ನಾಯಕ : ರಾಜ್ ಗೆಳೆಯರು : ಮೊಹನ , ಪವನ , ಮಂಜು
ನಾಯಕಿ : ಸುಮನಾ ಗೆಳೆಯರು : ಸ್ಮಿತಾ , ಕಾವ್ಯಾ, ಕವನ , ನಯನಾ , ಗೀತಾ
ಸನ್ ೧೯೮೦ ಇಸವಿಯ ಕಥೆ ಇದು..,ನಾಯಕ ರಾಜ್ ಒಬ್ಬ ಪ್ರತಿಭಾವಂತ, ಸುಸಂಸ್ಕೃತ, ಸ್ವಲ್ಪ ನಾಚಿಗೆ ಸ್ವಭಾವದ, ಒಳ್ಳೆಯ ಮನೆತನದ ಹುಡುಗ. ತಂದೆ ಅರೆಸರ್ಕಾರಿ ನೌಕರಿ ಅಧಿಕಾರಿ , ತಾಯಿ ಒಬ್ಬ ಅಧ್ಯಾಪಕಿ. ಮಗನಿಗೆ ಶಿಸ್ತಿನಿಂದ ಬೆಳೆಸುವಲ್ಲಿ ಇಬ್ಬರ ಪಾತ್ರವೂ ದೊಡ್ಡದು. ರಾಜ್ ಶಾಲಾ ಅಭಾಸ ಮುಗಿಸಿದ ನಂತರ ದೂರದ ಊರಿನಲ್ಲಿ
ಪಿ ಯು ಸಿ ಮುಗಿಸಿ ಉತ್ತಮ ಅಂಕ ಪಡೆದು ಮುಂದಿನ ಅಭಾಸಕ್ಕೆ ಯಾವ ಕಾಲೇಜು ಸೇರಿಕೊಳ್ಳಬೇಕು ಅನ್ನುವ
ಚಿಂತೆಯಲ್ಲಿ ತೊಡಗಿರುತ್ತಾನೆ. ಅಷ್ಟರಲ್ಲಿ ಇವನಿಗೆ ಒಂದು ಒಳ್ಳೆಯ ಕಾಲೇಜಿನಿಂದ ಸಂದರ್ಶನಕ್ಕೆ ಆಹ್ವಾನ ಬರುತ್ತದೆ. ಸಂತಸಗೊಂಡ ರಾಜ್ ಎಲ್ಲ ತರಹದ ತೈಯ್ಯಾರಿ ಮಾಡಿಕೊಂಡು
ನಿಗದಿತ ದಿನದಂದು ಕಾಲೇಜಿಗೆ ಹೊರಡಲು ಸಜ್ಜಾಗುತ್ತಾನೆ. ಅಪ್ಪ ಅಮ್ಮನ ಆಶಿರ್ವಾದ ಪಡೆದು, ದೇವರಿಗೆ ನಮಸ್ಕಾರ ಮಾಡಿ ಹೊರಡುತ್ತಾನೆ. ಕಾಲೇಜಿನ ಆವರ್ಣ ನೋಡುತ್ತಿದ್ದಂತೆಯೇ ಏನೋ
ಖುಶಿ ಏನೋ ಉಲ್ಲಾಸ. ಮುಖ್ಯ ಅಧಿಕಾರಿಗಳ ಕಚೇರಿಯ ಹೊರಗೆ ಸರದಿಗಾಗಿ ಕಾಯುತ್ತಿರುವ ಹುಡುಗರನ್ನು ಕಂಡು ತಾನೂ ಅಲ್ಲೆ
ತನ್ನ ಸರದಿಗಾಗಿ ಕಾಯುತ್ತಾ ನಿಲ್ಲುತ್ತಾನೆ. ಬರುವ ಹೋಗುವ ಹುಡುಗರ ನೋಡುತ್ತಾ ಅವರ ಮುಖದ ಭಾವನೆಗಳನ್ನು ಆಲಿಸುತ್ತಾನೆ, ಕೆಲವರು ಖುಶಿಯಿಂದ ಹೊರ ಬರುತ್ತಿದ್ದರೆ ಕೆಲವರು
