Sunday, February 27, 2011

ನಿರೀಕ್ಷಣೆ ...!



ಅಂತರಂಗ ಬಹಿರಂಗಗಳ ಸುಚಿಗೊಳಿಸಿ ,
ಮನಸಿನ ಬಾಗಿಲಿಗೆ ನಾ ಕಟ್ಟಿ ತೋರಣ !
ಹೃದಯವೆಂಬ ಗರ್ಭ ಗುಡಿಯಲ್ಲಿ ಕಾಣುವ ಆಸೆ ನನಗೆ,
ಪ್ರೀತಿಯಿಂದ ವಿನಯವಾದ ನನ್ನ ಆಹ್ವಾನ !
ಅಕ್ಕರೆ ಸಕ್ಕರೆಯ ರಕ್ತ ಚಲಿಸುವಂತೆ,
ಬರುವಂತಳಾಗು ನಿ ನನ್ನ ಹೃದಯ ಸಾಮ್ರಾಜ್ಯಕ್ಕೆ !
ಬೆಳ್ಳಿಯ ಆರತಿ ಹಿಡಿದು, ನಿನ್ನ ಆಗಮನವೇ ಎದಿರು ನೋಡುತಿರುವೆ..
ದೇವಿ ಇರದ ದೈವಿಸ್ಥಳದಲಿ ಪೂಜಾರಿಗೇನು ಕೆಲಸ ,
ನಿನ್ನ ಜಪಿಸದ ನನಗೆ ಜೀವವೆಲ್ಲ ನಿರಸ
ಕಾಯಿಸದಿರು ಭಕ್ತನನ್ನು ..
ಕಾಡಿಸದಿರು ಧರ್ಮ ಪಾಲಿಸುವವನ..
ನಿನ್ನ ಮನದ ಮುಗಿಲಿನ ಬಾಗಿಲು ತೆರೆಯೆ..!

Monday, February 14, 2011

WILL YOU BE MY....??




Will you be my LOVE ?

To fill my life with colorful Blue..!

Will you be my LADY ?

Who gets admired by everybody..!

Will you be my DEW ?

To begin my days all NEW ..!

Will you be my full-Moon ?

To fill my dream and Bloom .!

Will you be my beautiful flower ?

To kiss and kiss you every hour ..!

Will you be my cool breeze..?

To make me feel chilled and freeze..!

Will you be my ROSE ?

Because I want to love you all alone..!

Will you be my Soul..?

To keep my love eternal...!

Will you be my VALENTINE ?

I would be your hubby for the lifetime..!

Will you lend me a hand of HEART ?

I would never let you go awhile apart...!

Friday, February 11, 2011

ಮೊದಲ ನೋಟದ ಪ್ರೀತಿ



ಮೊದಲ ದಿನ ಕಂಡೊಡನೆ ಚಿಗುರಿತು ಪ್ರೀತಿ
ಇವಳಿಗಾಗಿಯೇ ಕಾಯುತ್ತಿದ್ದೆನೋ ಅನ್ನೂ ರೀತಿ !
ಮನ ಮೆಚ್ಚಿತು ಇವಳ ಸೌಮ್ಯತನ,
ಹೃದಯ ಮುಟ್ಟಿತು ಇವಳ ಗುಣ !
ನಾನು ಇಷ್ಟ ಪಡುವುದೇ ಇಕೆಗೂ ಇಷ್ಟ,
ನನಗೆ ಬೇಡವೆಂಬುದು ಆಕೆಗದು ದೂರ !
ಸುಂದರ ಭವಿಷ್ಯ ಕಾಣುತಿಹುದು ಕಣ್ಣ ಮುಂದೆ,
ನನ್ನ ಮನಸ್ಸು ಸುತ್ತುತ್ತಿರುವುದು ಬರಿ ಅವಳ ಹಿಂದೆ !
ನಾಲಿಗೆಗೆ ಅವಳ ಹೆಸರು ಗುಣುಗುವುದೇ ರೋಮಾಂಚನ,
ಕಣ್ಣು ಅವಳ ಮುಖವ ನೆನೆಯಲು ನಡೆಸಿದೆ ನರ್ತನ !
ದಿನೇ ದಿನೇ ಹೆಚ್ಚುತ್ತಿರುವುದು ಬಯಕೆ,
ಇವಳೇ ಆಗಬೇಕು ನನ್ನಾಕೆ..!

Thursday, February 10, 2011

पल



पल ...पल भर केलिए रुक गया
वोह पल आया तो भी पल भर में चुप गया
वो हसी का पल जिसका मुझे इंतज़ार था
पलक जपक्तेही आगया था
पल को मेहेसुझ करनेसे पहेले
पल, पल भर में ख़ुशी दे गया
पल का जादू हर पल रेह जाए
पल हर पल युही महकता जाए..!

