Friday, July 05, 2019

ಚುಟುಕು

ಬಿಲ್ಲಿನಿಂದ ಹೂಡಿದ ಬಾಣ..
ನಾಟಲೇಬೇಕೆಂದಿಲ್ಲ..
ನಾಲಿಗೆಯಂಬ ಮಂತ್ರದಂಡ ಸಾಕು.
ಹೃದಯ ಇರಿಯಲು !!

Wednesday, July 03, 2019

ನಮ್ಮ ಧಾರ್ವಾಡ (ಅಂದು - ಇಂದು)



ಅಂದು ಚಂದಿತ್ತು ನಮ್ಮ ಧಾರ್ವಾಡ ನೋಡ್ರಿ
ಊರಾಗ ಓಡ್ತಿತ್ತು ಟಾಂಗಾ ಗಾಡಿ

ಸಿಬಿಟ್ಯಾಗ ಶೇಂಗಾ, ಲಿಂಬುಳಿ, ಹುರಗಡ್ಲಿ
ಹಿಂದೊಂದು ಬಸ್ಸ್ ಬಂತು ಯಾವುದ್ ನೋಡ್ರಿ…?

ಎಂಟರಿಂದ ಒಂಬತ್ತಕ್ಕ ಸಾಲಿ ಹುಡುಗರ ಓಟ
ಬಸ್ ತಪ್ಪಿದರ.., ತಪ್ಪತಿತ್ತು ಮೊದಲ ಪಾಠ

ವಿಜಿಯಾ ಥೇಟರ್ನ್ಯಾಗ ಅಣ್ಣವರ ಪಿಚ್ಚರ್
ಕಾಲೇಜು ಹುಡುಗೂರು ಕ್ಲಾಸಿಗೆ ಚಕ್ಕರ್

ಎನ್.ಟಿ.ಟಿ.ಎಫ್ ಕಲಿಯೋರು ಭಾರಿ ಜೋರು
ನೌಕರಿ ಮಾಡಾಕ ದೇಶಾನ ಬಿಟ್ಟೋರು

ಕೃಷಿ ವಿಶ್ವವಿದ್ಯಾಲಯದಾಗ ಓದೋದೆ ಚಂದ
ಹಸಿರಿನಿಂದ ಕಂಗೊಳಿಸ್ತಿತ್ತು ಅದರ ಅಂದ

ಇಂದೂ ಚಂದೈತಿ  ನಮ್ಮ ಧಾರ್ವಾಡ ನೋಡ್ರಿ
ಸ್ವಲ್ಪ ಹೆಚ್ಚಗಿ ಆಗ್ಯಾವ.., ಈಗ ಮೋಟರ್ ಗಾಡಿ !!








Monday, July 01, 2019

ನಿತ್ಯ ನುಡಿ


ಕಲಿಯಲು ಬೇಕು ಕನ್ನಡ
ಕಲಿತು ಬರಿಯಲೂಬೇಕು ಕನ್ನಡ 

ನುಡಿಯ ಬೇಕು ಕನ್ನಡ
ನುಡಿದು ನಡಿಯಲೂಬೇಕು ಕನ್ನಡ

ಬಳಸ ಬೇಕು ಕನ್ನಡ
ಬಳಸಿ ಬೆಳಸಲೂಬೇಕು ಕನ್ನಡ

ಪೂಜಿಸ ಬೇಕು ಕನ್ನಡ
ಪೂಜಿಸಿ ಆರಾಧಿಸಲೂಬೇಕು ಕನ್ನಡ

ಏರಿಸೋಣ ಬಾರಾ ಕನ್ನಡ ಬಾವುಟ 
ಏರಿಸಿ ಹಾರಿಸಲೂಬೇಕು ಕನ್ನಡ ಭೂಪಟ

ನನ್ನ ಅಭಿಮಾನ ಕನ್ನಡ
ಕರುನಾಡ ಜೀವರಾಶಿಗಳಲೂಬೇಕು ಕನ್ನಡ

ಕನ್ನಡದ ಕೂಗು


ನನ್ನ ಭಾಷೆಯೇ ನಮ್ಮ ನೆಲದಲ್ಲಿ
ಉಳಿವಿಗಾಗಿ ಬಡಿದಾಡುತಿರಲು

ಹುಟ್ಟು ಕನ್ನಡಿಗರೇ ಹೊರೆತು
ಕನ್ನಡಕ್ಕಾಗಿ ದುಡಿದವರಲ್ಲ
ಕನ್ನಡವ ಆದರಿಸುವುದಿಲ್ಲ
ಅಭಿಮಾನವೇ ಇವರಿಗಿಲ್ಲ!

