Thursday, December 19, 2019

ಕುತಂತ್ರಿ


ಚುನಾವಣೆ ಮುಂಗಡ
ಕಳಸಾ ಬಂಡೂರಿ ಯೋಜನೆಗೆ ಅಸ್ತು..!

ಮತ ಹಾಕಿ ಗೆಲ್ಲಿಸಿದವರಿಗೆ
ಮಾಡಿದರು ಬೆಪ್ಪು,ಕೂಡಲೆ ಸಿಕ್ಕಿತು ಶಾಕು..!

ಡೊಂಬರಾಟದ ರಾಜಕೀಯಕ್ಕೆ
ಪೆದ್ದ ಜನರು ಸುಸ್ತೋ....ಸುಸ್ತು...!

Wednesday, December 18, 2019

" ಮತ (ವೋಟು) "

" ಮತ (ವೋಟು)"
ಭಿಕ್ಷೆ ಕೇಳಿ
ಪಡೆಯುವ ವಸ್ತುವಲ್ಲ !
ಸಮಾಜಿಕ ಕೆಲಸಗಳನ್ನು
ಪಾರದರ್ಶಕತೆ ಇಂದ
ನಿರ್ವಹಿಸುವ ಧ್ಯೇಯ
ಇಟ್ಟಿಕೊಂಡು, ಪ್ರಮಾಣಿಕತೆಯಿಂದ
ನಮ್ಮವರಲ್ಲಿ ನಮ್ಮವರ ಜೊತೆ
ಒಡಗೂಡಿ, ದುಡಿಯುವಾತನಿಗೆ
ಕಾರ್ಮಿಕನ ಉದ್ಯೋಗ ನೀಡಿ..
ಅವರಿಂದ ಉಪಯುಕ್ತ
ಕೆಲಸ ಮಾಡಿಸಿ...
ಪಡೆದುಕೊಳ್ಳುವ ಪರಿ !
ಸ್ವಾಭಿಮಾನದಿಂದ ನಮ್ಮನ್ನು
ನಮ್ಮ ವಿಚಾರಗಳಿಗೆ ಬೆಂಬಲಿಸಿ
ಎನ್ನುವ.,
ಪ್ರಜ್ಞಾವಂತ ಪ್ರಜೆಗಳಿಗೆ
ನೀಡುವ ಅಸ್ತ್ರವು..

" ಮತ (ವೋಟು)"

ಮಾನವೀಯತೆಯ ಮರೆತು

ಯಾರದೋ ಅಟ್ಟಹಾಸ
ಇನ್ನಾರಿಗೋ ಶಾಪ

ನೆಪಕ್ಕೆ ಧರ್ಮ ಸ್ಥಾಪನೆ
ಮಾನವೀಯತೆಯ ಕಗ್ಗೊಲೆ

ವಿಷವ ಬಿತ್ತಿ ಮನದಲ್ಲಿ
ಸುಖವ ಮರೆಸಿದ ಜನರಲ್ಲಿ

ಹುಟ್ಟು ಹಾಕಿದೆ ದ್ವೇಷ
ಎಲ್ಲೆಡೆ ಜನರ ಆಕ್ರೋಶ

ರಾಜಕೀಯ ಪ್ರೇರಿತ ಆಟ
ಗಹಗಹಿಸಿ ನಗುತಿರೆ ನೋಡಾ.., ಜನರ ಪರದಾಟ !!

Tuesday, December 17, 2019

ಧಾರವಾಡ ಒಂದು..

ಧಾರವಾಡ ಒಂದು..
ನಮ್ಮೂರಿಗೆ ಬರುವರೆಲ್ಲಾ ನಮ್ಮ ಬಂಧು !

ಧಾರವಾಡ ಹುಬ್ಳಿ ನಮ್ಮದರೀ
ಬಂದ ನಮ್ಮ ಪ್ರಸಿದ್ಧ ಠಾಕೂರ್ ಪೇಡಾ ಸವಿರಿ !

ವಿದ್ಯಾಲಯಗಳ ಹಸಿರು ಚಂದಾ
ಬರಮಾಡಿಕೊಂಡಾವ ಜನರ ಹೃದಯದಿಂದಾ !

ಓದಿ ಕಲಿತವರ ಜೀವನ ಪಾವನ
ಕಡೆತನಕ ಮರೆಯುವುದಿಲ್ಲ ಇಲ್ಲಿಯ ಮಣ್ಣ ರುಣ !

ಉಸಿರಿರುವತನಕ ಮಾಡುವೆ ನಾ ಗುಣಗಾನ
ಧಾರವಾಡ್ ಅಂದ್ರ ನನಗ ಪಂಚಪ್ರಾಣ !

ಕವಿಗಳ ಬೀಡಿದು ಎಲ್ಲರಿಗೂ ಅಭಿಮಾನ
ನಾಡ ಹೆಮ್ಮೆ ಹೆಚ್ಚಿಸಿದ ಗಣ್ಯರಿಗೆ ಹೃತ್ಪೂರ್ವಕ ಅಭಿನಂದನ !!

ಅವಾ ಅಂದ್ರ

ಅವಾ ಅಂದ್ರ ಭಾರಿ ಹಾಟ್

ಅವನ ನೋಡಿ ನಾ ಸಪಾಟ್

ಹುಡಿಕಿ ತೆಗಿಬೇಕಿಲ್ಲಾ ಕಪಾಟ್

ಸ್ವೆಟರ್ರು ಇರದಿದ್ದರೂ, ಚಳಿ ಬೊಂಬಾಟ್ !!

Thursday, December 12, 2019

ಹೌದೋ ಹುಲಿಯಾ....!


ಮಹದಾಯಿ ನೀರನು ಕೊಡಿಸಲಾಗಲಿಲ್ಲ..

ಹೌದೋ ಹುಲಿಯಾ..!

ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲಿಲ್ಲ
ಹೌದೋ ಹುಲಿಯಾ..!

ರಸ್ತೆ ಕೆಟ್ಟು ಕೆರಾ ಹಿಡಿದರೂ.., ಟೋಲು ತೊಗೊತಾರಲ್ಲಾ
ಹೌದೋ ಹುಲಿಯಾ..!

ಜಿಡಿಪಿ ನೆಲಾಕಚ್ಚಿದರೂ..., ಬಾಯಿ ಮುಚ್ಚಿ ಕೂತಾರಲ್ಲಾ..
ಹೌದೋ ಹುಲಿಯಾ..!

ಊಳಾಗಡ್ಡಿ ಇನ್ನೂರು ದಾಟಿದರೂ..., ರೈತರ ಕಣ್ಣೀರು ತಪ್ಪಲಿಲ್ಲಾ
ಹೌದೋ ಹುಲಿಯಾ..!

ದಿನಕ್ಕೊಬ್ಬಳು ಅತ್ಯಾಚಾರಾಗಿ ಕೊಲೆ ಆಗ್ಯಾಳಲ್ಲೊ..
ಹೌದೋ ಹುಲಿಯಾ..!

ಬ್ಯಾಂಕಿನ್ಯಾಗ ರೊಕ್ಕ ಇಟ್ಟವ..., ರೊಕ್ಕ ತಗಿಯಾಕ ಆಗದನ ಸತ್ತಾನಲ್ಲೋ
ಹೌದೋ ಹುಲಿಯಾ..!

ಕಪ್ಪು ಹಣ ಇನ್ನೂ ಬರಲಿಲ್ಲವಲ್ಲೋ ಮುನಿಯಾ....
ಹೌದೋ ಹುಲಿಯಾ..!

ನಮ್ಮ ತೆರಿಗೆ ಹಣ ಕುದುರೆ ವ್ಯಾಪಾರವಾಯ್ತು....
ಹೌದೋ ಹುಲಿಯಾ..!

ನಾಡು, ದೇಶ ಹೊತ್ತಿ ಉರಿಯಾಕತ್ತೈತೋ.....
ಹೌದೋ ಹುಲಿಯಾ..!

ರಾಜಕೀಯದಾಗ ಬರಿ ದೋಚೋದ ನಡದೈತೋ.....
ಹೌದ್.... ಹೌದೋ ಹುಲಿಯಾ !!

Monday, December 09, 2019

ಸಮಸ್ಯೆ

ಬದುಕು ಸಮಸ್ಯೆಗಳ ರಂದ್ರ
ಪರಿಶ್ರಮ, ತಾಳ್ಮೆಯ ಹೊಲಿಗೆ 
ಸದಾ ಮುಚ್ಚುವುದು ಮೆಲ್ಲಗೆ 

ದ್ರಿತಿಗೆಡಬಾರದು ಜೀವನದಿ
ಈಜು ಬರದಿದ್ದರೂ  ಕೈ ಬಡಿಯುತ್ತಿರಬೇಕು...
ದಂಡೆಯ ದೇವರು ಕರುಣಿಸ್ಯಾರು

ತಲೆ ಮೇಲೆ ಬಿದ್ದ ಗುಡ್ಡ 
ಗುಂಡೆದೆಗೆ ಒಡೆದು ಮಣ್ಣು ಪಾಲು
ಸಮಸ್ಯೆಗಳ ಸರ್ಪಳಿ ಹರಿದೇ ತೀರಬೇಕು

ಕಷ್ಟಗಳ ಹುಟ್ಟಿಸಿದ ಕೈಗಳು
ಸುಂಕವಿರದೆ ಬರಿದಾಗಿ ಹೋದಾವು
ಮತ್ತೆ ಅರಳುವುದು ಹೊಸ ಹೂವು  !!



ಚಳಿ

ಇನ್ನೂ..., ಯಾಕೋ ಎದ್ದಿಲ್ಲ ಅವ..

