Friday, December 19, 2008
ನಾಚುವ ಬಳ್ಳಿ ನನ್ನವಳು
ಬೆಳಕಿನಲ್ಲಿ ಮುದ್ದಾಡಲು ನಾಚುವಳು,
ಕತ್ತಲಲ್ಲಿ ಬಳಿ ಬರಲು ನಾಚುವಳು,
ಮನವನ್ನು ಬಿಚ್ಚಿದರೂ ತನು ಬಿಚ್ಚದೆ ನಾಚುವಳು,
ಎದೆಯೊಳಗೆ ಅವಿತರು ಬಿಸಿ ಅಪ್ಪುಗೆ ನೀಡಲು ನಾಚುವಳು,
ಚಳಿಯ ಬೇಗೆಗೆ ಬಳಲಿ ನನ್ನ ಮೈಯ್ಯ ಬೇಸಿಗೆಯ ಅರಸಿದರೂ,
ಬಿಗಿದಪ್ಪಿಕೊಳ್ಳಲು............ನಾಚುವಳು,
ನನ್ನ ಪ್ರೀತಿಯ ಬಳ್ಳಿ.... ನಾಚುವಳು....!!!
Friday, November 14, 2008
ಒಲವು ನಮ್ಮಯ ಬದುಕು
ನಿನ್ನ ತುಟಿಯ ಸ್ಪರ್ಶ ಕಂಡು ಮೈ ಮೋಹಗೊಂಡಿದೆ,
ಚಳಿಯ ತಂಪಲಿ ನನ್ನ ಬಿಸಿ ನಿನ್ನ ಬೆಚ್ಚಗೆ ಇರಿಸಿದೆ,
ನಗೆಯು ನಿನ್ನ ಮೊಗದಲಿ ನನ್ನ ಹರುಷಕೆ ಕಾರಣವಾಗಿದೆ,
ಒಲವಿನಿಂದ ನುಡಿದು ನೀನು ನನ್ನ ಪ್ರೀತಿಯ ಉಳಿಸುವೆಯಾ?
ನನ್ನ ವಿಶ್ವಾಸವಗಳಸಿ ನೀ, ನನ್ನ ಹೃದಯವ ಮಿಡಿವೆಯಾ ..!!!
Friday, October 31, 2008
ಚಳಿಯ ಜಳಕ
ಮೈಯ್ಯ ಮೇಲೆ ಅರವಿ ಇಲ್ಲದೆ ನಡುಕ
ಕತ್ತಲೆಯ ಕಣ್ಣ ಅರಸಿ ಮೆತ್ತನೆಯ ತುಟಿಯ ಬಳಸಿ
ಎದೆಯ ದಿಬ್ಬಗಳ ಮೇಲಿಂದ ಹಾರಿ ಹೊಕ್ಕಳ ತಗ್ಗು ತುಂಬಿ
ಅಂಕು ಡೊಂಕು ನಾಜೂಕಿನ ಹರ ದಾರಿ ದಾಟಿ
ದಟ್ಟ ಕಾಡಿನ ತಗ್ಗು ಕಣಿವೆಯ ಮಾಚಿ
ಬಿಸಿಯ ಹನಿಗಳು ತನು ಸವರಿ ಜಾರಿವೆ
ಆ ಬಿಸಿ ಹನಿಗಳು ಮತ್ತಷ್ಟು ಕಾವೇರಿ ಹರೆದಿವೆ
Wednesday, October 29, 2008
ಹಿತ್ತಾಳೆಯ ಹಣತೆ
ಆಗಸಕ್ಕೆ ಸೂರ್ಯನ ಕಿರಣಗಳೇ ಚೆನ್ನ,
ಧರೆಯ ಮೈಸಿರಿಗೆ ಹಸಿರು ಬಣ್ಣ,
ತಂಪನೆಯ ಮುಂಜಾವಿಗೆ ಹಕ್ಕಿಯ ಕವನ,
ದೀಪಾವಳಿಯ ಮುಸ್ಸಂಜೆಗೆ ದೀಪಳ ಹವನ,
ಇಷ್ಟಪಟ್ಟು ಪಡೆದು ಕೊಂಡರೆ ಮನಸ್ಸುಗಳಿಗೆ ಭೂಷಣ,
ಅಪರಂಜಿ ಮೆಟ್ಟಿ ಮಿಂಚಿನ ಮಾನಹರಣ,
ಬೆಲೆಯ ಮೆಟ್ಟಿಲ ಹತ್ತಿ......... ಕೊಂಡಂತೆ,
ಚಿನ್ನದ ದೀಪಗಳಿಗಿಂತ..., ಹಿತ್ತಾಳೆಯ ಹಣತೆಯೇ ಮೆರೆದಂತೆ .
