Thursday, January 09, 2020

ಹಿಂದಿತ್ತೊಂದು ಕಾಲ

ವಿಶಾಲವಾಗಿತ್ತು ಭಾರತ
ವಿಧವಿಧವಿತ್ತು ಜಾತಿಮತ
ಧರ್ಮಗಳು ಇದ್ದರೂ ಸಾವಿರಾರು
ಭೇದ ಭಾವ ಮೆರೆಯದ ಜನರು
ಸಂತೋಷದಿಂದ ಕೂಡಿ ಬಾಳುತ್ತಿದ್ದರು !!

ಶ್ರೀಮಂತರು, ಬಡವರು, ಇರ್ವರೂ ಇದ್ದರು
ದೊಡ್ಡಸ್ತಿಕೆ ತೋರದೇ ಜೊತೆಯಲ್ಲೆ ದುಡಿಯುತ್ತಿದ್ದರು
ಕಷ್ಟಗಳು ಯಾರಿಗೇ ಬಂದರು
ಒಬ್ಬೊಬ್ಬರಿಗೂ ಅಣಿಯಾಗುತ್ತಿದ್ದರು
ಸಹಬಾಳ್ವೆಯೇ ಮಂತ್ರವ ನಂಬಿದ್ದರು !!

ವಿಶ್ವಕ್ಕೆ ಹೆಸರಾದ ಸಿರಿ ಸಂಪತ್ತು
ಪರಕೀಯ ಜನರ ತಲೆ ಕೆಡಿಸಿತ್ತು
ಸೌಹಾರ್ದತೆಯ ಮುರಿಯಲು ಕಸರತ್ತು ನಡೆದಿತ್ತು
ವಿಷದ ಬೀಜ ಬಿತ್ತುವ ಕಾಯಕ ಎಗ್ಗಿಲ್ಲದೇ ಸಾಗಿತ್ತು
ವೈಷಮ್ಯದ ಗಾಳಿ ಧೂಳಲ್ಲಿ ತೂರಿ ಎಲ್ಲರ ಎದೆಯ ಹೊಕ್ಕಿತ್ತು !!

ಸಿರಿವಂತ, ಕಿರಿವಂತ, ಮೇಲ್ವರ್ಗ ಕೆಳವರ್ಗ
ಜಾತಿಗೀತಿ, ಆ ಧರ್ಮ ಈ ಧರ್ಮ
ಮೆದುಳ ಹೊಕ್ಕ ಹುಳಗಳು ಬುದ್ಧಿಯ ತಿಂದದ್ದವು
ಅರಿಯದಾ ಜನರ ಮಂಕು ಯೋಚನೆಗಳು
ಅಸೂಯೆ ಪಟ್ಟು ಒಬ್ಬರಿಗೊಬ್ಬರು ವೈರಿಗಳಾದರು !!

ಎಲ್ಲಿ ಉಳಿವುಂಟು ಮನುಸಂಕುಲಕೆ
ಪ್ರೀತಿ, ಕಾಳಜಿಯ ಮರೆತ ಜಗಕೆ
ಭೂಮಿಯೂ ಉರಿದೈತೆ ನೋಡಾ
ತಪ್ಪು ಮಾಡದ ಪ್ರಾಣಿ ಸಂಕುಲವೂ ದ್ವಂಸ
ಗ್ರಹಣ ಬಡಿದೈತೆ ಪ್ರತಿ ಜೀವಕೆ, ಇನ್ನೆಲ್ಲಿ ಊಳಿಗಾಲ !!

1 comment:

farinjacia said...

Casino Games in 2021 – No deposit bonus codes
The Casino has a variety of 우리 계열 games, but 슬롯 추천 that xbet isn't really 원피스바카라 the case with casino slot machines, so let's try one of them. Casino 승인전화없는 사이트 games. If you want

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...