಾರಂಭಿಸಿತು.., ಎಷ್ಟೇ ಆಗಲಿ ಅವನು ಕೂಡ ಮನುಷ್ಯ ಪ್ರಾಣಿ ತಾನೆ..ಒಂದು ದಿನ ಕಚೇರಿಯಲ್ಲಿ ಎಂದಿನಂತೆ ಕೆಲಸದಲ್ಲಿ ಮಗ್ನನಾಗಿದ್ದಾಗಾ ಮತ್ತೆ ವಿಜಯನ ಪೊನು ರಿಂಗಾಯಿಸುತ್ತದೆ...ಎನ್ ಮಾಡ್ತಾ ಇದ್ದಿರಿ ಅಂತ ಹೆಂಡತಿಯ ಧ್ವನಿ ಕೇಳಿ ಬಂತು..ಆಹಾ ಏನೂ ಪ್ರೀತಿ ಅಂತ ಅಂದುಕೊಳ್ಳಬೇಡಿ ಸ್ವಲ್ಪ ತಾಳಿ ಮುಂದಿನ ಕಥೆ ಹೇಳುತ್ತೇನೆ...,ರೀ ಇವತ್ತು ತುಂಬಾ ಬಿಸುಲು ತಾನೆ...? ಗಂಡ...ಹಾ ಹೌದು..! ಅದಕ್ಕೆ...ಏನ್ ಇಲ್ಲಾ ನಿಮ್ಮ ಜೊತೆ ಐಸ್ಕ್ರೀಮು ತಿನ್ನುವಾಸೆ ಆಗಿದೆ ಅಂದಳು...ಸರಿ ಮನೆಗೆ ಬಂದ ಮೇಲೆ ಕೊಡಿಸುತ್ತೇನೆ ಈಗ ಕೆಲಸ ಮಾಡು ಅಂದ....ಉಹ್ಮು...ಈಗಲೆ ಬೇಕು, ಬಂದು ಕೊಡಿಸಿ ಅಂದಳು..ಎಲ್ಲರೂ ತಮಾಷೆ ಅಂದುಕೊಳ್ಳಬಹುದು....ನಿಜ, ವಿಜಯನು ಕೂಡ ಹಂಗೆ ಅಂದುಕೊಂಡ..!! ಸರಿ ಕೆಲಸ ಬಹಳ ಇದೆ..ಸಂಜೆ ಮನೆಯಲ್ಲಿ ಮಾತಾಡೋಣ, ನಿನ್ನ ಕಚೇರಿಗೆ ಕರೆದುಕೊಂಡು ಹೋಗಲು ಬರುತ್ತೇನೆ ಅಂತ ಹೇಳಿ ಇಡುತ್ತಾನೆ. ನುಡಿದಂತೆ ನಡೆ.., ಸಂಜೆ ಕಚೇರಿಯ ಗೇಟಿನ ಬಳಿ ಹೆಂಡತಿಗೆ ಮಿಸ್ಕಾಲ್ ಕೊಟ್ಟು ಅವಳ ಬರುವನ್ನು ಕಾಯುತ್ತಾನೆ, ೨ ನಿಮಿಷದ ಮೇಲೆ ಬರುತ್ತಾಳೆ.., ಸರಿ ಮಧ್ಯಾನ ಐಸ್ಕ್ರೀಮ್ ಬೇಕು ಅಂದೆ ಅದಕ್ಕೆ ನಡಿ ಎಲ್ಲಿಗೆ ಹೋಗೋಣ ಅಂತ ಕೇಳುತ್ತಾನೆ...,ಅದಕ್ಕೆ ಅವಳು ನನಗೇನು ಬೇಡ ನಾನು ಬೆಳಿಗ್ಗೆ ಕೇಳಿದ್ದು ನೀವು ಕೊಡಿಸಲಿಲ್ಲ ಅದಕ್ಕೆ ನನ್ನ ಗೆಳೆಯ ಕೊಡಿಸಿದ ಅವನ ಬೈಕಿನ ಮೇಲೆ ಬಾಸ್ಕಿನ್ ರಾಬಿನ್ಗೆ ಹೋಗಿ ಬಂದೆ ಅಂದಳು...! ಈ ಮಾತನ್ನು ಕೇಳಿದೊಡನೆ ವಿಜಯನಿಗೆ ರೋಷ ಉಕ್ಕಿ ಬಂತು..ತಡೆದುಕೊಂಡ..