ಗುಂಡು ಮೊಗದ ಗುಂಡಣ್ಣ
ಹೊಳೆವ ನಯನಗಳು, ತ್ವಚೆ ಶ್ವೇತ ವರ್ಣ ||
ಗುಬ್ಬಿಯಂತೆ ಬಾಯಿ ತೆರೆದ
ಮುಗುಳ ನಗುವು ಚಂದ ||
ನಲಿದಾಡುತ ಅಪ್ಪನ ತೋಳಲ್ಲಿ
ಎದೆಗೆ ಒತ್ತುತ್ತಿವೆ ಪುಟ್ಟ ಹೆಜ್ಜೆಗಳಿಲ್ಲಿ ||
ಚಿಕ್ಕ ಅಂಗೈಗಳ ಜೋಡಿಸಿ
ಎದೆಗೆ ಮುಷ್ಟಿಗಳ ಹಚ್ಚಿ ಒರೆಗಿಸಿ ||
ನಮಸ್ಕರಿಸುವಂತೆ ಚೀಪುತ್ತಾ ಬೆರಳು
ಖುಶಿಯ ಹಂಚುತ್ತಿರುವ ಕರುಣಾಳು ||
ಆಗಾಗ ನಗುತಿರುವನು ಅಪ್ಪನ ಚೇಷ್ಟೆಗೆ
ಕೂಡುವುದ ಕಲಿತಿರದ ಕೂಸು ಪದೆ ಪದೆ ನೀಡುತ್ತ ಅಪ್ಪುಗೆ ||
ಮುದ್ದು ಮುದ್ದು ಕಂದನ ಪ್ರತಿ ಹರಕತ್ತು
ಸವೆದ ಅಪ್ಪನಿಗೆ ಬೇಕೇನು ಇನ್ಯಾವ ಸಂಪತ್ತು ||
ಹೊಳೆವ ನಯನಗಳು, ತ್ವಚೆ ಶ್ವೇತ ವರ್ಣ ||
ಗುಬ್ಬಿಯಂತೆ ಬಾಯಿ ತೆರೆದ
ಮುಗುಳ ನಗುವು ಚಂದ ||
ನಲಿದಾಡುತ ಅಪ್ಪನ ತೋಳಲ್ಲಿ
ಎದೆಗೆ ಒತ್ತುತ್ತಿವೆ ಪುಟ್ಟ ಹೆಜ್ಜೆಗಳಿಲ್ಲಿ ||
ಚಿಕ್ಕ ಅಂಗೈಗಳ ಜೋಡಿಸಿ
ಎದೆಗೆ ಮುಷ್ಟಿಗಳ ಹಚ್ಚಿ ಒರೆಗಿಸಿ ||
ನಮಸ್ಕರಿಸುವಂತೆ ಚೀಪುತ್ತಾ ಬೆರಳು
ಖುಶಿಯ ಹಂಚುತ್ತಿರುವ ಕರುಣಾಳು ||
ಆಗಾಗ ನಗುತಿರುವನು ಅಪ್ಪನ ಚೇಷ್ಟೆಗೆ
ಕೂಡುವುದ ಕಲಿತಿರದ ಕೂಸು ಪದೆ ಪದೆ ನೀಡುತ್ತ ಅಪ್ಪುಗೆ ||
ಮುದ್ದು ಮುದ್ದು ಕಂದನ ಪ್ರತಿ ಹರಕತ್ತು
ಸವೆದ ಅಪ್ಪನಿಗೆ ಬೇಕೇನು ಇನ್ಯಾವ ಸಂಪತ್ತು ||
No comments:
Post a Comment