Tuesday, July 15, 2008

ಬಾರೆ ನನ್ನ ಮುದ್ದಿನ ಗಿಣಿಯೆ

ಬಾರೆ ನನ್ನ ಮುದ್ದಿನ ಗಿಣಿಯೆ
ನನ್ನ ಹೃದಯದ ಆಗಸದಡೆಗೆ
ಬಾನ ಮುಗಿಲ ಕಡಲಾಚೆಗೆ
ಹಾರಿ ಬರಿ ಬಾರೆ ಒಲವಿನ ಓಲೆ ..!

ಬಾರೆ ನನ್ನ ಮುದ್ದಿನ ಗಿಣಿಯೆ
ಮೇಘರಾಯನ ಅರಮನೆಗೆ
ವಜ್ರದ ಹನಿಯ ಕೊಡಿಸುವೆ ನಿನಗೆ
ಸಂತೋಷ ಹೊಮ್ಮಲಿ ನಿನ್ನ ಎದೆಯೊಳಗೆ..!

ಬಾರೆ ನನ್ನ ಮುದ್ದಿನ ಗಿಣಿಯೆ
ತೊಡಿಸುವೆ ನಿನಗೆ ರತ್ನದ ಮಣಿಯೆ
ಸುವರ್ಣ ಬಣ್ಣದ ಅಪರಂಜಿಯೇ
ನನ್ನ ಅಕ್ಕರೆಯ ಪ್ರೀತಿ ಸವಿಯೇ..!

No comments: