Tuesday, November 12, 2019
ಶುಭೋದಯ
ಸ್ವಪ್ನ
ಲೋಕದಲ್ಲಿ ತೇಲುತ್ತಿದ್ದ ಮೋಡಗಳಿಗೆ...
ಮಿಂಚು
ಹೊಡೆದು ಅರಚಿದ ಹಾಗೆ...
ಎದ್ದು
ನಸುಕಿನಲ್ಲಿ ಭೋರ್ಗರೆದಳು ವರ್ಷಧಾರೆ...
ಊರ ಅಂಗಳವೆಲ್ಲಾ
ಶುಚಿ...
ಸಮೃದ್ಧ ಕರ್ನಾಟಕ
ಸದಾ ಕಂಗೊಳಿಸುವ ಬೆಳಗಾವಿ
ಸೈನಿಕರು
ಹೊರಟಾರ ಹಿಡಕೊಂಡು ಕೋವಿ
ಉತ್ತರ
ಕರ್ನಾಟಕಕ್ಕೆ ಹೆಬ್ಬಾಗಿಲು
ಕವಿಗಳ
ಗೂಡು ಚೆಲುವ ಧಾರವಾಡ ಬೀಡು
ಸುಡುಸುಡುವ
ತವರು ರಾಯಚೂರು
ಬೆಂಕಿಗೂ
ಬೆವರಿಳಿಸುವುದು ಬಲು ಜೋರು
ಕರುನಾಡ
ಹೃದಯವದು ದಾವಣಗೆರೆ
ನಾಲಿಗೆ
ರುಚಿಗೆ ನೀರೊರಿಸುವುದು ಬೆಣ್ಣೆದೋಸೆ
ಮೆಣಸಿಕಾಯಿ
ಇಳುವರಿ ಹಾವೇರಿ
ಬ್ಯಾಡಗೀಯ
ಕೆಂಪು ಮೆಣಸಿನಕಾಯಿ ಬಹಳ ಖಾರಾ ರೀ
ಕವಿಗಳ-ಸಂಗೀತ ದಿಗ್ಗಜರ ನಾಡು ಗದಗ
ಭಿಮಸೇನರು,
ಪುಟ್ಟರಾಜ ಗವಾಯಿಗಳು ಚೆನ್ನವೀರ ಕಣವಿ, ಆಲೂರು ವೆಂಕಟರಾಯರು
ಇತಿಹಾಸದ
ಮರಿ ಮಗಳು ವಿಜಯಪುರ
ಗೋಲಗುಮ್ಮಟದ
ಇಮಾರತವು ಜನಪ್ರೀಯ
ಕರಾವಳಿಯ
ಸೊಬಗು ಮಂಗಳೂರು
ಮೀನ
ಸವಿದ ಜನರು ಓದುದರಲ್ಲಿ ಚುರುಕು
ಅದಿರು
ಸಂಪತ್ತಿನ ನಾಡು ಬಳ್ಳಾರಿ
ಸುಪ್ಪತ್ತಿಗೆಯಲಿ
ಮಿಂದ ಜನರು ಸುವಿಹಾರಿ
ಕಲ್ಲಿನ
ಕೋಟೆಗೆ ಪ್ರಸಿದ್ಧ ಚಿತ್ರದುರ್ಗ
ಮಾರಿ
ಕಣಿವೆಯ ನೋಟ ಅತಿ ಮಧುರ
ಕೊಳ್ಳೆಗಾಲ,
ಬಂಡಿಪುರ, ಚಾಮರಾಜನಗರ
ವನ್ಯಜೀವಿಗಳ
ತವರು ಕಾಪಾಡಿಕೊಳ್ಳುವುದು ನಮ್ಮಯ ಭಾರ
ಬೆಂಗಳೂರು
ಕರುನಾಡ ವಾಣಿಜ್ಯ ಖಣಜ
ಎಲ್ಲ
ಭಾರತೀಯರಿಗೂ ಅನ್ನ ನೀಡುವ ಅನ್ನದಾತ
ಚಿಕ್ಕಮಗಳೂರು
ಕಾಫಿ ಸಮೃದ್ಧಿಯ ಸಾಗರ
ಜನರ
ದಣಿವಾರಿಸಿ ಚೈತನ್ಯ ತುಂಬುವ ಅಗರ
ತೊಗರಿ
ಬೆಳೆಯುವ ತಾಣ ಗುಲ್ಬರ್ಗ
ಭಾರತಕ್ಕೆ
ಸಿಮೆಂಟು ತಯ್ಯಾರಿಸುವ ದಿಗ್ಗಜ
ಬಿಸಿಲು
ನಾಡಿನ ತಂಪು ಸ್ಥಳ ಬೀದರ
ಕರಕುಶಲ
ವಸ್ತುಗಳಿಗೆ ಪ್ರಸಿದ್ಧಿ ಹೊಂದಿ ಅಮರ
ವೀರ
ಯೋಧರ ನಾಡು ಕೊಡಗು
ಕಾವೇರಿ
ಹುಟ್ಟು ತಲಕಾವೇರಿ, ಕೊಡವ ನಾಡೆಲ್ಲಾ ಹಸಿರು
ಅಪರಂಜಿಯ
ಗಣಿ ಕೋಲಾರ
ಕರುನಾಡಿಗಿದು
ವಜ್ರದ ಹಾರ
ಐತಿಹಾಸಿಕ
ನಗರಿ ಮೈಸೂರು
ಒಡೆಯರ
ಅರಮನೆ ವೈಭವ ನೋಡಲು ಸಾಲದು ಈ ಜನುಮವು
ಕಬ್ಬು
ಬೆಳೆವ ಸೀಮೆ ಮಂಡ್ಯ
ಸಿಹಿ
ಸುತ್ತುಕಬ್ಬು ಉಣಬಡಿಸುವುದು ಗಾಣ
ರಾಮನಗರ
ರೇಷ್ಮೆಯ ಶಿಖರ
ಬರ್ಜರಿ
ರೇಷ್ಮೆಸೀರೆಗಳೆ ಹೆಂಗಳೆಯರಿಗೆ ಭೂಷಣ
ಬತ್ತ,
ಅಕ್ಕಿ ಬೆಳೆವ ಬೈಲು ಕೊಪ್ಪಳ
ಹೆಸರುವಾಸಿಯಾಗಿಹುದು
ಅಕ್ಕಿಯ ಬಟ್ಟಲ
ಇಳಕಲ್,
ಬಾದಾಮಿ, ಬಾಗಲಕೋಟೆ
ಚಾಲುಕ್ಯರು
ಕೆತ್ತಿದ ಕಲ್ಲಿನ ಗುಡಿ-ಗವಿಗಳೇ
ಶಿವನ
ಮೊಗದ ಹಿರಿಮೆ ಶಿವಮೊಗ್ಗ
ಭಾರತದ
ಎರಡನೆಯ ಪ್ರಸಿದ್ದ ಜಲಪಾತ ಜೋಗ
ಹೊಯ್ಸಳರು
ಆಳಿದ ನಾಡು ಹಾಸನ
ಬೇಲೂರು,
ಹಳೆಬೀಡು, ಐತಿಹಾಸಿಕ ಶಿಲ್ಪ ಕೆತ್ತನೆಯ ಕುರುಹು
ಸಾವಿರಾರು
ಮಕ್ಕಳಿಗೆ ಶಿಕ್ಷಣ ನೀಡಿದ ತುಮಕೂರು
ಕರ್ನಾಟಕ
ರತ್ನ ಶ್ರೀ ಶಿವಕುಮಾರ ಸ್ವಾಮಿಜಿಯವರು, ನಾಡು ಕಂಡ ನಡೆದಾಡುವ ದೇವರು.
