ಕಳೆದ ವರ್ಷದ ಸವಿ ನೆನಪುಗಳು ಬಹಳ,
ಕನಸುಗಳು ಸಾರ್ಥಕ ಗೋಳಿಸಿದ್ದವು ಅನುಕ್ಷಣ
ಜೀವನದ ಏರಿಳಿತಗಳು ಎತ್ತೆತ್ತರ,
ಬಾಳಿನ ಬಹುಪಾಲು ಪ್ರಶ್ನೆಗಳಿಗೆ ದೊರೆಯಿತು ಉತ್ತರ,
ಬದುಕಿನ ಅರ್ಥ ಕೊಟ್ಟ ಕಂದನ ಆಗಮನ,
ಅವನ ನಗು, ಆಟ, ಹಠ ಏನೋ ಪರಿಪಾಠ,
ಹೆಚ್ಚುತ್ತಿರುವ ಜವಾಬ್ದಾರಿಗಳು ನಿರ್ವಹಿಸಲು ಬೇಕು ಹೊಸ ಹುಮ್ಮಸ್ಸು,
ಸವಿ ಕ್ಷಣಗಳ ಬುತ್ತಿ ಕಟ್ಟಿ ಮುಂದೊಂದು ದಿನ ಮೆಲಕು ಹಾಕೋಣ,
ನವ ವರುಷವ ಹರುಷದಿಂದ ಬರ ಮಾಡಿಕೊಳ್ಳೋಣ,
ಹೊಸ ಸವಾಲುಗಳ ಬೆನ್ನ ಹತ್ತಿ,
ಧೈರ್ಯ ಸಾಹಸಗಳ ಕರಗತಗೊಳಿಸಿ ಮುನ್ನುಗ್ಗಿ,
ಗುರಿಯತ್ತ ಸಾಗಲಿ ಕುದುರೆ ಸವಾರಿ,
ಹೊಸ ಯುಗದ ನಾಗಾಲೋಕವಿದು,
ಸೇಣೆಸಿ ಪ್ರತಿ ಯುದ್ಧವ ಗೆಲ್ಲೋಣ,
ಎಂದಿಗೂ ಬರೆಯದ ಇತಿಹಾಸಕ್ಕೆ ನಾಂದಿ ಹಾಡೋಣ !!
No comments:
Post a Comment