ನಯವಂತಳು, ನಾಜೂಕಿನವಳು, ಪ್ರೀತಿಯ ಮಾತಾಡಿದರೆ ನಾಚುತ್ತಾಳೆ
ಅಂಜಿಕೆ ಇಲ್ಲದಿದ್ದರೂ ಅಳುಕುತ್ತಾಳೆ, ಅಳುಕಿ ಬಳಳುತ್ತಾಳೆ,
ಒಲವಿನ ಬಳ್ಳಿ ನನ್ನಲ್ಲಿ ಅರಳಿ, ಅವಳನ್ನು ಆದರಿಸಿದರೂ ನಾಚುತ್ತಾಳೆ
ನನ್ನ ಚೆಲುವೆ ...ನನ್ನ ಒಲವು ಕಂಡು ... ತುಂಬಿ ತುಂಬಿ ನಾಚುತ್ತಾಳೆ .
ಕಾಣಲು ತವಕಿಸುತ್ತಾಳೆ ಕಂಡರೆ ಮಿಡಿಯುತ್ತಾಳೆ
ನನ್ನೊಡಲು ಬರುತ್ತಾಳೆ ಮೆಚ್ಚಿಕೊಂಡು ಹಾಡುತ್ತಾಳೆ ,
ನಕ್ಕು ನಕ್ಕು ನನ್ನೊಡನೆ ಸಂತಸ ಪಡುತ್ತಾಳೆ
ಮತ್ತೆ ಕಂಡು ಮನೆಯವರ ಮುಂದೆ ನಾಚುತ್ತಾಳೆ ... ನಾಚುತ್ತಾಳೆ ನನ್ನವಳು.
No comments:
Post a Comment