Friday, September 12, 2008
ಎದೆಯ ಕಲರವ
ನಿನ್ನ ನೋಡುವ ತವಕದಿ ಕಾತುರ
ಬಯಸಿದರು ನಿ ಬರಲಿಲ್ಲ ನನ್ನ ಹತ್ತಿರ
ಮನ ಮುಚ್ಚಿಹುದು ತುಂಬಿ ಬೇಸರ
ನಲ್ಲೆ ನಿ ಅರಿಯೆ, ನನ್ನ ಪ್ರೀತಿಯ ಎತ್ತರ
ನಿನ್ನ ಕಾಣದ ನಾನು ದುಃಖ ಭರಿತ ಸಾಗರ
ಈ ಬ್ರಮ್ಮಾಂಡದಲ್ಲಿ ನಿನೋಬ್ಬಳೆ ನನ್ನ ಬಾಳಿನ ನೇಸರ
ಉದಯಿಸಿ ಬಾರೆ , ಇಂಗಿಸು ನನ್ನ ಎದೆಯ ಕಲರವ !!!
Friday, August 29, 2008
ನಮ್ಮ ಸಿಹಿ ನುಡಿ
ಕರ್ನಾಟಕವಿದು ಪುಣ್ಯ ಭೂಮಿ
ಸಂಸ್ಕೃತಿ ನಮ್ಮದು ನೆಚ್ಚಿನ ಹಿರಿಮೆ
ಎಲ್ಲ ಭಾಷಿಗರಿಗೂ ನಮ್ಮ ನೆಲದಲ್ಲಿ ಸ್ವಾಗತ
ಸಮವಾಗಿ ಭಾವಿಸೆವು ಪ್ರೀತಿಯ ತೋರುತ
ನಮ್ಮ ನೆಲದಲ್ಲಿ ನೆಲಸಿದರೂ ನಮಗಿಲ್ಲ ಬೆಸರ
ಎಲ್ಲರಿಗೂ ಕಲ್ಪಿಸಿಕೊಡುವೆವು ಬದುಕುವ ಅವಸರ
ನಮ್ಮ ಜಲವ ಬಯಸಿ ಬಂದೆ ನಿ ಕನ್ನಡವ ಕಲಿ
ಕರ್ನಾಟಕದಲ್ಲಿ ನೆಲಸಿದ ಮೇಲೆ ನಮ್ಮ ಸಂಸ್ಕೃತಿಯ ಮೆರಿ.
Monday, August 04, 2008
ನನ್ನ ಪ್ರೀತಿಯ ನಂಟು
ಅವಳ ಉಳಿವು ಶಾಶ್ವತ
ಬಳಕುವ ಮೈ ಮೋಹಕ
ನಡುಗುವ ನಡೆ ಪ್ರೇರಕ
ಮೊಗದ ಅಂದ ಆಹಾ ಆನಂದ
ಕಣ್ಣು ಮಿಟುಕು ಚಂದವೋ ಚಂದ
ಹುಬ್ಬು ಹರಿವ ನವಿರು
ತುಟಿಯ ಅಂಚು ಸವರು
ಬಯಲ ಹಣೆಯ ಬೊಟ್ಟು
ಇಟ್ಟರೆ ನಿ ಅಚ್ಚು ಕಟ್ಟು
ನಿನ್ನ ವಸ್ತ್ರ ವಿನ್ಯಸಕ್ಕಾಗದು ಬಿಕ್ಕಟ್ಟು
ತಿಳಿಯೆ ನನ್ನ ಒಲವೆ ..ಈ ಮಾತಿನಲ್ಲೂ ನನ್ನ ಪ್ರೀತಿ ಉಂಟು .!
Tuesday, July 22, 2008
ಚಿಲಿಪಿಲಿ ಗುಬ್ಬಿ
ಚಿಲಿಪಿಲಿ ಗುಟ್ಟುವ ಚಿವ್ ಚಿವ್ ಗುಬ್ಬಿ
ನನ್ನ ಹೃದಯದ ಗೂಡು ಸೇರುವ ಛಬ್ಬಿ
ಪ್ರೀತಿಸುವೆ ಬಾರೆ ತಬ್ಬಿ ತಬ್ಬಿ
ಗಲ್ಲವು ನಿನ್ನ ಕೆಂಪೆರುವುದು ಉಬ್ಬಿ
ಹತ್ತಿಯ ಕಟ್ಟಿಗೆಯ ಮೆತ್ತನೆ ಮೆತ್ತಿ
ಮಲಗಿಸುವೆ ಬಾರೆ ಪ್ರೀಯ ಸಂಗಾತಿ .
ಚುಂಚಿನಿಂದ ಚುಂಚನ್ನು ಪೋಣಿಸುವೆ
ಕಣ್ಣಲ್ಲಿ ಕಣ್ಣಿಟ್ಟು ಕಾಡುವೆ
ರೆಪ್ಪೆಯ ಮಿಟುಕಿಸಿ ನಲಿವೆ
ನಿನ್ನ ಚೆಲುವಿನ ಬಣ್ಣ ನನ್ನ ಒಲವಿನ ವರ್ಣ
ಒಬ್ಬರಲ್ಲೊಬ್ಬರು ಬೆರೆತು ನಾವು, ಬಾನಲ್ಲಿ ಹಾರೋಣ .
Wednesday, July 16, 2008
ನಾಚುತ್ತಾಳೆ ನನ್ನವಳು
ನಯವಂತಳು, ನಾಜೂಕಿನವಳು, ಪ್ರೀತಿಯ ಮಾತಾಡಿದರೆ ನಾಚುತ್ತಾಳೆ
ಅಂಜಿಕೆ ಇಲ್ಲದಿದ್ದರೂ ಅಳುಕುತ್ತಾಳೆ, ಅಳುಕಿ ಬಳಳುತ್ತಾಳೆ,
ಒಲವಿನ ಬಳ್ಳಿ ನನ್ನಲ್ಲಿ ಅರಳಿ, ಅವಳನ್ನು ಆದರಿಸಿದರೂ ನಾಚುತ್ತಾಳೆ
ನನ್ನ ಚೆಲುವೆ ...ನನ್ನ ಒಲವು ಕಂಡು ... ತುಂಬಿ ತುಂಬಿ ನಾಚುತ್ತಾಳೆ .
ಕಾಣಲು ತವಕಿಸುತ್ತಾಳೆ ಕಂಡರೆ ಮಿಡಿಯುತ್ತಾಳೆ
ನನ್ನೊಡಲು ಬರುತ್ತಾಳೆ ಮೆಚ್ಚಿಕೊಂಡು ಹಾಡುತ್ತಾಳೆ ,
ನಕ್ಕು ನಕ್ಕು ನನ್ನೊಡನೆ ಸಂತಸ ಪಡುತ್ತಾಳೆ
ಮತ್ತೆ ಕಂಡು ಮನೆಯವರ ಮುಂದೆ ನಾಚುತ್ತಾಳೆ ... ನಾಚುತ್ತಾಳೆ ನನ್ನವಳು.
Tuesday, July 15, 2008
ಬಾರೆ ನನ್ನ ಮುದ್ದಿನ ಗಿಣಿಯೆ
ನನ್ನ ಹೃದಯದ ಆಗಸದಡೆಗೆ
ಬಾನ ಮುಗಿಲ ಕಡಲಾಚೆಗೆ
ಹಾರಿ ಬರಿ ಬಾರೆ ಒಲವಿನ ಓಲೆ ..!