ಜಗದಾಗ ಎಲ್ಲರಿಗೂ ಎಬ್ಬಿಸವ...!

ಮೂಡಣದಾಗ ಹೊದ್ದು ಮಲಗ್ಯಾನ

ಅವ್ವ ಕೊಟ್ಟ ಮೊಡದ ಚಾದರ್ರ...

ಈ ಚಳಿಯಪ್ಪನದೂ ಭಾರಿ ಆತ..., ಆರ್ಭಟ

ನಾಕ ಕಂಬಳಿ ತೊಟ್ರೂ.... ಕಡಿಮಿ ಆಗ್ವಲ್ತು

ಚಳಿಯ " ಮಾಟ " !!

Thursday, December 05, 2019

ನಸುಕಿನ ಕಲರವ

ಹಾಲು ಗಲ್ಲದ ಕಂದ
ಮುಸುಕಿನ ನಸುಕಲಿ ಎದ್ದ

ಅವ್ವನ ಕಾಣದ ಮುಕುಂದ
ಹಾಸಿಗೆಯಲ್ಲೇ.., ಕುಸು-ಕುಸು ಎಂದ

ಕಾಲು ಕೈಗಳ ಬಡೆಯುತ
ಅತ್ತ ಇತ್ತ ಎಲ್ಲೆಡೆ ನೋಡುತ

ಸಣ್ಣನೆಯ ದನಿಯ ಮಾಡುತ
ತನ್ನಷ್ಟಕ್ಕೆ ತಾನೆ ಆಡತೊಡಗಿದ !!




Tuesday, December 03, 2019

ತಿರುಳು

ವಿಧ ವಿಧ ಹೂವುಗಳಿಡಲು
ಒಂದೇ ಬುಟ್ಟಿಯಲಿ...!

ಕುಣಿಯುತಾ ನಲಿದಿರಲು
ಒಟ್ಟಿಗೆ ಸಂತೋಷದಲಿ..!

ಸ್ನೇಹ ಬೆಸೆದವು
ಕೆಲವೇ ಕ್ಷಣಗಳಲಿ...!

ಪ್ರೀತಿ ವಿಶ್ವಾಸಕ್ಕೆ, ಸಾಕ್ಷಿ ಹಲವು..
ಕೂಡಿ ಬಾಳುವುದೇ, ಜೀವನದ ತಿರುಳು..!!


ಬಡ ರೈತರು


ಇರುಳ್ಳಿ ಕ್ವಿಂಟಾಲಿಗೆ,
ಎಂಟು ಸಾವಿರ !!

ಇಂದಾದರೂ ಮೂಡಲಿ..,
ರೈತನ ಮುಖದಲ್ಲಿ ಮಂದಾರ !

ಐಟಿ ಬಿಟಿ ಜನರೇ..,
ತಗೆಯದಿರಿ ಉದ್ಗಾರ..!

ಬಡ ರೈತರೂ ನಡೆಸಬೇಕು...
ನೆಮ್ಮದಿಯ ಸಂಸಾರ !!

ಹಸಿವು



ಸಣ್ಣ ಕಂದಮ್ಮಗಳ ಹಸಿವು
ಕರುಳ ಹಿಚುಕಿ ಹೊಸೆಯುವುದು

ಕಣ್ಣ ಹನಿಗಳ ನೋವು
ಮನವ ಹಿಂಡಿ ಕದಡುವುದು

ಆಡುತ್ತಾ ಕಳೆಯಬೇಕಿದ್ದ ಬದುಕು
ಬೀದಿಗಳಲ್ಲಿ ಅರಸಿದೆ ನೆರವು

ಚಳಿಗೆ ಬೆಚ್ಚಗಿಡಲಾಗದ ಅಂಗಿ
ಹೊಟ್ಟೆ ಹೊರೆಯುವುದೇ ನೀರ ನುಂಗಿ ?

ಹಸಿವಿನ ಬೇಗೆಗೆ ಬೇಸತ್ತ ಬದುಕು..
ನಿವಾರಿಸಲಾಗದ ಸಿರಿವಂತಿಕೆ ಏತಕ್ಕೆ ಬೇಕು ???

Photo Courtesy : Internet

Thursday, November 28, 2019

ಮುಂಜಾನೆ

ಅವಳ ಕೇಶವ
ನೆತ್ತಿಗೆ ಸರಿಸಿದ ರಭಸಕ್ಕೆ...
ಕತ್ತಲೆಯು ಸರಿದಂತೆ !
ಮುಖದ ಚೆಲುವಿಗೆ...
ಬೆಳಕು ಹರಿದಂತೆ !
ಕಣ್ಣ ಅಂಚಿನ ಭಾಷ್ಪವು..
ಎಲೆಯ್ ಮೇಲಿನ ಮಂಜಿನ ಹನಿಯಂತೆ !
ಅದರುತ್ತಿರುವ ತುಟಿಗಳೇ ಸಾರುತ್ತಿವೆ..
ಚುಮು ಚುಮು ಚಳಿಗಾಲದ ಸವಿ ಮುಂಜಾನೆ..!!

Wednesday, November 27, 2019

ಅವಳು

ಅವಳು ಕಂಡಳು
ನಾಚಿ ನಕ್ಕಳು...
ಅಂಗಳ ತುಂಬಾ
ಹಾಲು ಬೆಳದಿಂಗಳು..!
ಬಾಗಿಲು ಮುಚ್ಚಲು
ಮನೆಯ ತುಂಬಾ ಮಕ್ಕಳು..!!

ಬಾಲ ಚಂದ್ರ

ನಕ್ಷತ್ರಗಳ ಕಾಣುತ್ತ
ಹಂಬಲಿಸಿ ಅಂದಳು..
ತುಂಬಿ ಬಿಡು ನಲ್ಲ
ಆ ಮಿನುಗುವ ತಾರೆಗಳ
ನನ್ನ ಉಡೆಯಲ್ಲಿ...!
ನಸು ನಕ್ಕ ನಲ್ಲ...,
ಜಗವೆಲ್ಲಾ ಹಾಲ ಬೆಳಕ
ಹಾಸಿದ ಆ ಬಾಲ ಚಂದ್ರ..
ನಿನ್ನ ಮಡಿಲಲ್ಲೇ
ನಗುತಿರುವನು.... ಎಂದನಲ್ಲ...!!

Monday, November 25, 2019

ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?


ಸೋಮವಾರ ಬಂತಂದ್ರ ಗತವೈಭವದ ಗಿರ್ಮಿಟ್
ಇತಿಹಾಸದ ಪುಟಗಳಿಂದ
ಹೆಮ್ಮೆಯ ಕರುನಾಡ ಚರಿತ್ರೆ
ಶತ ಶತಮಾನದ ವೈಭವ
" ಗತವೈಭವದ ವಿಷಯಧಾರೆ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಮಂಗಳವಾರದ ಚಿಣ್ಣರು ಬಡಿಸುವ ಗಿರ್ಮಿಟ್
ಮುದ್ದು ಮನಸ್ಸಿನ ಮುಗ್ಧತೆ
ಸ್ವಚ್ಚ  ಹೃದಯ ಸಿರಿವಂತಿಕೆ
ಹಿರಿಯ ಮನಗಳಿಗೆ ಇಂಪು
ನಮ್ಮ ಚಿಣ್ಣರ ಕಲರವ  " ಸಂಜೆಗೆಂಪು "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಬುಧುವಾರ ಬಂತಂದ್ರ ನೆನಪುಗಳ ಗಿರ್ಮಿಟ್
ಸಿಹಿ ನೆನಪುಗಳ ಮೆಲುಕಿನಲ್ಲಿ
ಸವಿ ಸಮಯ ಸವೆದ ಕ್ಷಣಗಳಲ್ಲಿ
ತೇಲಿ ಹೊರಟ ಮನಗಳಿಗೆ....
ನೆನಪಿನಂಗಳದ " ನೆನಪಿನೋಕುಳಿ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಗುರುವಾರದ ಜಗಲಿ ಕಟ್ಟೆ ಗಿರ್ಮಿಟ್
ಊರ ಅಗಸ್ಯಾಗ ಮಂದಿ ಭರಾಟೆ
ಅವರಿವರ ಕಥೆ ಪುರಾಣ..,ಕೇಳಾಕ ಕೂತ್ರ " ಹರಟೆಕಟ್ಟೆ "
ಶ್ರೊತ್ರುಗಳಿಗೆ ಭಗವದ್ ಗೀತೆಯ " ಗೀತಭಾವಧಾರೆ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಶುಕ್ರವಾರ ಬಂತಂದ್ರ ಕವಿಗಳ ಗಿರ್ಮಿಟ್
ಕವಿತೆ, ಕವನ, ಚುಟುಕ
ಹಬ್ಬ ಹರಿದಿನಗಳಲ್ಲಿ ಕವನಗಳ ಜಳಕ
ಅಡಗಿ ಕುಳಿತ ಕವಿಗಳಿಗೆ ಪ್ರೇರಣೆಯ ವೇದಿಕೆ " ಭಾವಪುಷ್ಪ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಶನಿವಾರದ ಕಥನಗಳ ಗಿರ್ಮಿಟ್
ನಾಟಕ, ಕಥೆಗಳ,ವಾಚಕರೇ ಪಾತ್ರಧಾರಿಗಳು
ರಾಮಾಯಣ ಮಹಾಭಾರತದ ಆಯ್ದ ಕತೆಗಳು
ಕಥಾಗುಚ್ಚ, ಅರವಿಂದ್ ಅಂಕಣ
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ರವಿವಾರಕ್ಕೊಂದು ಚೂಟಿ ಗಿರ್ಮಿಟ್
ತೊದಲು ನುಡಿಗಳಲ್ಲಿ
ನಲಿವ ಹೂಗಳಿಂದ
ನೀತಿ ಕತೆ ಆಲಿಸುವುದೇ " ಚಿನ್ನರ ಕಥಾಗುಚ್ಚ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಹಬ್ಬಗಳ ವಿಷೇಶ, ಸ್ಪೇಶಲ್ ಗಿರ್ಮಿಟ್
ಹಬ್ಬಗಳ ಮಹತ್ವದ ಕವನಗಳೋ
ಆಚರಣೆಗಳ ಸಂಬ್ರಮವೋ
ಹಬ್ಬದ ಸವಿಯನ್ನು ಉಣಬಡಿಸುವ " ಸ್ಪಂದನಾ "
ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

