ಮುದ್ದು ಮೊಗದ ಸರ್ದಾರ
ಬೊಚ್ಚು ಬಾಯಿನ ಹಮ್ಮೀರ
ಗುಬ್ಬಿಯ ನಿದ್ದಿ ಮಾಡುವವ
ಹಸಿವಾದರೇ ಕಿಟಾರನೆ ಚೀರುವವ
ಹಾಲುಣಲು ಅಮ್ಮನ ಮಡಿಲಲ್ಲಿ ನಿರ್ಲಿಪ್ತ
ಅವಳ ತೋಳಗೆ ಅವನೆಂದಿಗೂ ಆಪ್ತ
ಎತ್ತಿಕೊಂಡರೆ ಹೆಗಲಲ್ಲಿ ವಿರಾಜಮಾನ
ಅಂಗಾತ ಮಲಗಿಸಿದರೇ ವಿಪರೀತ ಬಿಗುಮಾನ
ಇನ್ನೂ ಬೆನ್ನು ನಿಲ್ಲದ ಶೂರ
ಕೂತುಕೊಳ್ಳಲೇ ಬೇಕೆಂಬ ಕಾತುರ
ಅಪ್ಪನ ಹೊಟ್ಟೆ ಒರೆಗಿ ಕೂತರೆ ಶಾಂತ
ಕೈ ಎತ್ತಿ ಹಿಡಿದರೆ ಕಾಳುಗಳ ಕುಣಿಸುವಾತ
ಆಡಿಸಿ ನಗುತಿರೆ ಅಪ್ಪನ ಜೊತೆ..,ಅವನ ಆಟ
ಅವನ ಮುಗುಳು ನಗೆ ಎಲ್ಲರಿಗೂ ರಸದೂಟ !!
ಬೊಚ್ಚು ಬಾಯಿನ ಹಮ್ಮೀರ
ಗುಬ್ಬಿಯ ನಿದ್ದಿ ಮಾಡುವವ
ಹಸಿವಾದರೇ ಕಿಟಾರನೆ ಚೀರುವವ
ಹಾಲುಣಲು ಅಮ್ಮನ ಮಡಿಲಲ್ಲಿ ನಿರ್ಲಿಪ್ತ
ಅವಳ ತೋಳಗೆ ಅವನೆಂದಿಗೂ ಆಪ್ತ
ಎತ್ತಿಕೊಂಡರೆ ಹೆಗಲಲ್ಲಿ ವಿರಾಜಮಾನ
ಅಂಗಾತ ಮಲಗಿಸಿದರೇ ವಿಪರೀತ ಬಿಗುಮಾನ
ಇನ್ನೂ ಬೆನ್ನು ನಿಲ್ಲದ ಶೂರ
ಕೂತುಕೊಳ್ಳಲೇ ಬೇಕೆಂಬ ಕಾತುರ
ಅಪ್ಪನ ಹೊಟ್ಟೆ ಒರೆಗಿ ಕೂತರೆ ಶಾಂತ
ಕೈ ಎತ್ತಿ ಹಿಡಿದರೆ ಕಾಳುಗಳ ಕುಣಿಸುವಾತ
ಆಡಿಸಿ ನಗುತಿರೆ ಅಪ್ಪನ ಜೊತೆ..,ಅವನ ಆಟ
ಅವನ ಮುಗುಳು ನಗೆ ಎಲ್ಲರಿಗೂ ರಸದೂಟ !!
No comments:
Post a Comment