ಮತ್ತೆ ಶುರು ಮಾಡಿದೆ ಓಟ 
ಚಿಕ್ಕವರಿದ್ದಾಗ ಓಡಾಟವೇ ಆಟ 
ಬೆಳೆದು ಬೆಳೆಯುತ್ತಲೇ ವಿದ್ಯೆ ದೇವಿಯಡೆಗೆ ಓಟ 
ಮತ್ತೆ ಶುರುವಾಗಿದೆ ಓಟ 
ಪದವಿಧರನಾದ ಮೇಲೆ ಮುಗಿಯಲಿಲ್ಲ ಓಟ 
ಕೆಲಸ ಹುಡುಕುತ್ತಲೇ ಶುರುವಾಯಿತು.., ಮತ್ತೊಂದು  ಜಂಜಾಟ 
ಮಹಾನಗರಿಯಲ್ಲಿ  ಅಲೆದು, ಅಲೆದು, ಕಡೆಗೂ ಸಿಕ್ಕಿತೊಂದು ಆಸರೆಯ ಕೂಟ 
ಮತ್ತೆ ಶುರುವಾಗಿದೆ ಹೊಸದೊಂದು ಓಟ
ಬೆನ್ನಮೇಲೊಂದು ರೊಟ್ಟಿಯ ಬುತ್ತಿ 
ಹೊರೆಟೆವು ನಾನು  ಹಣದ ಬೆನ್ನಹತ್ತಿ.
ನೆಮ್ಮದಿ ಇರದ ಖುಷಿಯ ಮೆಟ್ಟಿ   
ತಪ್ಪದೆನಗೆ ಕಚೇರಿಯ ಕಾಟ 
ಮತ್ತೆ ಶುರುವಾಯಿತು ಓಟ    
ಹುಟ್ಟಿದಾಗಿನಿಂದಲೂ ಹೀಗೆಯೇ ಇದೆ ಓಟ 
ಒಮ್ಮೆ ನನಗಾಗಿ,  ಇನ್ನೊಮ್ಮೆ ನನ್ನ ಹಡೆದವರಿಗಾಗಿ  ಓಟ
ನನ್ನ ಆರೋಗ್ಯವ ಕಾಪಾಡಿಕೊಳ್ಳಲು,
ವರುಷಗಳ ನಂತರ ಮತ್ತೆ ಶುರುವಾಗಿದೆ ಓಟ.
***ಭಾವಪ್ರಿಯ***
No comments:
Post a Comment