Thursday, September 26, 2013

ಹಿತವಚನ

ಹುಟ್ಟು ನನ್ನ ಕೈಯ್ಯಲಿಲ್ಲ

ಸಾವು ನನ್ನ ಕೈಯ್ಯಲಿಲ್ಲ

ಹುಟ್ಟು ಸಾವಿನ ನಡುವಿರುವ " ಬದುಕು " ಮಾತ್ರ ನನ್ನದು

ಅದಕ್ಕೆ ಅರ್ಥಪೂರ್ಣ ಬಣ್ಣ ತುಂಬುವ " ಗುರಿ " ಕೂಡ ನನ್ನದು

Tuesday, September 24, 2013

ಬ್ಯಾಡಗಿ ಖಾರಾ

ಓ ಲಂಗಾ ದಾವಣಿ ತೊಟ್ಟ ಬೆಡಗಿ

ಬಾರ.., ಸೊಂಟಕ್ಕ ಇಟ್ಟಗೊಂಡು ಗಡಗಿ

ನಿನ್ನ ನೋಡಾಕ ಕುಂತೀನಿ ಭಾವಿ ಕಟ್ಟೀಗ, ನಾ ಒರಗಿ !

ನೀ ಹೋಗ್ಲಾ ಮುಲ್ಲಾ ತಿರುಗಿ

ನಾ ಬ್ಯಾಡಗಿ ಖಾರಾ ಹುಡುಗಿ

ನೀ ನೋಡಾಕ ಹತ್ತಿದ್ರ ನನ್ನ, ಹಿಡಕೊಂಡು ಬರ್ತೀನಿ ಬಡಗಿ !

ಸಂಗೀತ ಕಛೇರಿ

ಪದೇ ಪದೇ ಇಣುಕಿ ನೋಡುತ್ತಿರುವಳು,

ಹೃದಯ ಬಾರಿಸುತ್ತಿರುವ ಡೊಳ್ಳನು !

ಅನುಸರಿಸಿ ಅದರ ರಾಗವ ಅವಳು,

ಮೆಲ್ಲಗೆ ನುಡಿಸುತ್ತಿರುವಳು ಕೊಳಲನು !

ನನ್ನ ಎದೆಯ ಡೊಳ್ಳು ಬಡಿತಕೆ...

ಅವಳ ಮನದ ಭಾವಗಳ ಕುಣಿತ..

ಇನ್ನೂ ಇಬ್ಬರ ಹೃದಯದಲಿ ಪ್ರೇಮದ ಏರಿಳಿತ..!

ಒಮ್ಮೆ ನನ್ನ ಡೊಳ್ಳಿನ ಹೊಡೆತ,

ಆಕಡೆಯಿಂದ ಅವಳ ಕೊಳಲ ನುಲಿತ..

ಶುರುವಾಗಿದೆ ನಮ್ಮ ಕಛೇರಿ..,ಆಲಿಸಿ ಬನ್ನಿ ನಮ್ಮ ಸಂಗೀತ !!

ಸ್ನೇಹ

ಅವನು ಮಾತನಾಡದೇ ಇದ್ದರೂ

ಕಾರಣಗಳು ಸಾಕಷ್ಟು ಇರಬಹುದು

ಅವನಿಗಿಲ್ಲಾ ಅವಳ ಮೇಲೆ ಮುನಿಸು !

ಮರೆತಿಲ್ಲಾ ಸ್ನೇಹ ತಂತಿ ಮುರಿದರೂ

ಕಾಣುತಿಹುದು ಅದರ ಕುರುಹು

ನೇತಾಡುತ್ತಿರುವ ಪ್ರಶಂಸೆಯ ತೂಗು !!

ನನ್ನ ಆತ್ಮೀಯ ಗೆಳೆಯ ಬೇಲೂರು ರಘುನಂದನ್ ರವರು ಬರೆದ ವಚನ..

ವಚನ - 211


ಕಟ್ಟು - ೩



ಮುಡಿ ಬಿಟ್ಟವಳು ಮರ್ಯಾದೆ ಬಿಟ್ಟವಳು

ನುಡಿ ಬಿಟ್ಟವಳು ನಾಚಿಕೆಯಾ ಬಿಟ್ಟವಳು ...

ಪತಿಯ ಬಿಟ್ಟವಳು ಲೋಕದಲಿ ರಂಡೆ

ಪತಿಯ ನುಂಗಿ ಕೊಂಡವಳು ಮುಂಡೆ

ಭಾವನೆಯ ತೋರೆ ಲಜ್ಜೆಯನೇ ಬಿಟ್ಟವಳು

ಎಲ್ಲ ಬಿಟ್ಟವಳು ಕೊನೆಗೆ ಮೂರು ಬಿಟ್ಟವಳು

ಎಂದು ಮೊಟಕುವ ಮಂದಿ ನಾಲಿಗೆ ಸತ್ತವರು.

