Friday, June 28, 2013

ಅವಳು ಬರಬಹುದೇ ?


===================

ಕತ್ತಲಲ್ಲಿ ಮೂಡಿದ ರೆಖಾ ಚಿತ್ರಗಳು

ಕತ್ತಲೆಯ ಕಪ್ಪು ಹಚ್ಚಿ ವಿಲೀನವಾಗುವ ಮೊಡಗಳು

ಇರುಳ ತಂಪು ಸವರುತ್ತ ಬೀಸುವ ಸೌಮ್ಯ ಗಾಳಿ

ವರ್ಷಾ ಸುರಿಬಹುದೇ ಇಂದು ರಾತ್ರಿ ಇಡೀ..!

Thursday, June 27, 2013

THOUGHT FOR THE DAY

BEAUTY DIMINISHES WHEN YOU ADD YEARS TO YOUR LIFE WHEREAS THE CHARACTER DOES NOT. 

ತುಮುಲ ಮನ


=======

ಶಬ್ದಕೋಶದಂತೆ ನನ್ನ ಮನ

ಅರ್ಥಗಳ ಹರಿವು ತುಂಬಿದ ವನ !

ಅಲ್ಲಿಲ್ಲಿ ಅಲೆಯಬೇಡ ಹುಡುಕುತ್ತಾ ಸಾಂತ್ವನ..

ಕೋಶದ ಪುಟಗಳನ್ನು ತಿರುವಿ ಹಾಕೋಣ,

ಪಡೆಯಬಲ್ಲೆವು ನಾವು ಹಸನು ಬಾಳಿನ ಜೀವನ !!

--------------------------------------------

Wednesday, June 26, 2013

ಗೆಳೆತನದ ನೌಕೆ

================
ಗೆಳೆತನದ ಮೇಲೆ ನಂಬಿಕೆ ಇಟ್ಟಿದ್ದು ಸುಳ್ಳಾಯಿತು 

ನೌಕೆಯ ಉಳಿಸುವ ಪ್ರಯತ್ನವೆಲ್ಲಾ ವ್ಯರ್ಥವಾಯಿತು

ಅದು ಯಾರ ದೃಷ್ಠಿ ತಾಕಿತೋ..ತೇಲದೆ ನೌಕೆ ಮುಳುಗಿಹೋಯಿತು !! 

ಸೋಲು- ಗೆಲುವು

==============

ನಮ್ಮಿಬ್ಬರ ಸಂವಾದದಲ್ಲಿ ಸೋತದ್ದು ನಾನೆ..

ಉತ್ತರಿಸಲಾಗದೇ ಸಹಿ ಹಾಕೆದೆ ಅವಳ ತುಟಿಗಳಿಗೆ..! 

ಜನಸೇವೆ

============

ಜನತೆಯ ಸೇವೆ ಮಾಡಲು,

ಸಚಿವರಿಗೆ ಬೇಕಂತೆ........ ಐಷಾರಾಮಿ ಕಾರುಗಳು !

ಕಾಲಿಗೆ ಚಪ್ಪಲಿಗಳು ಕೂಡಾ ಇರದೇ,

ಸಾಗುವರು ನಮ್ಮ ಜನತಾ ಜನಾರ್ಧನರು !!

-------------------------------------

ಸೌಮ್ಯ ಸಾರ


=======
ಮನೋಜನ ಸತಿ

ವಿನಮ್ರ ಗುಣವತಿ

ನುಡಿಗಳು ಇತಿ

ನಡೆಯಲ್ಲಿ ಸುಮತಿ

ಇವಳು ಮನೆಯ ಆರತಿ !

ಸೌಮ್ಯಾತನಯ

ಬಲು ವಿನಯ

ನಗು ಅನನ್ಯ

ಪ್ರೀತಿಯ ಮನನ

ಮನೆ ನಂದಾನವನ !!
--------------------



Tuesday, June 25, 2013

ಕಾಡಿಗೆ ಮಹಿಮೆ


========

ಕಣ್ಣಿಗೆ ಕಾಡಿಗೆ

ತೀಡಿದ ಮಾರವ್ವ !

ಹುಡುಗರು ಹೆದರಿ,

ಕೂಗುತಿರುವರು... ದೆವ್ವಾ...ದೆವ್ವಾ !

--------------------------------

ಹಿತವಚನ - ಮೇಲು V/s ಕೀಳು

ಮೇಲು - ನಾವು ದುಃಖದಲಿದ್ದಾಗಲೂ, ಅನ್ಯರ ಸಂತೋಷದಲ್ಲಿ ಪಾಲುಗೊಂಡು ಅವರಲ್ಲಿ ಒಬ್ಬರಾಗಿ ವರ್ತಿಸುವುದು.


ಕೀಳು - ನಮ್ಮ ಸುಖಕ್ಕಾಗಿ ಅನ್ಯರ ಸುಖ ಕಿತ್ತುಕೊಂಡು ಆನಂದಿಸುವುದು.

THOUGHT FOR THE DAY

FEELING HAPPY FOR OTHERS AND BEING ONE AMONG THEM MAKES YOUR CHARACTER RICHER AND RICHEST, INSPITE OF YOUR TONES OF WORRIES.

ಮತ್ತೆ


ಏಕೋ ಇಂದು..

ಮನವು ಕುಲುಕಿ

ಕುಣಿಯುತಿದೆ ಹೃದಯ !

ಮತ್ತೆ ಬೇಕೆನ್ನಿಸಿದೆಯೋ ಅದಕ್ಕೆ...?

ಪ್ರೀತಿ, ಪ್ರೇಮ, ಪ್ರಣಯ !

ಮಮತೆ

ದಿನೆ ದಿನೆ ಉಕ್ಕಿದೆ, ಅವಳ ಮೊಗದಲ್ಲಿ ಮಮತೆಯ ನಗು..

ಇನ್ನು ಕೆಲವೇ ದಿನಗಳಲ್ಲಿ ಆಡಲಿದೆ, ಅವಳ ಮಡಿಲಲ್ಲಿ ಪುಟ್ಟ ಮಗು !


Saturday, June 22, 2013

ಜೀವನ

ಜೀವನ : " ಕಾಲಿ ಹಾಳೆಯ ಮೇಲೆ ಮೂಡಿಸಬಹುದಾದ ಅರ್ಥಪೂರ್ಣ ಸಾಲುಗಳು "

ಹನಿ ಹನಿ ಪ್ರೇಮ್ ಕಹಾನಿ

============
ಹನಿ ಹನಿ ಬೀಳುತ್ತಲೆ ಶುರುವಾಯ್ತು ಪ್ರೇಮ್ ಕಹಾನಿ

ಹನಿ ಒಡೆಯುತ್ತಲೇ ಭೂಮಿಗೆ ತುಂಬಿ ಬಂತು ಜವಾನಿ

ಅವನ ಪ್ರೇಮ ಎಷ್ಟು ಚಂದ ಚಟ ಪಟ ಎನ್ನುತಿದೆ ಅವನ ದ್ವನಿ 

ಮುದ ನೀಡುತ್ತಾ ಅವಳ ಹೃದಯಕ್ಕೆ ,ಮನದಲಿ ಬಿತ್ತಿದನು ಪ್ರೀತಿಯ ಗಣಿ

ಹಸಿರು ಬಸಿರಾದ ಭುವಿಗೆ ಹೂವ, ಲತೆ, ಬಳ್ಳಿಗಳ ಆರೈಕೆ !

--------------------------------------------------

Thursday, June 20, 2013

ಕಿಡಿ ನುಡಿ

ಮೋಸದಿಂದ ಉಪಾಯ ಮಾಡಿ ದಾಳಿ ಮಾಡುವರು ಕ್ರೌರ್ಯ ಮೆರೆವವರು  " ಹೇಡಿಗಳು "

ಯಾವುದೇ ಜಾಗದಲ್ಲೂ,  ಎಲ್ಲಾ ಸಮಯದಲ್ಲೂ ಆತ್ಮ ರಕ್ಷಣೆಗೆ ದಾಳಿ ಮಾಡಬಲ್ಲವರು ಕೆಚ್ಚೆದೆಯ " ಧೈರ್ಯವಂತರು " 

THOUGHT FOR THE DAY


I BELIEVE people blindly, since I have faith on my decisions . But it is the responsiblity of the person to make my belief TRUE & I'm cautious enough to observe that silently.

Monday, June 17, 2013

ವಿಷಕನ್ಯೆ

ಬಳಕುತ್ತಾ ನಡೆವ, ಬಾಹ್ಯ ಸೌಂದರ್ಯಕ್ಕೆ ಮೋಹಗೊಂಡು ವರಿಸಿದ ಕನ್ಯೆ

ಅವಳು ಪೊರೆ ಬಿಟ್ಟಾಗಲೇ ತಿಳಿದಿತ್ತು... ಅವಳೊಂದು " ವಿಷಕನ್ಯೆ"

ಸಂಚು

ಮುಗ್ಧ ಜನರನ್ನು ಮೋಸ ಮಾಡಲೆಂದೇ ಹೂಡಿದ್ದರು ದುರ್ಜನರು ಸಂಚು,

ಮುಗ್ಢರನ್ನು ಸೃಶ್ಟಿಸಿದ ಭಗವಂತನಿಗೆ ಕಾಣಿಸದೇ ಇವರ ಹೊಂಚು,

ಗುಡುಗಿದ, ಸಿಡಿದೆದ್ದ ಮುಕ್ಕಣ್ಣ... ಸುಟ್ಟು ಬೂದಿಯಾದರು ದುರ್ಜನರು.., ಅವರ ಮೇಲೆ ಬಿದ್ದಾಗ ಮಿಂಚು !

ನೀತಿ

ಪರರ ಹಾಸಿಗೆಯಲ್ಲಿ ಮುಳ್ಳನಿಟ್ಟು ಆನಂದಿಸಿದವರು .., ತಮ್ಮ ಹಾಸಿಗೆಯಲ್ಲಿ ಮುಳ್ಳ ಕಂಡಾಗ ಹೌಹಾರಿದರು. 

ಪ್ರೀತಿ

ಅವನು ಬರೆದ ಪ್ರೇಮ ಪತ್ರಗಳೆಲ್ಲಾ ವ್ಯರ್ಥ
ಏಕೆಂದರೆ,
ಅವಳಿಗೆ ತಿಳಿಯಲೇ ಇಲ್ಲ ಪ್ರೀತಿಯ ಅರ್ಥ !!

Friday, June 14, 2013

ಸೂಳೆಯ ಕನಸ್ಸು


ಮದುವೆಯಾದ ವರ್ಷದಲ್ಲೇ ಗಂಡನ್ನು ತೊರೆದು

ತನ್ನ ಹಸಿ ಚಟಕ್ಕೆ ಮೊರೆಹೊಗಿ ಮೆರೆದು

ಬೆನ್ನ ಹತ್ತಿಹಳು ತನ್ನ ವಿಚಿತ್ರ ಕನಸ್ಸುಗಳ

ನೆಪಕ್ಕೆ ಮಾತ್ರ ಕುತ್ತಿಗೆಗೆ ತಾಳಿ ಕಟ್ಟಿ

ಸಿಕ್ಕ ಸಿಕ್ಕ ಗಂಡಸರೊಂದಿಗೆ ತೀರಿಸಿಕೊಳ್ಳುತ್ತ ಚಟ

ಬೃಹತ್ ನಗರದ ಐಷಾರಾಮಿ ಜೀವನ

ಆ ನಗರದಲ್ಲೊಂದು ದೊಡ್ಡ ಬಂಗಲೆ

ತನ್ನ ಚಟಗಳಿಗೆ ಹಣ ಹರಿಸಬಲ್ಲ ಒಂದು ಗಂಡು

ಹಣದ ವ್ಯಾಮೋಹ ಹತ್ತಿದ ಧನಪಿಶಾಚಿ

ಸಮಾಜದ ಕೆಟ್ಟ ಹುಳುಗಳು ಇವು

ಜಗವ ಕೆಡಿಸುತ್ತಿರುವ ಸೂಳೆಗಳು..  ಬರಬಾರದೇ ಇವರಿಗೆ ಬೇಗ ಸಾವು.

ಹಿತವಚನ

ಕನಸ್ಸು ಕಾಣುವುದು ಒಳ್ಳೆಯದೇ.. , ಅವುಗಳನ್ನು  ಪೂರ್ಣಗೊಳಿಸಲು ನಿಮ್ಮ ಸತತ ಪರಿಶ್ರಮದಿಂದ ಪ್ರಯತ್ನಿಸಿ.

Wednesday, June 12, 2013

ಕಣ್ಣ ಹನಿ

ಸಹಸ್ರ ಹೂವುಗಳ ವೃಷ್ಟಿ ಹರಿದರೂ...


ಒಂದೇ ಒಂದು ಮುಳ್ಳು ಚುಚ್ಚಿದರೂ...

ಕಣ್ಣು ಒದ್ದೆ ಆಗುವುದು ಮಾತ್ರ  ತಪ್ಪುವುದಿಲ್ಲ ...

ಕಾರಣ,

ಮೊದಲನೆಯದು ಆನಂದ ಭಾಷ್ಪ.

ಎರಡನೆಯದು ಒಳ ನೋವು...!!

Monday, June 10, 2013

THOUGHT FOR THE DAY

Human beings have turned so lazy now a days that they dont have time to do good to others but have lots to dirty ideas to destroy many.

TOUCH

The feel of your Touch


Spreads fragnance in my body

Moment I'm awake rubbing my eyes

the glimpse of your happiness gives me more relief

Saturday, June 08, 2013

THOUGHT FOR THE DAY

I don't have any expectations from LIFE, But I would offer many expectations to LIFE.

Thursday, June 06, 2013

ಹೊಸ ವಿನ್ಯಾಸ



=========

ಅವಳ ಹೊಸ ವಿನ್ಯಾಸ ಮೂಡಿಸಿತು ಬೆರಗು

ಬಡಿದಂತಾಯಿತು ಸೂಕ್ಷ್ಮ ಹೃದಯಳಿಗೆ ಸಿಡಿಲು

ಮತ್ತೇರಿಸುತಿದೆ ಬಿನ್ನಾಣಗಿತ್ತಿಯ ಮೆರಗು

ಕೈಗೆಟುಕದ ಹುಡುಗರಿಗೆಲ್ಲಾ ತಪ್ಪದು ಕೊರಗು .

--------ಭಾವಪ್ರಿಯಾ----------

THOUGHT FOR THE DAY

I WAS NEVER ALONE NOR WILL I BE .... BECAUSE ITS ME, WHO HAS TO REACH MY DESTINY WITH ALL MY OWN.

वोह कोई और ही है



मेरे हर सुभह को ख़ूबसूरत बनानेवाली

नए आशावों से पल पल को भरनेवाली , वोह कोई और ही है !

जिसके बातें मुझे अपना पन का एहसास दिलाती है

जिसिकी हर सास से प्यार उभर उभर आती है , वोह कोई और ही है !

उसकी एक मुस्कान से हर फूल खिलते है

उसकी अनंत देखभाल से जो बाग़ में ख़ुशी खिल जाती है , वोह कोई और ही है !

मेरे जीवन में रंग भरनेवाली जो, तू तो कभी थिही नहीं

मेरे आंगन को हरा भरा करनेवाली , वोह कोई और ही है !





ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...