ಪೇಚು ಮುಖ ಧರಿಸಿ ಹೊರಬರುತ್ತಿದ್ದರು. ಕೊನೆಗೆ ರಾಜ್ ನ ಸರದಿ ಬಂತು. ರಾಜ್ ಒಳ್ಳೆಯ ಅಂಕ ಪಡೆದುದರಿಂದ ಪ್ರವೇಶ ಸುಲಭವಾಗಿ ದೊರೆಯಿತು. ಎಲ್ಲಾ ಕಚೇರಿಯ ಕಾರ್ಯಗಳನ್ನು ಮುಗಿಸಿ ಮನೆಗೆ ಹಿಂತಿರುಗುತ್ತಾನೆ. ಅಪ್ಪ ಅಮ್ಮನಿಗೆ ಸುದ್ದಿ ಕೇಳಿ ತುಂಬಾ ಸಂತೋಷವಾಗುತ್ತದೆ. ಒಬ್ಬನೆ ಮಗ ದೂರವಿದ್ದು ಕಲಿತದ್ದು ಸಾಕು
ಪದವಿಯಾದರೂ ನಮ್ಮ ಹತ್ತಿರದಲ್ಲೇ ಇದ್ದು ಕಲಿಯಲಿ ಅನ್ನುವ ಆಸೆ ಅವರದಾಗಿತ್ತು.
ಹೊಸ ಕನಸ್ಸು , ಹೊಸ ಜನ , ಹೊಸ ಧೇಯ ಓದಿ ದೊಡ್ಡ ಪದವೀಧರನಾಗುವ ಹುಮ್ಮಸ್ಸು. ಕಾಲೇಜಿನ ದಿನಗಳೆ ಹಾಗೆ ದಿನವೂ ಹೊಸ ಹೊಸ
ಅನುಭವಗಳು. ಕಾಲೇಜಿನ ಮೊದಲ ದಿನ, ಯಾರ ಗುರುತು ಪರಿಚಯವಿಲ್ಲ ಕಾರಣ ಇವನು ಓದಿದ್ದು ಬೇರೆ ಊರಿನಲ್ಲಿ. ಮೊದಲನೆ ದಿನವಾದುದ್ದರಿಂದ ಬೇಗನೆ ಎದ್ದು, ನಿತ್ಯ ಕರ್ಮಗಳನ್ನು ಮುಗಿಸಿ, ದೇವರ ಪೂಜೆ ಮಾಡಿ, ಅಪ್ಪಾ ಅಮ್ಮಂದಿರಿಗೆ ನಮಿಸಿ ಬಸ್ ತಂಗುದಾಣದೆಡೆಗೆ
ಹೊರಡುತ್ತಾನೆ. ತಂಗುದಾಣದಲ್ಲಿ ಎಷ್ಟೋ ಹುಡುಗ ಹುಡುಗಿಯರು ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಒಮ್ಮೆ ಎಲ್ಲರೆಡೆಗೆ ಕಣ್ಣಾಯಿಸಿ ಖಾಲಿ ದಾರಿಯೆಡೆಗೆ
ಮುಖ ಮಾಡಿ ಕಾಯುತ್ತಾ ನಿಲ್ಲುತ್ತಾನೆ. ಕೆಲ ಸಮಯದ ನಂತರ ನೀಲಿ ಬಿಳಿ ಬಣ್ಣದ ಬಸ್ಸು ಬಂದು ತಂಗುದಾಣವನ್ನು ತಲುಪುತ್ತದೆ. ಬಸ್ಸನ್ನು ಏರಿ ಅರ್ಧ ಗಂಟೆಯಲ್ಲಿ ತನ್ನ ಕಾಲೇಜನ್ನು
ತಲುಪುತ್ತಾನೆ. ತನ್ನ ಜೊತೆ ಮತ್ತೆ ಕೆಲ ಹುಡುಗ ಹುಡುಗಿಯರು ಅದೇ ಕಾಲೇಜಿಗೆ ಹೋಗಲು ಇಳಿಯುತ್ತಾರೆ.
ಕಾಲೇಜಿಗೆ ಹತ್ತಿರ ಬರುತ್ತಿದ್ದಂತೆಯೆ ಒಬ್ಬ
ಹುಡುಗ ರಾಜ್ ನ ಬಳಿ ಬಂದು., ನೀನು ಹೊಸ ವಿಧ್ಯಾರ್ಥಿನಾ ಅಂತಾ ಕೇಳುತ್ತಾನೆ, ಅದಕ್ಕೆ ಹೌದು ಅನ್ನುತ್ತಾನೆ. ಸರಿ ಕಾಲೇಜು ಮುಗಿದ ಮೇಲೆ ಸಿಗೋಣ ಎಂದು ಹೊರಟು ಹೋಗುತ್ತಾನೆ. ನೋಟಿಸ್ ಬೋರ್ಡನ್ನು ನೋಡಿ ತನ್ನ ತರಗತಿಯ
ಮಾಹಿತಿ ಪಡೆದು ಕ್ಲಾಸಿನತ್ತ ಹೊರಡುತ್ತಾನೆ. ವ್ಹಾ…ಎಂತಹ ದೊಡ್ಡ ಕೋಣೆ…, ಗೋಡೆಯ ಮಧ್ಯ ಭಾಗದಲ್ಲಿ ಬಿಳಿಯ ಗಾಜಿನ ಬೋರ್ಡು ( ಬಹುತೇಕ ಕಾಲೇಜುಗಳಲ್ಲಿ ಈಗ ಗಾಜಿನ ಬೋರ್ಡನ್ನು ಬಳಸುತ್ತಾರೆ, ಶಾಲೆಯಲ್ಲಿ ಕಪ್ಪು ಬೋರ್ಡನ್ನು ನೋಡಿ ಅಭಾಸ
ಅಲ್ಲವೇ ) ಮಿರ ಮಿರ ಮಿನುಗುವ ಚ್ವಕ್ಕವಾದ ಬೆಂಚುಗಳು, ದೊಡ್ಡ ದೊಡ್ಡ ಕಿಟಕಿಗಳು, ಕಿಟಕಿಯಿಂದ ಕಾಣುವ ವಿಶಾಲವಾದ ಕ್ರೀಡಾಂಗಣ. ರಾಜ್ ಒಂದು ವಿಸ್ಮಯ ಜಗತ್ತಿಗೆ ಕಾಲಿಟ್ಟ
ಅನುಭಾವವಾಯಿತು. ಕಾಲೇಜು ಜೀವನದ ಮೊದಲ ಕ್ಲಾಸು…, ಬಿಳಿ ಅಂಗಿ ಬಿಳಿ ಪ್ಯಾಂಟು ಧರಿಸಿ ಕೈಯಲ್ಲಿ ಒಂದು ಪುಸ್ತಕ, ಮಾರ್ಕರ್ ಹಾಗು ಡಸ್ಟರ್ ಹಿಡಿದ ವ್ಯಕ್ತಿ ಕ್ಲಾಸನ್ನು ಪ್ರವೇಶಿಸುತ್ತಾನೆ. ರಾಜ್ ಇವನು ಬಹುಶಃ ಪಿವನ್ ಇರಬೇಕು ಲಕ್ಚರರ್
ಅವರ ಸಾಮಗ್ರಿಗಳನ್ನು ಇಡಲು ಬಂದಿರಬಹುದು ಅಂದುಕೊಳ್ಳುತ್ತಾನೆ. ಎಲ್ಲರೂ ಎದ್ದು ನಿಲ್ಲುತ್ತಾರೆ….ಕೂತುಕೊಳ್ಳಿ ವಿಧ್ಯಾರ್ಥಿಗಳೇ ಎಂದಾಗ ರಾಜ್ ಗೆ ಅಚ್ಚರಿ ಅರೆ…ಇವರು ಲಕ್ಚರರಾ …? ಲಕ್ಚರರ್ ತಮ್ಮ ಪರಿಚಯ ಹೇಳಿ ತಾವು ಗಣಿತ
