ಜೀವನ ಎಂದಿಗೂ
ಯಾರಿಗೂ ಸುಗಮವಲ್ಲ !
ಕಷ್ಟ ಪಟ್ಟು ಕಲಿತ ವಿಧ್ಯೆ
ಎಂದಿಗೂ ವ್ಯರ್ಥವಲ್ಲ !
ದಿಟ್ಟ ಧೇಯದಿ ಮುನ್ನಡೆದರೆ
ಸಾಧಕನಿಗೆ ಸೋಲಿಲ್ಲ !
ಬದುಕು ಬವಣೆಯ ಸಾಗರ,
ಮುನ್ನುಗ್ಗಿ ನಡೆ ಸರ-ಸರ !
ಕಾದಿಹುದು ಗುರಿ ಅಲ್ಲಿ…,
ದಾರಿಯೇ ಎದ್ದು ಕಾದಿದೆ ಇಲ್ಲಿ!
ಬಂದು ಬಿಡಬಾರೋ ಓ ಧೀರಾ,
ನಿನ್ನ ಮೇಲೆ ನಂಬಿಕೆ ಅಪಾರ !
ಛಲದಿಂದ ಗೆಲ್ಲುವ ಮೂರ್ತಿ,
ಮುಗಿಲೆತ್ತರಕ್ಕೆ ಹಾರಲಿ ಕೀರ್ತಿ !
No comments:
Post a Comment