ಸವಿಯೋಣ ಬನ್ನಿ ರುಚಿ ರುಚಿ ಗಿರ್ಮಿಟ್
ದಿನ ದಿನ ಕೇಳುತ್ತ ಕನ್ನಡ ಸಾಹಿತ್ಯದ ರಸದೌತಣ
ಅನುದಿನವೂ ಆತ್ಮಕೆ ಜ್ಞಾನವ ತುಂಬೋಣ
ನಾಡಿನ ಒಳಿತಿಗೆ ನುಡಿಯ ಏಳಿಗೆಗೆ ನಮ್ಮ ಪಣ
ಸವಿಯಿರಿ ಗಿರ್ಮಿಟ್....ಹಾ....ಯಾರ್ಯಾರಿಗೆ ಗಿರ್ಮಿಟ್...ಗಿರ್ಮಿಟ್...?

Tuesday, November 12, 2019

ಬಾವುಟ


ಹಾರಿಸಿಲ್ಲವೆಂದರೆ ಏನಂತೆ

 " ಸರ್ ಖಾರಾ " ಕನ್ನಡದ ಬಾವುಟ ... ??

ಪ್ರತಿ ವಾಹನದ ಮೇಲೆ,

ಕಂಗೊಳಿಸುತಿದೆ ನೋಡಾ.....

ನಮ್ಮ ಕನ್ನಡದ ' ಭೂ' ಪಟ !!

ಶುಭೋದಯ

ಸ್ವಪ್ನ ಲೋಕದಲ್ಲಿ ತೇಲುತ್ತಿದ್ದ ಮೋಡಗಳಿಗೆ...

ಮಿಂಚು ಹೊಡೆದು ಅರಚಿದ ಹಾಗೆ...

ಎದ್ದು ನಸುಕಿನಲ್ಲಿ ಭೋರ್ಗರೆದಳು ವರ್ಷಧಾರೆ...

ಊರ ಅಂಗಳವೆಲ್ಲಾ ಶುಚಿ...

ನಿದ್ದೆಯಿಂದ ಎದ್ದ ಮನುಕುಲಕ್ಕೆ ಭವ್ಯ ಸ್ವಾಗತ..!!

ಸಮೃದ್ಧ ಕರ್ನಾಟಕ



ಸದಾ ಕಂಗೊಳಿಸುವ ಬೆಳಗಾವಿ
ಸೈನಿಕರು ಹೊರಟಾರ ಹಿಡಕೊಂಡು ಕೋವಿ

ಉತ್ತರ ಕರ್ನಾಟಕಕ್ಕೆ ಹೆಬ್ಬಾಗಿಲು
ಕವಿಗಳ ಗೂಡು ಚೆಲುವ ಧಾರವಾಡ ಬೀಡು

ಸುಡುಸುಡುವ ತವರು ರಾಯಚೂರು
ಬೆಂಕಿಗೂ ಬೆವರಿಳಿಸುವುದು ಬಲು ಜೋರು

ಕರುನಾಡ ಹೃದಯವದು ದಾವಣಗೆರೆ
ನಾಲಿಗೆ ರುಚಿಗೆ ನೀರೊರಿಸುವುದು ಬೆಣ್ಣೆದೋಸೆ

ಮೆಣಸಿಕಾಯಿ ಇಳುವರಿ ಹಾವೇರಿ
ಬ್ಯಾಡಗೀಯ ಕೆಂಪು ಮೆಣಸಿನಕಾಯಿ ಬಹಳ ಖಾರಾ ರೀ

ಕವಿಗಳ-ಸಂಗೀತ  ದಿಗ್ಗಜರ ನಾಡು ಗದಗ
ಭಿಮಸೇನರು, ಪುಟ್ಟರಾಜ ಗವಾಯಿಗಳು ಚೆನ್ನವೀರ ಕಣವಿ, ಆಲೂರು ವೆಂಕಟರಾಯರು

ಇತಿಹಾಸದ ಮರಿ ಮಗಳು ವಿಜಯಪುರ
ಗೋಲಗುಮ್ಮಟದ ಇಮಾರತವು ಜನಪ್ರೀಯ

ಕರಾವಳಿಯ ಸೊಬಗು ಮಂಗಳೂರು
ಮೀನ ಸವಿದ ಜನರು ಓದುದರಲ್ಲಿ ಚುರುಕು

ಅದಿರು ಸಂಪತ್ತಿನ ನಾಡು ಬಳ್ಳಾರಿ
ಸುಪ್ಪತ್ತಿಗೆಯಲಿ ಮಿಂದ ಜನರು ಸುವಿಹಾರಿ

ಕಲ್ಲಿನ ಕೋಟೆಗೆ ಪ್ರಸಿದ್ಧ ಚಿತ್ರದುರ್ಗ
ಮಾರಿ ಕಣಿವೆಯ ನೋಟ ಅತಿ ಮಧುರ

ಕೊಳ್ಳೆಗಾಲ, ಬಂಡಿಪುರ, ಚಾಮರಾಜನಗರ
ವನ್ಯಜೀವಿಗಳ ತವರು ಕಾಪಾಡಿಕೊಳ್ಳುವುದು ನಮ್ಮಯ ಭಾರ

ಬೆಂಗಳೂರು ಕರುನಾಡ ವಾಣಿಜ್ಯ ಖಣಜ
ಎಲ್ಲ ಭಾರತೀಯರಿಗೂ ಅನ್ನ ನೀಡುವ ಅನ್ನದಾತ

ಚಿಕ್ಕಮಗಳೂರು ಕಾಫಿ ಸಮೃದ್ಧಿಯ ಸಾಗರ
ಜನರ ದಣಿವಾರಿಸಿ ಚೈತನ್ಯ ತುಂಬುವ ಅಗರ

ತೊಗರಿ ಬೆಳೆಯುವ ತಾಣ ಗುಲ್ಬರ್ಗ
ಭಾರತಕ್ಕೆ ಸಿಮೆಂಟು ತಯ್ಯಾರಿಸುವ ದಿಗ್ಗಜ

ಬಿಸಿಲು ನಾಡಿನ ತಂಪು ಸ್ಥಳ ಬೀದರ
ಕರಕುಶಲ ವಸ್ತುಗಳಿಗೆ ಪ್ರಸಿದ್ಧಿ ಹೊಂದಿ ಅಮರ

ವೀರ ಯೋಧರ ನಾಡು ಕೊಡಗು
ಕಾವೇರಿ ಹುಟ್ಟು ತಲಕಾವೇರಿ, ಕೊಡವ ನಾಡೆಲ್ಲಾ ಹಸಿರು

ಅಪರಂಜಿಯ ಗಣಿ ಕೋಲಾರ
ಕರುನಾಡಿಗಿದು ವಜ್ರದ ಹಾರ

ಐತಿಹಾಸಿಕ ನಗರಿ ಮೈಸೂರು
ಒಡೆಯರ ಅರಮನೆ ವೈಭವ ನೋಡಲು ಸಾಲದು ಈ ಜನುಮವು

ಕಬ್ಬು ಬೆಳೆವ ಸೀಮೆ ಮಂಡ್ಯ 
ಸಿಹಿ ಸುತ್ತುಕಬ್ಬು ಉಣಬಡಿಸುವುದು ಗಾಣ

ರಾಮನಗರ ರೇಷ್ಮೆಯ ಶಿಖರ
ಬರ್ಜರಿ ರೇಷ್ಮೆಸೀರೆಗಳೆ ಹೆಂಗಳೆಯರಿಗೆ ಭೂಷಣ

ಬತ್ತ, ಅಕ್ಕಿ ಬೆಳೆವ ಬೈಲು ಕೊಪ್ಪಳ
ಹೆಸರುವಾಸಿಯಾಗಿಹುದು ಅಕ್ಕಿಯ ಬಟ್ಟಲ

ಇಳಕಲ್, ಬಾದಾಮಿ, ಬಾಗಲಕೋಟೆ
ಚಾಲುಕ್ಯರು ಕೆತ್ತಿದ ಕಲ್ಲಿನ ಗುಡಿ-ಗವಿಗಳೇ  

ಶಿವನ ಮೊಗದ ಹಿರಿಮೆ ಶಿವಮೊಗ್ಗ
ಭಾರತದ ಎರಡನೆಯ  ಪ್ರಸಿದ್ದ ಜಲಪಾತ ಜೋಗ 

ಹೊಯ್ಸಳರು ಆಳಿದ ನಾಡು ಹಾಸನ
ಬೇಲೂರು, ಹಳೆಬೀಡು, ಐತಿಹಾಸಿಕ ಶಿಲ್ಪ ಕೆತ್ತನೆಯ ಕುರುಹು

ಸಾವಿರಾರು ಮಕ್ಕಳಿಗೆ ಶಿಕ್ಷಣ ನೀಡಿದ ತುಮಕೂರು
ಕರ್ನಾಟಕ ರತ್ನ ಶ್ರೀ ಶಿವಕುಮಾರ ಸ್ವಾಮಿಜಿಯವರು, ನಾಡು ಕಂಡ ನಡೆದಾಡುವ ದೇವರು.