ಅವನಿಗೆ ತಿಳಿದ ಪ್ರಕಾರ ಆ ಅಂಗಡಿಯು ೩ ಕಿಮಿ ದೂರದಲ್ಲಿತ್ತು.., ಮದುವೆ ಆದ ಒಬ್ಬ ಹೆಂಗಸು ಬೇರೊಬ್ಬನ ಜೊತೆ ಐಸ್ಕ್ರೀಮ್ ಸವಿಯಲು ದೂರದೊಂದು ಸ್ಥಳಕ್ಕೆ ಹೋಗಲೇ ಬೇಕಿತ್ತಾ...??? ಗಂಡನಿಗೆ ಇಷ್ಟವಾಗುವುದಿಲ್ಲಾ ಅನ್ನುವುದು ಇವಳಿಗೆ ತಿಳಿದಿರಲಿಲ್ಲವೇ..? ಅಥವಾ ಮಾಡಬೇಕಂತೆ ಮಾಡಿದ ಆಟವದು..! ವಿಜಯ ಪದೇ ಪದೇ ಅವಳಿಗೆ ಹೇಳುತ್ತಿದ್ದ ಕೆಲವು ಮಾತುಗಳು, ಕಚೇರಿಯಲ್ಲಿ ಬೇರೆ ಹುಡುಗರ ಜೊತೆ ಕೆಲಸ ಎಷ್ಟು ಇರುತ್ತದೊ ಅಷ್ಟೇ ಮಾತನಾಡಬೇಕು.., ಎಲ್ಲೇ ಹೋದರೂ ಹುಡುಗಿಯರು ಜೊತೆಯಲ್ಲಿದ್ದರೆ ಒಳ್ಳೆಯದು ಹಾಗೆಯೆ ಹುಡುಗರ ಜೊತೆ ಹೋದರೂ ಗುಂಪಿನಲ್ಲಿ ಹೋದರೆ ತಪ್ಪೇನು ಇಲ್ಲ ಆದರೆ ಒಬ್ಬಳೆ ಯಾರದೊ ಕೂಡ ಹೋಗುವುದು ಸರಿಯಲ್ಲ ಒಬ್ಬ ಗೃಹಿಣಿ ಇವೆಲ್ಲಾ ತಾವಾಗಿಯೇ ತಿಳಿದುಕೊಳ್ಳಬೇಕು ಇಲ್ಲಾ ಬುದ್ದಿ ಹೇಳುವವರ ಮಾತನ್ನಾದರೂ ಕೇಳಬೇಕು.  ಸರಿ ಮನೆಯಲ್ಲಿ ಈ ವಿಷಯವಾಗಿ ಜಗಳ ಆಗುತ್ತದೆ. ಕೋಪಗೊಂಡ ಗಂಡ ಇನ್ನು ಮೇಲೆ ಯಾರ ಹುಟ್ಟು ಹಬ್ಬ ಇರಲಿ, ಪಾರ್ಟಿ ಇರಲಿ ನೀನು ಮಾತ್ರ ಹೋಗಬೇಡ ಯಾರಾದರೂ ಜುಲ್ಮಿ ಮಾಡಿದರೆ ಗಂಡನಿಗೆ ಇಷ್ಟವಾಗುವುದಿಲ್ಲಾ ಅಂತಾ ಖಢಾಕಂಡಿತವಾಗಿ ಹೇಳಿ ಬಿಡು ಎಂದ. ಗಂಡ ಹೆಂಡಿರಲ್ಲಿ ಅನುಮಾನ ಬರಬಾರದಂತೆ ಆದರೆ ಹೆಂಡತಿಯರು ಅನುಮಾನ ಬರುವ ಹಾಗೆ ವರ್ತಿಸಿದರೆ ಗಂಡನಾದವನು ಅವಳಿಗೆ ಬುದ್ದಿ ಹೇಳಬೇಕಾಗುತ್ತದೆ. (ಈ ವಿಷಯ ಇಲ್ಲಿ ವಿಜಯನ ದೃಷ್ಟಿ ಕೊನದಲ್ಲಿ ಹೇಳುತ್ತಿದ್ದೇನೆ, ಆದರೆ ಸಾಮಾನ್ಯವಾಗಿ ಹೆಂಡರಿಯರಿಗೂ ಸಹ ಗಂಡನ ಮೇಲೆ ಸಂಶಯ ಬಂದರೆ ಅದನ್ನ ಸರಿ ಪಡಿಸಿಕೊಳ್ಳುವುದು ಇಬ್ಬರ ಕರ್ತವ್ಯವಾಗಿರಬೇಕು) ಕೆಲವು ವಿಷಯಗಳನ್ನು ಚರ್ಚಿಸುವಾಗ ಅವಳು ಹೀಗೆ ಹೇಳುತ್ತಾಳೆ ನನ್ನ ಕಚೇರಿಯಲ್ಲಿ ಇರುವ ಒಬ್ಬ ಮ್ಯಾನೇಜರ್ ನನ್ನನ್ನು ಕೆಟ್ಟ ದೃಷ್ಟಿಯಂದ  ದಿಟ್ಟಿಸಿ ನೋಡುತ್ತಿರುತ್ತಾನೆ., ಅದನ್ನು ಗಮನಿಸಿದ ಆಕೆ ಗಂಡನ ಮುಂದೆ ಹೇಳಿದಾಗ, ವಿಜಯ ಹೌದು ಅವರು ಯಾಕೆ ನೋಡಿದರು ಅಥವಾ ನೋಡುತ್ತಾರೆ ಸ್ವಲ್ಪ ನೀನೆ ಯೋಚನೆ ಮಾಡು ತಿಳಿಯದಿದ್ದಲ್ಲಿ ನಾನು ವಿವರಿಸುತ್ತೆನೆ ಅಂದನು...ಯೋಚನೆ ಮಾಡುವಷ್ಟು ನನಗೆ ಸಮಯವಿಲ್ಲ.., ನೀವೇ ಹೇಳಿ ಅಂದಳು...ಆಗ ವಿಜಯ ನೀವು ಉಡ ತೊಡುವ ಬಟ್ಟೆಗಳು ಮೈ ಮುಚ್ಚುವಂತಿರಬೇಕು ಅನಾವಶ್ಯಕವಾಗಿ ಹುಡುಗರನ್ನು ಆಕರ್ಷಿಸುವ ಹಾಗಿರಬಾರದು, ಅದಕ್ಕೆ ನಾನು ಕಚೇರಿಗೆ ಜೀನ್ಸು ಟಿ-ಷರ್ಟು ಧರಿಸಬಾರದು ಎಂದು ತಾಗಿತ್ತು ಮಾಡಿದ್ದು..ಓಹೋ ಸರಿ ರೀ ಅಂದು ಬಿಡುತ್ತಾಳೆ. ಕೆಲವು ವಿಷಯಗಳಲ್ಲಿ ತಿಳಿದುಕೊಳ್ಳುತ್ತಿದ್ದಳೆ ಅನ್ನಬಹುದು ಆದರೆ ಆ ಮಾತುಗಳು ಅವಳ ಮನದಲ್ಲಿ ಇರುತ್ತಿರಲಿಲ್ಲ. ವ್ಯಕ್ತಿ ಎಷ್ಟೇ ಕೆಟ್ಟವರಿದ್ದರೂ ಅವರಲ್ಲಿ ಕೆಲವು ಒಳ್ಳೆಯ ಗುಣಗಳು ಇರಬಹುದು ಅವುಗಳನ್ನು ಎಲ್ಲರು ಒಪ್ಪಬೇಕಾದ ವಿಷಯ. " ಹುಟ್ಟು ಗುಣ ಸುಟ್ಟರೂ ಹೋಗದು " ಕೆಲವು ಕೆಟ್ಟ ಚಟಗಳು ಎಷ್ಟೇ ತಪ್ಪು ಅಂತ ಹೇಳಿದರೂ ಜನರು ತಿಳಿದುಕೊಳ್ಳುವುದೇ ಇಲ್ಲ ಅದೇ ತರಹದ  ಸ್ವಭಾವದವಳು ಇವಳಾಗಿರುತ್ತಾಳೆ. ಕೇಳಿದಾಗ ಸರಿ ಎಂದು ಮತ್ತೆ ಸಮಯ ಕಳೆದಂತೆ ಮತ್ತೆ ಅವೇ ತಪ್ಪುಗಳು ಮತ್ತೆ ಮತ್ತೆ ಮಾಡುತ್ತಿರುತ್ತಾಳೆ.ಹಾಗೆಯೇ ಇವಳ ಕಚೇರಿಯ ವಹಿವಾಟುಗಳು ನಿಲ್ಲುವುದೇ ಇಲ್ಲ, ದಿನ ಒಂದಲ್ಲಾ ಒಂದು ಕಾರಣಕ್ಕೆ ಕಚೇರಿಯ ವಿಷಯಗಳಿಂದ ಜಗಳಗಳು ಆಗುತ್ತಿರುತ್ತವೆ..,ಬೇಸತ್ತ ಗಂಡ ಒಂದು ತಿರುಮಾನಕ್ಕೆ ಬರುತ್ತಾನೆ. ಇವಳು ಕೆಲಸ ಮಾಡುತ್ತಿರುವುದರಿಂದನೆ ಇಷ್ಟೆಲ್ಲಾ ಜಗಳಕ್ಕೆ ಕಾರಣ, ಇವಳು ಕೆಲಸ ಬಿಟ್ಟರೆ ಮನೆ ಕಡೆಗೆ ಗಮನ ಕೊಡುತ್ತಾಳೆ ಎಂದು ಭಾವಿಸಿ ಅವಳಿಗೆ ಕೆಲಸಕ್ಕೆ ರಾಜಿನಾಮೆ ಕೊಟ್ಟು ಮನೆ ಕೆಲಸ ಮಾಡಿಕೊಂಡಿರು, ನಿನ್ನ ಸಾಕುವ ತಾಕತ್ತು  ನನ್ನಲ್ಲಿದೆ.,ನಿನಗೆ ಏನು ಬೇಕು ಬೇಡ ಎಲ್ಲವನ್ನು ತಂದು ಹಾಕುತ್ತೇನೆ ಮನೆಯಲ್ಲೇ ಇರು ಅಂತ ಹೇಳಿದಕೂಡಲೇ ಇವಳಿಗೆ ದೊಡ್ಡ ಬಂಡೆಯೇ ತಲೆ ಮೇಲೆ ಬಿದ್ದ ಹಾಗಾಗುತ್ತದೆ..., ಕೆಲಸದ ಮೇಲೆ ವ್ಯಾಮೋಹವೊ ಅಥವಾ ಬೇರೆ ಎನೋ ಅನ್ನುವುದು ಸ್ವಲ್ಪ ಅನುಮಾನಕ್ಕೆ ಈಡುಮಾಡಿಕೊಡುತ್ತದೆ. ಅವಳು ಊಟ ಬಿಟ್ಟು ಮಾತು ಬಿಟ್ಟು ಹೆದರಿಸಿ ಬೆದರಿಸಿ ಅವನ ನಿರ್ಣಯವನ್ನು ಬದಲಾಯಿಸಲು ಪ್ರಯತ್ನಿಸುತ್ತಾಳೆ ಆದರೆ ಅವನ  ಸಂಕಲ್ಪ ದೃಡವಾಗಿರುತ್ತದೆ. ಜಗಳಗಳು ವಿಪರೀತಕ್ಕೆ ಹೋಗುತ್ತವೆ, ಇಷ್ಟರಲ್ಲಿ ಇವಳ ಪೊನು ರಿಂಗಾಯಿಸುತ್ತದೆ ಸಿಟ್ಟಿನಲ್ಲಿ ಇದ್ದ ಗಂಡ ಇವಳ ಪೊನನನ್ನು ತೆಗೆದುಕೊಂಡು ನೆಲಕ್ಕೆ  ಜೋರಾಗಿ  ಎಸೆಯುತ್ತ್ತಾನೆ. ಸಂಸಾರ ಹಾಳಾಗುತ್ತಿದ್ದರೂ ಅವಳಿಗೆ ಇಷ್ಟೊಂದು ದುಃಖ ಆಗಿರಲಿಲ್ಲ ಅವಳ ಪೊನು ಒಡೆದದ್ದು ಕಂಡು ಬಿಕ್ಕಿಸಿ ಬಿಕ್ಕಿಸಿ ಅಳುತ್ತಾಳೆ ಎಕೆಂದರೆ ಆ ಪೊನು ಅವಳಿಗೆ ತನ್ನ ಪ್ರೀತಿಯ ಮಾವನಿಂದ ಸಿಕ್ಕ ಉಡುಗರೆಯಾಗಿರುತ್ತದೆ. ಹೆಂಡತಿ ಅಷ್ಟೊಂದು ಅತ್ತಳು ಅವಳ ಪೊನು ಸಿಟ್ಟಿನಲ್ಲಿ ಮುರಿದು ಹಾಕಿದೆ ಎಂದುಕೊಳ್ಳುತ್ತಾ ಹೆಂಡತಿಗೊಂದು ಹೊಸ ಮೊಬೈಲು ಕೊಡಿಸಬೇಕು ಅಂದು ಅಂತರ್ಜಾಲದಲ್ಲಿ ನೋಡಲು ಮುಂದಾಗುತ್ತಾನೆ. ಮಾರನೆ ದಿನ ಗಂಡ ಕಚೇರಿಗೆ ಹೋಗಲು ಮುನ್ನ ಅವಳ ಹಣೆಗೆ  ಎಂದಿನಂತೆ ಪ್ರೀತಿಯ ಮುತ್ತನ್ನು ನೀಡಿ ಹೊರಡುತ್ತಾನೆ. ಅವಳು ಸಹ ಎಂದಿನಂತೆ ಚಹಾ ಮಾಡಿಕೊಟ್ಟು ಕಳಿಸುತ್ತಾಳೆ. ರಾತ್ರಿಯಲ್ಲಾ ಅವಳನ್ನು ರಮಿಸಿ ಎಲ್ಲಾ ಜಗಳಗಳಿಗೆ ಫುಲ್ ಸ್ಟಾಪ್ ಇಟ್ಟಿರುತ್ತಾನೆ....ಆದರೆ ಅವನು ಕಚೇರಿಗೆ ಹೋದ ಮೇಲೆ ನಡೆಯುವುದೇ ಬೇರೆ....ಅವಳು ತನ್ನ ಎಲ್ಲಾ ಬಟ್ಟೆ ಬರೆಗಳನ್ನು ಕಟ್ಟಿಕೊಂಡು ಮನೆ ಬಿಟ್ಟು ಹೋಗುತ್ತಾಳೆ. ಗಂಡನಿಗೆ ಒಂದು ಮಾತು ಹೇಳದೆ ಕೇಳದೆ ಮನೆ ಬಿಟ್ಟು ಹೋದರೆ ಎನ್ ಅನ್ನಬೇಕು ಗೆಳೆಯರೆ...? ಸಂಜೆ ಮನೆಗೆ ಬಂದ ಗಂಡನಿಗೆ ಆಗಿದ್ದ ಘಟನೆ ಬಗ್ಗೆ ತಿಳಿದೇ ಇರುವುದಿಲ್ಲ, ಅವಳು ದಿನಾಲು ಕಚೇರಿಯಿಂದ ಮನೆಗೆ ಬರುವ ಮೊದಲೇ ಗಂಡ ಮನೆಗೆ ಬರುತ್ತಿರುತ್ತಾನೆ, ಆದ ಕಾರಣ ಅವನಿಗೆ ಸಂಶಯ ಬರುವುದೇ ಇಲ್ಲ..ಹೆಂಡತಿಯನ್ನು ಕರೆದುಕೊಂಡು ಪೊನು ಕೊಡಿಸಲು ಎಲ್ಲಾ ತಯ್ಯಾರಿಯನ್ನು ನಡೆಸುತ್ತಿರುತ್ತಾನೆ ಆದರೆ ಆವಳು ಬರುವ ಸಮಯವಾದರೂ ಅವಳು ಮನೆಗೆ ಬರುವುದೇ ಇಲ್ಲ...ವಿಜಯನ ತಂದೆಗೆ ಈ ವಿಷಯ ತಿಳಿದುಹೋಗಿರುತ್ತದೆ..ಅವರು ವಿಜಯನಿಗೆ ಕರೆ ಮಾಡಿ ನಿನ್ನ ಹೆಂಡತಿ ಎಲ್ಲಿದ್ದಾಳೆ.? ಅಂತ ಕೇಳುತ್ತಾರೆ ಕಚೇರಿಗೆ ಹೋಗಿರುವಳು ಕೆಲಸವಿರಬೇಕು ಅದಕ್ಕೆ ತಡವಾಗಿದೆ ಅಂತ ಹೇಳುತ್ತಾನೆ...! ಇಲ್ಲಾ ಅವಳ ಸಾಮಾನುಗಳು ಮನೆಯಲ್ಲಿವೆಯೇ ಸ್ವಲ್ಪ ನೋಡು ಅಂತ ಹೇಳುತ್ತಾರೆ...ಸರಿ ಅಂತ ವಿಕ್ಷಿಸುತ್ತಾನೆ ನೋಡಿದರೆ ಅವಳ ಸೂಟಕೇಸು ಇಲ್ಲಾ....ಅಂದರೆ ಇವಳು ನಿಜವಾಗಿಯೂ ಮನೆ ಬಿಟ್ಟು ಹೋಗಿದ್ದಾಳೆ...ಮತ್ತೆ ಗಂಡನಿಗೆ ಸಿಟ್ಟು ಬರುತ್ತದೆ. ಒಂದು ಮಾತೂ ಹೇಳದೇ ಹೋದಳು...ಅನ್ನುವುದು ತುಂಬಾ ಬೇಸರ ತರುತ್ತದೆ.(ಮುಂದೆವರೆಯುವುದು...)

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು