ಚಿಲಿಪಿಲಿ ಗುಟ್ಟುವ ಚಿವ್ ಚಿವ್ ಗುಬ್ಬಿ
ನನ್ನ ಹೃದಯದ ಗೂಡು ಸೇರುವ ಛಬ್ಬಿ
ಪ್ರೀತಿಸುವೆ ಬಾರೆ ತಬ್ಬಿ ತಬ್ಬಿ
ಗಲ್ಲವು ನಿನ್ನ ಕೆಂಪೆರುವುದು ಉಬ್ಬಿ
ಹತ್ತಿಯ ಕಟ್ಟಿಗೆಯ ಮೆತ್ತನೆ ಮೆತ್ತಿ
ಮಲಗಿಸುವೆ ಬಾರೆ ಪ್ರೀಯ ಸಂಗಾತಿ .
ಚುಂಚಿನಿಂದ ಚುಂಚನ್ನು ಪೋಣಿಸುವೆ
ಕಣ್ಣಲ್ಲಿ ಕಣ್ಣಿಟ್ಟು ಕಾಡುವೆ
ರೆಪ್ಪೆಯ ಮಿಟುಕಿಸಿ ನಲಿವೆ
ನಿನ್ನ ಚೆಲುವಿನ ಬಣ್ಣ ನನ್ನ ಒಲವಿನ ವರ್ಣ
ಒಬ್ಬರಲ್ಲೊಬ್ಬರು ಬೆರೆತು ನಾವು, ಬಾನಲ್ಲಿ ಹಾರೋಣ .
No comments:
Post a Comment