Thursday, January 16, 2020

ನಿರೀಕ್ಷಣೆ


ಮನದ ಮುಗಿಲಲ್ಲಿ
ಹಾರುತಿದೆ ಗೆಳತಿ
ಬಣ್ಣ ಬಣ್ಣದ
ಗಾಳಿ ಪಟ
ನಿನ್ನ ಕಂಪನ್ನು ಸೂಸುತಿದೆ
ಪವನ ತಂದ ಸುಗಂಧ !

ದಿನವೂ  ಕಾಡುತಿದೆ
ಆ ನಿನ್ನ ಮೊಗವು
ಕರ್ಣಗಳಲ್ಲಿ ತೂಗುವ
ಆ ತೂಗಿಕೆಗಳು...,
ಅಸೂಯೆ ಪಟ್ಟ, ನನ್ನ ಅದರಗಳು
ಕೊರಗುತಿವೆ, ನೀಡಲಾಗದ " ಮುತ್ತುಗಳಿಗೆ " !!

ಹರಿಣಗಳ ನಯನಗಳಂತೆ
ಹೊಳೆವ ಆ ಹೊಳಪು
ಕಾಡುತಿದೆ ಹಗಳಿರುಳಲ್ಲೂ..
ಅಕ್ಷಿಗಳು ಕುಕ್ಕುವಂತೆ
ಇನ್ನು ಈ ಜೀವಕೆ
ಸುಪ್ತಿ ಎಲ್ಲಿ...?

ನಿನ್ನ ತುಂಟು
ನಗೆಯ ಆಟಗಳು...
ಮುಂಗುರುಳ ಸರಿಸುವ ಪರಿ
ಮಡುಹುದಿದೆ ಎನ್ನ
ಜೀವಾಳ....ಇನ್ನೂ ಕಾಯಬೇಕೆಷ್ಟು
ಮಿಡಿತಗಳ ಆವರ್ತಿ..?

ನಿರೀಕ್ಷಿಸುತ್ತಿರುವೆ
ನಿನ್ನ ಬರುವಿಗಾಗಿ..
ಮಿಟುಗದೇ ಕಾದಿವೆ
ನೆತ್ರಗಳು.., ವಿರಾಮವಿಲ್ಲದೆ
ಪ್ರೀಯೆ ..ಇನ್ನೂ ಬಾರದಾಗಿಹೆ
ನೀನೆಲ್ಲಿ ???

****ಭಾವಪ್ರಿಯ****

No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...