ಕನಕನ ಕಿಂಡಿಯ ಖ್ಯಾತಿ ಉಡುಪಿ
ಶ್ರೀ ಕೃಷ್ಣನ ದೇವಸ್ಥಾನ ಪ್ರೇಕ್ಷಣಿಯ ತದ್ರೂಪಿ

ಹಡುಗಿನ ಬಂದರು, ಕರಾವಳಿಯ ನಗರ ಕಾರವಾರ
ಹಸಿರುಮಯ ಸಹ್ಯಾದ್ರಿ ಕಾನನ, ಪಶ್ಚಿಮಕ್ಕೆ ನೀಲಿ ಸಾಗರ

ಯಾದವರು ಆಳಿದ ಗುಡ್ಡಗಳ ಯಾದಗಿರಿ
ಅಧ್ಯಾತ್ಮಗಳ ತಾಣ, ಮೈಲಾಪುರ ಮಲ್ಲಯ್ಯ, ಮೌನೇಶ್ವರ ಗುಡಿ, ಗುರಿಮಿಟ್ಕಲ್ ಮಾತೆ ಮಾಣಿಕೇಶ್ವರಿ

ದ್ರಾಕ್ಷಿ, ಕಾಳು, ರೇಷ್ಮೆ ಬೆಳೆವ ಚಿಕ್ಕಬಳ್ಳಾಪುರ
ಆಧುನಿಕ ಜಗದಲಿ ಆಗ ಹೊರಟಿಹುದು ಬೆಂಗಳೂರಿನ ಅಂಗ

ಕರುನಾಡು ಅಡಿಯಿಂದ ಮುಡಿವರೆಗೂ ಸಮೃದ್ಧಿಯ ಬೀಡು
ಇಲ್ಲಿ ಹುಟ್ಟಿದ ಜನರ ಜೀವನವು., ಸುಗಮ ಸಂಗೀತದ ಹಾಡು !!

ಹಚ್ಚು ಬಾರೋ ದೀಪವ


ಹಚ್ಚು ಬಾರೋ ದೀಪವ, ಹಚ್ಚು ಬಾರೋ....
ಗುಡಿಸಿ ಮನೆಯ, ಮನೆ ಅಂಗಳವ
ಶುಚಿಗೊಳಿಸಿ ಗೋಡೆಯ,
ಸುಣ್ಣ ಬಣ್ಣವ ಸಾರಿಸು ಬಾರೋ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ತಾಂಬ್ರದ ಬಿಂದಿಗೆಯ ಬೆಳಗಿ
ಮಾಲಿಂಗನ-ಅಮೃತ ಬಳ್ಳಿಯ ಸುತ್ತಿ
ಅರಿಶಿಣ ಕುಂಕುಮವ ಹಚ್ಚಿ ನೀರನು ತುಂಬಿ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಜಗಲಿಯ ಮೇಲೆ ಬೆಳ್ಳಿ ದೀಪ
ಕಿಟಕಿಯ ಅಡಿಯಲ್ಲಿ ಹಣತೆಯ ದೀಪ
ತುಳಸಿಯ ಗೂಡಿಗೊಂದು ಹಿತ್ತಾಳೆಯ ದೀಪ...
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಮನೆಯ ಹೆಬ್ಬಾಗಿಲಿಗೆ ತೋರಣ ಕಟ್ಟಿ
ಚೆಂಡು ಹೂವಿನ ಮಾಲೆ ತೊಡಿಸಿ
ಬಾಗಿಲ ಇಬ್ಬದಿಗೆ ಪಾಂಡವರ ಕೂಡಿಸಿ.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಮಕ್ಕಳು ನಲಿದಾರು ಹೊಸ ಬಟ್ಟೆಯ ತೊಟ್ಟು
ಸಂತಸದಿ ಕುಣಿದಾರು ಸುಚಂದ್ರಿ ಕಡ್ಡಿ, ಪಟಾಕಿ ಸುಟ್ಟು
ಚಕ್ರದ ಮದ್ದಿಗೆ ಮನೆ ಮುಂದೆ ರಂಗೋಲಿ....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ಬಡವರ ಪಾಲಿನ ಮಣ್ಣಿನ ಹಣತೆ
ಸಿರಿವಂತರ ಅಂತಸ್ಠಿನ ಬಂಗಾರದ ಬೆಳಕೆ..
ಮನೆಮನಗಳ ಬೆಳಗುವ ದೀಪಗಳ.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!

ದೀಪಗಳ ಹಬ್ಬವೇ ಬಲು ಸೊಗಸ್ಸು
ದೀಪಾವಳಿಂದಲೇ ಹೆಚ್ಚಿಸುವುದು ಹುಮ್ಮಸ್ಸು
ಬೆಳಗುತಿರಲಿ ದೀಪಗಳು ಹೆಚ್ಚಿಸುತ್ತಾ ವರ್ಚಸ್ಸು.....
ಹಚ್ಚು ಬಾರೋ ದೀಪವ, ಹಚ್ಚು ಬಾರೋ....!!


ಮನುಷತ್ವ

ಗುಡಿ ಕಟ್ಟಿದರೂ
ಮಸೀದಿ ಕಟ್ಟಿದರೂ
ಇಲ್ಲಾ,
ಚರ್ಚ್ಗಳೇ ಕಟ್ಟಿದರೂ
ಅಲ್ಲಿ ಯಾವುದೇ ದೇವರು ಬಂದು ನೆಲೆಸುವುದಿಲ್ಲ...!

ಮನುಷ್ಯನಿಗೆ,
ಮನುಷತ್ವದ ಬೆಲೆ ತಿಳಿದಾಗಲೇ.....,
ಎಲ್ಲರಲ್ಲೂ ದೇವರು ಕಾಣುತ್ತಾನೆ....!!
ಸ್ವಲ್ಪ ಯೋಚಿಸಿ ನೋಡಿ.......................................... !!

Monday, November 11, 2019

ಹಿಂದುಗಳು ನಾವು...!!


ಗುಡಿಗಳ ಕಟ್ಟಿ
ಭಕ್ತಿ ತೋರುವೆವು
ಮಂತ್ರ ಪಠನೆ ಮಾಡಿ
ಹಾಲೆರೆದು ಪೂಜಿಪೆವು
ಹೂವು ಹಣ್ಣು ಕಾಯಿ
ಅರಿಶಿಣ,ಕುಂಕುಮ,ವಿಭೂತಿ
ಕರ್ಪುರ,ಧೂಪ,ಊದಬತ್ತಿ
ಧಗ ಧಗನೆ ಹೊಗೆ ಹತ್ತಿ
ಸ್ವರ್ಗ ಲೋಕ ಕಂಡಂತೆ..!
ನಾವು ಉತ್ತಮರು...ನಾವು ಸರ್ವೋತ್ತಮರು...ಹಿಂದುಗಳು ನಾವು...!!

ಪೂಜಿಸಿದ ದೇವರು
ಅರಳಿ ಕಟ್ಟೆಯೇ ಸೂರು
ಮನೆಯಲ್ಲಿ ರಾರಾಜಿಸಿದ ದೇವರು
ಬೀದಿ ಕಸದಲ್ಲಿ, ರಸ್ತೆ ಪಾಲು
ಯಾರಿಗೆ ಹರಸಿದರೇನು...
ಯಾರದೋ ಕಷ್ಟಕ್ಕಾದರೇನು...
ದೀಪ ಬೆಳಗಿದವನು ಕೂಡಾ...
ಇಂದು ಕತ್ತಲಲ್ಲಿ ಚೆಲ್ಲಿಹನು...
ಯಾರವರು...ಯಾರವರು....?? 
ನಾವು ಉತ್ತಮರು...ನಾವು ಸರ್ವೋತ್ತಮರು...ಹಿಂದುಗಳು ನಾವು...!!

Tuesday, October 08, 2019

ಅತಿವೃಷ್ಟಿ

ಮತ್ತೆ ಶುರು..,
ಆ ವರುಣನ ಆರ್ಭಟ !
ತಪ್ಪುತ್ತಿಲ್ಲ ಇನ್ನೂ..,
ಸಂತ್ರಸ್ತರ ಸಂಕಟ !
ಭಯದಿಂದಲೇ..,
ಅನುದಿನವೂ ಬದುಕು !
ಒಪ್ಪತ್ತನ ಗಂಜಿಗೂ..,
ಕಾಣದ ದಿಕ್ಕು !
ಅತಿವೃಷ್ಟಿಗೆ..,
ಮನೆ ಕೊಚ್ಚಿ ಹೋಗಿದೆ !
ಸೂರು ಇಲ್ಲದೇ..,
ಜೀವಗಳು ನಲುಗಿವೆ !
ಮಳೆ ನಿಲ್ಲುವ..,
ಸೂಚನೆಯೇ ಇಲ್ಲ !
ಕಾಪಾಡುವ ಪರಿ..,
ಯಾವ ದೇವರು ಬಲ್ಲ ??
ಸಂತ್ರಸ್ತರ ಪಾಡು...,
ಹೇಳ ತೀರದ್ದು !
ದಾಟಬೇಕಿದೆ ಅವರು..., ಸಮಸ್ಯೆಗಳ ಸರಹದ್ದು...!!!

----ಸುನಿಲ್ ಅಗಡಿ----

Tuesday, September 24, 2019

ನನ್ನ ಅಜ್ವ - ನವಲೂರು ಶಾಲೆ ಮಾಸ್ತರ್ : ದಿನಚರಿ ೨


ಅವತ್ತು ಮಂಗ್ಳಾರ (  ಮಂಗಳವಾರ- Tuesday)..., ಮಂಗ್ಳಾರ ಅಂದ್ರ ಸಂತಿ ದಿನ. ನವಲೂರಿಗೆ ಬರೋ ಬಸ್ಸು ಎಲ್ಲಾ ತುಂಬಿ ತುಳ್ಕಾಕತ್ತಿರ್ತಾವ. ಎಲ್ಲಾ ಊರ ಮಂದಿ ಧಾರವಾಡಕ್ಕ ಹೋಗಿ ಸಂತಿ ಮಾಡಿಕೊಂಡು ಬರೋರು.
ಅದರಾಗ ಅವತ್ತ ತಾರಿಖು ೨ , ನನ್ನ ಅಜ್ಜಾಗ ಪೆನ್ಷನ್ ದಿನ. ನಡಿಲೇ ಸುನಿ ಇವತ್ತ ಧಾಡ್ಕ (ಧಾರವಾಡಕ್ಕ - ಆಡು ಭಾಷೆ ) ಹೋಗುಣು ಅಂದ್ರು ನನ್ನ ಅಜ್ಜಾ.
ಅಬ್ಬಾ ಇಂದ ಧಾಡ್ದಾಗ ಚೈನಿ ಹೊಡಿಯುದು ಅನ್ನೊ ಖುಶಿ. ಜಳಕಾ ಮಾಡಿ, ನಾಷ್ಟಾ ಮಾಡಿ ನಾ ಲಗೂನ ತೈಯ್ಯಾರ್ ಆಗಿ ಕುಂತೆ. ನಮ್ಮ ನವಲೂರಿಗೆ ಅರ್ಧಾ ತಾಸಿಗೆ ಒಮ್ಮೆ ಬಸ್ಸು ಬರ್ತದ. ನಾ ತೈಯಾರ್ ಆಗಿದ್ದಾಗ ಒಂಬತ್ತು ಒರಿ, ಮನಿ ಅಟ್ಟದಾಗಿಂದ ನೋಡಿದೆ ಆಗಲೇ ಬಸ್ಸು ಬಂದು ಹೋಗ್ಯದ ಅಂತ ತಿಳಿತು. ಇನ್ನ ಮುಂದಿನ ಬಸ್ಸು ೧೦ ಕ್ಕ. 
ಅಜ್ಜಾ ತನ್ನ ಕೈಯ್ಯಾಗ ಪರ್ಸ್ ತೊಗೊಂಡು ಬಗಲಾಗ ಹಿಡಕೊಂಡಾ..,ನಾನು ಕೈಚೀಲನ್ ಕೈಯಾಗ ಸುತ್ತಿಕೊಂಡು ಅಜ್ಜಾನ ಜೋಡಿ ಹೊರಟೆ. ನಾವು ನಾಕ್ ಹೆಜ್ಜಿ ಇಟ್ಟಿರಲಿಲ್ಲಾ.., ಶೆಟ್ಟರ ಅಂಗಡಿ ಮುಂದ ಹೊರಟಿದ್ದವಿ.., ಶೆಟ್ಟರು....ನಮಸ್ಕಾರ್ ರೀ ಮಾಸ್ತರ್ , ಸಂತಿ ಮಾಡಾಕ ಧಾಡ್ಕ ಹೊಂಟ್ರಿ ? ಅಂದ್ರು, ನಮಸ್ಕಾರ್ ..., ಹೌದು, ಹಂಗ ಬ್ಯಾಂಕಿಗೆ ಹೋಗಿ, ಸಂತಿ ಮಾಡ್ಕೊಂಡು ಬರ್ತೀನಿಪಾ. ಅಯ್ಯೊ ಮಾಸ್ತರ ಈಗ ಒಂಬತ್ತರ ಬಸ್ಸ್ ಹೋತಲ್ರಿ...ಅಂದರು. ೧೦ ರ ಬಸ್ಸಿಗೆ ಹೋದ್ರಾತು ಬಿಡ್ಪಾ.... ಅಂದ್ರು. ಅರ್ಧಾ ತಾಸ್ ಕಳದ್ ಮ್ಯಾಗ ಸಿಬಿಟಿ ನವಲೂರು ಬಸ್ಸು ಬಂತು.
ಹಳ್ಳಿ ಬಸ್ಸ್ಟಾಂಡ್ನ್ಯಾಗ ಕಂಡಪಟ್ಟೆ ಜನ..., ಗದ್ಲದಾಗ ಬಸ್ಸು ಹತ್ತೋದ ಕಷ್ಟ ಆತು, ಹೆಂಗೋ ಮಾಡಿ ಬಸ್ಸು ಹತ್ತಿದ್ವಿ. ಡೈವರ್..., ನಮಸ್ಕಾರ ರೀ ಮಾಸ್ತರ್ ದಾಡ್ಕ ಹೊಂಟ್ರಿ...?? ಹುನ್ಪಾ..., ತಗೋ ಸ್ವಲ್ಪ ಮೊಮ್ಮಗಂಗ ನಿನ್ನ ಸೀಟಿನ ಬಾಜುಕ ನಿಂದ್ರಸ್ಕೋ..., ಇಲ್ಲೇ ಬರ್ರಿ ಮಾಸ್ತರ... ಇದರ ಮ್ಯಾಲ ಕುಂಡರ್ರೀ ಅಂದ ಗಾಡಿದ ಬಾನೆಟ್ ಮ್ಯಾಗ ಕೂಡಸಿದಾ ಡ್ರಿವೆರ್.  ಅಂತು ಇಂತು ಬಸ್ಸು ಧಾಡ್ಕಡೆ ಹೊಂಟತು.
ಧಾರ್ವಾಡ ಕೋರ್ಟ ಸರ್ಕಲ್ ನ್ಯಾಗ ಇಳದ ಬ್ಯಾಂಕಿನ ಕಡೆ ನಡಕೊಂಡು ಹೊರಟವಿ. ನನ್ನ ತಲ್ಯಾಗ ಮತ್ತ ಅದೇ ಪ್ರಶ್ನೇ ಬಸ್ಸು ಡ್ರೈವರ್, ಕಂಡೆಕ್ಟರ್, ಹೋದ್ ಹೋದ್ ಕಡೆ ಎಲ್ಲಾರೂ ನಮಸ್ಕಾರ ಮಾಡವ್ರು, ಏನ್ಪಾ ನನ್ನ ಅಜ್ಜಾ ಭಾರಿ ಪೇಮಸ್ ..! ಎಲ್ಲಾ ಅಜ್ಜಾ ಅಜ್ಜಿಗಳು ಬ್ಯಾಂಕನ್ಯಾಗ ಪೆಸ್ಷನ್ ಸಮಂಧ ಕಾಯಾಕತ್ತಿದ್ದ್ರು. ಅಯ್ಯೊ ಸುನಿ, ಏನ್ಲೇ ಪಾ ಭಾರಿ ಗದ್ಲಾ ಐತಿ...ತಡಿ ಬ್ಯಾಂಕ್ ಮ್ಯಾನೇಜರ್ ನೋಡಿಕೊಂಡು ಬರೂಣು ಅಂತ ಹೇಳಿ ಅವರ ಕೊಟ್ಟಡಿಗೆ ಹೋದವಿ. ಬರ್ರಿ ಮಾಸ್ತರ್ ಕೂಡ್ರಿ..., ಏನು ಮೊಮ್ಮಗಾನೂ ಕರ್ಕೊಂಡು ಬಂದ್ರಿ.? ಕುಶಲೋಪರಿ ವಿನಿಮಯ ಆಯ್ತು. ಸ್ವಲ್ಪ ರೊಕ್ಕಾ ತಗಸಬೇಕಿತ್ತು...ಹೊರಗ ಗದ್ಲ ಬಾಹಳ ಐತಿ...ಹ್ಮ್ ಹೌದ್ರಿ ಸಂತಿ ಇವತ್ತ ಮತ್ತ ತಿಂಗಳ ಕೊನೆ ಅದಕ್ಕ..., ನೀವು ಇಲ್ಲೇ ಕೂಡ್ರಿ.., ಹಂಗ ನಿಮ್ಮ ಪಾಸ್ಬುಕ್ ಕೊಡ್ರಿ ಅಂದ್ರು..ಅಜ್ಜಾ ಕೊಟ್ಟಾ. ಒಂದು ಹಣ ತೆಗಿಯೋ ಚೀಟಿ ಬರೆದುಕೊಟ್ಟು ಕಳಿಸಿದರು. ಸ್ವಲ್ಪ ಹೊತ್ತಿನ್ಯಾಗ ಮ್ಯಾನೇಜರು ರೊಕ್ಕಾ ತಂದು ಕೊಟ್ಟರು.

