ನಿನ್ನ ಜೋತೆ ನಡೆದ ಮೊದಲ ನಡೆ ತಂದ ಹರ್ಷ,
ದಾರಿ ದಾಟುವಾಗ ಅನುಭವಿಸಿದ ಮೊದಲ ಸ್ಪರ್ಷ,
ನಮ್ಮಿಬ್ಬರ ಭಾವನೆಗಳು ಬೆರೆತ ಶಬ್ದಕೋಶ,
ಒಲವಿನ ಮಾತುಗಳ ಹೃದಯಸ್ಪರ್ಶ,
ತುಟಿಯ ಜೀನ ಹನಿ ಸವೆದ ಆ ಸವಿ ಕ್ಷಣ,
ಮೈ ಮನ ಮೆರೆದ ಆ ರೋಮಾನ್ಚನ,
ಪ್ರೀತಿಯ ಮುತ್ತುಗಳ ಜೀವೋಲ್ಲಸ,
ಹರಿಯುವ ನದಿಯಂತೆ ತಂತು ಸಂತಸ,
ಮನಸ್ಸಿನ ಬಯಕೆಯ ಭಾವೋದ್ವೆಗ,
ಮರೆಯಲಾಗದ ಆ ಸುಯೊಗ,
ನಿಮ್ಮ ಮೊದಲ ಸ್ಪರ್ಷ ಮೂಡಿಸಿದೆ,
ಜೊತೆಯಲಿ ಕಳೆವ ಜೀವನದ ಆಸೆಯ ಆಕಾಶ.
No comments:
Post a Comment