Wednesday, July 17, 2013

ಕನ್ಯೆಯ ಜೊತೆ ಮಾತುಕತೆ

ಹುಡುಗ ತಮ್ಮ ತಂದೆ ತಾಯಿ ಜೊತೆ ಹುಡುಗಿಯ ನೋಡಲು ಹೋಗುತ್ತಾನೆ. ಹುಡುಗ ಹುಡುಗಿಯ ಬಗ್ಗೆ ಸ್ವಲ್ಪ ಮಾತುಕತೆ. ಇಬ್ಬರ ಅಪ್ಪಾ ಅಮ್ಮಂದಿರು ಅವರುಗಳು ಮಾತಾಡಿಕೊಳ್ಳಲಿ ಅಂತಾ ಹೇಳಿ ಒಂದು ಕೋಣೆಯೊಳಗೆ ಕಳಿಸುತ್ತಾರೆ.
ಹುಡುಗ : ನಾನು ಅಭಿಯಂತರ ಒಳ್ಳೆಯ ನೌಕರಿಯಲ್ಲಿ ಇದ್ದೇನೆ. ಸಗಮವಾಗಿ ಜೀವನ ಸಾಗಿಸಬಲ್ಲವನಾಗಿದ್ದೇನೆ.
ನಾನು ಕೆಲವು ಪ್ರಶ್ನೆಗಳನ್ನು ಕೇಳಲು ಇಚ್ಚಿಸುತ್ತೇನೆ.., ಏನೂ ಮುಚ್ಚು ಮರೆ ಇಲ್ಲದೆನೆ ಉತ್ತರಿಸು ಅಂದಾ.
ಹುಡುಗ : ನೀನು ಪದವಿ ಮುಗಿಸಿದ್ದೀಯಾ ಇನ್ನೂ ಮುಂದೆ ಓದುವ ಆಸಕ್ತಿ ಇದೆಯಾ..?
ಹುಡುಗಿ :  YES, I'M INTERESTED.
ಹುಡುಗ : ನಿನಗೆ ಮದುವೆ ಆಗಲು ಈಗ ಇಷ್ಟವಿದೆಯಾ..?
ಹುಡುಗಿ : hmm.. YES...
ಹುಡುಗ : ನಿನಗೆ ಸೀರೆ ಉಡಲು ಬರುತ್ತದೆಯೆ ?
ಹುಡುಗಿ : NOT ACTUALLY..
ಹುಡುಗ : ನಿನಗೆ ಅಡುಗೆ ಬರುತ್ತದೆಯೆ ?
ಹುಡುಗಿ : ACTUALLY I DON'T LIKE HOME FOOD, SO I GO TO SHANTI SAGAR, MAATRU SAGAR, KFC, Mc DONALD.
ಹುಡುಗ : ನಿನಗೆ ಕೆಲಸ ಮಾಡಲು ಇಷ್ಟವಿದೆಯಾ ?
ಹುಡುಗಿ : YES.. I WOULD LOVE TO WORK, BECAUSE I CAN'T DEPEND ON YOU FOR ALL MY FANCIES AND DRESS THAT I SHOP REGULARLY.
ಹುಡುಗ : ನೀನು ದೇವರನ್ನು ನಂಬುತಿಯಾ/ದೇವಸ್ಥಾನಕ್ಕೆ ಭೇಟಿ ನೀಡುವ ಅಭಾಸವಿದೆಯಾ ?
ಹುಡುಗಿ : NO I USUALLY DONT PREFER SILENT PLACES, I WOULD LIKE TO GO TO MALLS,MULTIPLEX, SHOP AND SHOP , I LOVE SHOPPING.
ಹುಡುಗ : ನೀನು ಸಿನಿಮಾಗಳನ್ನು ನೋಡ್ತಿಯಾ ?
ಹುಡುಗಿ : YES I DO WATCH MOVIES, ESPECIALLY HOLLYWOOD MOVIES.
ಹುಡುಗ : ನೀನು ಹುಟ್ಟಿದ್ದು ಎಲ್ಲಿ ?
ಹುಡುಗಿ : I WAS BORN IN BANGALORE
ಹುಡುಗ : ನನ್ನ ಕಟ್ಟ ಕಡೇ ಪ್ರಶ್ನೆ " ನಿನಗೆ ಕನ್ನಡ ಓದಲು ಬರಿಯಲು ಮಾತನಾಡಲು ಬರುತ್ತಾ ?
ಹುಡುಗಿ : ACTUALLY I'M A KANNADIGA BUT I SPEAK LESS, I'M NOT SO FLUENT WITH READING AND WRITING.
ಹುಡುಗ : ಥೂ ನಿನ್ನ ಮೊಕಕ್ಕಿಷ್ಟು..............ನಾ ಕೇಳಿದ್ದ ಇಷ್ಟು ಗುಣಗಳಿಲ್ಲಾ ಅಂದ್ರ ನಡಿತಿತ್ತು ಆದರ,  ಕನ್ನಡ ನಾಡಿನಲ್ಲಿ ಹುಟ್ಟಿ, ಕಾವೇರಿ ನೀರ ಕುಡಿದು, ಕನ್ನಡಾ ಮಾತಾಡಾಕ, ಓದಾಕ ಬರಂಗಿಲ್ಲಾ ಅಂದ್ರ ನಿಮ್ಮ ಹಂತವರನ್ನು ಕಟ್ಟಗೊಂಡು ಯಾವ ಜೀವನಾ ಮಾಡ್ಯಾನ.ಹಾಳಾಗ್ ಹೋಗ್ರಿ......
ಹುಡುಗ ಹೊರ ಬಂದು ಅಪ್ಪಾ, ಅಮ್ಮಾ ನಡಿರಿ ಮನಿಗೆ ಹೋಗುಣು ಅಂದಾ ..! :)

1 comment:

Badarinath Palavalli said...

ಹಿಂಗೇ ಆಗೋದು ಸಾರ್. :)

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...