ಹಿಂತವರ ಹೆತ್ತ ನನ್ನ ತಾಯಿನೆಲ
ಏನು ಪಾಪವ ಮಾಡಿದೆ ನಾ ಅರಿಯೆ
ಮಕ್ಕಳೇ ಇವರು..? ಹಿತಶತ್ರುಗಳು..!
ತಾಯ ಋಣವ ತೀರಿಸುವ ಬದಲು
ಅನ್ಯ ಭಾಷೆಯ ಗುಲಾಮರು ?!

ತೊಲಗಲಿ ದುರಹಂಕಾರಿಗಳು
ಮೊಳಗಿಸುವೆ ಕನ್ನಡ ಕಹಳೆಯು
ಕನ್ನಡಕ್ಕಾಗಿಯೇ ಸುರಿಸುವೆ ನನ್ನ ಬೆವರು
ಸಮಯ ಬಂದರೆ ಹರಿಸಬಲ್ಲೇ ನೆತ್ತರನು.
ಕನ್ನಡದ ಊಳಿವಿಗೆ ಅರ್ಪಿಸುವೆ ನನ್ನೇ ನಾನು !!

Sunday, June 30, 2019

ಮಳೆಯ ಸಿಂಚನ

ಬರಗಾಲದ ಬಿರುಕು
ಕಂಡ ನೆಲಕೆ
ಮಳೆಯ ಸಿಂಚನ,
ಇಳಿದಾಳೊ ಹನಿ ಹನಿ 
ಇಳೆಯ ಗರ್ಭದೊಳಗೆ
ಧರೆಯಲ್ಲಿ ಹುದುಗಿದ ಬೀಜಕೆ 
ನವ ಜೀವದ ಉಸಿರು
ಕಂಗೊಳಿಸ್ಯಾಳ ಭೂವಿ
ಹಸಿರು ಸೀರೆಯನುಟ್ಟು !!


Saturday, June 29, 2019

ಹನಿಗವನ

ಧಾರವಾಡದಾಗ...
ಜಬರದಸ್ತ್ ಮಳಿ !
ಬಿಆರ್ಟಿಎಸ್ ರಸ್ತೆಯಲ್ಲಾ..
ನೀರಿನ ಬೋಗಾಣಿ !
ದಾಟಾಕ ತರಲೇಬೇಕು..
ಕಾರ್ಪೋರೆಷನ್ ದೋಣಿ  !
ವೋಟ್ ಹಾಕಿದ್ದಕ್ಕ ಮಂದಿ...
ಬಡ್ಕೋಳಾಕತ್ತಾರ ಹಣಿ ಹಣಿ !!


Thursday, June 27, 2019

ಶ್ರಾವಣ


ನಲ್ಲಾ,
ಬಿಡಬೇಡ
ಕಣ್ಣಿನಲ್ಲೇ ಹೂ ಬಾಣ
ಬಂದಿಹುದು ಶ್ರಾವಣ
ಮೊಳಗಿಹುದು ಶುಭಲಗ್ನ
ಬೇಗನೆ ಬಾ...
ಮದುವೆ ಆಗಿಯೇ ಬಿಡೋಣ..!!

Tuesday, April 16, 2019

ಮತದಾನ

ಮತ ಮತ ಮತ
ಜಾತಿ ಗೀತಿ ಬೇಡ ಇದರ ಸುತ್ತ
ಹೊಸ ವಿಚಾರಕ್ಕೆ ಇರಲಿ ನಮ್ಮ ಮತ
ತುಂಡು ಕಾಂಚಾಣ ಒದಿರಿ ಅತ್ತ
ಪ್ರಜ್ಞಾವಂತರಾಗಿ ಚಲಾಯಿಸೋಣ ಮತ
ಪ್ರಜೆಗಳಿಗಾಗಿ ದುಡಿಯುವರಿಗೆ ನಮ್ಮ ಸಹಮತ
ನಮ್ಮ ಸಮಾಜಕ್ಕೆ ತಕ್ಕ ವ್ಯಕ್ತಿಗೆ ನಮ್ಮ ಬಹುಮತ
ನಮ್ಮ ಹಕ್ಕು ಚಲಾಯಿಸೋಣ..., ತಪ್ಪದೇ ನೀಡಿ ಮತ !!

