ಸದಾ ಕಂಗೊಳಿಸುವ ಬೆಳಗಾವಿ
ಸೈನಿಕರು
ಹೊರಟಾರ ಹಿಡಕೊಂಡು ಕೋವಿ
ಉತ್ತರ
ಕರ್ನಾಟಕಕ್ಕೆ ಹೆಬ್ಬಾಗಿಲು
ಕವಿಗಳ
ಗೂಡು ಚೆಲುವ ಧಾರವಾಡ ಬೀಡು
ಸುಡುಸುಡುವ
ತವರು ರಾಯಚೂರು
ಬೆಂಕಿಗೂ
ಬೆವರಿಳಿಸುವುದು ಬಲು ಜೋರು
ಕರುನಾಡ
ಹೃದಯವದು ದಾವಣಗೆರೆ
ನಾಲಿಗೆ
ರುಚಿಗೆ ನೀರೊರಿಸುವುದು ಬೆಣ್ಣೆದೋಸೆ
ಮೆಣಸಿಕಾಯಿ
ಇಳುವರಿ ಹಾವೇರಿ
ಬ್ಯಾಡಗೀಯ
ಕೆಂಪು ಮೆಣಸಿನಕಾಯಿ ಬಹಳ ಖಾರಾ ರೀ
ಕವಿಗಳ-ಸಂಗೀತ  ದಿಗ್ಗಜರ ನಾಡು ಗದಗ
ಭಿಮಸೇನರು,
ಪುಟ್ಟರಾಜ ಗವಾಯಿಗಳು ಚೆನ್ನವೀರ ಕಣವಿ, ಆಲೂರು ವೆಂಕಟರಾಯರು
ಇತಿಹಾಸದ
ಮರಿ ಮಗಳು ವಿಜಯಪುರ
ಗೋಲಗುಮ್ಮಟದ
ಇಮಾರತವು ಜನಪ್ರೀಯ
ಕರಾವಳಿಯ
ಸೊಬಗು ಮಂಗಳೂರು
ಮೀನ
ಸವಿದ ಜನರು ಓದುದರಲ್ಲಿ ಚುರುಕು
ಅದಿರು
ಸಂಪತ್ತಿನ ನಾಡು ಬಳ್ಳಾರಿ
ಸುಪ್ಪತ್ತಿಗೆಯಲಿ
ಮಿಂದ ಜನರು ಸುವಿಹಾರಿ
ಕಲ್ಲಿನ
ಕೋಟೆಗೆ ಪ್ರಸಿದ್ಧ ಚಿತ್ರದುರ್ಗ
ಮಾರಿ
ಕಣಿವೆಯ ನೋಟ ಅತಿ ಮಧುರ
ಕೊಳ್ಳೆಗಾಲ,
ಬಂಡಿಪುರ, ಚಾಮರಾಜನಗರ
ವನ್ಯಜೀವಿಗಳ
ತವರು ಕಾಪಾಡಿಕೊಳ್ಳುವುದು ನಮ್ಮಯ ಭಾರ
ಬೆಂಗಳೂರು
ಕರುನಾಡ ವಾಣಿಜ್ಯ ಖಣಜ
ಎಲ್ಲ
ಭಾರತೀಯರಿಗೂ ಅನ್ನ ನೀಡುವ ಅನ್ನದಾತ
ಚಿಕ್ಕಮಗಳೂರು
ಕಾಫಿ ಸಮೃದ್ಧಿಯ ಸಾಗರ
ಜನರ
ದಣಿವಾರಿಸಿ ಚೈತನ್ಯ ತುಂಬುವ ಅಗರ
ತೊಗರಿ
ಬೆಳೆಯುವ ತಾಣ ಗುಲ್ಬರ್ಗ
ಭಾರತಕ್ಕೆ
ಸಿಮೆಂಟು ತಯ್ಯಾರಿಸುವ ದಿಗ್ಗಜ
ಬಿಸಿಲು
ನಾಡಿನ ತಂಪು ಸ್ಥಳ ಬೀದರ
ಕರಕುಶಲ
ವಸ್ತುಗಳಿಗೆ ಪ್ರಸಿದ್ಧಿ ಹೊಂದಿ ಅಮರ
ವೀರ
ಯೋಧರ ನಾಡು ಕೊಡಗು
ಕಾವೇರಿ
ಹುಟ್ಟು ತಲಕಾವೇರಿ, ಕೊಡವ ನಾಡೆಲ್ಲಾ ಹಸಿರು 
ಅಪರಂಜಿಯ
ಗಣಿ ಕೋಲಾರ
ಕರುನಾಡಿಗಿದು
ವಜ್ರದ ಹಾರ
ಐತಿಹಾಸಿಕ
ನಗರಿ ಮೈಸೂರು
ಒಡೆಯರ
ಅರಮನೆ ವೈಭವ ನೋಡಲು ಸಾಲದು ಈ ಜನುಮವು
ಕಬ್ಬು
ಬೆಳೆವ ಸೀಮೆ ಮಂಡ್ಯ  
ಸಿಹಿ
ಸುತ್ತುಕಬ್ಬು ಉಣಬಡಿಸುವುದು ಗಾಣ
ರಾಮನಗರ
ರೇಷ್ಮೆಯ ಶಿಖರ
ಬರ್ಜರಿ
ರೇಷ್ಮೆಸೀರೆಗಳೆ ಹೆಂಗಳೆಯರಿಗೆ ಭೂಷಣ
ಬತ್ತ,
ಅಕ್ಕಿ ಬೆಳೆವ ಬೈಲು ಕೊಪ್ಪಳ 
ಹೆಸರುವಾಸಿಯಾಗಿಹುದು
ಅಕ್ಕಿಯ ಬಟ್ಟಲ
ಇಳಕಲ್,
ಬಾದಾಮಿ, ಬಾಗಲಕೋಟೆ
ಚಾಲುಕ್ಯರು
ಕೆತ್ತಿದ ಕಲ್ಲಿನ ಗುಡಿ-ಗವಿಗಳೇ   
ಶಿವನ
ಮೊಗದ ಹಿರಿಮೆ ಶಿವಮೊಗ್ಗ
ಭಾರತದ
ಎರಡನೆಯ  ಪ್ರಸಿದ್ದ ಜಲಪಾತ ಜೋಗ  
ಹೊಯ್ಸಳರು
ಆಳಿದ ನಾಡು ಹಾಸನ
ಬೇಲೂರು,
ಹಳೆಬೀಡು, ಐತಿಹಾಸಿಕ ಶಿಲ್ಪ ಕೆತ್ತನೆಯ ಕುರುಹು
ಸಾವಿರಾರು
ಮಕ್ಕಳಿಗೆ ಶಿಕ್ಷಣ ನೀಡಿದ ತುಮಕೂರು
ಕರ್ನಾಟಕ
ರತ್ನ ಶ್ರೀ ಶಿವಕುಮಾರ ಸ್ವಾಮಿಜಿಯವರು, ನಾಡು ಕಂಡ ನಡೆದಾಡುವ ದೇವರು.
ಕನಕನ
ಕಿಂಡಿಯ ಖ್ಯಾತಿ ಉಡುಪಿ
ಶ್ರೀ
ಕೃಷ್ಣನ ದೇವಸ್ಥಾನ ಪ್ರೇಕ್ಷಣಿಯ ತದ್ರೂಪಿ
ಹಡುಗಿನ
ಬಂದರು, ಕರಾವಳಿಯ ನಗರ ಕಾರವಾರ
ಹಸಿರುಮಯ
ಸಹ್ಯಾದ್ರಿ ಕಾನನ, ಪಶ್ಚಿಮಕ್ಕೆ ನೀಲಿ ಸಾಗರ
ಯಾದವರು
ಆಳಿದ ಗುಡ್ಡಗಳ ಯಾದಗಿರಿ
ಅಧ್ಯಾತ್ಮಗಳ
ತಾಣ, ಮೈಲಾಪುರ ಮಲ್ಲಯ್ಯ, ಮೌನೇಶ್ವರ ಗುಡಿ, ಗುರಿಮಿಟ್ಕಲ್ ಮಾತೆ ಮಾಣಿಕೇಶ್ವರಿ
ದ್ರಾಕ್ಷಿ,
ಕಾಳು, ರೇಷ್ಮೆ ಬೆಳೆವ ಚಿಕ್ಕಬಳ್ಳಾಪುರ
ಆಧುನಿಕ
ಜಗದಲಿ ಆಗ ಹೊರಟಿಹುದು ಬೆಂಗಳೂರಿನ ಅಂಗ
ಕರುನಾಡು
ಅಡಿಯಿಂದ ಮುಡಿವರೆಗೂ ಸಮೃದ್ಧಿಯ ಬೀಡು
ಇಲ್ಲಿ
ಹುಟ್ಟಿದ ಜನರ ಜೀವನವು., ಸುಗಮ ಸಂಗೀತದ ಹಾಡು !!

No comments:
Post a Comment