ಹಾದಿ ಬೀದಿಗಳೆಲ್ಲಾ ತೋಡಿ
ನೋಡು ಹಾರೈತಿ ಕೆಂಪು ಹುಡಿ ||
ತೆಗ್ಗು-ದಿಣ್ಣೆ, ಕಣಿವೆಗಳ ರಸ್ತೆ
ಕುಣಿಯುತ್ತಾ ಸಾಗುವವರ, ನೋಡು ಅವಸ್ತೆ ||
ಧೂಳು ಮುಳುಗಿ ಮಾರಿಯಲ್ಲಾ
ಜೀಕ್ಯಾಡಿ ಸಾಗ್ಯಾರ ಹಾದ್ಯಾಗೆಲ್ಲಾ ||
ಉಡಾಳ ಮುದುಕನ ಒಂಟಿ ಹಗೆ
ಊರ ಜನರೆಲ್ಲಾ ಬೆಂದು, ಆಡೈತಿ ಹೊಗೆ ||
ಬೇಸತ್ತ ಮನಷ್ಯಾರ ಜೀವ ನಾಡಿ
ತಿಣಕ್ಯಾಡ್ಕೋತ ನಡದೈತಿ ಜೀವನದ ಗಾಡಿ ||
ಬೆನ್ನ ಮ್ಯಾಲ ಬಿದ್ದ ಬಾರುಕೋಲ ಏಟಿಗೆ
ದುಡು ದುಡನ ನಡದೈತಿ ಚಕ್ಕಡಿ ಮನಿಕಡೆಗೆ ||
ಗುಡಸಲದಾಗ ಕೂತ ಹೆಂಡತಿ ಮಕ್ಕಳ ಸೊಂಡಿ
ಎಲ್ಲಿ ಹುಡ್ಕೊಂಡು ಹೋದ್ರ ಸಿಗತೈತಿ ನೆಮ್ಮದಿ ಮಂಡಿ. ?
ನೋಡು ಹಾರೈತಿ ಕೆಂಪು ಹುಡಿ ||
ತೆಗ್ಗು-ದಿಣ್ಣೆ, ಕಣಿವೆಗಳ ರಸ್ತೆ
ಕುಣಿಯುತ್ತಾ ಸಾಗುವವರ, ನೋಡು ಅವಸ್ತೆ ||
ಧೂಳು ಮುಳುಗಿ ಮಾರಿಯಲ್ಲಾ
ಜೀಕ್ಯಾಡಿ ಸಾಗ್ಯಾರ ಹಾದ್ಯಾಗೆಲ್ಲಾ ||
ಉಡಾಳ ಮುದುಕನ ಒಂಟಿ ಹಗೆ
ಊರ ಜನರೆಲ್ಲಾ ಬೆಂದು, ಆಡೈತಿ ಹೊಗೆ ||
ಬೇಸತ್ತ ಮನಷ್ಯಾರ ಜೀವ ನಾಡಿ
ತಿಣಕ್ಯಾಡ್ಕೋತ ನಡದೈತಿ ಜೀವನದ ಗಾಡಿ ||
ಬೆನ್ನ ಮ್ಯಾಲ ಬಿದ್ದ ಬಾರುಕೋಲ ಏಟಿಗೆ
ದುಡು ದುಡನ ನಡದೈತಿ ಚಕ್ಕಡಿ ಮನಿಕಡೆಗೆ ||
ಗುಡಸಲದಾಗ ಕೂತ ಹೆಂಡತಿ ಮಕ್ಕಳ ಸೊಂಡಿ
ಎಲ್ಲಿ ಹುಡ್ಕೊಂಡು ಹೋದ್ರ ಸಿಗತೈತಿ ನೆಮ್ಮದಿ ಮಂಡಿ. ?
No comments:
Post a Comment