ಕನಕನ
ಕಿಂಡಿಯ ಖ್ಯಾತಿ ಉಡುಪಿ
ಶ್ರೀ
ಕೃಷ್ಣನ ದೇವಸ್ಥಾನ ಪ್ರೇಕ್ಷಣಿಯ ತದ್ರೂಪಿ
ಹಡುಗಿನ
ಬಂದರು, ಕರಾವಳಿಯ ನಗರ ಕಾರವಾರ
ಹಸಿರುಮಯ
ಸಹ್ಯಾದ್ರಿ ಕಾನನ, ಪಶ್ಚಿಮಕ್ಕೆ ನೀಲಿ ಸಾಗರ
ಯಾದವರು
ಆಳಿದ ಗುಡ್ಡಗಳ ಯಾದಗಿರಿ
ಅಧ್ಯಾತ್ಮಗಳ
ತಾಣ, ಮೈಲಾಪುರ ಮಲ್ಲಯ್ಯ, ಮೌನೇಶ್ವರ ಗುಡಿ, ಗುರಿಮಿಟ್ಕಲ್ ಮಾತೆ ಮಾಣಿಕೇಶ್ವರಿ
ದ್ರಾಕ್ಷಿ,
ಕಾಳು, ರೇಷ್ಮೆ ಬೆಳೆವ ಚಿಕ್ಕಬಳ್ಳಾಪುರ
ಆಧುನಿಕ
ಜಗದಲಿ ಆಗ ಹೊರಟಿಹುದು ಬೆಂಗಳೂರಿನ ಅಂಗ
ಕರುನಾಡು
ಅಡಿಯಿಂದ ಮುಡಿವರೆಗೂ ಸಮೃದ್ಧಿಯ ಬೀಡು
ಇಲ್ಲಿ
ಹುಟ್ಟಿದ ಜನರ ಜೀವನವು., ಸುಗಮ ಸಂಗೀತದ ಹಾಡು !!
ಹಚ್ಚು ಬಾರೋ ದೀಪವ
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....
ಗುಡಿಸಿ
ಮನೆಯ, ಮನೆ ಅಂಗಳವ
ಶುಚಿಗೊಳಿಸಿ
ಗೋಡೆಯ,
ಸುಣ್ಣ
ಬಣ್ಣವ ಸಾರಿಸು ಬಾರೋ...
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....!
ತಾಂಬ್ರದ
ಬಿಂದಿಗೆಯ ಬೆಳಗಿ
ಮಾಲಿಂಗನ-ಅಮೃತ
ಬಳ್ಳಿಯ ಸುತ್ತಿ
ಅರಿಶಿಣ
ಕುಂಕುಮವ ಹಚ್ಚಿ ನೀರನು ತುಂಬಿ...
ಜಗಲಿಯ
ಮೇಲೆ ಬೆಳ್ಳಿ ದೀಪ
ಕಿಟಕಿಯ
ಅಡಿಯಲ್ಲಿ ಹಣತೆಯ ದೀಪ
ತುಳಸಿಯ
ಗೂಡಿಗೊಂದು ಹಿತ್ತಾಳೆಯ ದೀಪ...
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....!
ಮನೆಯ
ಹೆಬ್ಬಾಗಿಲಿಗೆ ತೋರಣ ಕಟ್ಟಿ
ಚೆಂಡು
ಹೂವಿನ ಮಾಲೆ ತೊಡಿಸಿ
ಬಾಗಿಲ
ಇಬ್ಬದಿಗೆ ಪಾಂಡವರ ಕೂಡಿಸಿ.....
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....!
ಮಕ್ಕಳು
ನಲಿದಾರು ಹೊಸ ಬಟ್ಟೆಯ ತೊಟ್ಟು
ಸಂತಸದಿ
ಕುಣಿದಾರು ಸುಚಂದ್ರಿ ಕಡ್ಡಿ, ಪಟಾಕಿ ಸುಟ್ಟು
ಚಕ್ರದ
ಮದ್ದಿಗೆ ಮನೆ ಮುಂದೆ ರಂಗೋಲಿ....
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....!
ಬಡವರ
ಪಾಲಿನ ಮಣ್ಣಿನ ಹಣತೆ
ಸಿರಿವಂತರ
ಅಂತಸ್ಠಿನ ಬಂಗಾರದ ಬೆಳಕೆ..
ಮನೆಮನಗಳ
ಬೆಳಗುವ ದೀಪಗಳ.....
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....!
ದೀಪಗಳ
ಹಬ್ಬವೇ ಬಲು ಸೊಗಸ್ಸು
ದೀಪಾವಳಿಂದಲೇ
ಹೆಚ್ಚಿಸುವುದು ಹುಮ್ಮಸ್ಸು
ಬೆಳಗುತಿರಲಿ
ದೀಪಗಳು ಹೆಚ್ಚಿಸುತ್ತಾ ವರ್ಚಸ್ಸು.....
ಹಚ್ಚು
ಬಾರೋ ದೀಪವ, ಹಚ್ಚು ಬಾರೋ....!!
ಮನುಷತ್ವ
ಗುಡಿ ಕಟ್ಟಿದರೂ
ಮಸೀದಿ ಕಟ್ಟಿದರೂ
ಇಲ್ಲಾ,
ಚರ್ಚ್ಗಳೇ ಕಟ್ಟಿದರೂ
ಅಲ್ಲಿ ಯಾವುದೇ ದೇವರು ಬಂದು ನೆಲೆಸುವುದಿಲ್ಲ...!
ಮನುಷ್ಯನಿಗೆ,
ಮನುಷತ್ವದ ಬೆಲೆ ತಿಳಿದಾಗಲೇ.....,
ಎಲ್ಲರಲ್ಲೂ ದೇವರು ಕಾಣುತ್ತಾನೆ....!!
ಸ್ವಲ್ಪ ಯೋಚಿಸಿ ನೋಡಿ.......................................... !!
ಮಸೀದಿ ಕಟ್ಟಿದರೂ
ಇಲ್ಲಾ,
ಚರ್ಚ್ಗಳೇ ಕಟ್ಟಿದರೂ
ಅಲ್ಲಿ ಯಾವುದೇ ದೇವರು ಬಂದು ನೆಲೆಸುವುದಿಲ್ಲ...!
ಮನುಷ್ಯನಿಗೆ,
ಮನುಷತ್ವದ ಬೆಲೆ ತಿಳಿದಾಗಲೇ.....,
ಎಲ್ಲರಲ್ಲೂ ದೇವರು ಕಾಣುತ್ತಾನೆ....!!
ಸ್ವಲ್ಪ ಯೋಚಿಸಿ ನೋಡಿ.......................................... !!
Monday, November 11, 2019
ಹಿಂದುಗಳು ನಾವು...!!
ಗುಡಿಗಳ
ಕಟ್ಟಿ
ಭಕ್ತಿ
ತೋರುವೆವು
ಹಾಲೆರೆದು
ಪೂಜಿಪೆವು
ಹೂವು
ಹಣ್ಣು ಕಾಯಿ
ಅರಿಶಿಣ,ಕುಂಕುಮ,ವಿಭೂತಿ
ಕರ್ಪುರ,ಧೂಪ,ಊದಬತ್ತಿ
ಧಗ ಧಗನೆ
ಹೊಗೆ ಹತ್ತಿ
ಸ್ವರ್ಗ
ಲೋಕ ಕಂಡಂತೆ..!
ನಾವು
ಉತ್ತಮರು...ನಾವು ಸರ್ವೋತ್ತಮರು...ಹಿಂದುಗಳು ನಾವು...!!
