ನಿದಿರಾ ದೇವಿ

ಇರುಳಲ್ಲಿ ಕಾಣುತ್ತಿಲ್ಲ
ಬೆಳಕಲ್ಲಿ ಹೋಗುತ್ತಿಲ್ಲ
ಕಣ್ಣು ಬೆಂಕಿ ಕೆಂಡ,
ಯಾರೋ ಕದ್ದಿಹರು..!!


ತನುವಿಗೆ ವಿಶ್ರಾಂತಿ ಇಲ್ಲ
ಮನಸ್ಸಿಗೆ ನೆಮ್ಮದಿ ಇಲ್ಲ
ಜೀವ ಚಟಪಟಿಸುಹುದಲ್ಲ,
ಯಾರೋ ಕದ್ದಿಹರು..!!


ಕೊರೆಯುವ ಚಳಿ ಅಲ್ಲ
ಸುಡುತಿರುವ ಬೆಂಕಿಯೂ ಅಲ್ಲ
ಕರಿಮೋಡವೇ ಕವಿದಿರೆ ಕಣ್ಣಿಗೆ ಕಾಣುತ್ತಿಲ್ಲ
ಯಾರೋ ಕದ್ದಿಹರು...!!

2 comments:

Badarinath Palavalli said...

ಇವರೇ ಕದ್ದಿರಬಹುದೆಂಬ ಸುಳಿವು ಕೊಡಿ. ಹುಡುಕಿ ಕೊಡುವ ಜವಾಬ್ದಾರಿ ಫೇಸ್ ಬುಕ್ಕಿಗೆ ಬಿಡಿ. ;-)

Sunil R Agadi (Bhavapriya) said...

ಸರ್ ಯಾರು ಕದ್ದಿಹರೋ ಗೊತ್ತಿಲ್ಲಾ ಮಾತ್ರಾ ರಾತ್ರಿಯಿಡಿ ನನಗೆ ನಿದ್ದೆಯೇ ಬರುತಿಲ್ಲಾ...! :)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...