ಎಲ್ಲ ಬಿಟ್ಟವರು ಎನುವ ಇವರು ಏನೇನು ಜೊತೆಗೆ

ಕಟ್ಟಿಕೊಂಡು ಬಿಟ್ಟಿ ಮಾತುಗಳನಾಡುತಿರುವರು.

ನುಂಗಲಾಗದ ಕೆಮ್ಮು ಕಫ಼ ನೋವು ಬಾವು ಕೀವನ್ನು,

ಒಳಗಿಟ್ಟುಕೊಂಡು ಲಾಭವಿಲ್ಲ ಅಂತ ಸೊಟ್ಟ ಮನದಲ್ಲಿ,

ಬಿಟ್ಟವಳು ಬಿಟ್ಟವಳು ಅನ್ನುವ ಭಾವಿಲ್ಲದ ಬಾಯಿಗೆ

ನೀನೇ ಹೇಳಿಬಿಡಯ್ಯ ಶ್ವೇತಪ್ರಿಯ ಗುರುವೆ.



-ಬೇಲೂರು ರಘುನಂದನ್

22.9.2013

Friday, September 20, 2013

ಆಪತ್ತು

ನಿದ್ದೆಯಿಂದ ಏಳಲಾಗುತ್ತಿಲ್ಲ
ಅವಳು ಕೊಟ್ಟ ಮತ್ತಿನ ಗಮ್ಮತ್ತು
ಕನಸುಗಳ ಸರ ಹೆಣೆಯುವುದೇ ನಿಲ್ಲುತ್ತಿಲ್ಲ
ಸಿಗದೇ ಹೋದರೆ ಅವಳು, ತಪ್ಪದು ಜೀವಕ್ಕೆ ಆಪತ್ತು !!

ಹನಿ

ನಲ್ಲೆ ನೀ ಮುಡಿದರೆ ಹೂವು ಮಲ್ಲಿಗೆ
ಪ್ರೀತಿ ಇಮ್ಮಡಿಸುವುದು ನಿನ್ನ ಅಂದಕೆ
ಮರುದಿನ ಆಶ್ಚರ್ಯ ಕಾದಿತ್ತು....
ಅವಳು ಮುಡಿದು ಬಂದಳು ದಾಸವಾಳ
ಕನಸ್ಸುಗಳು ಸುರಿದವು ಬೆವರಿನಂತೆ ದಳದಳ !

Tuesday, September 17, 2013

ಅರಿವು

ನಾ ಮೇಲು ( Male) , ನಾ ಮೇಲು.. ಅಂತಾ ಕುಣಿದಾಡಿದವಳಿಗೆ,


ಅವಳು ಒಂದು ಹೆಣ್ಣು ಅಂತಾ ತಿಳಿದದ್ದು...

ಅವಳೇ ಹರಿಸಿದ ಕಣ್ಣೀರು ಮೊಣಕಾಲೊರೆಗೆ ನಿಂತಾಗ !!

Monday, September 16, 2013

ಗ್ರಹಚಾರ

ವೇದಿಕೆಯಲ್ಲಿ ಹೆಜ್ಜೆಯ ಜೊತೆಗೆ ಹೆಜ್ಜೆ ಇಟ್ಟಳು ಗೆಳತಿ

ಅಸೂಯೆದಿಂದ ಕೆಂಗಣ್ಣು ಬಿಟ್ಟಳು ನಮ್ಮಾಕಿ

ಮನಿಗ ಬರ್ರಿ ಅಂದಳು... ನಿಮಗ ಗ್ರಹಚಾರ ಕಾದೇತಿ !!

ಸಿಹಿ - ಸಹಿ

ಅವನು ಕಳಿಸಿದ,

ಮೇಘ ಸಂದೇಶ

ಬಡಿಸಿಹುದು..

ಅವಳ ಮನಸಗೆ ಸಿಹಿ !

ಉತ್ತರವಾಗಿ,

ರವಾನಿಸಿದಳಾಕೆ...

ಪತ್ರ ಚುಂಬಿಸಿದ ಸಹಿ !!