ಪೂಜಿಸಿದ
ದೇವರು
ಅರಳಿ
ಕಟ್ಟೆಯೇ ಸೂರು
ಮನೆಯಲ್ಲಿ
ರಾರಾಜಿಸಿದ ದೇವರು
ಬೀದಿ
ಕಸದಲ್ಲಿ, ರಸ್ತೆ ಪಾಲು
ಯಾರಿಗೆ
ಹರಸಿದರೇನು...
ಯಾರದೋ
ಕಷ್ಟಕ್ಕಾದರೇನು...
ದೀಪ ಬೆಳಗಿದವನು
ಕೂಡಾ...
ಇಂದು
ಕತ್ತಲಲ್ಲಿ ಚೆಲ್ಲಿಹನು...
ಯಾರವರು...ಯಾರವರು....??
ನಾವು
ಉತ್ತಮರು...ನಾವು ಸರ್ವೋತ್ತಮರು...ಹಿಂದುಗಳು ನಾವು...!!
Tuesday, October 08, 2019
ಅತಿವೃಷ್ಟಿ
ಮತ್ತೆ ಶುರು..,
ಆ ವರುಣನ ಆರ್ಭಟ !
ತಪ್ಪುತ್ತಿಲ್ಲ ಇನ್ನೂ..,
ಸಂತ್ರಸ್ತರ ಸಂಕಟ !
ಭಯದಿಂದಲೇ..,
ಅನುದಿನವೂ ಬದುಕು !
ಒಪ್ಪತ್ತನ ಗಂಜಿಗೂ..,
ಕಾಣದ ದಿಕ್ಕು !
ಅತಿವೃಷ್ಟಿಗೆ..,
ಮನೆ ಕೊಚ್ಚಿ ಹೋಗಿದೆ !
ಸೂರು ಇಲ್ಲದೇ..,
ಜೀವಗಳು ನಲುಗಿವೆ !
ಮಳೆ ನಿಲ್ಲುವ..,
ಸೂಚನೆಯೇ ಇಲ್ಲ !
ಕಾಪಾಡುವ ಪರಿ..,
ಯಾವ ದೇವರು ಬಲ್ಲ ??
ಸಂತ್ರಸ್ತರ ಪಾಡು...,
ಹೇಳ ತೀರದ್ದು !
ದಾಟಬೇಕಿದೆ ಅವರು..., ಸಮಸ್ಯೆಗಳ ಸರಹದ್ದು...!!!
----ಸುನಿಲ್ ಅಗಡಿ----
ಆ ವರುಣನ ಆರ್ಭಟ !
ತಪ್ಪುತ್ತಿಲ್ಲ ಇನ್ನೂ..,
ಸಂತ್ರಸ್ತರ ಸಂಕಟ !
ಭಯದಿಂದಲೇ..,
ಅನುದಿನವೂ ಬದುಕು !
ಒಪ್ಪತ್ತನ ಗಂಜಿಗೂ..,
ಕಾಣದ ದಿಕ್ಕು !
ಅತಿವೃಷ್ಟಿಗೆ..,
ಮನೆ ಕೊಚ್ಚಿ ಹೋಗಿದೆ !
ಸೂರು ಇಲ್ಲದೇ..,
ಜೀವಗಳು ನಲುಗಿವೆ !
ಮಳೆ ನಿಲ್ಲುವ..,
ಸೂಚನೆಯೇ ಇಲ್ಲ !
ಕಾಪಾಡುವ ಪರಿ..,
ಯಾವ ದೇವರು ಬಲ್ಲ ??
ಸಂತ್ರಸ್ತರ ಪಾಡು...,
ಹೇಳ ತೀರದ್ದು !
ದಾಟಬೇಕಿದೆ ಅವರು..., ಸಮಸ್ಯೆಗಳ ಸರಹದ್ದು...!!!
----ಸುನಿಲ್ ಅಗಡಿ----
Tuesday, September 24, 2019
ನನ್ನ ಅಜ್ವ - ನವಲೂರು ಶಾಲೆ ಮಾಸ್ತರ್ : ದಿನಚರಿ ೨
ಅವತ್ತು ಮಂಗ್ಳಾರ ( ಮಂಗಳವಾರ- Tuesday)..., ಮಂಗ್ಳಾರ ಅಂದ್ರ ಸಂತಿ ದಿನ. ನವಲೂರಿಗೆ ಬರೋ ಬಸ್ಸು ಎಲ್ಲಾ ತುಂಬಿ ತುಳ್ಕಾಕತ್ತಿರ್ತಾವ. ಎಲ್ಲಾ ಊರ ಮಂದಿ ಧಾರವಾಡಕ್ಕ ಹೋಗಿ ಸಂತಿ ಮಾಡಿಕೊಂಡು ಬರೋರು.
ಅದರಾಗ ಅವತ್ತ ತಾರಿಖು ೨ , ನನ್ನ ಅಜ್ಜಾಗ ಪೆನ್ಷನ್ ದಿನ. ನಡಿಲೇ ಸುನಿ ಇವತ್ತ ಧಾಡ್ಕ (ಧಾರವಾಡಕ್ಕ - ಆಡು ಭಾಷೆ ) ಹೋಗುಣು ಅಂದ್ರು ನನ್ನ ಅಜ್ಜಾ.
ಅಬ್ಬಾ ಇಂದ ಧಾಡ್ದಾಗ ಚೈನಿ ಹೊಡಿಯುದು ಅನ್ನೊ ಖುಶಿ. ಜಳಕಾ ಮಾಡಿ, ನಾಷ್ಟಾ ಮಾಡಿ ನಾ ಲಗೂನ ತೈಯ್ಯಾರ್ ಆಗಿ ಕುಂತೆ. ನಮ್ಮ ನವಲೂರಿಗೆ ಅರ್ಧಾ ತಾಸಿಗೆ ಒಮ್ಮೆ ಬಸ್ಸು ಬರ್ತದ. ನಾ ತೈಯಾರ್ ಆಗಿದ್ದಾಗ ಒಂಬತ್ತು ಒರಿ, ಮನಿ ಅಟ್ಟದಾಗಿಂದ ನೋಡಿದೆ ಆಗಲೇ ಬಸ್ಸು ಬಂದು ಹೋಗ್ಯದ ಅಂತ ತಿಳಿತು. ಇನ್ನ ಮುಂದಿನ ಬಸ್ಸು ೧೦ ಕ್ಕ.
ಅಜ್ಜಾ ತನ್ನ ಕೈಯ್ಯಾಗ ಪರ್ಸ್ ತೊಗೊಂಡು ಬಗಲಾಗ ಹಿಡಕೊಂಡಾ..,ನಾನು ಕೈಚೀಲನ್ ಕೈಯಾಗ ಸುತ್ತಿಕೊಂಡು ಅಜ್ಜಾನ ಜೋಡಿ ಹೊರಟೆ. ನಾವು ನಾಕ್ ಹೆಜ್ಜಿ ಇಟ್ಟಿರಲಿಲ್ಲಾ.., ಶೆಟ್ಟರ ಅಂಗಡಿ ಮುಂದ ಹೊರಟಿದ್ದವಿ.., ಶೆಟ್ಟರು....ನಮಸ್ಕಾರ್ ರೀ ಮಾಸ್ತರ್ , ಸಂತಿ ಮಾಡಾಕ ಧಾಡ್ಕ ಹೊಂಟ್ರಿ ? ಅಂದ್ರು, ನಮಸ್ಕಾರ್ ..., ಹೌದು, ಹಂಗ ಬ್ಯಾಂಕಿಗೆ ಹೋಗಿ, ಸಂತಿ ಮಾಡ್ಕೊಂಡು ಬರ್ತೀನಿಪಾ. ಅಯ್ಯೊ ಮಾಸ್ತರ ಈಗ ಒಂಬತ್ತರ ಬಸ್ಸ್ ಹೋತಲ್ರಿ...ಅಂದರು. ೧೦ ರ ಬಸ್ಸಿಗೆ ಹೋದ್ರಾತು ಬಿಡ್ಪಾ.... ಅಂದ್ರು. ಅರ್ಧಾ ತಾಸ್ ಕಳದ್ ಮ್ಯಾಗ ಸಿಬಿಟಿ ನವಲೂರು ಬಸ್ಸು ಬಂತು.