ಮುಂದ ಮಾರ್ಕೇಟ್ ಗೆ ಹೊಂಟ್ವಿ..., ಎಪ್ಪಾ ಸುನಿ ಬಹಳ ಬಿಸಿಲ ಐತಿ, ತಲಿ ಸುಡಾಕತ್ತದ.., ಬಾ ಇಲ್ಲೇ ಕಬ್ಬಿನ ಹಾಲು ಕುಡಿದು ಹೋಗೂಣು ಅಂದ್ರು. ಆಹಾ...!! ಏನ್ ರುಚಿಯಿತ್ತು ಅಂತೀರಿ...?!
ಮತ್ತ ಸಂತಿ ಪ್ಯಾಟ್ಯಾಗ ತರ್ಕಾರಿ ಹಣ್ಣು ಹಂಪ್ಲಾ ತೊಗೊಂಡು ಸಿಬಿಟಿಗೆ ಬಂದಾಗ ಮಧ್ಯಾನ ಎರಡು ಘಂಟೆ ಆಗಿತ್ತು. ಊಟದ ಹೊತ್ತು ಆಗಿದ್ದರಿಂದ ಬಸ್ಸು ಅಷ್ಟೇನು ಗದ್ಲ ಇರಲಿಲ್ಲ. ಮನಿಗೆ ಬಂದಾಗ ಮೂರ್ ಆಗಿತ್ತು.. ಊಟಾ ಮಾಡಿದವರ ಗಡತ್ತಾಗಿ ನಿದ್ದಿ ಹೊಡದ್ವಿ ನೋಡ್ರಿ....! ಸಂತಿ ದಿನಾ ಅಂದ್ರ ಹಿಂಗ ಅಡ್ಯಾಡಿ ಅಡ್ಯಾಡಿ ಸುಸ್ತಾಗಿ ಮನಿಗೆ ಬರೂದು, ಬಂದು ಊಟಾ ಮಾಡಿ ಮಕ್ಕೋಳುದು.

ಮತ್ತೊಂದು ದಿನಚರಿದೊಂದಿಗೆ ಭೇಟಿ ಆಗೋಣ....!! :)

ವ್ಯಥೆ

ಹಣದ ಮೇಲಿನ ಒಲವು
ಅಧಿಕಾರದ ಅಮಲು !

ಸುಳ್ಳು ಕಂತೆಗಳ ಸಾಲು
ಹುಸಿ ಪ್ರಚಾರದ ತೆವಲು !

ಅಂಧ ಭಕ್ತಿಗೆ ಶರಣು
ಸತ್ಯವ ಅರಿತರೂ ಕುರುಡು !

ಬಡಾಯಿ ಕೊಚ್ಚಿಕೊಳ್ಳುವ ಬಾಯಿ
ಕಳ್ಳನ ಸೋಗು ಮಹಾಮಾಯಿ !

ಶೋಕಿ ಜೀವನದ ಮಡುವು
ಪೂಜೆಗೆ ಕುಳಿತರೂ ಕುಹಕು !

ಪೊಳ್ಳು ಡೋಂಗಿಯ ಸಬೂಬು
ದೇಶದ ಮಾನ ಜಗಮುಂದೆ ಹರಾಜು !

ಸಮಸ್ಯೆಯಲ್ಲೇ ಮುಳುಗಿದರೂ ಬಡಪಾಯಿ
ಎಲ್ಲಾ ಸರಿಯಿದೆ ಅನ್ನುವ ಜನ ದ್ರೋಹಿ !!

Tuesday, September 17, 2019

ಬರ್ರಿ ಬರ್ರಿ ಚಾ ಕುಡ್ಯಾಕ

ಬರ್ರಿ ಬರ್ರಿ
ಚಾ ಕುಡ್ಯಾಕ
ಕುಡ್ಕೋತ ಕುಡ್ಕೋತ
ಸ್ವಲ್ಪ ಕಷ್ಟ ಸುಕಾನು ಮಾತಾಡಾಕ್

ಮಳಿ ಇಲ್ಲಾ ಬೆಳಿ ಇಲ್ಲಾ
ಅನ್ನೋ ಕಾಲೊಂದಿತ್ತು
ಕೆಟ್ಟ ಮಳಿ ಬಂದ
ಮನಸ್ಯಾರು ಮನಿ ಮಠ ಕಳದಿತ್ತು

ಒಪತ್ತಿನ ಊಟಕ್ಕ
ಹೊಟ್ಟೀಗೆ ಲಾಟ್ರಿ ಆಗೇತಿ
ಅರ್ಧಾ ಪಾಕೇಟ್ ಬಿಸಿಕಿಟ್ ತಿಂದ
ದಿನಾ ಪೂರಾ ಕಳದೈತಿ

ಇರಾಕ ಸೂರಿಲ್ಲ
ಉಡಾಕ್ ಬಟ್ಟಿಲ್ಲ
ಸರ್ಕಾರದವರು ಇದ್ದರೂ ಸತ್ತಂಗ ಎಲ್ಲಾ
ಚಾ ಕುಡುದ ಮರೀಯೂಣು ಬರ್ರಿ

ಯಾರ್ ಕೂಸ್ ಸತ್ತರೇನು
ಯಾವ ರೈತ ಉರಲ ಹಾಕ್ಕೊಂಡ್ರೇನ್
ನಮ್ಮ ಪಕ್ಷದವರ್ ನಮಗ ಹೆಚ್ಚ ಅಲ್ಲವೇನ್
ಬರ್ರಿ ಚಾ ಕುಡಿಯೋಣ ಯಾರ್ಗೇನಾದರೇನ್

Picture Courtesy :Karnataka TV9 NEWS

Image result for uttara karnataka flood people crying

Monday, September 09, 2019

ಚಿಣ್ಣಾಟ



ಎನೋ ಅಚ್ಚರಿ
ಈ ಚಿಕ್ಕ ಪೋರ

ಬಲು ಕುತೂಹಲ
ಜಗ ನೋಡೊ ಹಂಬಲ

ಕಾಲು ಆಡಿಸುವ ಆಟ
ಬಿಟ್ಟರೇ ಕಿತ್ತು ಓಟ

ಕೈಯಲ್ಲಿ ಉದ್ದುದ್ದ ಉಗುರು
ಮುಖ ಸವರಿ ಅಲ್ಲಲ್ಲಿ ಗೀರು

ಔಷಧಿ ಕುಡಿಯಲೊಲ್ಲ
ತುಟಿ ಗಟ್ಟಿ ಹಿಡಿಯುವ ಮಲ್ಲ

ಗದರಿಸಿದರೆ ಸಿಡುಕು
ರಮಿಸಿದರೆ ಸಣ್ಣ ನಗು

ಕ್ಷಣ ಕ್ಷಣಕ್ಕೆ ಅಚ್ಚರಿ
ಇವನ ಆಟಗಳು ಪರಿ ಪರಿ

Friday, September 06, 2019

ಕೂಸು

ಹುಟ್ಟಿದಂದು ಪ್ರೀತಿಯ ಹುಲಿ
ಊರಲ್ಲೆಲ್ಲಾ ಭಾರಿ ಮಳಿ
ತುಂಬಿದ್ದವು ಎಲ್ಲಾ ಹೊಳಿ
ಬೆಸೆದವು ಹೊಸ ಸಂಬಂಧ ಸರ್ಪಳಿ ||

ಹಾಲು ಗಲ್ಲದ ಮುದ್ದು ಕಂದ
ಪುಟ್ಟ ಬಾಯ್ತೆರೆದ ಅಳುವೇ ಚಂದ
ಪಿಳಿ ಪಿಳಿ ಬಿಡುವ ಕಣ್ಣನಿಂದ
ಜಗವ ಕಾಣುವ ತವಕದಿ ಮಿಂದ ||

ಕ್ಷಣದಿ ಕಂಡ ಮುಖದ ಹೊಳಪು
ಎತ್ತಿಕೊಂಡೊಡನೆ ಮೈ ನುಣುಪು
ಮುಷ್ಟಿ ತೆರೆದ ಉದ್ದುದ್ದ ಬೆರಳು
ಹೊರಳಾಡಿಸಿ ನೋಡಿದ ಕೊರಳು ||

ಅಜ್ಜಿ ಅಜ್ಜರ ತ್ರಿತಿಯ ಮೊಮ್ಮಗು
ದೊಡ್ಡ ಅಜ್ಜಿ ಕಂಡ ಮರಿಮೊಮ್ಮಗು
ಎರಡೆರೆಡು ಚಿಕ್ಕಪ್ಪರು ಮತ್ತೀರ್ವ ಚಿಕ್ಕಂಮ್ಮಂದಿರು
ಆಡಲು ಅವನಿಗೆ ಅಕ್ಕ ಅಣ್ಣಂದಿರು ||

ಹುಟ್ಟು ಹಠವಾದಿ
ಚೂಟಿ ಚಿತ್ತದಿ
ಕಿರಿ ಕಿರಿ ಮಾಡದ ಕೂಸು
ಮೊಗದಿ ಎಲ್ಲರ ನಗುವ ಹಾಸು  ||


Saturday, August 03, 2019

ನಾಗರಪಂಚಮಿ

ಬಾರೋ ಬಾರೋ ನಾಗಪ್ಪ
ಪಂಚಮಿಯಂದು ನೆನೆದೆವು ನಿನಗಪ್ಪ
ಹಾಲನು ಎರೆವೆನು ಬಾರಪ್ಪ

ರೈತನ ಗೆಳೆಯನು ನೀನಪ್ಪ
ಇಲಿಗಳ ಸಂಹರಿಸು ಬಾರಪ್ಪ
ಬೆಳೆಯನು ರಕ್ಷಿಸು ನಮ್ಮಪ್ಪ

ಹೆಂಗಳೆಯರು ಪೂಜಿಸಲು ಕಾದಿಹರಪ್ಪ
ಅರಳಿ ಕಡಬನು ನೈವೇದ್ಯ ತಂದಿಹರಪ್ಪ
ಮುತ್ತೈದೆಯರಿಗೆ ಆಶಿರ್ವದಿಸಲು ಬಾರಪ್ಪ

ತಂಗಿ ಅಣ್ಣನ ಹಾದಿ ಕಾದಿಹಳಪ್ಪ
ಪಂಚಮಿಗೆ ಕರೆಯಲು ಬರುತಿಹನಪ್ಪ
ಹರಸಿ ಅಣ್ಣ ತಂಗಿಯ ಸಂಬಂಧವ ಕಾಪಾಡಪ್ಪ

