ಕಥೆ ( ಎಲ್ಲ ಕಥೆಗಳ ಹಿಂದಿನ ಕಹಿ ಸತ್ಯಗಳು) - 3

......ತವರೂರಿಗೆ ಮರಳುವ ಖುಷಿಯಲ್ಲಿ ತುಂಬಾನೆ ತಯ್ಯಾರಿ ನಡೆಸಿ, ತವರೂರಿರಿನ ರಾಜಧಾನಿಗೆ ತೆರಳಿ ಸಂದರ್ಶನ ಕೊಟ್ಟು ಬಂದದ್ದಾಯಿತು. ಬಹಳ ಅಪೇಕ್ಷೆಯನ್ನು ಇಟ್ಟುಕೊಂಡು ಕರೆಗಾಗಿ ಇದಿರು ನೋಡುತ್ತಿದ್ದ..ಒಂದು ತಿಂಗಳು ಕಳೆಯಿತು,ಎರಡು ತಿಂಗಳು ಕಳೆಯಿತು ಹಾಗೆ ಮೂರು ತಿಂಗಳುಗಳು ಕಳೆದರೂ ಕರೆ ಬರಲೇ ಇಲ್ಲ.. ನಿರಸಗೊಂಡು ಇದ್ದ ಜಾಗದಲ್ಲೇ ತನ್ನ ಭವಿಷ್ಯವಿರಬಹುದು ಎಂದುಕೊಂಡು ಸುಮ್ಮನಾಗಿಬಿಟ್ಟ. ಹೀಗೆ ಒಂದು ದಿನ ಕಚೇರಿಯ ಕಾರ್ಯದಲ್ಲಿ ನಿರತನಾಗಿದ್ದಾಗ ಪೋನು ರಿ0ಗಾಯಿಸಿತು..ಅದು ತವರೂರ ಕರೆ..ಯಾರೋ ಗೆಳೆಯರು ಇರಬೇಕು ಎಂದುಕೊಳ್ಳುತ್ತಲೆ ಹೆಲೋ ಅಂದ..,ಆ ಕಡೆಯಿಂದ ಒಂದು ಹೆಣ್ಣಿನ ಧ್ವನಿ ಕೇಳಿ ಬಂತು..,ತಾವು ನಮ್ಮಲ್ಲಿಗೆ ಬಂದು ಸಂದರ್ಶನ ನೀಡಿದ್ದರ ನಿಮಿತ್ತ ನಿಮ್ಮನ್ನು ನಮ್ಮ ಕಂಪನಿಗೆ ಟೆಕ್ನಿಕಲ್ ಲೀಡ ಅಂತ ನೇಮಕ ಮಾಡುತ್ತಿದ್ದೇವೆ, ತಾವು ಆದಷ್ಟು ಬೇಗ ಬಂದು ಸೇರಿಕೊಳ್ಳಬೇಕು ಎಂದು ಹೇಳಿದರು. ವಿಜಯನ ಸಂತೋಷಕ್ಕೆ ಮಿತಿಯೇ ಇರಲಿಲ್ಲ, ಅವನು ಕುಣಿದು ಕುಪ್ಪಳಿಸ ತೊಡಗಿದ. ಬಹು ದಿನಗಳಿಂದ ತಂದೆ ತಾಯಿ ಬಂಧು ಮಿತ್ರರಿ0ದ ದೂರವಿದ್ದು ಅವನಿಗೆ ಸಾಕಾಗಿ ಹೋಗಿತ್ತು. ವಿಷಯ ತಿಳಿಯುತ್ತಲೇ ತನ್ನ ಮೇಲಧಿಕಾರಿಗೆ ತಿಳಿಸಿದ, ಅವರೂ ಕೂಡ ಸಂತೋಷಪಟ್ಟರು. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿ ತನ್ನ ಕಾರ್ಯವನ್ನು ಬೇರೊಬ್ಬ ಗೆಳೆಯನಿಗೆ ಒಪ್ಪಿಸಿ ಹೊರಡಲು ಸಿದ್ದನಾದ. ಒಂದೆಡೆ ತವರಿಗೆ ಮರಳುವ ಖುಷಿ ಮತ್ತೊಂದೆಡೆ ಗಳೆಯರನ್ನು, ತನಗೆ ಸಹಾಯ ಮಾಡಿದ ಬಾಡಿಗೆ ಮಾಲಿಕರನ್ನ, ಮೂರು ವರುಷ ಕೆಲಸ ಮಾಡಿದ ಸ್ಥಳವನ್ನ ಬಿಟ್ಟು ಹೋಗುವಾಗ ಬೇಸರವೂ ಕೂಡಾ ಆಯಿತು.