Friday, January 17, 2020

ಚಿಗ್ರಿ ಬಂತ ಚಿಗ್ರಿ


ಚಿಗ್ರಿ ಚಿಗ್ರಿ ಅವಳಿನಗರದ ಕುದುರಿ
ಬ್ಯಾಸಿಗ್ಯಾಗ ಹವಾನಿಯಂತ್ರಿತ ಸಫಾರಿ !

ಮಳಿಗಾಲಕ್ಕ ಬೆಚ್ಚಗಿನ ಸವಾರಿ
ನೀರ ನಿಂತ್ರ ಟೋಲ್ ನಾಕಾದಾಗ..., ಚಿಗ್ರಿಗೆ ಬೈಬ್ಯಾಡ್ರಿ !

ದೊಡ್ಡ ದೊಡ್ಡ ಗಾಜಿನ ಕಿಡಕಿ
ಹೊರ್ಗ ನೋಡಾಕ ಕುಂತ್ರ ಇಲ್ಲಾ ಬ್ಯಾಸರ್ಕಿ !

ಬಯಲಾಗಿಂದು ಕೇಳಂಗಿಲ್ಲಾ ಯಾವ ಸಪ್ಳಾ
ಆಕಾಶವಾಣ್ಯಾಗಿನ ಚೊಲೋ ಹಾಡ್ ಕೇಳ್ರಲ್ಲಾ !

ಎಲ್ಲಾ ನಿಲ್ದಾಣಕ್ಕೂ ಬರಾಕ ಮೊದಲ
ಒದರಿ ಹೇಳ್ತದ ತಂಗುದಾಣದ ಹೆಸರ !

ಕಂಡಕ್ಟರ ಇಲ್ಲದ ಬಸ್ಸು ಚಾಲಕಂಗ ಓಡಸೋದು ಕಷ್ಟ
ಗಾಡಿ ನಿಲ್ಲಿಸಾಕ..,ಅಲ್ಲಿ ಒಂದು ಗುಂಡಿ ಒತ್ತ !

ಕೈ ಹಾಕಿದ್ದಲ್ಲೆಲ್ಲಾ ನಿಲ್ಲಂಗಿಲ್ಲಾ ನಮ್ಮ ಕುದುರಿ
ಮೈ ಮರ್ತ ಮಲ್ಕೊಂಡೋರು ಧಾರ್ವಾಡ/ಹುಬ್ಬಳ್ಳಿ ತಲುಪೋದು ಖಾತ್ರಿ !!

------------ಭಾವಪ್ರಿಯ------------



No comments:

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...