ಬಾರೆ ನನ್ನ ಮುದ್ದಿನ ಗಿಣಿಯೆ
ಮೇಘರಾಯನ ಅರಮನೆಗೆ
ವಜ್ರದ ಹನಿಯ ಕೊಡಿಸುವೆ ನಿನಗೆ
ಸಂತೋಷ ಹೊಮ್ಮಲಿ ನಿನ್ನ ಎದೆಯೊಳಗೆ..!
ಬಾರೆ ನನ್ನ ಮುದ್ದಿನ ಗಿಣಿಯೆ
ತೊಡಿಸುವೆ ನಿನಗೆ ರತ್ನದ ಮಣಿಯೆ
ಸುವರ್ಣ ಬಣ್ಣದ ಅಪರಂಜಿಯೇ
ನನ್ನ ಅಕ್ಕರೆಯ ಪ್ರೀತಿ ಸವಿಯೇ..!
Monday, July 14, 2008
प्यार नही मिलता..!!!
यार से मांगो तो भी प्यार नही मिलता,
दिलदार से मांगो तो फिर भी प्यार नही मिलता,
चाहत है उस प्यार को पाने की,
ना चाहते हुए भी राहत नही मिलता..!
Tuesday, July 01, 2008
अर्मन
आपके हसी से फूल बरसे,
जलक पाने की हर दिल तरसे,
आपकी ख़ूबसूरती आपको अंदाज़ा नही,
अँधा भी आपको हर पल देखने को तरसे...!
ग़ुस्से में भी आपकी शान है,
तेवर तो आपकी किसिकि जान है,
तीर आपकी नज़र की चीरदे हमको,
ऐसा ही कुछ अपने दिल के अर्मन है...!
अल्फ़ाज़
आँखों की साया में मोहब्बत लिक्दु,
होटों के शबाब में प्यार लिक्दु,
गालों के गुलाब पे पैगाम लिक्दु,
अगर ना आए यक़ीन तो,
आपके दिल के दरवाज़े पे अल्फ़ाज़ लिक्दु....!
ಧರೆ ದ್ವರೆ
ಬಾನು ಹನಿ ಒಡೆಯಲು ಕಾದಿಹಳು ತಾನು
ಧೂಳು ತುಂಬಿದ ಕಸದ ಸುಳಿ
ತೂರಿ ಎಬ್ಬಿಸಿದೆ ಸುಂಟರಗಾಳಿ
ಗುಡುಗುಡುಗುತಿದೆ ಬೆಳ್ಳಿಯ ಮೋಡ
ಮಿಂಚಿನೋಡನೆ ಹಾಡಿದೆ ಹಾಡ
ಆಹ್ವಾನಿಸಿಹಳು ಮಳೆಯ ಧರೆ
ಸ್ಪರ್ಷಿಸಲು ಬಾರೈಯ್ಯಾ ದ್ವರೆ.
ಸುಮ್ಮನಿರು.....!!!
ಒತ್ತಡಕ್ಕೆ ಸಿಲುಕಿ ಸುಸ್ತಾಗಿ ಬೀಳದಿರು,
ಹೃದಯ ಬಯಸಿದರೆ ಮಾತ್ರ ಸ್ಪಂದಿಸು,
ಅಲ್ಲಿಯವರೆಗೂ ಸುಮ್ಮನಿರು ........ !
ಸುಮ್ಮನಿರು ಮನವೇ ಸುಮ್ಮನಿರು..!
ಕತ್ತಲಲ್ಲಿ ಕಳೆಯದಿರು,
ಅತ್ತು ಅತ್ತು ಅಳಿಯದಿರು,
ಜೀವನಾಡಿ ನಿನ್ನ ಮುತ್ತಿಕ್ಕುವಾತನಕ,
ಅಧರದ ಹಾಲು ಉಕ್ಕುವಾತನಕ.... !
ಸುಮ್ಮನಿರು ಮನವೇ ಸುಮ್ಮನಿರು..!
ನಿಂತು ನಿರಂತರ ಚಿಂತಿಸದಿರು,
ಆತುರ ಆವಾಂತರವ ಆವ್ಹಾನಿಸದಿರು,
ಮುಳುಗಿ ಮೇಲೇರಲಿವೆ ಕನಸಿನ ಮುಗಿಲು,
ಕಂಪು ತಂಪೇರುವಾತಾನಕ............ !