-----ಭಾವಪ್ರಿಯ--------

ನಮ್ಮ ಗುಂಡಣ್ಣ

ಅವನು ದಡೂತಿ ಸಾಹಸಿ
ಗುಂಡು ಗುಂಡಕೆ ನಮ್ಮ ಸುಶಿ
ಎತ್ತಿಕೊಳ್ಳಲು ಬಲು ಭಾರ
ಬಿಟ್ಟರೇ ಓಡುವನು ಜೋರ
ಮೆಟ್ಟಿಲು ಏರಲು ಬಲು ಹುರುಪು
ಅವನನ್ನು ಹತ್ತಿ ಇಳಿಸಿ ನಾವೇ ಸುಸ್ತು
ಆಡಲು ಬೇಕಿವನಿಗೆ ಅಜ್ಜನ ಪೆನ್ನು
ಹೊರ ಹೊರಟರೇ ಏರುವನು ಅಜ್ಜಿಯ ಬೆನ್ನು
ಆಡುತ್ತಿದ್ದರೆ ಇರುವನು ತನ್ನದೇ ಗುಂಗಿನಲಿ
ಅಳು ಬಂದರೆ ಇವನು ಶಾಂತ ಅಮ್ಮನ ಮಡಿಲಲಿ !!

Monday, April 15, 2019

ಭಯ - ಚಿಂತೆ


ಗೆದ್ದವನಿಗೆ ಸೋಲುವೆ,  ಎನ್ನುವ ಭಯ
ಸೋತವನಿಗೆ.., ಮತ್ತೆ ಗೆಲ್ಲುತ್ತೆನೆಯೋ ಅನ್ನುವ ಚಿಂತೆ
ಸುಳ್ಳು ಹೇಳುತ್ತಾ ಅರಚುವವನಿಗೆ.., ಸತ್ಯ ತಿಳಿದರೆ..? ಅನ್ನುವ ಭಯ
ಸತ್ಯವಂತನಿಗೆ.., ಸುಳ್ಳುಗಾರರು ಜಯಸುವರೇ ಅನ್ನುವ ಚಿಂತೆ
ಅಧಿಕಾರ ಇದ್ದವನಿಗೆ.., ಕಳೆದುಕೊಳ್ಳುವೆ ಅನ್ನುವ ಭಯ
ಅಧಿಕಾರ ಇಲ್ಲದವನಿಗೆ.., ಈ ಸರಿಯಾದರೂ ಸಿಗುವುದೇ ಅನ್ನುವ ಚಿಂತೆ
ಅಭ್ಯರ್ತಿಗೆ.., ಹಾಕಿದ ದುಡ್ಡು ಬರುವುದೇ ಅನ್ನುವ ಭಯ
ಜನರಿಗೆ.., ಮತ ಹಾಕಿದವರು ಕೆಲಸ ಮಾಡುವರೇ ಅನ್ನುವ ಚಿಂತೆ
ಭಯ ಚಿಂತೆಗಳ ಸಂತೆ.., ಜೀವ ಇರುವ ತನಕ ಸಾಗುವಂತೆ
ಪ್ರಜಾಕಾರಣ ಬರದ ಹೊರೆತು.., ಮುಕ್ತಿ ಇದಕ್ಕೆ ಇಲ್ಲವಂತೆ !

#ಪ್ರಜಾಕೀಯ #ಉಪ್ರಪ
#prajaakiya #Upendra # UPP

Saturday, April 06, 2019

ಹೊಸ ವರ್ಷ

ಹೊಸ ಸಂವತ್ಸರದ ಯುಗಾದಿ
ಹೊಸ ಚಿಗುರು ನಮ್ಮಯ ಮನದಿ
ಬೇವಿನ ಸವಿ ತಂಪು ಜೀವನದಿ
ಬೆಳಗಲಿ ಬಾಳಲ್ಲಿ ಪ್ರೇಮನದಿ
ಯುಗ-ಯುಗಗಳ ಯುಗಾದಿ
ಹಾಸಲಿ ಜಗವೆಲ್ಲಾ ಹೂಗಳ ಗಾದಿ.

💐🌹🌺******ಭಾವಪ್ರಿಯ******💐🌺🌹

💐🌹🌺ಸರ್ವರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು💐🌹🌺

Tuesday, April 02, 2019

ಬೇಸಿಗೆ

ಸುಡು-ಸುಡುವ ಸೂರ್ಯನಿಗೆ
ಬಂದಿರಬಹುದೇ ಜ್ವರಾ....!
ಸ್ವಲ್ಪ ದಿನದ ಮಟ್ಟಿಗೆ
ತೆಗೆದುಕೊಳ್ಳಬಹುದಿತ್ತೇನೋ ರಜಾ..?
ಹಂಗಾದರೂ ಮಾಡಬಹುದಿತ್ತು
ನಾವು ರಜೆಗಳಲ್ಲಿ ಮಜಾ..!

