ಚೆಲುವೆ ಕುಳಿತು ಬಿಡು ಹೀಗೆ ಮೌನವಾಗಿ 
ಹೃದಯದ ಮೌನವನ್ನೇ ಆಲಿಸುತ್ತಿರುವೆ ನಿನಗಾಗಿ 
ಮಾತುಗಳ ಬಿನ್ನಹಿಸಲಾರದ ಭಾವನೆಗಳಿಗಾಗಿ
ಮಿಡಿಯುತಿದೆ ಎನ್ನ ಹೃದಯ ನಿನ್ನ ಸಂತೈಸುವುದಕ್ಕಾಗಿ .
ಮನಸದು ನಿನ್ನ ಕಾಡುತಿಹುದು ನಾ ಅರಿಯೆ 
ಮೂಕ ರಾಗದಲಿ  ಹಾಡುತಿದೆ ನಾ ತಿಳಿದೆ
ಬೇಸರವ ದೂರ ಮಾಡಲು ವಿಧಾನವ ಹುಡುಕುತಿರುವೆ
ನಿನ್ನ ಮನದ ಡುಗುಡಕೆ ಎನ್ನ ಹೃದಯ ಮಿಡಿಯುತಿದೆ 
ಅಕ್ಕರೆಯ ತೋರಿಸಿದರೆ ನಿನಗೆ, ನೀ ತಪ್ಪಾಗಿ ತಿಳಿಯದಿರೆ 
ಸಹಾನುಭೂತಿ ಅಲ್ಲ ಅದು ನನ್ನ ಪ್ರೀತಿಯ ಸೆರೆ 
ಸ್ವಾಭಿಮಾನಿ ನೀ , ಧೈಯಶಾಲಿಯೂ ನೀ   
ನಿನ್ನ ಒಂಟಿತನವ ಹೋಗಲಾಡಿಸಲು ಮಿಡಿಯುತಿದೆ ಈ ಹೃದಯ 
ಬಯಸುತ್ತಿರುವ ಪ್ರೀತಿ, ನಿನಗೆ ದೊರಕದೆ 
ನೀ ಬಳಲುತ್ತಿರುವುದ ನಾ ಕಾಣಲಾರೆ
ಸುಮ್ಮನೆ ಕೂಡುವ ಗೆಳೆಯ ನಾನಲ್ಲೇ 
ನಿನ್ನ ಕಂಗಳಲಿ ಆನಂದ ಭಾಷ್ಪ ಕಾಣಲು ಈ ಹೃದಯ ಮಿಡಿಯುತಿದೆ.  
***ಭಾವಪ್ರಿಯ***

No comments:
Post a Comment