Wednesday, September 11, 2013

ಪರದಾಟ

ರಾತ್ರಿಯಿಡೀ ಸುರಿದಿದೆ ಮಳೆ

ಬೆಳಿಗ್ಗೆ ಬೀದಿಗಳೆಲ್ಲಾ ಬಚ್ಚಲು ಮನೆ

ಕಾಂಕ್ರೀಟು ಕಾಡಿನಲ್ಲಿ ರಾಡಿಯ ಮೋಡಿ

ರಸ್ತೆ ಗುಂಡಿಗಳಲ್ಲಿ ಕೆಂಪು ನೀರಿನ ಕೋಡಿ

ಅಲ್ಲಲ್ಲಿ ನಿಂತಿವೆ ವಾಹನಗಳು ಕೆಟ್ಟು

ಅಪಘಾತಕ್ಕೆ ಜನರು ಅನುಭವಿಸವರೆ ಪೆಟ್ಟು

ಸುರಿದರೆ ಮಳೆ ರಸ್ತೆಗಳೆಲ್ಲಾ ಕೆರೆ

ಮನೆ ತಲುಪದೇ ಜನರು ಅಲ್ಲೇ ಸೆರೆ

ಗಟಾರು ಗುಂಡಿಗಳಿಲ್ಲದ ಈ ಅವ್ಯವಸ್ಠೆ

ಸಾಮಾನ್ಯ ಜನರ, ಕೇಳುವರ್ಯಾರು ಸಮಸ್ಯೆ !!

Thursday, September 05, 2013

ಅವಳ ಭಾವ

ನಲ್ಲ ,


ನಿನ್ನ ಮಾತುಗಳು ಸ್ವಾತಿ ಮುತ್ತಿನಂತೆ...!

ಮೌನವಾಗಿಯೇ ಆಲಿಸುತ್ತಿರುವೆ... ನೀ ನಿಲ್ಲಿಸದಿರು, ಮಾತುಗಳ ಮಳೆ !

ನಾ, ಹನಿಗಳ ತಂಪನು ಸವೆಯುತಿರುವೆ ಆ ಭೂರಮೆಯಂತೆ..!

Tuesday, September 03, 2013

ನೀಲ ಸಾಗರ

ಕಣ್ಣಲ್ಲೇ ಕಣ್ಣಿಟ್ಟು ನೋಡು ಗೆಳೆಯಾ


ಆ ನಿನ್ನ ನೀಲ ಸಾಗರದ ಆಳದಲ್ಲಿ ಮಿಂದು

ಖುಷಿಯಿಂದ ಕುಣಿಯುವುದು ನನ್ನ ಹೃದಯಾ !!

Monday, September 02, 2013

ಕುಣಿತಾ

ಗೆಳೆಯಾ, ನನ್ನ ನಡುವ ಬಳಸಿ ಗಟ್ಟಿಯಾಗಿ ತಬ್ಬಿ ಹಿಡಿದುಕೋ

ನಮ್ಮ ಕುಣಿತದಲ್ಲಿ ನಾ ಕಾಲ್ ಜಾರಿ ಬಿದ್ದೇನು...!

ಹೆದರಬೇಡ ಗೆಳತಿ, ನನ್ನ ತೋಳಲ್ಲಿ ನೀ ಜಿಗಿದು ಕುಳಿತುಕೋ

ನೀ ಬಿಡು ಎನ್ನುವ ತನಕ ನಾ ಕೆಳಗೇನೆ ಇಳಿಸೆನು...!!

ಪ್ರೀತಿ V/s ಹಣ

ಪ್ರೀತಿ,
ಎಂಬುದು ಮನಸ್ಸನ್ನು ಗೆಲ್ಲುವಂತಹ ಭಾವ , ಅತ್ಯಮೂಲ್ಯ

ಹಣ,
ಎಂಬುದು ಯಾರಾದರೂ ಗಳಿಸಬಹುದಾದ ವಸ್ತು ,


ಒಂದು ಪಕ್ಷ ಹಣವಿರದ್ದಿದ್ದರೂ ಜೀವಿಸಬಹುದು, ಆದರೆ ಪ್ರೀತಿ ಇರದಿರೆ ಜೀವನ ಶೂನ್ಯ !!

ಸುಭಾಷಿತ

ಅವನು,


ಜಗಕ್ಕೆಲ್ಲಾ ಸಮಾನ ಪ್ರೀತಿಯ ಹಂಚುವ ಸೂರ್ಯ !

ಅವನ ಪ್ರೀತಿಯ ಅರಿತು,

ಅದನ್ನು ಸನ್ಮಾನಿಸುವುದು ಅವರವರಿಗೆ ಬಿಟ್ಟಿದ್ದು !!

ನಿರ್ಲಕ್ಷ

ಎಳೆ ಎಳೆಯಾಗಿ

ಕಿತ್ತೆಸೆಯುತಿಹನು ಪಕಳೆಗಳ ಹಾರ !

ಅವಳ ನಿರ್ಲಕ್ಷಕ್ಕೆ

ನೀಡುತಿಹನು ಮೌನ ಉತ್ತರ !!


ಜಗಲಿ ದೀಪ

ನನ್ನ ಮನೆಯ ಜಗಲಿಯಲ್ಲಿ

ಹಚ್ಚಿಟ್ಟ ದೇವರ ದೀಪ

ನನ್ನ ಮನೆ ಅಲ್ಲದೇ...

ನೋಡುಗರ ಮನಸನ್ನೂ

ಪ್ರಕಾಶಿಸಿತು !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...