ಹುತ್ತಕೆ ಪೂಜೆಯ ಸಲ್ಲಿಸುವೆನಪ್ಪ
ಮಣ್ಣಿನಲ್ಲಿ ಅವತರಿಸು ಬಾರಪ್ಪ
ಮನುಕುಲವ ಕಾಪಾಡೋ ನನ್ನಪ್ಪ

---ಭಾವಪ್ರಿಯ---

Tuesday, July 30, 2019

ಸಿಡಿದೆದ್ದ ಪ್ರಜೆ

ಸಾಕು ಸಾಕಾಯಿತು

ರಾಜಕೀಯ ಡೊಂಬರಾಟ

ಪಕ್ಷ ಪಕ್ಷದ ನಡುವೆ

ಕುತಂತ್ರ ಕಾದಾಟ

ಒಳಿತಿಲ್ಲ, ಅಳಿವಿಲ್ಲ
ಇವರ
ಹುಚ್ಚಾಟಕೆ ಕೊನೆಯಿಲ್ಲ

ಬೇಸತ್ತ ಪ್ರಜೆ
ಬೇಡವಾಗಿದೆ
ಯಾರಿಗೂ ಈ ಸಜೆ

ಬದಲಾವಣೆ ಅವತರಿಸಲಿ
ಪ್ರಜೇಗಳೇ ಪ್ರಭುಗಳಾಗಲಿ
ರಾಜಕೀಯ ನಶಿಸಲಿ, ಪ್ರಜಾಕೀಯ ಪ್ರಜ್ವಲಿಸಲಿ.

Monday, July 29, 2019

ನನ್ನ ಅಜ್ವ - ನವಲೂರು ಶಾಲೆ ಮಾಸ್ತರ್

ನಮ್ಮ ಅಜ್ಜ ನವಲೂರ ಸಾಲಿ ಮಾಸ್ತರ್. ಅಜ್ಜಾಂದು ನಂದು ಭಾರಿ ನಂಟು. ನನಗ ಸಾಲಿ ಸೂಟಿ ಸುರು ಆತು ಅಂದ್ರ ಮರದಿನಾ ನಾ ಅಜ್ಜಾನ ಊರ ನವಲೂರಿಗೆ ಹೋಗ್ತಿದ್ದೆ. ಅಲ್ಲಿಗೆ ಹೋದ ಮ್ಯಾಲ, ಅವರ ಜೋಡಿನ ಎಲ್ಲಾ, ಆಡುದು, ಓದುದು, ವಾಯುವಿಹಾರಕ್ಕ ಹೋಗುದು, ಉಣ್ಣುದು, ಮಲಗೂದು. ನನ್ನ ಅಜ್ಜ ಲೇ ಸುನಿ, ಬೇಗ ಏಳೋ ಇವತ್ತ ನಾವ್ ಹೊಲದ ಕಡೆ ಹೋಗುಣು ಅಂತ ಕೂಗಿದರೆ ನಂಗ ಎಲ್ಲಿಲದ ಖುಷಿ. ಬಡಾ ಬಡಾನ ಎದ್ದು, ಮುಖ ತೊಳದ, ಜಳಕಾ ಮಾಡಿ ತೈಯಾರ. ಅಜ್ಜಾ ಬೇಗ ನಡಿ ಹೋಗುಣ ಹೊಲಕ್ಕ ಅಂತ ನಾ ಅಂದ್ರ ತಡಿ ಪಾ ನಾಸ್ಟಾ ಮಾಡಿ ಚಾ ಕುಡದ ಹೋಗುಣು ಅಂತಿದ್ದರು. ಸರಿ ಎಲ್ಲಾ ಮುಗಿಸಿ ಅಜ್ಜಾ ಮೊಮ್ಮಗನ ಸವಾರಿ ಹೊರ್ಟರ ಶುರು ನೋಡ್ರಪಾ..., ನಮಸ್ಕಾರೀ ಮಾಸ್ತರ..., ಮುಂಜಾಲೆನೆ ಎಲ್ಲಿಗ ಹೊಂಟ್ರಿ.., ಮೊಮ್ಮಗಾ ಬಂದಾನ ಹಂಗ ಹೊಲದ್ ಕಡೆ ಹೋಗ ಬರ್ತೀನಿ. ಬರ್ರಿ ಬರ್ರಿ ಹೋಗಬರ್ರಿ..ಇನ್ನ ಎರಡು ಹೆಜ್ಜಿ ಇಟ್ಟರಲಿಲ್ಲ ..ಶರಣರೀ ಮಾಸ್ತರ್.., ಚಾಹಾ ಆತರೀ ?? ಅಂತ ಒಬ್ಬ ಅಜ್ಜಿ ಮಾತನಾಡಿಸಿದರು. ಹೂನ್ವಾ...ಈಗ ಇನೈದ ಆತ ನೋಡ, ಸ್ವಲ್ಪ ಹೊಲಕ್ಕ ಹೋಗಬರ್ತೀನಿ..ಅಂದರು. ನವಲೂರು ವ್ಯಾಯಾಮ ಸಾಲಿ ಮುಂದ ಪೈಲ್ವಾನರು ನಮಸ್ಕಾರ  ಮಾಸ್ತರ ಅಂದ್ರು...ಓಹೋ ಪೈಲವಾನ  ಅರಾಮೇನರ್ಪಾ...? ಎಲ್ಲಾರೂ ವ್ಯಾಯಾಮ ಮುಗಿಸೇ ಕುಂತಿರೇನು ಅಂದ್ರು.. ಹೂನ್ರೀ ಅಂದ್ರು.  ಮನಿಯಿಂದ ಅಗಸಿ ದಾಟಿ ಹೊಲದ ರಸ್ತೆ ಹಿಡಿಯು ಮಟ ಇಷ್ಟೊಂದು ಮಂದಿ ನಮ್ಮ ಅಜ್ಜಾಗ ಹೆಂಗ ಗೊತ್ತ ಅದಾರ....? ಅಜ್ಜಾ ನಿಂಗ ಈಸ್ ಮಂದಿ ಹೆಂಗ ಗೊತ್ತ ಅದಾರ...?  ನಮ್ಮ ಸಾಲ್ಯಾಗ ಇವರ ಮಕ್ಕಳು ಕಲಿತಾರ, ಇವರು ಸಾಲಿಗೆ ಹಚ್ಚಾಕ ಬರ್ತಾರ ಅದಕ್ಕ ತಿಳಿದಿರ್ತಾರ.  ಹಿಂಗ ನಾವು ಹೊಲ ಮುಟ್ಟೋತನಕಾ ಸಿಕ್ಕವರು ಬಹಳ ಮಂದಿ...., ನನ್ನ ಅಜ್ಜಾ ಭಾರಿ ಫೇಮಸ್ ಅಂತ ನನಗ ಆಶ್ಚರ್ಯ ಹಾಗು ಖುಷಿ. 
ಮತ್ತೋಂದು ದಿನಚರಿಯೊಂದಿಗೆ ಭೇಟಿಯಾಗೋಣ...

Thursday, July 25, 2019

ನಮ್ಮ ಕನಸ್ಸು

ಒಡಲು ತುಂಬಿ
ಮೂರರಲ್ಲಿ
ಸಂತೋಷ ಹೊಮ್ಮಿ
ಮನಗಳಲ್ಲಿ
ಚಿಗುರಿದೆ ಹೊಸ ಕನಸ್ಸುಗಳು !

ಇನಿಯನ ನೆನಪು
ಎದೆಯ ತುಂಬ
ಬಯಸಿದೆ ಸನಿಹ
ಅನುದಿನ ಅನುಕ್ಷಣ
ಬಣ್ಣ ಬಣ್ಣದ ಚಿತ್ತಾರಗಳು !

ಮಳೆಯ ಹನಿ ಹನಿಯಲ್ಲೂ
ನಲ್ಲನ ಸವಿ ತಂಪು
ಕುಹೂ ಕುಹೂ ಕೂಗಿನಲ್ಲೂ
ಅವನ ಗುಣುಗು
ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು !

ಘರ್ಬದಿ ಆಡುವ
ನವಜಾತಕೆ
ಮೈಯೆಲ್ಲಾ ರೋಮಾಂಚನ
ಅದರ ಒಳ ಜಿಗಿದಾಟಕೆ
ಅವರಂತೆ ಅವನೋ.. ? ನನ್ನಂತೆಯೇ ಅವಳೋ !

ಮಾಸಗಳು ಕಳೆಯುತ್ತ..
ಇಂದಿಗಿಂದು ಒಂಬತ್ತು...
ಘರ್ಬದಿ ಮೊಳಗಿದ ಮೇಳ
ಕೈಗಳಲಿ ಕುಣಿಯುವ ಹೊತ್ತು
ಆರತಿಯೂ ಸರಿಯೇ, ಕೀರತಿಯೂ ಸರಿಯೇ !

ಹರುಷದಿ ಕಾಣುವ
ಜಗವೆಲ್ಲಾ ಹಸಿರು
ಬೆರಳಂಚಿನ ಎಣಿಕೆ
ಆಗಮನಕ್ಕೆ ಕಾಯುತ್ತಿರುವೆ
ಎನ್ನ ತೋಳಲಿ ನಗುವ ಕಂದನಿಗೆ !






Tuesday, July 23, 2019

ಹೊಡಿಲಿಕತ್ರ ಮಳಿ

ಹೊಡಿಲಿಕತ್ರ ಮಳಿ
ಜನರು ಓಡೋಡಿ ಚಿಲ್ಲಾಪಿಲ್ಲಿ
ರಸ್ತೆಯಲ್ಲಾ ತ್ಯವಸಗಟ್ಟಿದ ದಾರಿ
ನಡಕ್ಕ ಓಡೈತಿ ಬಿಆರ್ಟಿಎಸ್ ಚಿಗರಿ
ಟೋಲ್ನಾಕಾ ನೀರ ನೋಡಿ ನಿಂತೇತಿ ಹೆದರಿ
ಗಟರ್ನ್ಯಾಗ ನೀರ್ ಹೋಗವಲ್ತರೀ
ಜನ ಬಳಸಿ ಚೆಲ್ಲಿದ ಪ್ಲಾಸ್ಟಿಕ್ ತಡದೇತ್ರೀ
ಇದು ನಮ್ಮ ಢಾರವಾಡದ ಚಿಂತಾಜನಕ ಸ್ಥಿತಿರೀ
ಹಣೆಬರಹ ಬದಲಿಸಾಕ ಯಾರ್ ಯಾರ್ ಬರ್ತೀರಿ ???

Wednesday, July 10, 2019

ವಿ....ನಯ !

ಮಾತು ಪಟ ಪಟ
ಕಲಸ ಚಟ ಚಟ

ಗೆಳೆಯರು ಬಹಳ
ಗೆಳೆತನವೂ ಆಳ

ವೇಳೆಯ ಮಹತ್ವ
ತಿಳಿದ ಮಹಾತ್ಮ

ಗಡಿಯಾರ ಮೋಹ
ಮಧು ಪಾನ ಪ್ರೀಯ

ಹೆಸರು ವಿನಯ
ಹಾಸ್ಯದಲ್ಲಿ ತಲ್ಲೀನ

ವಾಕ್ ಚತುರ
ಮೋಡಿಗಾರ

ಕೀಟಲೆ ಮಾಡವ ಪ್ರವೀಣ
ಸದಾ ಹಸನ್ಮುಖಿ..,
ಹೃದಯವಂತ ಜಾಣ !!

Tuesday, July 09, 2019

ತಂತ್ರಜ್ಞಾನ

ಕೂಡುತ್ತಿದ್ದರು ಜನರು

ನೋಡಲು ಕ್ರಿಕೇಟು

ಟೀವಿಯ ಮುಂದೆ....!

ಈಗ ಎಲ್ಲರ ಕೈಯಲ್ಲೂ

ಮೋಬೈಲು...

ಟೀವಿಯೇ., ಕಣ್ಣ ಮುಂದೆ...!!

Monday, July 08, 2019

ಕವಿಯ ಲೇಖನಿ

ಕ್ರಾಂತಿಯ ಸಮರ
ಆದರೂ ಮೌನಿ
ಅರಿಯಿರಿ ಸಾರ
ಅದು ಶಾಂತ ವಾಹಿನಿ
ಹರಿಸಿದೆ ಬೆವರ..,ಕವಿಯ ಲೇಖನಿ !

ಗುಡು-ಗುಡುಗಿದವರ
ಹುಟ್ ಅಡಗಿಸುವ ಹನಿ
ಹುಚ್ಚೆದ್ದು ಅಬ್ಬರಿಸಿದವರ
ಸದ್ದಿರದೆ ಬೆಚ್ಚಿಸುವ ಪರಿ
ಹರಿಸಿದೆ ಬೆವರ..,ಕವಿಯ ಲೇಖನಿ !

ಸೊಕ್ಕಿನಿಂದ ಮೆರೆದವರ
ತಗ್ಗಿಸಿ ಮುದುಡಿಸುವ ಹಾರಿ
ಶಕ್ತಿ ಪ್ರದರ್ಶಿಸಿದ ಶೂರ
ಧೈರ್ಯಗೆಡದಂತೆ ಮದವೇರಿ
ಹರಿಸಿದೆ ಬೆವರ..,ಕವಿಯ ಲೇಖನಿ !



Friday, July 05, 2019

ಚುಟುಕು

ಬಿಲ್ಲಿನಿಂದ ಹೂಡಿದ ಬಾಣ..
ನಾಟಲೇಬೇಕೆಂದಿಲ್ಲ..
ನಾಲಿಗೆಯಂಬ ಮಂತ್ರದಂಡ ಸಾಕು.
ಹೃದಯ ಇರಿಯಲು !!

Wednesday, July 03, 2019

ನಮ್ಮ ಧಾರ್ವಾಡ (ಅಂದು - ಇಂದು)



ಅಂದು ಚಂದಿತ್ತು ನಮ್ಮ ಧಾರ್ವಾಡ ನೋಡ್ರಿ
ಊರಾಗ ಓಡ್ತಿತ್ತು ಟಾಂಗಾ ಗಾಡಿ

ಸಿಬಿಟ್ಯಾಗ ಶೇಂಗಾ, ಲಿಂಬುಳಿ, ಹುರಗಡ್ಲಿ
ಹಿಂದೊಂದು ಬಸ್ಸ್ ಬಂತು ಯಾವುದ್ ನೋಡ್ರಿ…?

ಎಂಟರಿಂದ ಒಂಬತ್ತಕ್ಕ ಸಾಲಿ ಹುಡುಗರ ಓಟ
ಬಸ್ ತಪ್ಪಿದರ.., ತಪ್ಪತಿತ್ತು ಮೊದಲ ಪಾಠ

ವಿಜಿಯಾ ಥೇಟರ್ನ್ಯಾಗ ಅಣ್ಣವರ ಪಿಚ್ಚರ್
ಕಾಲೇಜು ಹುಡುಗೂರು ಕ್ಲಾಸಿಗೆ ಚಕ್ಕರ್

ಎನ್.ಟಿ.ಟಿ.ಎಫ್ ಕಲಿಯೋರು ಭಾರಿ ಜೋರು
ನೌಕರಿ ಮಾಡಾಕ ದೇಶಾನ ಬಿಟ್ಟೋರು

ಕೃಷಿ ವಿಶ್ವವಿದ್ಯಾಲಯದಾಗ ಓದೋದೆ ಚಂದ
ಹಸಿರಿನಿಂದ ಕಂಗೊಳಿಸ್ತಿತ್ತು ಅದರ ಅಂದ

ಇಂದೂ ಚಂದೈತಿ  ನಮ್ಮ ಧಾರ್ವಾಡ ನೋಡ್ರಿ
ಸ್ವಲ್ಪ ಹೆಚ್ಚಗಿ ಆಗ್ಯಾವ.., ಈಗ ಮೋಟರ್ ಗಾಡಿ !!








Monday, July 01, 2019

ನಿತ್ಯ ನುಡಿ


ಕಲಿಯಲು ಬೇಕು ಕನ್ನಡ
ಕಲಿತು ಬರಿಯಲೂಬೇಕು ಕನ್ನಡ 

ನುಡಿಯ ಬೇಕು ಕನ್ನಡ
ನುಡಿದು ನಡಿಯಲೂಬೇಕು ಕನ್ನಡ

ಬಳಸ ಬೇಕು ಕನ್ನಡ
ಬಳಸಿ ಬೆಳಸಲೂಬೇಕು ಕನ್ನಡ

ಪೂಜಿಸ ಬೇಕು ಕನ್ನಡ
ಪೂಜಿಸಿ ಆರಾಧಿಸಲೂಬೇಕು ಕನ್ನಡ

ಏರಿಸೋಣ ಬಾರಾ ಕನ್ನಡ ಬಾವುಟ 
ಏರಿಸಿ ಹಾರಿಸಲೂಬೇಕು ಕನ್ನಡ ಭೂಪಟ

ನನ್ನ ಅಭಿಮಾನ ಕನ್ನಡ
ಕರುನಾಡ ಜೀವರಾಶಿಗಳಲೂಬೇಕು ಕನ್ನಡ

ಕನ್ನಡದ ಕೂಗು


ನನ್ನ ಭಾಷೆಯೇ ನಮ್ಮ ನೆಲದಲ್ಲಿ
ಉಳಿವಿಗಾಗಿ ಬಡಿದಾಡುತಿರಲು

ಹುಟ್ಟು ಕನ್ನಡಿಗರೇ ಹೊರೆತು
ಕನ್ನಡಕ್ಕಾಗಿ ದುಡಿದವರಲ್ಲ
ಕನ್ನಡವ ಆದರಿಸುವುದಿಲ್ಲ
ಅಭಿಮಾನವೇ ಇವರಿಗಿಲ್ಲ!

ಹಿಂತವರ ಹೆತ್ತ ನನ್ನ ತಾಯಿನೆಲ
ಏನು ಪಾಪವ ಮಾಡಿದೆ ನಾ ಅರಿಯೆ
ಮಕ್ಕಳೇ ಇವರು..? ಹಿತಶತ್ರುಗಳು..!
ತಾಯ ಋಣವ ತೀರಿಸುವ ಬದಲು
ಅನ್ಯ ಭಾಷೆಯ ಗುಲಾಮರು ?!

ತೊಲಗಲಿ ದುರಹಂಕಾರಿಗಳು
ಮೊಳಗಿಸುವೆ ಕನ್ನಡ ಕಹಳೆಯು
ಕನ್ನಡಕ್ಕಾಗಿಯೇ ಸುರಿಸುವೆ ನನ್ನ ಬೆವರು
ಸಮಯ ಬಂದರೆ ಹರಿಸಬಲ್ಲೇ ನೆತ್ತರನು.
ಕನ್ನಡದ ಊಳಿವಿಗೆ ಅರ್ಪಿಸುವೆ ನನ್ನೇ ನಾನು !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...