ಹೇಳಿಕೊಡುವವರು ಅಂತಾ ಹೇಳುತ್ತಾರೆ.. ಓಹೋ ಇವರೇ ಆ ಸ್ಟ್ರಿಕ್ಟ ಮೇಷ್ಟ್ರು ಹುಡುಗರು ಆಡಿಕೊಳ್ಳುತ್ತಿದ್ದವರು…ಅಬ್ಬಾ ಸ್ವಲ್ಪ ಹುಷಾರ್ ಆಗಿರಬೇಕು. ತದ ನಂತರ ಒಬ್ಬರಾದ ಮೇಲೆ ಒಬ್ಬರು ಬಂದು ಎಲ್ಲರ
ಪರಿಚಯ ಪಡೆದು ಮುಂದಿನ ದಿನದಿಂದ ಪಾಠ ಶುರುಮಾಡುತ್ತೇವೆ ಅಂತಾ ಹೇಳಿ ಹೊರಡುತ್ತಾರೆ. ಮೊದಲನೆ ದಿನ ಪರಿಚಯದೊಂದಿಗೆ ಮುಗಿಯುತ್ತದೆ. ರಾಜ್ ಗೆ ಒಂದು ತರದ ನಿರಾಳ ಹಾಗು ಉತ್ಸುಕತೆ. ಮನೆಗೆ ಹೊರಟ ರಾಜ್ ಗೆ ಬೆಳಿಗ್ಗೆ ಮಾತನಾಡಿದ
ಹುಡುಗ ತನ್ನ ಮತ್ತಿಬ್ಬರ ಗೆಳೆಯರೊಂದಿಗೆ ಬಂದು ಇವನನ್ನ ತಡವುತ್ತಾನೆ. ನೋಡಪ್ಪಾ ನಾವು ಈ ಕಾಲೇಜಿನ ಸೀನಿಯರ್ಗಳು
ದಿನ ನಾವು ಕಂಡಾಗ ನಮಸ್ಕರಿಸಬೇಕು ತಿಳಿತಾ..ಅಂದರು. ರಾಜ್ ಗೆ ಇದೆಲ್ಲಾ ಹೊಸ ಅನುಭವ. ಸರಿ ಅಂತ ಹೇಳುತ್ತಾನೆ, ಕೆಲವು ಕೀಟಲೆ ಪ್ರಶ್ನೆಗಳನ್ನ ಕೇಳಿ ಅವನನ್ನ ಕಾಡಿಸುತ್ತಾರೆ. ತಂಗುದಾಣ ತಲುಪುತ್ತಿದ್ದಂತೆ ಬಸ್ಸು ಬರುತ್ತದೆ.ಅಂದಿನ ಕಥೆ ಅಲ್ಲಿಗೆ ಮುಕ್ತಾಯವಾಯಿತು. ಮರುದಿನ ಮತ್ತೆ ರಾಜ್ ಕಾಲೇಜಿಗೆ ಹೊರಡುತ್ತಾನೆ…ಮತ್ತೆ ಅವೇ ಹುಡುಗರು ಇವನನ್ನ ಕಾಡಿಸಲು ಶುರುವಿಡುತ್ತಾರೆ…, ರಾಜ್ ಗೆ ರೇಗಿ ಹೋಗುತ್ತದೆ.. ಅವರಿಗೆ ತಿರುಗಿ ಹೇಳುತ್ತಾನೆ, ನೀವುಗಳು ನನಗೆ ಹೀಗೆಯೇ ತೊಂದರೆ ಕೊಡುತ್ತಿದ್ದರೆ
