ಅವನು ಎಂದೆಂದೂ ತನಗಾಗಿ ದೊಡ್ಡ ದೊಡ್ಡ ಮಾಲಿನೊಳಗೆ ಶಾಪಿಂಗ್ ಮಾಡಿದವನಲ್ಲ.., ಅಂದು ಏಕೊ ತನ್ನ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡಲೆಂದು ಆ ಭವ್ಯ ವ್ಯಾಪಾರ ಮಳೆಗೆಗೆ ಕಾಲಿಟ್ಟ. ಮಳಿಗೆ ತುಂಬಾ ಜನರ ಹಿಂಡು, ಕಿಕ್ಕಿರಿದು ತುಂಬಿತ್ತು.ಹುಡುಗರು ತಮ್ಮ ಪ್ರೇಯಸಿಗೆ, ಅಪ್ಪಾ ಅಮ್ಮಂದಿರು ತಮ್ಮ ಮಕ್ಕಳಿಗೆ , ಅಜ್ಜಿ ತಾತಂದಿರು ತಮ್ಮ ಮಕ್ಕಳು ಮೊಮ್ಮಕ್ಕಳಿಗೆ ಖರಿಧಿಸುವಲ್ಲಿ ತಲ್ಲೀನರಾಗಿದ್ದರು.ಅವನು ಒಂದು ಬಟ್ಟೆಯ ಅಂಗಡಿ ಹೊಕ್ಕು ಅಲ್ಲಿ ಹೊಸ ಹೊಸ ಉಡುಗೆಗಳ ಖರಿಧಿಸುವಲ್ಲಿ ನಿರತನಾದ. ಎಷ್ಟು ಹುಡುಕಿದರೂ ತನಗೆ ಮನಸೊಪ್ಪುವ ಉಡುಗೆ ಸಿಗುತ್ತಿರಲಿಲ್ಲ. ದೂರದಲ್ಲಿ ಒಂದು ಉಡುಗೆಯ ಕಂಡು ಅದರ ಹತ್ತಿರ ಹೊರಡುತ್ತಾನೆ. ಓಹೋ ಹೊಸ ವಿಯಾಸ, ವಿಭಿನ್ನ ಉಡುಗೆ ಅದನ್ನು ನೋಡುತ್ತಾ ಖುಶಿಯಲ್ಲಿದ್ದಾಗ.....ಒಂದು ಪುಟ್ಟ ಮಗು, ಚಂದದ ಉಡುಗೆ ತೊಟ್ಟು ಇವನ ಹತ್ತಿರ ಬಂದು, ಇವನ ಪ್ಯಾಂಟನ್ನು ಹಿಡಿದು ಎಳೆಯುತ್ತಾ..ಆಪ್ಪಾ ಅಂದು ಕರೆಯುತ್ತದೆ...ಇವನಿಗೆ ಆಶ್ಚರ್ಯ..! ಯಾರದಿದು ಮಗು ? ತನ್ನ ಅಪ್ಪಾ ಅಮ್ಮಂದಿರಿಂದ ತಪ್ಪಿಸಿಕೊಂಡಿದೆ ಅನ್ನುತ್ತಾ ಆ ಮಗುವನ್ನು ಎತ್ತಿಕೊಂಡು ಅಂಗಡಿಯ ರಿಸಿಪಶನ್ ಹತ್ತಿರ ಹೋಗುತ್ತಾನೆ, ಅಷ್ಟರಲ್ಲಿ ಹಿಂದಿನಿಂದಾ ಒಂದು ಧ್ವನಿ ಕೇಳಿಬರುತ್ತದೆ, ಅದು ಒಂದು ತಾಯಿ ಕಂದನ ಕಳೆದುಕೊಂಡ ದನಿ, ಆ ಮಗು ತಾಯಿಯ ಧ್ವನಿ ಕೇಳಿದ ಕೂಡಲೇ ಅವನ ತೋಳಿನಿಂದ ಇಳಿದು ತಾಯಿಯ ಹತ್ತಿರ ಓಡಿಹೊಗುತ್ತದೆ. ತಾಯಿಯ ತೋಳೆರಿದ ಮಗು ಅವನ ಹತ್ತಿರ ಕೈ ಮಾಡುತ್ತ.....ಅಪ್ಪಾ ಅನ್ನುತ್ತದೆ...ಅವಳು ಅವನ ಕಡೆ ತಿರುಗಿ ನೋಡುತ್ತಾಳೆ., ಒಂದು ನಿಮಿಷ ಸ್ಥಬ್ಧ..... ಇಬ್ಬರಿಗೂ ಆಶ್ಚರ್ಯ....!! ಅವಳು ಅವನ ಕಾಲೇಜಿನ ಪ್ರೇಯಸಿ....ಎಷ್ಟೋ ವರ್ಷಗಳ ನಂತರ ಭೇಟಿ...! ಅವಳನ್ನು ಗಮನಿಸಿದ ಅವನಿಗೆ ಕಾಣಿಸಿದ್ದು .... ಕುಂಕುಮವಿಲ್ಲದ ಅವಳ ಹಣೆ ..., ತಾಳಿ ಇರದ ಕೊರಳು...! ಅಲ್ಲೊಂದು ಮೌನ, ಅರೆ ಇವಳ ಮದುವೆ ಆಗಲೇ ಆಗಿತ್ತಲ್ಲ....? ಇವಳೇಕೆ ಹೀಗೆ....???? ಅವಳ ಗಂಡ ಈ ಪುಟ್ಟ ಕಂದಮ್ಮ ಹುಟ್ಟುವ ಹೊತ್ತಿಗೆ ಇಹಲೋಕ ತ್ಯಜಿಸಿದ್ದ.........!!