ಮಾರನೆ ದಿನ ತನ್ನ ತವರಿಗೆ ಮರಳಿದ ಒಂದೆರೆಡು ದಿನ ಅಪ್ಪ ಅಮ್ಮ ತಮ್ಮಂದಿರ ಜೋತೆಯಲಿ ಕಾಲ ಕಳೆದು ತನ್ನ ಹೊಸ ಕೆಲಸಕ್ಕೆ ಸೇರಿಕೊಳ್ಳಲು ರಾಜಧಾನಿಯತ್ತ ಪ್ರಯಾಣ ಬೆಳಸಿದ. ಮತ್ತೆ ಚಿಗುರಲಾರಂಭಿಸಿದವು ಹೊಸ ಹೊಸ ಕನಸ್ಸುಗಳು. ಈತ ಈಗ ಸೇರಿಕೊಂಡ ಕಂಪನಿ ಒಂದು ಸುಪ್ರಸಿದ್ದ ಬಹುರಾಷ್ಟೀಯ ಕಂಪನಿಯಾಗಿತ್ತು. ಅತ್ತ ತಂದೆ ತಾಯಿಗೂ ಖುಷಿ.. ಮಗನ ವೃತ್ತಿ ಜೀವನ ಸರಿಯಾಗಿ ನಡೆಯುತ್ತಿದೆ. ಹಿರಿಯನಾದ ಮಗನಿಗೆ ಒಂದು ಒಳ್ಳೆಯ ಸಂಬಂಧ ನೋಡಿ ಮದುವೆ ಮಾಡಬೇಕೆಂದು ನಿರ್ಧಾರಕ್ಕೆ ಬರುತ್ತಾರೆ. ವಿಜಯ ತುಂಬಾ ಜಾಣ ಸುಸಂಸ್ಕೃತ ಹುಡುಗನಾಗಿದ್ದ. ರೂಪದಲ್ಲಿ ಗುಣದಲ್ಲಿ ನಡೆ ನುಡಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದ. ಎಷ್ಟೊ ಹುಡುಗಿಯರಿಗೆ ಇವನು ಅಚ್ಚುಮೆಚ್ಚು ಆದರೆ ವಿಜಯ ಮಾತ್ರ ಎಲ್ಲಾ ಗೆಳತಿಯರನ್ನು ತನ್ನ ಸಹಪಾಟಿಗಳು ಅಕ್ಕ ತಂಗಿಯರು, ಸಹೋದರಿಯರು ಎನ್ನುವ ಭಾವನೆ ಇಟ್ಟುಕೊಂಡಿದ್ದ. ತಂದೆ, ವಿಜಯಾ ನೀನು ಈಗ ಒಳ್ಳೆಯ ಕೆಲಸದಲ್ಲಿದ್ದಿಯ ಇನ್ನೂ ನಿನಗೊಂದು ಮದುವೆ ಮಾಡಬೇಕು ಎಂದುಕೊಂಡಿದ್ದೇನೆ ಇದಕ್ಕೆ ನಿನ್ನ ಅಭಿಪ್ರಾಯವ ತಿಳಿಸುವೆಯಾ ಅಂದರು. ಅದಕ್ಕೆ ತಂದೆಯ ತಾಯಿಯ ವಿಧೆಯನಾಗಿ ಬೆಳೆದ ವಿಜಯನಿಗೆ ಮುಜುಗರ.., ತಮ್ಮ ಇಚ್ಚೆಯಂತೆ ಆಗಲಿ ಎಂದು ತಿಳಿಸಿದ. ವಿಜಯನ ಸಮ್ಮತಿಯಿಂದ ತಂದೆ ಕನ್ಯೆಯ ಹುಡುಕಾಟ ಪ್ರಾರಂಭಿಸಿದರು.