ನಾನು ಕಾಲೇಜಿನ ಪ್ರಿನ್ಸಿಪಾಲರಿಗೆ ದೂರು ನೀಡುತ್ತೇನೆ, ಸುಮ್ಮನೆ ನಿಮ್ಮ ಪಾಡಿಗೆ ನೀವು ಇದ್ದುಬಿಡಿ ಇಲ್ಲಾ ಪರಿಣಾಮ ನೆಟ್ಟಗಾಗುವುದಿಲ್ಲ
ಅಂದು ಬಿಡುತ್ತಾನೆ. ಇವನ ಮಾತು ಕೇಳಿ ಹುಡುಗರು ಸ್ವಲ್ಪ ಭಯ ಭೀತರಾಗುತ್ತಾರೆ. ಓಹೋ ಇವನ ತಂದೆ ವಿದ್ಯುತ್ ಅಧಿಕಾರಿ ಇವನನ್ನು ಮುಟ್ಟಿದರೇ ಶಾಕ್
ಹೊಡೆಯುತ್ತೆ ಅನ್ನುತ್ತಾ ವ್ಯಂಗ್ಯವಾಡುತ್ತಾರೆ. ಮರುದಿನ ದಿಂದ ಎಲ್ಲರು ಇವನ ಗೆಳೆಯರಾಗುತ್ತಾರೆ. ಇಲ್ಲಿಗೆ ರಾಜ್ ಗೆ ಸ್ವಲ್ಪ ಗೆಳೆಯರ ಪರಿಚಯವಾಯಿತು. ಕ್ಲಾಸಿನಲ್ಲಿ ಪಕ್ಕದಲ್ಲಿ ಕೂತುಕೊಳ್ಳುವರ
ಜೊತೆ ಕೂಡ ಇವನ ಗೆಳೆತನ ಶುರುವಾಗುತ್ತದೆ. ದಿನಗಳು ಕಳೆದಂತೆ ಮೊಹನ , ಪವನ , ಮಂಜು ಅವರೊಂದಿಗೆ ತುಂಬಾ ನಿಕಟ ಗೆಳೆತನ ಬೆಳೆಯುತ್ತದೆ. ಜೊತೆ ಜೊತೆಯಲೇ ಚಾಹ, ಊಟ, ಪಾಠ . ಕಾಲೇಜು ಅಂದ ಮೇಲೆ ಹುಡುಗಯರ ಕೂಡಾ ಇರ್ತಾರಲ್ವಾ… ಹಾಗೆ ನಮ್ಮ ರಾಜ್ ಗೆ ಒಬ್ಬ ಹುಡುಗಿಯ ಪರಿಚಯವಾಗುತ್ತದೆ, ಅವಳ ಹೆಸರು ನಯನಾ. ಇವಳ ಕೂಡ ಮಾತನಾಡುತ್ತ ರಾಜ್ ಗೆ ಒಂದು ವಿಶಯ
ತಿಳಿಯುತ್ತದೆ ಅದೇನೆಂದರೆ ಚಿಕ್ಕವರಿದ್ದಗಲೇ ನಯನಾ ಹಾಗು ರಾಜ್ ಒಂದೆ ಶಾಲೆಯಲ್ಲಿ ಎಲ್ ಕೇಜಿ ಓದಿರುತ್ತಾರೆ. ೧೮ ವರ್ಷಗಳ ಹಿಂದೆ ನೋಡಿದ ಮುಖ ಹೇಗೆ ತಾನೆ
ನೆನೆಪಿರಬೇಕು ಅಲ್ಲವೇ ? ಈ ವಿಷಯ ತಿಳಿಯುತ್ತಲೇ ಇವರ ಸ್ನೇಹ ಇನ್ನೂ ಘಾಡವಾಗುತ್ತದೆ. ರಾಜ್ ತನ್ನ ಗೆಳೆಯರಾದ ಮೊಹನ , ಪವನ , ಮಂಜು ಇವರನ್ನು ನಯನಾಳಿಗೆ ಪರಿಚಯಿಸುತ್ತಾನೆ. ಹಾಗೆ ನಯನಾ ಕೂಡ ತನ್ನ ಗೆಳತಿಯರಾದ ಸ್ಮಿತಾ, ಕಾವ್ಯಾ, ಕವನ ಹಾಗು ಸುಮನಾ ಳನ್ನು ಪರಿಚಯಿಸುತ್ತಾಳೆ. ಇಲ್ಲಿಗೆ ಕಾಲೇಜಿನ ಬಣ್ಣ ಬಣ್ಣದ ಬದುಕಿಗೆ ಕಾಲಿಟ್ಟ ಗೆಳೆಯ ಗೆಳತಿಯರು ಹೀಗೆ ಒಂದು ಗೂಡುತ್ತಾರೆ ಹಾಗು ಒಂದು ಒಳ್ಳೆಯ ಸ್ನೇಹಲೋಕ ಶೃಷ್ಟಿಯಾಗುತ್ತದೆ. ಹುಡುಗ ಹುಡುಗಿಯರೆಲ್ಲರೂ ಒಳ್ಳೆಯ ಅಂಕ ಪಡೆದವರಾಗಿರುತ್ತಾರೆ. ಇವರೆಲ್ಲರೂ ಬೆರೆ ಬೆರೆ ವರ್ಗದಲ್ಲಿ ಅಭಾಸ
ಮಾಡುತ್ತಿರುತ್ತಾರೆ. ಇಷ್ಟರಲ್ಲಿ ನಾಯಕ ರಾಜ್ ಗೆ ಮತ್ತೊಬ್ಬ ಹುಡುಗಿ ತನ್ನದೇ ಕ್ಲಾಸಿನವಳಾದ ಗೀತಾ ಜೊತೆ ಸ್ನೇಹವಾಗುತ್ತದೆ. ಕಾಲೇಜಿಗೆ ಕಾಲಿಟ್ಟು ೬ ಮಾಸಗಳು ಕಳೆದಿರುವುದಿಲ್ಲ
ಮೊದಲನೆ ಸೆಮಿಷ್ಟರ್ ಪರೀಕ್ಷೆಗಳು ಬರುತ್ತವೆ. ಎಲ್ಲರೂ ಅಭಾಸದ ತಯ್ಯಾರಿಯಲ್ಲಿ ಮುಳುಗುತ್ತಾರೆ. ಒಂದು ತಿಂಗಳುಗಳ ಕಾಲ ಪರೀಕ್ಷೆ ನಡೆಯುತ್ತದೆ. ಮತ್ತೆ ಯಥಾವತ್ತಾಗಿ ಕ್ಲಾಸುಗಳು ಪ್ರಾರಂಭವಾಗುತ್ತವೆ. ಮತ್ತ ಗೆಳೆಯರ ಮಾತುಗಳು,ಹಾಸ್ಯ, ತುಂಟತನ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಎಲ್ಲರ ಜೀವನದಲ್ಲಿ ಒಂದು ಟರ್ನಿಂಗ್ ಪಾಯಿಂಟ
ಬರುತ್ತದೆ ಅಂತೆ ಹಾಗೆ ಮೊದಲನೆಯ ಸೆಮಿಷ್ಟರ್ ರಿಜಲ್ಟಗಳು ಬರುತ್ತವೆ. ಕೆಲವರಿಗೆ ಖುಶಿ ಕೆಲವರಿಗೆ ದುಃಖ. ನಮ್ಮ ನಾಯಕ ರಾಜ್ ಗೆ ಆಶ್ಚರ್ಯ್ ಕಾದಿತ್ತು…ಇಲ್ಲಿತನಕ ಒಳ್ಳೆಯ ಶೇಣಿಯಲ್ಲಿ ಅಂಕ ಪಡೆಯುತ್ತಿದ್ದವನು
ಒಮ್ಮಿಂದೊಮ್ಮೆಲೆ ಎರಡು ವಿಷಯದಲ್ಲಿ ನಪಾಸಾಗಿರುತ್ತಾನೆ. ದುಃಖದಲ್ಲಿ ಮುಳುಗಿದ ರಾಜ್ ಮಂಕಾಗಿ ಬಿಡುತ್ತಾನೆ. ಅವನಿಗೆ ತನ್ನ ಆತ್ಮಸ್ಥೈರ್ಯ ಕುಗ್ಗಿದಂತಾಗುತ್ತದೆ. ಕಾಲೇಜಿನಲ್ಲಿ ಕೂಡ ಒಬ್ಬೊಬ್ಬನೆ ಇರಲು ಪ್ರಾರಂಭಿಸುತ್ತಾನೆ. ಒಮ್ಮಿಂದೊಮ್ಮೆಲೆ
ಇಂತಹ ಆಘಾತವಾಗುವದು ಅಂತ ಕನಸು ಮನಸ್ಸಿನಲ್ಲೂ ನೆನೆಸಿರಲಿಲ್ಲ. ಗೆಳೆಯ ಗೆಳತಿಯರೆಲ್ಲಾ ತೇರ್ಗಡೆಯಾಗಿರುತ್ತಾರೆ.
ಯಾವಾಗಲೂ ಇವನ ನಗು ಮುಖವ ನೋಡಿದವರು ಇವನ ಪೇಚು ಮುಖ ಕಂಡು ಮರಗುತ್ತಾರೆ. ಇಂತಹ ಸಮಯದಲ್ಲಿ ಧರ್ಯ ಹೇಳಲು
ಸುಮನಾ ಮುಂದಾಗುತ್ತಾಳೆ. ಅವನ ಸ್ವಭಾವವನ್ನು ಅರಿತ ಸುಮನಾ , ಅವನನ್ನು ಹೋಗಿ ಭೇಟಿಯಾಗುತ್ತಾಳೆ..ಅವನನ್ನು
ಕುರಿತು., ನೋಡು ರಾಜ್ ಹೀಗೆ ಆಯ್ತು ಅಂತ ತಲೆ ಕೆಡೆಸಿಕೊಳ್ಳುವುದರಲ್ಲಿ ಏನೂ ಫಲವಿಲ್ಲ, ಆಗಿದ್ದುದನ್ನು
ಹೇಗೆ ಸರಿಪಡಿಸಿಕೊಳ್ಳಬೇಕು ಅಂತಾ ವಿಚಾರ ಮಾಡು. ಮುಂದಿನ ಪರೀಕ್ಷೆಯಲ್ಲಿ ಸರಿಯಾಗಿ ಮಾಡಿ ಒಳ್ಳೆಯ
ಅಂಕ ಪಡೆದರಾಯಿತು, ಅದಕ್ಕೆ ಬೇಕಾದ ಸಹಾಯ ನಾನು ಮಾಡುತ್ತೇನೆ ಅಂತಾ ಸಹಾಯ ಹಸ್ತ ಚಾಚುತ್ತಾಳೆ. ರಾಜ್
ಗೆ ಅವಳ ಮುಂದೆ ಮುಜುಗರ…. ಆದರೂ ಸ್ವಲ್ಪ ಸುದಾರಿಸಿಕೊಂಡು.., ಸುಮನಾ ನೀನು ಹೇಳುವುದರಲ್ಲಿ ನಿಜಾಂಷವಿದೆ.
