Monday, August 26, 2013

ಮನಃಪೂರ್ವಕ ಮೆಚ್ಚಿದೆ !!

ಅವಳ ಅಂದ ಅವಳ ಚಂದ

ಅವಳ ಬಣ್ಣ ಅವಳ ಕಣ್ಣ

ಅವಳ ಕೋಮಲ ಮುಖದ ಚಂದವ..

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!


ಅವಳ ನಡೆಯ ಅವಳ ನುಡಿಯ

ಅವಳ ಗುಣವ ಅವಳ ಗಣವ

ಅವಳ ಭಯ ಭಕ್ತಿಯ ನಡುವಳಿಕೆಯ ಕಂಡು..

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!


ಅವಳ ಸೌಮ್ಯತೆ ಅವಳ ಚಾತುರ್ಯತೆ

ಅವಳ ಸೂಕ್ಷ್ಮತೆ ಅವಳ ಚಿಂತನೆ

ಅವಳ ಸಮಯ ಪ್ರಜ್ಞೆಯ ಹೆಜ್ಜೆಯ ಕಂಡು

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!


ಅವಳ ಕೌಶಲ್ಯ ಅವಳ ನಿಯಮ

ಅವಳ ಶಿಸ್ತು ಅವಳ ಒಣಪು

ಅವಳ ಪಾಕ ಪ್ರವೀಣತೆ ಉಲ್ಲಾಸಗೊಳಿಸಿತು

ಮೆಚ್ಚಿದೆ, ಮೆಚ್ಚಿದೆ... ಮನಃಪೂರ್ವಕ ಮೆಚ್ಚಿದೆ !!

Thursday, August 08, 2013

ಕಿಡಿನುಡಿ

ಕೊಲೆಗಡುಕರ ಕಲೆ ಮೆಚ್ಚುವುದು ಜಾಣತನವಲ್ಲ !!

ಹೊಸ ಗಾದೆ

ಕೊಲೆಗಾರನಿಗೆ,  ಶಿಲೆಯ ಮೇಲಿನ ಉಳಿ ಪೆಟ್ಟು ಭಯವಂತೆ !!

ಪ್ರೀತಿ

ಅವನು ಬಿಡುತ್ತಿದ್ದ ಕಣ್ಣ ಬಾಣಗಳು

ಸೀಳಿದ್ದವು ಅವಳ ಹೃದಯಾ

ಗಾಯದಿಂದ ಚಿಮ್ಮುತ್ತಿದ್ದ ಹನಿಗಳು

ಕೂಗುತ್ತಿದ್ದವು ಬಾ ಇನಿಯಾ.. ಬಾ ಇನಿಯಾ !!

ಕಿಲಾಡಿ

ಅವಳು ಸೊಗಿನಾಕಿ

ಮರಳು ಮಾಡಲು ಅಳುವ ಚಾಲಾಕಿ

ಒಮ್ಮೆ ಮೋಸ ಹೋದವಗೆ ತಿಳಿಯದೇ ಯಾರೀಕಿ ??

ಪಾಠ ಕಲಿತವ.... ಆಗಿಹನು, ಕಲಿಸುವ ಸೂಕ್ತ ಕಿಲಾಡಿ..!

THOUGHT FOR THE DAY

PEOPLE TRY TO HIDE THEIR BLUNDER BY JUST POINTING TO OTHERS ABOUT MISTAKES, BUT THEY FORGET THAT BLUNDERS ARE NEVER FORGIVEN.

ಕಿಡಿ ನುಡಿ

ಜನರು ತಮ್ಮ ಪ್ರಮಾದವನ್ನು ಮುಚ್ಚಿಡಲು ಬೇರೆಯವರತ್ತ ಕೈ ಮಾಡಿ ಬೆರಳುಗಳ ತೋರುವರು, ಆದರೆ ನೆನೆಪಿರಲಿ ಆ ಪ್ರಮಾದದ ಬಿಸಿ ಅವರಿಗೆ ತಟ್ಟದೇ ಹೋಗುವುದಿಲ್ಲ.

Wednesday, August 07, 2013

ಮನೆ ಇದು ನನ್ನ ಮನೆ

ಮನೆ ಇದು ನನ್ನ ಮನೆ


ಬರುವುದಾದರೆ ಮನ ಗೆದ್ದು ಬಾ

ಒಲವಿದ್ದರೆ..., ಒಲಿದು ಬಾ

ಜೊತೆಗೂಡಿ  ಬಾಳುವ ದೀಕ್ಷೆ ತೊಟ್ಟು ಬಾ


ನಟನೆಯ ಮುಖ ಹೊತ್ತವರ ನಾ ನಂಬುವುದಿಲ್ಲಾ

ಸಂಚಿನ ಆಟವಾಡಲು ಈ ಮನೆ ದುಷ್ಟ ಗೂಡಲ್ಲಾ

ನಿನ್ನನ್ನು ಆದರಿಸೊ ಪ್ರವಾಸಿಮನೆಯಲ್ಲಾ

ನನ್ನ ಮನೆ ಇದು ನನ್ನ ಮನೆ


ಕಳ್ಳ ಸುಳ್ಳ ನಪುಂಸಕರ ಜಾಡು

ಹುಟ್ಟಡಗಿಸಿ ಮಾಡುವೆ ನಾಯಿ ಪಾಡು

ಕೊಡವಿ ನಡೆದು ಬಿಡುವೆ, ಸಿಡಿದೆದ್ದು ಸುಟ್ಟು ಬಿಡುವೆ

ನನ್ನ ಮನೆ ಇದು ನನ್ನ ಮನೆ

Tuesday, August 06, 2013

ಬೆಳಕು

ನನ್ನ ಪ್ರೀತಿಯಲ್ಲಾ

ಎಣ್ಣೆಯಂತೆ ಧಾರೆ ಎರೆದು

ನಿನ್ನ ಒಡಲ ತುಂಬಿರುವೆ.!

ಸೇವಿಸಿ ಅನುಭವಿಸು ಅದನ್ನು..,

ಮೈಗೂಡಿಸಿಕೋ ನಿನ್ನೊಳು,

ದೀಪವಾಗಿ ಬೆಳಗಿಸು...

ನನ್ನ ಬಾಳನು..!

Monday, August 05, 2013

ಇದು ಖುಷಿ ಸುದ್ದಿಯಂತೆ

ಕನ್ನಡಿಗರೆಗೆಲ್ಲಾ ಸಿಹಿ ಸುದ್ದಿಯಂತೆ

ಕನ್ನಡ ಅಗ್ರಮಾನ್ಯ ಸ್ಥಾನಕ್ಕೆ ಏರಲಿದೆಯಂತೆ

ಅದು ಆಗಲು.. ಇನ್ನೂ ೩೦ ವರ್ಷ ಕಾಯಬೇಕಂತೆ !! :P

Friday, August 02, 2013

ದರ್ಬಾರು

ನನ್ನ ಹೃದಯದ ಸಾಮ್ರಾಜ್ಯದಲ್ಲಿ ಅವಳದೇ ದರ್ಬಾರು

ಅವಳೊಪ್ಪಿಗೆ ಇಲ್ಲದೆ ಹರಿದಾಡುವುದಿಲ್ಲ ನನ್ನುಸಿರು

ಅವಳ ಪ್ರೀತಿಯ ಬೆರೆಸಿ ನೆತ್ತರಲಿ ನಡೆಸುತಿರುವಳು ಕಾರ್ಬಾರು !!

Thursday, August 01, 2013

ಹುಂಡಿ

ಬೇಡ ಬೇಡವೆಂದರೂ
ತುಂಬುವುದು ತಿಮ್ಮಪ್ಪನ ಹುಂಡಿ
ಹಣ ಎಣಿಸುತ್ತಾ ಕೂತವರೆ
ಸಮಯವೇ ಇಲ್ಲಾ... ಕೆರೆದುಕೊಳ್ಳಲು " _ _ _ " 

Wednesday, July 31, 2013

THOUGHT FOR THE DAY

We Write, We Read, We comment, We Share, We Like, We Promote. It is a token of APPRECIATION that we admire someone's thoughts, someone's feelings, someone's virtue. Whenever YOU read something, Just acknowledge the writings, that is a great appreciation for the writer.

Tuesday, July 30, 2013

ಸದನದಲಿ ಸಿದ್ದು-ಗುದ್ದು

೧೬ ವರ್ಷ ಕೆಳಗೆ ಮುಖ್ಯಮಂತ್ರಿ ಅವಕಾಶವ ಕಿತ್ತುಕೊಂಡಿದ್ದಕ್ಕೆ ಬೀಗುತ್ತಿದ್ದ ಹೆಚ್ ಡಿ ಕೆ

ಸಿದ್ದು ನೀಡಿದ ಮಾತಿನ ಗುದ್ದಿಗೆ ಆದರು ಕಕ್ಕಾ ಬಿಕ್ಕಿ

ಆಗ ಮಾಡಿದ ತಂತ್ರ ಈಗ ನಡಿಯಲಿಲ್ಲಾ ಅಂತಾ ಅಳುತಿಹರು ಬಿಕ್ಕಿ ಬಿಕ್ಕಿ...!

ಟೆಕ್ಕಿ ಅವಾಂತರ

ನಗರಕ್ಕೆ ಕೆಲಸಕ್ಕಾಗಿ ಅರಸಿ ಬಂದ ಟೆಕ್ಕಿ
ಬಿಎಂಟಿಸಿಯ ಬಸ್ಸನ್ನು ಹತ್ತಿ
ಟಿಕೇಟು ಪಡೆಯಲು ಹೋಗಿ
ಕನ್ನಡದ ಪದಗಳು ತಿಳಿಯದಾಗಿ
ರೊಚ್ಚಿಗ್ಗೆದ್ದು ನಿರ್ವಾಹಕನ ಮೇಲೆ
ಧಳಿಸಿದಳು ಕಿವಿಯ ಹರಿಯುವಂತೆ
ತಾನು ಒಬ್ಬ ಪರೋಡಿ ಎಂದು ನಂಬಿ
ಕುಳಿತಿಹಳು ಜೈಲೊಳಗೆ ಎಣಿಸುತ್ತಾ ಕಂಬಿ.


http://kannada.oneindia.in/news/2013/07/30/karnataka-bangalore-accenture-techie-swati-nigam-assault-bmtc-conductor-manjaiah-076163.html

ಆ ತುಟಿಗಳು ನಗುವುದ ಮರೆತಿಲ್ಲ

ಸದಾ ಕುಣಿದಾಡುತ್ತಿತ್ತು ಅವಳ ತುಟಿಗಳಲಿ ನಗು
ಅವಳ ನಗು ಪುರಸ್ಕರಿಸಲೆಂದು ಹುಟ್ಟಿತ್ತೊಂದು ಮಗು
ತಾಯ್ತನವ ಅನುಭವಿಸುತ್ತಾ ಕನಸ್ಸುಗಳ ಮೊಳಕೆ ಒಡೆದಿತ್ತು
ಕೆಟ್ಟಗಾಲ...., ತುಟಿಗಳು ಬಿಗಿದು,ಕಣ್ಣುಗಳು ತುಂಬಿದವು
ಆ ನಗುವ ತಂದ ಮಗುವು ಇನ್ನಿಲ್ಲದಾಯಿತು
ಕರಳು ಕಿವುಚಿತು ....ಎಷ್ಟು ಕ್ರೂರಿ ಅಲ್ಲವೇ ವಿಧಿ..?
ಮಾಸಗಳು ಕಳೆದವು...
ಇನ್ನೂ ಸಹಾ ಕಾಣಬಲ್ಲೆವು ಅವಳ ತುಟಿಗಳಲಿ ಅದೇ ನಗು...
ಆದರೆ ನಮ್ಮ ಕರುಳೆ ಮತ್ತೆ ಕಿವುಚುತಿದೆ ಅವಳ ನಗುವ ಹಿಂದೆ ಇದ್ದ ನೋವ ಅರೆತು.! 

Monday, July 29, 2013

ಹಿತನುಡಿ

ನಾವು ಪ್ರೀತಿಸುವ ವಸ್ತು ಅಥವಾ ಜೀವಿ ನಮ್ಮದಾಗ ಬೇಕೆಂದರೆ, ನಾವು ಯಾವುದೇ ತ್ಯಾಗಕ್ಕೂ ಸಿದ್ದವಿರಬೇಕು.
ಅದನ್ನು ಪಡೆಯಲೇ ಬೇಕೆಂದರೆ ತಕ್ಕ ಪರಿಶ್ರಮ ಪಡಬೇಕು, ಇಲ್ಲವಾದರೆ ಅದು ಬರಿ ಬೂಟಾಟಿಗೆ ಅನ್ನಿಸಿಕೊಳ್ಳುತ್ತದೆ.

ಬಾಣ



ಅವಳು ಗಾಳಿಯಲ್ಲಿ

ಬಿಡುವ ಬಾಣಗಳು

ನನಗೆ ಏನೋ

ಅನ್ನುವುದು ನನ್ನ " ಭ್ರಮೆ "

ನಿನಗಲ್ಲಾ ನಲ್ಲಾ,ಅಂದಳವಳು..

ನಾ ಬಿಟ್ಟ ಬಾಣಗಳು, ಒಂದಾದರೂ ಚುಚ್ಚಲಿ

ನಿನ್ನ ಕಸಿದುಕೊಳ್ಳಲು ಪ್ರಯತ್ನಿಸುತ್ತಿರುವ..

ಆ " ಪ್ರೇಯಸಿಗೆ "

Saturday, July 27, 2013

ದೀಪಜ್ಯೋತಿ


ಪ್ರೀತಿಯ ದೀಪ ಹೊತ್ತಿಹುದು
ಎಣ್ಣೆಯ ಹುಯ್ಯಿದು ಸಲಹು
ಅಕ್ಕರೆಯ ಎರೆದು, ಪ್ರಕಾಶಿಸು !!

ಮನದ ಅಂಧಕಾರವ ದೂರಮಾಡು
ಪ್ರೀತಿಯ ಬೊಗಸೆಯಲ್ಲಿ ಹಿಡಿದು
ಜೀವಕೆ ಜೀವ ತುಂಬುವ ಜ್ಯೋತಿಯ ಪ್ರಜ್ವಲಿಸು !!

ನಂಬಿಹೆನು, ನೀ ಬಾಳ ಜ್ಯೋತಿ ಆಗುವಳೆಂದು
ಬೆಳಕ ತುಂಬುವೆ ನನ್ನ ಬಾಳಲಿ ಇಂದೆಂದೂ
ಮಾದರಿಯಾಗು ನೀ, ಪ್ರೀತಿಯ ಸಂಕೇತವೆಂದು !!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...