ಸೋಮವಾರದಂದು ಶಿವನ ಪೂಜೆ
ಮುಕ್ಕಣ್ಣನೇ ನೀಡೊ ವರ ನನಗೆ !
ಶಿಶುಗಳ ಒಲವಿಗೆ ಕಾದಿಹೆನು ದೇವಾ
ಪಡೆದು ಪಾತ್ರನಾಗುವೆ ನಿನ್ನ ಕೃಪೆಗೆ !!
ಮಂಗಳವಾರದಂದು ಮಂಗಳಮೂರ್ತಿಯ ಪೂಜಿಪೆ
ವಿಘ್ನಗಳ ನಿವಾರಿಸೋ ಗಣನಾಥನೆ..!
ಮೋದಕ ಪ್ರೀಯ ಪಾರ್ವತಿ ಕಂದ
ತುಂಬಿ ಬಿಡು ಗಣಪಾ, ನನ್ನ ಜೋಳಿಗೆ !!
ಬುಧುವಾರದಂದು ಮೇಘ ಶಾಮನ ನೆನೆವೆ
ನನ್ನವರ ಒಡಗೂಡಿ ನಿನ್ನ ಆರಾಧಿಸುವೆ
ಹೂವುಗಳ ಕರುಣಿಸೋ ಓ ವಾಸುದೈವನೇ
ನಗೆಯ ನೀಡೋ..,ಆಡಲಿ ಕಂದನು ಎನ್ನ ಮಡಿಲೊಳಗೆ !!
ಗುರುವಾರದಂದು ಗುರುರಾಯರ ಆರಾಧಿಸುವೆ
ತುಂಗೆಯ ತಟದಿ ಮಿಂದು ದರುಶನ ಪಡೆದೆ
ನಿನ್ನ ಬಜನೆಗೆ ಕುಣಿಯೋ ಗೋಪಾಲನ
ದಯಪಾಲಿಸೋ ಬಾಲಕೃಷ್ಣನ ಯಶೋದೆಯಾಗಿ ನಾನು ಬೇಡಿಪೆ !!
ಶುಕ್ರವಾರದಂದು ಮಹಾಲಕ್ಷ್ಮೀಯ ವೃತ
ಕಳಸವ ಶೃಂಗರಿಸಿ, ಸೀರೆಯ ಉಡಿಸಿ
ಭಕ್ತಿಯಿಂದ ವೈಭವದಿ ಪೂಜಿಸುವೆ
ಲಕ್ಷ್ಮೀಯ ಕರುಣಿಸೇ ಸಂತಾನಲಕ್ಷ್ಮಿ, ಭಜಿಸುವೆ ನಾ ಅಷ್ಟಲಕ್ಷ್ಮಿ !!
ಶನಿವಾರದಂದು ಹನುಮನ ನೆನೆಸುವೆ
ಕೇಸರಿನಂದನ, ಅಂಜನಾ ಪ್ರೀಯನೆ
ತಾಯಿಯ ಆರಾಧಕನೆ, ರಾಮ ಅನುಜನೆ
ಆಶಿರ್ವಧಿಸು, ಬಾಲಹನುಮ ಪರಿಯ ಕಂದ ನನದಾಗಿಸು !!
ಭಾನುವಾರ ಮೈಲಾರಲಿಂಗೈಯಾ
ಭಂಡಾರ ಶೋಭಿತ ನೀನಯ್ಯಾ
ಹಾಲ ಅಭಿಷೇಕವ ನೆರವೇರಿಸುವೆ...
ಹಾಲ್ಗೆನ್ನೆಯ ಕಂದನ ಕರುಣಿಸಯ್ಯಾ...!
ವಿಧ ವಿಧ ದೇವರ ಬೇಡುವೆನಯ್ಯಾ...,
ಕರುಣಿಸಿ ಕಂದನ ನನಗಯ್ಯಾ
ತಾಯಿಯ ಮಡಿಲ ತುಂಬಿರಯ್ಯಾ....,
ಕೃಪಾಕರಿಸಿರೇ ದೇವರೆಲ್ಲಾ...!!