ಹಳ್ಳಿ ಬಸ್ಸ್ಟಾಂಡ್ನ್ಯಾಗ ಕಂಡಪಟ್ಟೆ ಜನ..., ಗದ್ಲದಾಗ ಬಸ್ಸು ಹತ್ತೋದ ಕಷ್ಟ ಆತು, ಹೆಂಗೋ ಮಾಡಿ ಬಸ್ಸು ಹತ್ತಿದ್ವಿ. ಡೈವರ್..., ನಮಸ್ಕಾರ ರೀ ಮಾಸ್ತರ್ ದಾಡ್ಕ ಹೊಂಟ್ರಿ...?? ಹುನ್ಪಾ..., ತಗೋ ಸ್ವಲ್ಪ ಮೊಮ್ಮಗಂಗ ನಿನ್ನ ಸೀಟಿನ ಬಾಜುಕ ನಿಂದ್ರಸ್ಕೋ..., ಇಲ್ಲೇ ಬರ್ರಿ ಮಾಸ್ತರ... ಇದರ ಮ್ಯಾಲ ಕುಂಡರ್ರೀ ಅಂದ ಗಾಡಿದ ಬಾನೆಟ್ ಮ್ಯಾಗ ಕೂಡಸಿದಾ ಡ್ರಿವೆರ್. ಅಂತು ಇಂತು ಬಸ್ಸು ಧಾಡ್ಕಡೆ ಹೊಂಟತು.
ಧಾರ್ವಾಡ ಕೋರ್ಟ ಸರ್ಕಲ್ ನ್ಯಾಗ ಇಳದ ಬ್ಯಾಂಕಿನ ಕಡೆ ನಡಕೊಂಡು ಹೊರಟವಿ. ನನ್ನ ತಲ್ಯಾಗ ಮತ್ತ ಅದೇ ಪ್ರಶ್ನೇ ಬಸ್ಸು ಡ್ರೈವರ್, ಕಂಡೆಕ್ಟರ್, ಹೋದ್ ಹೋದ್ ಕಡೆ ಎಲ್ಲಾರೂ ನಮಸ್ಕಾರ ಮಾಡವ್ರು, ಏನ್ಪಾ ನನ್ನ ಅಜ್ಜಾ ಭಾರಿ ಪೇಮಸ್ ..! ಎಲ್ಲಾ ಅಜ್ಜಾ ಅಜ್ಜಿಗಳು ಬ್ಯಾಂಕನ್ಯಾಗ ಪೆಸ್ಷನ್ ಸಮಂಧ ಕಾಯಾಕತ್ತಿದ್ದ್ರು. ಅಯ್ಯೊ ಸುನಿ, ಏನ್ಲೇ ಪಾ ಭಾರಿ ಗದ್ಲಾ ಐತಿ...ತಡಿ ಬ್ಯಾಂಕ್ ಮ್ಯಾನೇಜರ್ ನೋಡಿಕೊಂಡು ಬರೂಣು ಅಂತ ಹೇಳಿ ಅವರ ಕೊಟ್ಟಡಿಗೆ ಹೋದವಿ. ಬರ್ರಿ ಮಾಸ್ತರ್ ಕೂಡ್ರಿ..., ಏನು ಮೊಮ್ಮಗಾನೂ ಕರ್ಕೊಂಡು ಬಂದ್ರಿ.? ಕುಶಲೋಪರಿ ವಿನಿಮಯ ಆಯ್ತು. ಸ್ವಲ್ಪ ರೊಕ್ಕಾ ತಗಸಬೇಕಿತ್ತು...ಹೊರಗ ಗದ್ಲ ಬಾಹಳ ಐತಿ...ಹ್ಮ್ ಹೌದ್ರಿ ಸಂತಿ ಇವತ್ತ ಮತ್ತ ತಿಂಗಳ ಕೊನೆ ಅದಕ್ಕ..., ನೀವು ಇಲ್ಲೇ ಕೂಡ್ರಿ.., ಹಂಗ ನಿಮ್ಮ ಪಾಸ್ಬುಕ್ ಕೊಡ್ರಿ ಅಂದ್ರು..ಅಜ್ಜಾ ಕೊಟ್ಟಾ. ಒಂದು ಹಣ ತೆಗಿಯೋ ಚೀಟಿ ಬರೆದುಕೊಟ್ಟು ಕಳಿಸಿದರು. ಸ್ವಲ್ಪ ಹೊತ್ತಿನ್ಯಾಗ ಮ್ಯಾನೇಜರು ರೊಕ್ಕಾ ತಂದು ಕೊಟ್ಟರು.
ಮುಂದ ಮಾರ್ಕೇಟ್ ಗೆ ಹೊಂಟ್ವಿ..., ಎಪ್ಪಾ ಸುನಿ ಬಹಳ ಬಿಸಿಲ ಐತಿ, ತಲಿ ಸುಡಾಕತ್ತದ.., ಬಾ ಇಲ್ಲೇ ಕಬ್ಬಿನ ಹಾಲು ಕುಡಿದು ಹೋಗೂಣು ಅಂದ್ರು. ಆಹಾ...!! ಏನ್ ರುಚಿಯಿತ್ತು ಅಂತೀರಿ...?!
ಮತ್ತ ಸಂತಿ ಪ್ಯಾಟ್ಯಾಗ ತರ್ಕಾರಿ ಹಣ್ಣು ಹಂಪ್ಲಾ ತೊಗೊಂಡು ಸಿಬಿಟಿಗೆ ಬಂದಾಗ ಮಧ್ಯಾನ ಎರಡು ಘಂಟೆ ಆಗಿತ್ತು. ಊಟದ ಹೊತ್ತು ಆಗಿದ್ದರಿಂದ ಬಸ್ಸು ಅಷ್ಟೇನು ಗದ್ಲ ಇರಲಿಲ್ಲ. ಮನಿಗೆ ಬಂದಾಗ ಮೂರ್ ಆಗಿತ್ತು.. ಊಟಾ ಮಾಡಿದವರ ಗಡತ್ತಾಗಿ ನಿದ್ದಿ ಹೊಡದ್ವಿ ನೋಡ್ರಿ....! ಸಂತಿ ದಿನಾ ಅಂದ್ರ ಹಿಂಗ ಅಡ್ಯಾಡಿ ಅಡ್ಯಾಡಿ ಸುಸ್ತಾಗಿ ಮನಿಗೆ ಬರೂದು, ಬಂದು ಊಟಾ ಮಾಡಿ ಮಕ್ಕೋಳುದು.
ಮತ್ತೊಂದು ದಿನಚರಿದೊಂದಿಗೆ ಭೇಟಿ ಆಗೋಣ....!! :)
ವ್ಯಥೆ
ಹಣದ ಮೇಲಿನ ಒಲವು
ಅಧಿಕಾರದ ಅಮಲು !
ಸುಳ್ಳು ಕಂತೆಗಳ ಸಾಲು
ಹುಸಿ ಪ್ರಚಾರದ ತೆವಲು !

ಅಂಧ ಭಕ್ತಿಗೆ ಶರಣು
ಸತ್ಯವ ಅರಿತರೂ ಕುರುಡು !
ಬಡಾಯಿ ಕೊಚ್ಚಿಕೊಳ್ಳುವ ಬಾಯಿ
ಕಳ್ಳನ ಸೋಗು ಮಹಾಮಾಯಿ !
ಶೋಕಿ ಜೀವನದ ಮಡುವು
ಪೂಜೆಗೆ ಕುಳಿತರೂ ಕುಹಕು !
ಪೊಳ್ಳು ಡೋಂಗಿಯ ಸಬೂಬು
ದೇಶದ ಮಾನ ಜಗಮುಂದೆ ಹರಾಜು !
ಸಮಸ್ಯೆಯಲ್ಲೇ ಮುಳುಗಿದರೂ ಬಡಪಾಯಿ
ಎಲ್ಲಾ ಸರಿಯಿದೆ ಅನ್ನುವ ಜನ ದ್ರೋಹಿ !!
ಅಧಿಕಾರದ ಅಮಲು !
ಸುಳ್ಳು ಕಂತೆಗಳ ಸಾಲು
ಹುಸಿ ಪ್ರಚಾರದ ತೆವಲು !

ಅಂಧ ಭಕ್ತಿಗೆ ಶರಣು
ಸತ್ಯವ ಅರಿತರೂ ಕುರುಡು !
ಬಡಾಯಿ ಕೊಚ್ಚಿಕೊಳ್ಳುವ ಬಾಯಿ
ಕಳ್ಳನ ಸೋಗು ಮಹಾಮಾಯಿ !
ಶೋಕಿ ಜೀವನದ ಮಡುವು
ಪೂಜೆಗೆ ಕುಳಿತರೂ ಕುಹಕು !
ಪೊಳ್ಳು ಡೋಂಗಿಯ ಸಬೂಬು
ದೇಶದ ಮಾನ ಜಗಮುಂದೆ ಹರಾಜು !
ಸಮಸ್ಯೆಯಲ್ಲೇ ಮುಳುಗಿದರೂ ಬಡಪಾಯಿ
ಎಲ್ಲಾ ಸರಿಯಿದೆ ಅನ್ನುವ ಜನ ದ್ರೋಹಿ !!
Tuesday, September 17, 2019
ಬರ್ರಿ ಬರ್ರಿ ಚಾ ಕುಡ್ಯಾಕ
ಬರ್ರಿ ಬರ್ರಿ
ಚಾ ಕುಡ್ಯಾಕ
ಕುಡ್ಕೋತ ಕುಡ್ಕೋತ
ಸ್ವಲ್ಪ ಕಷ್ಟ ಸುಕಾನು ಮಾತಾಡಾಕ್
ಮಳಿ ಇಲ್ಲಾ ಬೆಳಿ ಇಲ್ಲಾ
ಅನ್ನೋ ಕಾಲೊಂದಿತ್ತು
ಕೆಟ್ಟ ಮಳಿ ಬಂದ
ಮನಸ್ಯಾರು ಮನಿ ಮಠ ಕಳದಿತ್ತು
ಒಪತ್ತಿನ ಊಟಕ್ಕ
ಹೊಟ್ಟೀಗೆ ಲಾಟ್ರಿ ಆಗೇತಿ
ಅರ್ಧಾ ಪಾಕೇಟ್ ಬಿಸಿಕಿಟ್ ತಿಂದ
ದಿನಾ ಪೂರಾ ಕಳದೈತಿ
ಇರಾಕ ಸೂರಿಲ್ಲ
ಉಡಾಕ್ ಬಟ್ಟಿಲ್ಲ
ಸರ್ಕಾರದವರು ಇದ್ದರೂ ಸತ್ತಂಗ ಎಲ್ಲಾ
ಚಾ ಕುಡುದ ಮರೀಯೂಣು ಬರ್ರಿ
ಯಾರ್ ಕೂಸ್ ಸತ್ತರೇನು
ಯಾವ ರೈತ ಉರಲ ಹಾಕ್ಕೊಂಡ್ರೇನ್
ನಮ್ಮ ಪಕ್ಷದವರ್ ನಮಗ ಹೆಚ್ಚ ಅಲ್ಲವೇನ್
ಬರ್ರಿ ಚಾ ಕುಡಿಯೋಣ ಯಾರ್ಗೇನಾದರೇನ್
Picture Courtesy :Karnataka TV9 NEWS

ಚಾ ಕುಡ್ಯಾಕ
ಕುಡ್ಕೋತ ಕುಡ್ಕೋತ
ಸ್ವಲ್ಪ ಕಷ್ಟ ಸುಕಾನು ಮಾತಾಡಾಕ್
ಮಳಿ ಇಲ್ಲಾ ಬೆಳಿ ಇಲ್ಲಾ
ಅನ್ನೋ ಕಾಲೊಂದಿತ್ತು
ಕೆಟ್ಟ ಮಳಿ ಬಂದ
ಮನಸ್ಯಾರು ಮನಿ ಮಠ ಕಳದಿತ್ತು
ಒಪತ್ತಿನ ಊಟಕ್ಕ
ಹೊಟ್ಟೀಗೆ ಲಾಟ್ರಿ ಆಗೇತಿ
ಅರ್ಧಾ ಪಾಕೇಟ್ ಬಿಸಿಕಿಟ್ ತಿಂದ
ದಿನಾ ಪೂರಾ ಕಳದೈತಿ
ಇರಾಕ ಸೂರಿಲ್ಲ
ಉಡಾಕ್ ಬಟ್ಟಿಲ್ಲ
ಸರ್ಕಾರದವರು ಇದ್ದರೂ ಸತ್ತಂಗ ಎಲ್ಲಾ
ಚಾ ಕುಡುದ ಮರೀಯೂಣು ಬರ್ರಿ
ಯಾರ್ ಕೂಸ್ ಸತ್ತರೇನು
ಯಾವ ರೈತ ಉರಲ ಹಾಕ್ಕೊಂಡ್ರೇನ್
ನಮ್ಮ ಪಕ್ಷದವರ್ ನಮಗ ಹೆಚ್ಚ ಅಲ್ಲವೇನ್
ಬರ್ರಿ ಚಾ ಕುಡಿಯೋಣ ಯಾರ್ಗೇನಾದರೇನ್
Picture Courtesy :Karnataka TV9 NEWS

Monday, September 09, 2019
Friday, September 06, 2019
ಕೂಸು
ಹುಟ್ಟಿದಂದು ಪ್ರೀತಿಯ ಹುಲಿ
ಊರಲ್ಲೆಲ್ಲಾ ಭಾರಿ ಮಳಿ
ತುಂಬಿದ್ದವು ಎಲ್ಲಾ ಹೊಳಿ
ಬೆಸೆದವು ಹೊಸ ಸಂಬಂಧ ಸರ್ಪಳಿ ||
ಹಾಲು ಗಲ್ಲದ ಮುದ್ದು ಕಂದ
ಪುಟ್ಟ ಬಾಯ್ತೆರೆದ ಅಳುವೇ ಚಂದ
ಪಿಳಿ ಪಿಳಿ ಬಿಡುವ ಕಣ್ಣನಿಂದ
ಜಗವ ಕಾಣುವ ತವಕದಿ ಮಿಂದ ||
ಕ್ಷಣದಿ ಕಂಡ ಮುಖದ ಹೊಳಪು
ಎತ್ತಿಕೊಂಡೊಡನೆ ಮೈ ನುಣುಪು
ಮುಷ್ಟಿ ತೆರೆದ ಉದ್ದುದ್ದ ಬೆರಳು
ಹೊರಳಾಡಿಸಿ ನೋಡಿದ ಕೊರಳು ||
ಅಜ್ಜಿ ಅಜ್ಜರ ತ್ರಿತಿಯ ಮೊಮ್ಮಗು
ದೊಡ್ಡ ಅಜ್ಜಿ ಕಂಡ ಮರಿಮೊಮ್ಮಗು
ಎರಡೆರೆಡು ಚಿಕ್ಕಪ್ಪರು ಮತ್ತೀರ್ವ ಚಿಕ್ಕಂಮ್ಮಂದಿರು
ಆಡಲು ಅವನಿಗೆ ಅಕ್ಕ ಅಣ್ಣಂದಿರು ||
ಹುಟ್ಟು ಹಠವಾದಿ
ಚೂಟಿ ಚಿತ್ತದಿ
ಕಿರಿ ಕಿರಿ ಮಾಡದ ಕೂಸು
ಮೊಗದಿ ಎಲ್ಲರ ನಗುವ ಹಾಸು ||
ಊರಲ್ಲೆಲ್ಲಾ ಭಾರಿ ಮಳಿ
ತುಂಬಿದ್ದವು ಎಲ್ಲಾ ಹೊಳಿ
ಬೆಸೆದವು ಹೊಸ ಸಂಬಂಧ ಸರ್ಪಳಿ ||
ಹಾಲು ಗಲ್ಲದ ಮುದ್ದು ಕಂದ
ಪುಟ್ಟ ಬಾಯ್ತೆರೆದ ಅಳುವೇ ಚಂದ
ಪಿಳಿ ಪಿಳಿ ಬಿಡುವ ಕಣ್ಣನಿಂದ
ಜಗವ ಕಾಣುವ ತವಕದಿ ಮಿಂದ ||
ಕ್ಷಣದಿ ಕಂಡ ಮುಖದ ಹೊಳಪು
ಎತ್ತಿಕೊಂಡೊಡನೆ ಮೈ ನುಣುಪು
ಮುಷ್ಟಿ ತೆರೆದ ಉದ್ದುದ್ದ ಬೆರಳು
ಹೊರಳಾಡಿಸಿ ನೋಡಿದ ಕೊರಳು ||
ಅಜ್ಜಿ ಅಜ್ಜರ ತ್ರಿತಿಯ ಮೊಮ್ಮಗು
ದೊಡ್ಡ ಅಜ್ಜಿ ಕಂಡ ಮರಿಮೊಮ್ಮಗು
ಎರಡೆರೆಡು ಚಿಕ್ಕಪ್ಪರು ಮತ್ತೀರ್ವ ಚಿಕ್ಕಂಮ್ಮಂದಿರು
ಆಡಲು ಅವನಿಗೆ ಅಕ್ಕ ಅಣ್ಣಂದಿರು ||
ಹುಟ್ಟು ಹಠವಾದಿ
ಚೂಟಿ ಚಿತ್ತದಿ
ಕಿರಿ ಕಿರಿ ಮಾಡದ ಕೂಸು
ಮೊಗದಿ ಎಲ್ಲರ ನಗುವ ಹಾಸು ||
Saturday, August 03, 2019
ನಾಗರಪಂಚಮಿ
ಬಾರೋ ಬಾರೋ ನಾಗಪ್ಪ
ಪಂಚಮಿಯಂದು ನೆನೆದೆವು ನಿನಗಪ್ಪ
ಹಾಲನು ಎರೆವೆನು ಬಾರಪ್ಪ
ರೈತನ ಗೆಳೆಯನು ನೀನಪ್ಪ
ಇಲಿಗಳ ಸಂಹರಿಸು ಬಾರಪ್ಪ
ಬೆಳೆಯನು ರಕ್ಷಿಸು ನಮ್ಮಪ್ಪ
ಹೆಂಗಳೆಯರು ಪೂಜಿಸಲು ಕಾದಿಹರಪ್ಪ
ಅರಳಿ ಕಡಬನು ನೈವೇದ್ಯ ತಂದಿಹರಪ್ಪ
ಮುತ್ತೈದೆಯರಿಗೆ ಆಶಿರ್ವದಿಸಲು ಬಾರಪ್ಪ
ತಂಗಿ ಅಣ್ಣನ ಹಾದಿ ಕಾದಿಹಳಪ್ಪ
ಪಂಚಮಿಗೆ ಕರೆಯಲು ಬರುತಿಹನಪ್ಪ
ಹರಸಿ ಅಣ್ಣ ತಂಗಿಯ ಸಂಬಂಧವ ಕಾಪಾಡಪ್ಪ
ಹುತ್ತಕೆ ಪೂಜೆಯ ಸಲ್ಲಿಸುವೆನಪ್ಪ
ಮಣ್ಣಿನಲ್ಲಿ ಅವತರಿಸು ಬಾರಪ್ಪ
ಮನುಕುಲವ ಕಾಪಾಡೋ ನನ್ನಪ್ಪ
---ಭಾವಪ್ರಿಯ---
ಪಂಚಮಿಯಂದು ನೆನೆದೆವು ನಿನಗಪ್ಪ
ಹಾಲನು ಎರೆವೆನು ಬಾರಪ್ಪ
ರೈತನ ಗೆಳೆಯನು ನೀನಪ್ಪ
ಇಲಿಗಳ ಸಂಹರಿಸು ಬಾರಪ್ಪ
ಬೆಳೆಯನು ರಕ್ಷಿಸು ನಮ್ಮಪ್ಪಹೆಂಗಳೆಯರು ಪೂಜಿಸಲು ಕಾದಿಹರಪ್ಪ
ಅರಳಿ ಕಡಬನು ನೈವೇದ್ಯ ತಂದಿಹರಪ್ಪ
ಮುತ್ತೈದೆಯರಿಗೆ ಆಶಿರ್ವದಿಸಲು ಬಾರಪ್ಪ
ತಂಗಿ ಅಣ್ಣನ ಹಾದಿ ಕಾದಿಹಳಪ್ಪ
ಪಂಚಮಿಗೆ ಕರೆಯಲು ಬರುತಿಹನಪ್ಪ
ಹರಸಿ ಅಣ್ಣ ತಂಗಿಯ ಸಂಬಂಧವ ಕಾಪಾಡಪ್ಪ
ಹುತ್ತಕೆ ಪೂಜೆಯ ಸಲ್ಲಿಸುವೆನಪ್ಪ
ಮಣ್ಣಿನಲ್ಲಿ ಅವತರಿಸು ಬಾರಪ್ಪ
ಮನುಕುಲವ ಕಾಪಾಡೋ ನನ್ನಪ್ಪ
---ಭಾವಪ್ರಿಯ---
Tuesday, July 30, 2019
ಸಿಡಿದೆದ್ದ ಪ್ರಜೆ
ಸಾಕು ಸಾಕಾಯಿತು
ಈ
ರಾಜಕೀಯ ಡೊಂಬರಾಟ
ಪಕ್ಷ ಪಕ್ಷದ ನಡುವೆ
ಆ
ಕುತಂತ್ರ ಕಾದಾಟ
ಒಳಿತಿಲ್ಲ, ಅಳಿವಿಲ್ಲ
ಇವರ
ಹುಚ್ಚಾಟಕೆ ಕೊನೆಯಿಲ್ಲ
ಬೇಸತ್ತ ಪ್ರಜೆ
ಬೇಡವಾಗಿದೆ
ಯಾರಿಗೂ ಈ ಸಜೆ
ಬದಲಾವಣೆ ಅವತರಿಸಲಿ
ಪ್ರಜೇಗಳೇ ಪ್ರಭುಗಳಾಗಲಿ
ರಾಜಕೀಯ ನಶಿಸಲಿ, ಪ್ರಜಾಕೀಯ ಪ್ರಜ್ವಲಿಸಲಿ.
ಈ
ರಾಜಕೀಯ ಡೊಂಬರಾಟ
ಪಕ್ಷ ಪಕ್ಷದ ನಡುವೆ
ಆ
ಕುತಂತ್ರ ಕಾದಾಟ
ಒಳಿತಿಲ್ಲ, ಅಳಿವಿಲ್ಲ
ಇವರ
ಹುಚ್ಚಾಟಕೆ ಕೊನೆಯಿಲ್ಲ
ಬೇಸತ್ತ ಪ್ರಜೆ
ಬೇಡವಾಗಿದೆ
ಯಾರಿಗೂ ಈ ಸಜೆ
ಬದಲಾವಣೆ ಅವತರಿಸಲಿ
ಪ್ರಜೇಗಳೇ ಪ್ರಭುಗಳಾಗಲಿ
ರಾಜಕೀಯ ನಶಿಸಲಿ, ಪ್ರಜಾಕೀಯ ಪ್ರಜ್ವಲಿಸಲಿ.
Monday, July 29, 2019
ನನ್ನ ಅಜ್ವ - ನವಲೂರು ಶಾಲೆ ಮಾಸ್ತರ್
ನಮ್ಮ ಅಜ್ಜ ನವಲೂರ ಸಾಲಿ ಮಾಸ್ತರ್. ಅಜ್ಜಾಂದು ನಂದು ಭಾರಿ ನಂಟು. ನನಗ ಸಾಲಿ ಸೂಟಿ ಸುರು ಆತು ಅಂದ್ರ ಮರದಿನಾ ನಾ ಅಜ್ಜಾನ ಊರ ನವಲೂರಿಗೆ ಹೋಗ್ತಿದ್ದೆ. ಅಲ್ಲಿಗೆ ಹೋದ ಮ್ಯಾಲ, ಅವರ ಜೋಡಿನ ಎಲ್ಲಾ, ಆಡುದು, ಓದುದು, ವಾಯುವಿಹಾರಕ್ಕ ಹೋಗುದು, ಉಣ್ಣುದು, ಮಲಗೂದು. ನನ್ನ ಅಜ್ಜ ಲೇ ಸುನಿ, ಬೇಗ ಏಳೋ ಇವತ್ತ ನಾವ್ ಹೊಲದ ಕಡೆ ಹೋಗುಣು ಅಂತ ಕೂಗಿದರೆ ನಂಗ ಎಲ್ಲಿಲದ ಖುಷಿ. ಬಡಾ ಬಡಾನ ಎದ್ದು, ಮುಖ ತೊಳದ, ಜಳಕಾ ಮಾಡಿ ತೈಯಾರ. ಅಜ್ಜಾ ಬೇಗ ನಡಿ ಹೋಗುಣ ಹೊಲಕ್ಕ ಅಂತ ನಾ ಅಂದ್ರ ತಡಿ ಪಾ ನಾಸ್ಟಾ ಮಾಡಿ ಚಾ ಕುಡದ ಹೋಗುಣು ಅಂತಿದ್ದರು. ಸರಿ ಎಲ್ಲಾ ಮುಗಿಸಿ ಅಜ್ಜಾ ಮೊಮ್ಮಗನ ಸವಾರಿ ಹೊರ್ಟರ ಶುರು ನೋಡ್ರಪಾ..., ನಮಸ್ಕಾರೀ ಮಾಸ್ತರ..., ಮುಂಜಾಲೆನೆ ಎಲ್ಲಿಗ ಹೊಂಟ್ರಿ.., ಮೊಮ್ಮಗಾ ಬಂದಾನ ಹಂಗ ಹೊಲದ್ ಕಡೆ ಹೋಗ ಬರ್ತೀನಿ. ಬರ್ರಿ ಬರ್ರಿ ಹೋಗಬರ್ರಿ..ಇನ್ನ ಎರಡು ಹೆಜ್ಜಿ ಇಟ್ಟರಲಿಲ್ಲ ..ಶರಣರೀ ಮಾಸ್ತರ್.., ಚಾಹಾ ಆತರೀ ?? ಅಂತ ಒಬ್ಬ ಅಜ್ಜಿ ಮಾತನಾಡಿಸಿದರು. ಹೂನ್ವಾ...ಈಗ ಇನೈದ ಆತ ನೋಡ, ಸ್ವಲ್ಪ ಹೊಲಕ್ಕ ಹೋಗಬರ್ತೀನಿ..ಅಂದರು. ನವಲೂರು ವ್ಯಾಯಾಮ ಸಾಲಿ ಮುಂದ ಪೈಲ್ವಾನರು ನಮಸ್ಕಾರ ಮಾಸ್ತರ ಅಂದ್ರು...ಓಹೋ ಪೈಲವಾನ ಅರಾಮೇನರ್ಪಾ...? ಎಲ್ಲಾರೂ ವ್ಯಾಯಾಮ ಮುಗಿಸೇ ಕುಂತಿರೇನು ಅಂದ್ರು.. ಹೂನ್ರೀ ಅಂದ್ರು. ಮನಿಯಿಂದ ಅಗಸಿ ದಾಟಿ ಹೊಲದ ರಸ್ತೆ ಹಿಡಿಯು ಮಟ ಇಷ್ಟೊಂದು ಮಂದಿ ನಮ್ಮ ಅಜ್ಜಾಗ ಹೆಂಗ ಗೊತ್ತ ಅದಾರ....? ಅಜ್ಜಾ ನಿಂಗ ಈಸ್ ಮಂದಿ ಹೆಂಗ ಗೊತ್ತ ಅದಾರ...? ನಮ್ಮ ಸಾಲ್ಯಾಗ ಇವರ ಮಕ್ಕಳು ಕಲಿತಾರ, ಇವರು ಸಾಲಿಗೆ ಹಚ್ಚಾಕ ಬರ್ತಾರ ಅದಕ್ಕ ತಿಳಿದಿರ್ತಾರ. ಹಿಂಗ ನಾವು ಹೊಲ ಮುಟ್ಟೋತನಕಾ ಸಿಕ್ಕವರು ಬಹಳ ಮಂದಿ...., ನನ್ನ ಅಜ್ಜಾ ಭಾರಿ ಫೇಮಸ್ ಅಂತ ನನಗ ಆಶ್ಚರ್ಯ ಹಾಗು ಖುಷಿ.
ಮತ್ತೋಂದು ದಿನಚರಿಯೊಂದಿಗೆ ಭೇಟಿಯಾಗೋಣ...
Thursday, July 25, 2019
ನಮ್ಮ ಕನಸ್ಸು
ಒಡಲು ತುಂಬಿ
ಮೂರರಲ್ಲಿ
ಸಂತೋಷ ಹೊಮ್ಮಿ
ಮನಗಳಲ್ಲಿ
ಚಿಗುರಿದೆ ಹೊಸ ಕನಸ್ಸುಗಳು !
ಇನಿಯನ ನೆನಪು
ಎದೆಯ ತುಂಬ
ಬಯಸಿದೆ ಸನಿಹ
ಅನುದಿನ ಅನುಕ್ಷಣ
ಬಣ್ಣ ಬಣ್ಣದ ಚಿತ್ತಾರಗಳು !
ಮಳೆಯ ಹನಿ ಹನಿಯಲ್ಲೂ
ನಲ್ಲನ ಸವಿ ತಂಪು
ಕುಹೂ ಕುಹೂ ಕೂಗಿನಲ್ಲೂ
ಅವನ ಗುಣುಗು
ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು !
ಘರ್ಬದಿ ಆಡುವ
ನವಜಾತಕೆ
ಮೈಯೆಲ್ಲಾ ರೋಮಾಂಚನ
ಅದರ ಒಳ ಜಿಗಿದಾಟಕೆ
ಅವರಂತೆ ಅವನೋ.. ? ನನ್ನಂತೆಯೇ ಅವಳೋ !
ಮಾಸಗಳು ಕಳೆಯುತ್ತ..
ಇಂದಿಗಿಂದು ಒಂಬತ್ತು...
ಘರ್ಬದಿ ಮೊಳಗಿದ ಮೇಳ
ಕೈಗಳಲಿ ಕುಣಿಯುವ ಹೊತ್ತು
ಆರತಿಯೂ ಸರಿಯೇ, ಕೀರತಿಯೂ ಸರಿಯೇ !
ಹರುಷದಿ ಕಾಣುವ
ಜಗವೆಲ್ಲಾ ಹಸಿರು
ಬೆರಳಂಚಿನ ಎಣಿಕೆ
ಆಗಮನಕ್ಕೆ ಕಾಯುತ್ತಿರುವೆ
ಎನ್ನ ತೋಳಲಿ ನಗುವ ಕಂದನಿಗೆ !
ಮೂರರಲ್ಲಿ
ಸಂತೋಷ ಹೊಮ್ಮಿ
ಮನಗಳಲ್ಲಿ
ಚಿಗುರಿದೆ ಹೊಸ ಕನಸ್ಸುಗಳು !
ಇನಿಯನ ನೆನಪುಎದೆಯ ತುಂಬ
ಬಯಸಿದೆ ಸನಿಹ
ಅನುದಿನ ಅನುಕ್ಷಣ
ಬಣ್ಣ ಬಣ್ಣದ ಚಿತ್ತಾರಗಳು !
ಮಳೆಯ ಹನಿ ಹನಿಯಲ್ಲೂ
ನಲ್ಲನ ಸವಿ ತಂಪು
ಕುಹೂ ಕುಹೂ ಕೂಗಿನಲ್ಲೂ
ಅವನ ಗುಣುಗು
ತಣ್ಣನೆ ಗಾಳಿಯಲಿ ಸಿಹಿ ಅಪ್ಪುಗೆಗಳು !
ಘರ್ಬದಿ ಆಡುವ
ನವಜಾತಕೆ
ಮೈಯೆಲ್ಲಾ ರೋಮಾಂಚನ
ಅದರ ಒಳ ಜಿಗಿದಾಟಕೆ
ಅವರಂತೆ ಅವನೋ.. ? ನನ್ನಂತೆಯೇ ಅವಳೋ !
ಮಾಸಗಳು ಕಳೆಯುತ್ತ..
ಇಂದಿಗಿಂದು ಒಂಬತ್ತು...
ಘರ್ಬದಿ ಮೊಳಗಿದ ಮೇಳ
ಕೈಗಳಲಿ ಕುಣಿಯುವ ಹೊತ್ತು
ಆರತಿಯೂ ಸರಿಯೇ, ಕೀರತಿಯೂ ಸರಿಯೇ !
ಹರುಷದಿ ಕಾಣುವ
ಜಗವೆಲ್ಲಾ ಹಸಿರು
ಬೆರಳಂಚಿನ ಎಣಿಕೆ
ಆಗಮನಕ್ಕೆ ಕಾಯುತ್ತಿರುವೆ
ಎನ್ನ ತೋಳಲಿ ನಗುವ ಕಂದನಿಗೆ !
Tuesday, July 23, 2019
Wednesday, July 10, 2019
ವಿ....ನಯ !
ಮಾತು ಪಟ ಪಟ
ಕಲಸ ಚಟ ಚಟ
ಗೆಳೆಯರು ಬಹಳ
ಗೆಳೆತನವೂ ಆಳ
ವೇಳೆಯ ಮಹತ್ವ
ತಿಳಿದ ಮಹಾತ್ಮ
ಗಡಿಯಾರ ಮೋಹ
ಮಧು ಪಾನ ಪ್ರೀಯ
ಹೆಸರು ವಿನಯ
ಹಾಸ್ಯದಲ್ಲಿ ತಲ್ಲೀನ
ವಾಕ್ ಚತುರ
ಮೋಡಿಗಾರ
ಕೀಟಲೆ ಮಾಡವ ಪ್ರವೀಣ
ಸದಾ ಹಸನ್ಮುಖಿ..,
ಹೃದಯವಂತ ಜಾಣ !!
ಕಲಸ ಚಟ ಚಟ
ಗೆಳೆಯರು ಬಹಳ
ಗೆಳೆತನವೂ ಆಳ
ವೇಳೆಯ ಮಹತ್ವ
ತಿಳಿದ ಮಹಾತ್ಮ
ಗಡಿಯಾರ ಮೋಹ
ಮಧು ಪಾನ ಪ್ರೀಯ
ಹೆಸರು ವಿನಯ
ಹಾಸ್ಯದಲ್ಲಿ ತಲ್ಲೀನ
ವಾಕ್ ಚತುರ
ಮೋಡಿಗಾರ
ಕೀಟಲೆ ಮಾಡವ ಪ್ರವೀಣ
ಸದಾ ಹಸನ್ಮುಖಿ..,
ಹೃದಯವಂತ ಜಾಣ !!
Tuesday, July 09, 2019
ತಂತ್ರಜ್ಞಾನ
ಕೂಡುತ್ತಿದ್ದರು ಜನರು
ನೋಡಲು ಕ್ರಿಕೇಟು
ಟೀವಿಯ ಮುಂದೆ....!
ಈಗ ಎಲ್ಲರ ಕೈಯಲ್ಲೂ
ಮೋಬೈಲು...
ಟೀವಿಯೇ., ಕಣ್ಣ ಮುಂದೆ...!!
ನೋಡಲು ಕ್ರಿಕೇಟು
ಟೀವಿಯ ಮುಂದೆ....!
ಈಗ ಎಲ್ಲರ ಕೈಯಲ್ಲೂ
ಮೋಬೈಲು...
ಟೀವಿಯೇ., ಕಣ್ಣ ಮುಂದೆ...!!
Monday, July 08, 2019
Subscribe to:
Posts (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಅಪ್ಪು - ಮರೆಯದ ಚೇತನ --------------------- ಒಂದು ಮರೆಯಾಗಲಾರದ ಚೇತನ.. ಚಂದನ ವನದ ಸೌಗಂಧದ ಕುಸುಮ ಹೃದಯಗಳ ಆಳಿದ ಧೀಮಂತ ವಿನಯತೆ ಭಾವ ಸದಾ ಜೀವಂತ ಮನುಷತ್ವವೂ ನಾಚ...
-
ಕತ್ತಲು ಕವಿದಾಗ ತಿಳಿ-ಬಿಳಿ ನೆರಳಲ್ಲಿ ಚಂದ್ರಮುಖಿ ದೀಪದ ಬೆಳಕಿನಲ್ಲಿ ನಗೆ ಚೆಲ್ಲೊ ಮಂದಸ್ಮ್ರತಿ ನಯನಗಳು ಮನೋಹರ ಘಾಡ ನೆರಳೊತ್ತ ಗವಿ ಪ್ರೀತಿ ಮೋಹದ ಸಾಗರ ಪಂಚಮ ಪ್ರೀತಮ...