***भावप्रिय***

Wednesday, February 09, 2011

ಜೊತೆಗಾತಿ

ಹೃದಯ ಸಾಮ್ರಾಜ್ಯಕ್ಕೆ ಇಟ್ಟಳು ಲಗ್ಗೆ
ರಾತ್ರಿಗಳೆಲ್ಲ ಇವಳ ಕನಸುಗಳ ಮೊಗ್ಗೆ
ಇವಳ ಆಗಮನದಿಂದ ಮನೋಲ್ಲಾಸ
ಮುಗ್ದತೆ ಕಂಡು ತುಂಬಿದೆ ಹರುಷ
ಇವಳ ಭಯ ಭಕ್ತಿಗೆ, ಮನವು ಮರುಗಿದೆ
ಸಿಹಿ ನುಡಿ, ಮಾತು ಕೇಳಿ ಹೃದಯವು ಕರಗಿದೆ
ಹೆಣ್ಣಿಗೆ ಬೇಕಾದ ನಯ ನಾಜೂಕು
ಎಲ್ಲ ನಾ ಇವಳಲ್ಲೇ ಕಂಡೆ...!
ಇವಳೇ ಆಗ ಬಲ್ಲಳು ಜೊತೆಗಾತಿ
ಜೊತೆಗೂಡಿ ನಡೆಸಬಲ್ಲ ನವ್ಕೆಗೆ ..!

Monday, February 07, 2011

ಅಪ್ಸರೆ


ಮಧುರ, ಅತಿಮಧುರ ಪ್ರತಿ ಕ್ಷಣ
ನಿ ಜೊತೆ ನಡೆದರೆ ದಿನ ದಿನ,
ಬಯಸಿದೆ ಸನಿಹ ನನ್ನ ಮನ !
ನಿನ್ನ ಕೆನ್ನೆಯ ಮೇಲಿನ ಚುಕ್ಕಿ,
ಮಿಂಚಿ ಮಿನುಗುವ ಕಣ್ಣ ಹಕ್ಕಿ !
ಕೆಂಪು ತುಟಿಗಳು ನಕ್ಕರೆ,
ಮುತ್ತು ಪೋಣಿಸಿದ ಸಕ್ಕರೆ !
ನಿನ್ನ ಗಿಣಿಯ ಮೂಗು,
ಸಂಪಿಗೆಯ ಅಂದಕೆ ನಾ ತಲೆ ದೂಗು..
ನಿನ್ನ ಮೊಗವ ಕಂಡು ಹುಟ್ಟಿದೆ ಪ್ರೀತಿಯ ಕೂಗು !
ನನ್ನ ಹೃದಯ ಬಡಿತ ನಿಂತರೆ..
ಕಾರಣ ನೀನೆ ಆಗುವೆ, ನನ್ನ ಅಪ್ಸರೆ..!

Sunday, February 06, 2011

ಬಿನ್ನಹ..!



ಚಿತ್ತ ಕದಡಿದೆ ಎನ್ನ..
ನೀನಿಟ್ಟ ಹೆಜ್ಜೆಯ ದಿನ..
ಜಗವೆಲ್ಲಾ ತುಂಬಿದಂತೆ ಒಲವಿನ ಬಣ್ಣ ..!
ಮನವ ತಟ್ಟಿ, ಕನಸು ಹುಟ್ಟಿಸಿದೆ..
ಹೃದಯದ ಹಾಡಿಗೆ ಹೊಸ ಪಲ್ಲವಿ ಬರೆದೆ..!
ನಿನ್ನ ನೆನೆಯಲು ಅನುಕ್ಷಣ...
ಕವಿತೆ ಬರೆಸಿದೆ ನಿನ್ನ ಕಣ್ಣು ..
ಪ್ರೀತಿಯ ಸ್ನೇಹ ಬಯಸಿದೆ ...
ಹಸು ಕೂಸಿನಂತೆ ಕಾಯುತಿರೆವೆ ..
ತಾಯಿಯಂತೆ, ನಿ ಕರೆದು ಪ್ರೀತಿಸುವೆಯಾ ...?

Friday, February 04, 2011

ಆರಂಭ ..!


ಹೊಸ ಅನುಭವಕೆ ಇಂದು ಆರಂಭ..
ಆಡಿದ ಮಾತಿಗೆ ಎದಿರು ನೋಡುತ ...
ದಾರಿ ತೋರಿಸಿ ಅಂದಳು ನಸು ನಗುತ್ತ..!
ಬಾ ಎಂದು ಕರೆದುಕೊಂಡು ಹೊರಟೆ ..
ಅವಳ ಮೊಗಕೆ ಆ ನಗುವೇ ಚಂದ 
ಅಧರದ ಧ್ವನಿಗೆ ಮಹದಾನಂದ ...!
ಜೊತೆ ಜೊತೆಯಲಿ ...
ನಡೆದಿರುವ ಆ ಕ್ಷಣದಲಿ  ....
ನವೀನ ಭಾವಗಳ ಹೆಣೆಯುತಿರಲಿ ...!   
ಹೊಸ ಅನುಭವ ಸವೆಯಲು....
ಆ ಸಮಯವೇ ಸಾಲದು ಎಂದೂ..
ಮೂಡಲಿ ಅನುಕ್ಷಣ ಸವಿಯಾದ  ಬಂಧ ...!
ಕನಸಿನ ಮನೆಯ ಕಟ್ಟಲು...
ಪ್ರೀತಿ ಬಾಂಧವ್ಯ ಮುಟ್ಟಲು...
ನನಗೆ ನಿ ಅಣಿಯಾಗು.. ಜೊತೆಗೆ, ಹೆಜ್ಜೆ ಇಡಲು ...!!

Wednesday, February 02, 2011

ಹೊಸ ಸಂಚಲನ....!!



ಮನದಲ್ಲಿ ಹೊಸ ಸಂಚಲನ ಮೂಡಿಸಿದಳು  ಬಾಲೆ,
ಓ ದೇವರೇ ಯಾವುದಪ್ಪ ಇದು ನಿನ್ನ ಲೀಲೆ..?
ನೋಡುತ್ತಲೇ ಮೈಯ ಮರೆಸಿಬಿಟ್ಟಳು.. 
ಕಣ್ಣಲ್ಲೇ ಕನಸು ಕದ್ದಳು ...
ಇವಳೇನಾ ಅವಳು ನಾ ಕಾಯುತ್ತಿರುವಳು ..?
ಗುರುತಿಸಲಿ ಹೇಗೆ ನನ್ನ ಹೃದಯ ಕದಿಯಬಲ್ಲವಳ
ತಿಳಿಯಲಾರದೆ ತೋಳಲಾಡುತಿರಲು    
ಇ ಆಯ್ಕೆಯೇ   ಸರಿ ಎಂದು ಅರಿಯದಾಗಿದೆ ....!
ಕೃಷ್ಣಾ ಬಾರೋ.. ಪರಮಾತ್ಮಾ ಬಾರೋ ...
ಮನದಲ್ಲಿ ಕಾಲಿರಿಸಿ...ಹೃದಯದಲ್ಲಿ ನೆಲೆಸುವವಳು...
ಇವಳೇನಾ...? ನಿ ಹೇಳೋ...!!

Tuesday, February 01, 2011

ಹಿಂಗನ್ನಡಿ



ಹೊಸ ಹೆಂಗಳೇ ಕಾಲಿರಿಸಿದ್ದಳು ನನ್ನ ಕ್ಯಾಬಿನಲ್ಲಿ
ಫಳ ಫಳ ಹೊಳೆಯುವ ಕಣ್ಣಲ್ಲಿ
ಸದಾ ಮುಗುಳು ನಗೆ ಮುಖದಲ್ಲಿ
ಮನೆಗೆ ಹೊರಡುವ ಮುನ್ನ
ಗಾಡಿ ಕಾಣಿಸದೆ ಅರಸುತಿದ್ದಳು
ಕೊನೆಗೂ ಓಡಿ ಬಂದಳು ....!
ಮುಂದಿನ ಆಸನದಿ ಆಸಿನಲಾದಳು ..
ನುಗು ನಗುತ್ತ ತಿರುಗಿ.... ಹಿಂಗನ್ನಡಿ ಕಂಡಳು ..
ಅವಳ ಕಣ್ಣು ಕದ್ದು ಕದ್ದು ನೋಡತೊಡಗಿತು..
ತಿರುಗಿ ತಿರುಗಿ ನೋಡುವ ಕಾರಣವೆನಿತ್ತು ..?
ನನ್ನ ಚೆಲುವೋ ಅವಳಿಗೆ ಮೋಹಮಾಡಿತ್ಹೋ ?
ಮತ್ತೆ ಮತ್ತೆ ಇಣುಕಿ ನೋಡುತಿರಲು ಅವಳು...
ನನ್ನ ಮನದ ಮೂಲೆಯಲಿ ಆಸೆ ಮೂಡಿತು..!
ಕದ್ದು ನೋಡುವ ಮೊಗವ ಕಂಡು ಮತ್ತೆ ಕನಸು ಚಿಗುರಿತು...
ಮತ್ತೆ ಶುರುವಾಯಿತು ........" ಹೊಸ ಲವ್ ಸ್ಟೋರಿ "
ಕನ್ನಡಿಯಲ್ಲಿ ಶುರುವಾಗಿ .....ಕಣ್ಣಗಳಲ್ಲಿ ನಿಲ್ಲುವುದೇ....???
ಕಾದು ಈಗ, ನಾನು ನೋಡಬೇಕಾಗಿದೆ...!!!

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...