Wednesday, January 16, 2019

ಚುಕ್ಕಿ

ಚುಕ್ಕಿ ಚುಕ್ಕಿ ಜೋಡಿಸಿ,
ಮೂಡಿತು ಶುಭಸಂಕೇತದ ರಂಗವಲ್ಲಿ !
ಮನೆಯ ಅಂಗಳ ಅಲಂಕರಿಸಿ,
ಹಬ್ಬದ ಪರಿಸರವ ಮೆರೆವ ಮಲ್ಲಿ  !
ಬಣ್ಣದ ಹೂಗಳ ಬಳಸಿ,
ಸುಗಂಧವ ಬೆರೆಸಿ ಗಾಳಿಯಲ್ಲಿ  !
ನಳಿ ನಳಿಸ್ಯಾಳೊ ಅರಸಿ,
ಬೆಳಗುತಿಹಳು ಬೆಳಕ ಬಾಳಲ್ಲಿ !!

Friday, November 23, 2018

ಲೋಲಕ ತೂಗು ಗಡಿಯಾರ

ಸಮಯವೀಗ ಲೋಲಕ ತೂಗು ಗಡಿಯಾರ
ಅತ್ತಿಂದಿತ್ತ... ಇತ್ತಿಂದತ್ತ ತೊಳಲಾಡುತಿರಲು
ಕಾಲವೂ ಸರಿಯುತಿದೆ...
ಗುರುತಿಲ್ಲ ದಿಸೆಯಿಲ್ಲದೆ...
ಸಾಗಿಹೋಗುತಿಹೆವು ಪರಿವೆಯೇ ಇಲ್ಲದೆ.
ಗುರಿಯೇ ಇಲ್ಲದ ದಾರಿ
ಮುಂದೇನಿದೆ ಅರಿಯದಾಗಿದೆ..
ಕಾಲ ಹೇಗೆ ಕಳೆಯುತಿದೆಯೋ
ಹಗಲುರಾತ್ರಿಗಳು ಅದಲುಬದಲು
ನಿತ್ಯವೂ ಅದೇ ತೊಳಲಾಟ
ಲೋಲಕ ತೂಗು ಗಡಿಯಾರ !!

Tuesday, November 20, 2018

ನಮ್ಮಯ ಕನ್ನಡ


ಮೊಗ್ಗರಳಿ ಹೂವಾಗಲಿ ಕನ್ನಡ
ಎಲ್ಲರ ಮನದ ಮಗುವಾಗಲಿ ಕನ್ನಡ !
-----------------------------------

ಬೀಸುತ್ತಿರಲಿ ಮಿಡಿತದ ಗಾಳಿ ತಂಪು
ಪಸರಿಸಲಿ ಎಲ್ಲೆಡೆ ಕನ್ನಡದ ಕಂಪು !

Monday, October 29, 2018

ನಿನ್ನಿಂದಲೇ ಒಲವೇ

ನಿನ್ನಿಂದಲೇ ಒಲವೇ
ಕನಸ್ಸಿಂದು ನನಸಾಗಿದೆ
ಕಪ್ಪು ಬಿಳಿಯ ಚಿತ್ರಕ್ಕಿಂದು
ಬಣ್ಣಗಳು ಬಳಿದಂತಿದೆ

ನಿನ್ನಿಂದಲೇ ಒಲವೇ
ಕೊರೆಯುವ ಚಳಿಗಿಂದು
ಸೂರ್ಯನ ತಾಪ ತಾಕಿದಂತಿದೆ
ಕರಿಯಾದ ದಾರಿಗಿಂದು
ಹಿಮದ ಹಾಸಿಗೆ ಹಾಸಿದಂತಿದೆ

ನಿನ್ನಿಂದಲೇ ಒಲವೇ
ಗ್ರಹಣ ಹಿಡಿದ ಸೂರ್ಯನಿಗೆ
ಬೆಳಕು ಹರಿದಂತಾಗಿದೆ
ಕತ್ತಲೆಯ ಕರಾಳರಾತ್ರಿಗೆ
ಮುಂಜಾವಿನ ಸೊಬಗು ಮೂಡಿದಂತಿದೆ

***ಭಾವಪ್ರಿಯ***


Friday, June 29, 2018

ವರ್ಷಧಾರೆ

ಸರ-ಸರನೆ ಹರಿದು
ಬರುತ್ತಿರುವ ವರ್ಷಧಾರೆಗೆ
ಬೇಲಿಯ ಕಟ್ಟಲಾದೀತೆ....?
ನೀರು ತುಂಬಿ
ಹರಿಯುವ ನದಿಯನು
ಹರಿಯುವುದನ್ನು ನಿಲ್ಲಿಸಲಾದೀತೆ....?
ಒಲಿದು ಬಂದ ವರ್ಷಧಾರೆಗೆ
ಆದರಿಸಲೇಬೇಕು ನಾವು....
ಪ್ರಾರ್ಥಿಸಿ ಅದಕೆ
ಹರಿಸಲು ನಮಗೆ..!!
***ಭಾವಪ್ರೀಯ***

Monday, May 07, 2018

ಕನ್ನಡ ಕೊಲೆಗಡಕರು

ಬೇಂದ್ರೆ ಅಜ್ಜಾ ನಿನ್ನ ಕವನ
ವಾಚಿಸಿ ಖುಶಿ ಪಟ್ಟಿದ್ದೆ ನಾನು...
ಮತಿಗೆಟ್ಟ ರಾಜಕೀಯದವರು
ವಾಚಿಸಿ ನಿಮ್ಮ ಕವನವ ಅವಮಾನಿಸುತಿಹರು
ಕನ್ನಡ ಬಾರದ ಒಬ್ಬ ಮೂರ್ಖ
ತಾನು ಕನ್ನಡಿಗ ಎನ್ನುತಿಹನು
ಮತದ ಭಿಕ್ಷೆಗಾಗಿ ನಿಮ್ಮ ಕವನವ
ಹರಕು ಮುರುಕು ಮಾಡಿ ಹಾಡಿದನು
ಕೂಗಿ ಕೂಗಿ ಹೇಳಿದನು...
ಹುಚ್ಚು ಮಂಗ್ಯಾ ಹಂತವನು
ದೇಶಾನ ಆಳೊ ನೆಪದಾಗ
ನನ್ನ ಕನ್ನಡವನ್ನೇ ಕೊಂದನು...!

Friday, February 02, 2018

ಸುಗ್ಗಿ ಬಂತು ಸುಗ್ಗಿ


ರೈತನ ದುಡಿಮೆಗೆ
ಪುರ್ಸ್ಕಾರದ ಸುಗ್ಗಿ
ಹೊಲವ ಊಳಿದ ಎತ್ತುಗಳಿಗೆ
ಅಲಂಕರಿಸಿ ಮೆರವಣಿಗೆಯ ಸುಗ್ಗಿ
ಹಸಿರು ಪಸರಿಸಿದ ಪೈರಿಗೆ
ಕಾಳು ನವಿರೆರಿದ ಸುಗ್ಗಿ
ಶ್ರಮಪಟ್ಟ ಮನುಜನ ಬೆವರಿಗೆ
ಫಲ ತಂದಂತ ಸುಗ್ಗಿ
ಚಳಿಗೆ ಮರಗಿದ ಬೆಳೆಗೆ
ಕ್ರಾಂತಿಯ ಸೂರ್ಯನ ಸುಗ್ಗಿ
ಆಚರಿಸುವ ಬಾರಾ ಸುಗ್ಗಿ
ಸವೆದು ಸಿಹಿ ಹುಗ್ಗಿ

ಸುಗ್ಗಿ ಬಂತು ಸುಗ್ಗಿ

ಅವಳು ನನ್ನೋಳಗೆ..


ನನ್ನ ಹೃದಯದ ಹಣೆತೆಗೆ
ಅವಳೇ ಬೆಳಗುವ ದೀಪ
ನನ್ನ ಬಾಳ ಹಾಡಿಗೆ
ಅವಳದೇ ಪದಗಳ ಸ್ವರೂಪ
ನನ್ನ ಬಳಲಿದ ಕಣ್ಣುಗಳಿಗೆ
ಅವಳದೇ ನಿರಾಳದ ಲೇಪ
ನನ್ನ ಮನದ ಕಾರಂಜಿಗೆ
ಅವಳ ಪ್ರೀತಿಯೇ ಪ್ರೇರಕ
ನನ್ನ ಮಿಡಿವ ಚಿತ್ತಕೆ
ಅವಳ ಚಿಲಿಮೆಯೇ ಅನುರಾಗ
ಬಯಸಿದಂತೆ ಪಡೆದಿರುವೆ
ಕರುಣಿಸಿದಾತನು ಭಗವಂತ
ಇನ್ನೂ ಏನನ್ನೂ ನಾ ಒಲ್ಲೆ

ನನ್ನ ಮನೆ ಈಗ ಬೃಂದಾವನ 

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...