ನನಗೆ ಗಣಿತವೆಂದರೆ ಭಯವಾಗುತ್ತದೆ, ಆ ವಿಷಯದ ಬಗ್ಗೆ ಸ್ವಲ್ಪ ಸಹಾಯ ಮಾಡಿದರೆ ನಾನು ಬೇರೆಯ ವಿಷಯಗಳನ್ನು
ಓದಿಕೊಳ್ಳುತ್ತೇನೆ ಅನ್ನುತ್ತಾನೆ. ಸುಮನಾ ತನ್ನ ಎಲ್ಲಾ ಗಣಿತ ಸಂಬಂಧಿಸಿದ ನೋಟ್ಸು ಪುಸ್ತಕಗಳನ್ನು
ಕೊಟ್ಟು ಶುಭ ಹಾರೈಸುತ್ತಾಳೆ. ಅಂದಿನಿಂದ ರಾಜ್ ಗೆ ಸುಮನಾಳ ಕಂಡರೆ ಗೌರವ. ಅವರ ಗೆಳೆತನ ದಿನೆ ದಿನೆ
ಗಾಢವಾಗುತ್ತದೆ. ಈ ತಯ್ಯಾರಿಯಲ್ಲಿ ಮತ್ತೊಂದು ಸೆಮಿಷ್ಟರ್ ಪರೀಕ್ಷೆ ಬಂದೆ ಬಿಡುತ್ತದೆ. ಪೂರ್ಣ ಸಿದ್ದಥೆ
ಮಾಡಿಕೊಂಡು ರಾಜ್ ಪರೀಕ್ಷೆಗೆ ಹಾಜರಾಗುತ್ತಾನೆ. ಪೇಪರುಗಳು ಚೆನ್ನಾಗಿ ಮಾಡಿದ್ದರೂ ಅವನಲ್ಲಿ ಹಳೆಯ
ರಿಜಲ್ಟನ ಕಪ್ಪು ಛಾಯೆ ಇನ್ನೂ ಹೋಗಿರಲಿಲ್ಲ. ಕೊನೆಗೆ ಒಂದು ದಿನ ಏನೂ ಮುನ್ಸೂಚನೆ ಇಲ್ಲದೆ ರಿಜಲ್ಟು
ಬಂದಿರುತ್ತದೆ. ಕಾಲೇಜಿಗೆ ಕಾಲು ಇಡುತ್ತಿದ್ದಂತೆಯೆ ಸುಮನಾ ಎಲ್ಲಿಂದಲೋ ಓಡಿ ಬಂದು ನೀನು ಒಳ್ಳೆಯ
ಅಂಕ ಪಡೆದು ಉತ್ತೀರ್ಣನಾಗಿದ್ದಿಯಾ ಅಂತ ಹೇಳುತ್ತಾಳೆ. ರಾಜ್ ಗೆ ಇನ್ನಿಲ್ಲದ ಸಂತೋಷವಾಗುತ್ತದೆ. ಮೊದಲು
ತಂದೆ ತಾಯಿಗೆ ಪೋನು ಮಾಡಿ ವಿಷಯ ತಿಳಿಸುತ್ತಾನೆ ಅವರು ಕೂಡಾ ಹರ್ಷ ವ್ಯಕ್ತ ಪಡಿಸುತ್ತಾರೆ. ಸುಮನಾ
ನೋಡು ನಾನು ಹೇಳಿರಲಿಲ್ಲವಾ ನೀನು ಮಾಡೇತೀರುತ್ತಿ ಅಂತಾ….ಸರಿ ಈಗ ನಡಿ ನಮಗೆಲ್ಲಾ ಚಹಾ ಪಾರ್ಟಿ ಕೊಡು
ಅಂತಾ ಕರೆಯುತ್ತಾಳೆ. ಗೆಳೆಯ ಗೆಳತಿಯರೆಲ್ಲಾರೂ ಕೂಡಿಕೊಂಡು ಕಾಲೇಜಿನ ಕ್ಯಾಂಟೀನಿಗೆ ಹೊರಡುತ್ತಾರೆ.
(ಮುಂದುವರೆವುದು ….)