ರೂಪವಂತ ಗುಣವಂತನಾದ ವಿಜಯನಿಗೆ ಹುಡುಗಿಯ ಹುಡುಕುವುದು ಅಷ್ಟೇನು  ಕಷ್ಠಕರವೆನ್ನಿಸಲಿಲ್ಲ. ತಂದೆಯ ಗೆಳೆಯನ ಸಹಾಯದಿಂದ ಒಂದು ಕನ್ಯೆಯ ಬುಲಾವು ಬಂದಿತು. ಕನ್ಯೆಯು ವಿದ್ಯಾವಂತೆ ಸೌಂದರ್ಯವತಿ ಆಗಿ ಕಂಡು ಬಂದುದ್ದರಿಂದ ಮುಂದುವರೆಯಲು ವಿಚಾರಿಸಿದರು. ಒಳ್ಳಯ ಮನೆತನದವರಾದ ವಿಜಯನ ತಂದೆಯವರು ಹುಡುಗಿಯವರ ಕಡೆಯಿಂದ ಏನನ್ನೂ ಅಪೇಕ್ಷಿಸದೆ ಮದುವೆಗೆ ಸೈ ಎಂದು ಸೂಚಿಸಿದರು. ಮುಗ್ಧ ಹುಡುಗ ಹೆಂಗಳೆಯರ ಬಗ್ಗೆ ಗೌರವ ಭಾವನೆ ಇಟ್ಟುಕೊಂಡು ಬೆಳೆದವನು.ತನ್ನ ಕೈ ಹಿಡಿದು ಬಂದ ಹೆಣ್ಣು ತನ್ನ ತನು ಮನದಿಂದ ಒಪ್ಪಿಕೊಂಡು ಸಂಸಾರ ನಡೆಸಲು ಪ್ರಾರಂಭಿಸಿದನು. ಅವಳು ಒಂದು ಸಣ್ಣ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಸಂಸಾರ ನಡೆಸಲು ಅನುಕೂಲವಾಗುವಂತೆ ಅವಳ ಕಚೇರಿಯ ಹತ್ತಿರವೇ ಮನೆ ಮಾಡಿದನು. ಗಂಡನ ಪ್ರೀತಿಗೆ ಪಾರವೇ ಇರಲಿಲ್ಲ. ಹೇಳಿ ಮಾಡಿಸಿದ್ದ ಜೋಡಿ ಎನ್ನುವ ಹಾಗೆ ಜೀವನ ಸಾಗಿತ್ತು...! ಹೆಣ್ಣಿನ ಬಗ್ಗೆ ಹೇಳಬೇಕೆಂದರೆ ೩ ವರುಷದ ಹಿಂದೆಯೇ ಆ ಊರಿಗೆ ಬಂದು ತನ್ನ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದು ಕಲಿತವಳು. ಅಷ್ಟು ಬಿಟ್ಟರೆ ವಿಜಯನಿಗೆ ಮತ್ತೆನೂವಳ ಬಗ್ಗೆ ತಿಳಿದಿರಲಿಲ್ಲ. ತನ್ನ ವಿದ್ಯಾಬ್ಯಾಸದ ಜೀವನದಲ್ಲಿ ಕಂಡಂತೆ ಎಲ್ಲ ಹುಡುಗಿಯರು ಒಳ್ಳೇಯವರೆ ಎಂಬ ಅವನ ಭಾವನೆ...ಬೆಳ್ಳಗೆ ಇದ್ದುದ್ದೆಲ್ಲಾ ಹಾಲಲ್ಲಾ ಎನ್ನುವುದ ತಿಳಿಯದ ಅವನು ಎಲ್ಲೋ ಸ್ವಲ್ಪ ಎಡವಿದ್ದ. ತಂದೆ ತಾಯಂದಿರಿಗೂ ಹೀಗೊಂದು ಹೆಣ್ಣಿನ ಮನೆಯವರ ವಿಚಾರಣೆ ಹೆಣ್ಣಿನ ಬಗ್ಗೆ ತಿಳಿದುಕೊಳ್ಳದೇ ಎಲ್ಲೋ ಅವರು ಕೂಡಾ ಎಡವಿದ್ದರು.....( ವಿಜಯನ ವೈವಾಹಿಕ ಜೀವನ ಮುಂದುವರೆವುದು....)

Comments

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು