ಬದುಕು ಸಮಸ್ಯೆಗಳ ರಂದ್ರ
ಪರಿಶ್ರಮ, ತಾಳ್ಮೆಯ ಹೊಲಿಗೆ
ಸದಾ ಮುಚ್ಚುವುದು ಮೆಲ್ಲಗೆ
ದ್ರಿತಿಗೆಡಬಾರದು ಜೀವನದಿ
ಈಜು ಬರದಿದ್ದರೂ ಕೈ ಬಡಿಯುತ್ತಿರಬೇಕು...
ದಂಡೆಯ ದೇವರು ಕರುಣಿಸ್ಯಾರು
ತಲೆ ಮೇಲೆ ಬಿದ್ದ ಗುಡ್ಡ
ಗುಂಡೆದೆಗೆ ಒಡೆದು ಮಣ್ಣು ಪಾಲು
ಸಮಸ್ಯೆಗಳ ಸರ್ಪಳಿ ಹರಿದೇ ತೀರಬೇಕು
ಕಷ್ಟಗಳ ಹುಟ್ಟಿಸಿದ ಕೈಗಳು
ಸುಂಕವಿರದೆ ಬರಿದಾಗಿ ಹೋದಾವು
ಮತ್ತೆ ಅರಳುವುದು ಹೊಸ ಹೂವು !!
No comments:
Post a Comment