ಸುಮ್ಮನಿರು ಮನವೇ ಸುಮ್ಮನಿರು..!
ಮೊದಲ ಸ್ಪರ್ಷ ....!!!
ನಿನ್ನ ಜೋತೆ ನಡೆದ ಮೊದಲ ನಡೆ ತಂದ ಹರ್ಷ,
ದಾರಿ ದಾಟುವಾಗ ಅನುಭವಿಸಿದ ಮೊದಲ ಸ್ಪರ್ಷ,
ನಮ್ಮಿಬ್ಬರ ಭಾವನೆಗಳು ಬೆರೆತ ಶಬ್ದಕೋಶ,
ಒಲವಿನ ಮಾತುಗಳ ಹೃದಯಸ್ಪರ್ಶ,
ತುಟಿಯ ಜೀನ ಹನಿ ಸವೆದ ಆ ಸವಿ ಕ್ಷಣ,
ಮೈ ಮನ ಮೆರೆದ ಆ ರೋಮಾನ್ಚನ,
ಪ್ರೀತಿಯ ಮುತ್ತುಗಳ ಜೀವೋಲ್ಲಸ,
ಹರಿಯುವ ನದಿಯಂತೆ ತಂತು ಸಂತಸ,
ಮನಸ್ಸಿನ ಬಯಕೆಯ ಭಾವೋದ್ವೆಗ,
ಮರೆಯಲಾಗದ ಆ ಸುಯೊಗ,
ನಿಮ್ಮ ಮೊದಲ ಸ್ಪರ್ಷ ಮೂಡಿಸಿದೆ,
ಜೊತೆಯಲಿ ಕಳೆವ ಜೀವನದ ಆಸೆಯ ಆಕಾಶ.
ವೀರ ...!!!
ಕನಸ್ಸು ಕಂಡಿದ್ದು ಕಸವಾಯಿತು,
ಮನಸ್ಸು ಒಡೆದು ಮಸಣ ಸೇರಿತು,
ಆಸೆ ಕಟ್ಟಿದ್ದು ಸ್ವಲ್ಪ,ಸುಟ್ಟು ಹೋಯಿತು ಬೇಗ,
ಕಾಣದ ಲೋಕವನ್ನು ಕಾಣುವುದೇ ಬೇಡ ,
ಮನದಾಳದ ಮುಗಿಲು ಊರಾಚೆ ದೂರ,
ದುಃಖವನ್ನು ಮರೆಯೂ ವೀರ ...!!!
ऐ किसीकी तमन्ना था ???
ऐ किसीकी तमन्ना था ???
कलि खिल्रह जैसे मोहब्बत महकरहा था,
प्यार में खुशियाँ बुलंद था,हर गली में इश्क बहकरहा था,
किस जालिम का ऐ तमन्ना था ?
कलि खिल्नेसे पहेले तोड़ना, ऐ किसीका फ़साना था ?
Friday, April 25, 2008
ವರುಣನ ಆರ್ಭಟ
ಮುಸುಕು ಮಾಚಿದ ಮೇಘರಾಜ,
ಮಿಂಚು ಬೀಸಿದ ಸಿಡಿಲತೇಜ,
ಹನಿಯ ಗರೆದ ಮಳೆರಾಯ,
ತಣ್ಣನೆ ಬೀಸಿದ ವಾಯು ಪುಂಜ,
ಇದು ಯಾರ ಉಧ್ವೆಗದ ಫಲವೊ,
ಯಾರ ಹಠದ ಛಲವೊ,
ಇಲ್ಲವೇ ಯಾರ ದುಃ ಖದ ಮಳೆಯೊ,
ಬೇಸಿಗೆಯ ಬೇಗೆಯಲ್ಲಿ ವರುಣನ ಆರ್ಭಟ..!
- ಭಾವಪ್ರಿಯ
ನಾ ಬರೆವ ಕವಿತೆಯಲಿ
ನಾ ಬರೆವ ಕವಿತೆಯಲಿ , ಅವಳದೇ ಕಾಡಿಹವು ನೆನಪು
ಮೌನಿ ಅವಳು ನಿಶಬ್ದದಲ್ಲಿ ಕಾಡಿದಳು
ಒಲವಿನಲ್ಲೂ ಪ್ರೀತಿ ಕರುಣಿಸದೇ ಹಾರಿದಳು
ಕುಣಿವ ಮನಕೆ ತಾಳ ಬಡಿಯದೇ ಪೀಡಿಸಿದಳು
ಹುಚ್ಚು ಹಚ್ಚಿ ತನ್ನ , ಕಿಚ್ಚಿಟ್ಟು ಬರಿದಾದಳು
ನನ್ನ ಕವಿತೆಯಲಿ ಮತ್ತೆ ಮತ್ತೆ ಬಂದು
ತಿರುಗಿ ಉರುಳಿಸಿ ಮರಳಲಿ ಕಾಡಿದಳು. - ಭಾವಪ್ರಿಯ (ಸುನಿಲ್)
ಹೃದಯ ವಾಣಿ
ಮುಳ್ಳಿನ ಗುಲಾಬಿಯ ಮಧುರ ಬಾಂಧವ್ಯ,
ತುಂಬಲಿ ನಮ್ಮಿಬ್ಬರಲಿ ಸ್ನೇಹ ಚೈತನ್ಯ..!
ಒಲವಿನ ಗುಲಾಬಿ ನಿನಗೆ ಅರ್ಪಣೆ,
ಸ್ವೀಕರಿಸಿ ನುಡಿಸು ನನ್ನ ಹೃದಯ ವೀಣೆ..!
ಈ ನನ್ನ ವಾಣಿ ತಲುಪಿದರೆ ನಿನ್ನ,
ಹಿಡಿಸಿ ಸೈ ಎಂದು, ಗೆದ್ದಿತೆ ಹೇಳು ನಿನ್ನ ಮನ ...?
क्या ऐसा हो सकता है ?
क्या ऐसा हो सकता है ?
नज़र से नज़र टकराई
होटों से बातें लेहरआई
आँखों से शुरू हूवा ये सिलसिला….होट जो ना केहासका…नज़रों ने कर दिखलाए.
क्या ऐसा हो सकता है ?
लीके हैं आँखें चेहरे पे नूर
लगे होटों पे रेशम की डोर
गालों पे मेहकति फूलों की लाली
जो बात दिल ना केहा सक....ये अदाएँ कर्जायेन्गे....क्या ऐसा हो सकता है ?
-भावप्रीय
क्यूँ ना माना तू बात मन की…?
क्यूँ ना माना तू बात मन की
मन की बात ना माना तूने, एक बेवफ़ा से की दोस्ती
जुटे एहसास दिखाया जिसने
मोहबत की छाया में उसकी मस्ती
ना थी कदर उसको तुम्हारे दोस्ती की,
ना थी कदर तुम्हारे जसबात की..
बस बेवफ़ाई देखाई उसने
क्यूँ ना माना तू बात मानकी ? -भावप्रीय
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ಕನ್ನಡಿಯೇ ಮನುಷ್ಯನ ಆತ್ಮೀಯ ಸ್ನೇಹಿತ! ನಾವು ನಕ್ಕರೆ ಕನ್ನಡಿಯೂ ನಕ್ಕು ನಗೆಯ ಹಂಚುವುದು ... ನಾವು ಅತ್ತರೆ , ಅದು ಕೂಡ ನಮ್ಮ ಜೊತೆಯಲೇ ಅಳುವುದು... ನಿನಂತೆಯೇ ನಾನು .....
-
ನಲ್ಲೆ, ತಂದು ಕೊಡಲೆ ನಿನಗೆ ಆ ಸಾಗರದಾಳದ ಮುತ್ತು .? ಅಂದನವನು.... ನಲ್ಲಾ, ಆ ಮುತ್ತಗಳ ಬೆಲೆ ಎಷ್ಟೇ ಇದ್ದರೂ .., ನೀ ನೀಡುವ ಪ್ರೀತಿಯ ಸಿಹಿ ಮುತ್ತಿಗೆ ಬೆಲೆ ಕಟ್ಟಲ...